ಮಹೀಂದ್ರಾ XUV700ಗೆ ಡಿಕ್ಕಿ ಹೊಡೆದ ಬಸ್ ಪರಿಸ್ಥಿತಿ ನೋಡಿ: ಕಾರಿನ ಬಿಲ್ಡ್ ಕ್ವಾಲಿಟಿಗೆ ನೆಟ್ಟಿಗರ ಮೆಚ್ಚುಗೆ

ಭಾರತದ ರಸ್ತೆಗಳಲ್ಲಿ ಅಪಘಾತಗಳು ಈಗ ಸಾಮಾನ್ಯ ಘಟನೆಗಳಾಗಿದೆ. ವಾಹನ ಚಾಲಕರ ಅಜಾಗರೂಕ ಚಾಲನೆ ಅಭ್ಯಾಸಗಳು, ನಿಯಮಗಳನ್ನು ಪಾಲಿಸದಿರುವುದು ಮತ್ತು ಕೆಲವೊಮ್ಮೆ ರಸ್ತೆಯ ಅವ್ಯವಸ್ಥೆಯಿಂದ ಅಪಘಾತಗಳು ಸಂಭವಿಸುತ್ತದೆ. ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳು ಹೆಚ್ಚು ಭೀಕರವಾಗಿರುತ್ತದೆ. ಏಕೆಂದರೆ ಹೆದ್ದಾರಿಗಳಲ್ಲಿ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುತ್ತದೆ.

ಕೆಲವು ವಾಹನಗಳು ಇಂತಹ ಭೀಕರ ಅಪಘಾತಗಳ ಪರಿಣಾಮವನ್ನು ಚೆನ್ನಾಗಿ ತಡೆದುಕೊಳ್ಳುತ್ತದೆ. ಆ ಕಾರುಗಳು ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿರುತ್ತದೆ ಮತ್ತು ಒಳಭಾಗದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿರಿಸುತ್ತವೆ. ಅಂತಹ ಕಾರುಗಳಲ್ಲಿ ಮಹೀಂದ್ರಾ XUV700 ಎಸ್‍ಯುವಿ ಕೂಡ ಒಂದಾಗಿದೆ. ಅಲ್ಲದೇ ಈ ಎಸ್‍ಯುವಿಯ ಶಸ್ಸಿನ ಹಿಂದಿನ ಪ್ರಬಲ ಕಾರಣ ಕೂಡ ಸುರಕ್ಷಿತ ನಿರ್ಮಾಣ ಗುಣಮಟ್ಟವಾಗಿದೆ. ಇದರ ನಿರ್ಮಾಣ ಗುಣಮಟ್ಟ ಅಪಘಾತದಲ್ಲಿ ಸಾಬೀತಾಗಿದೆ. ಈ ಮಹೀಂದ್ರಾ XUV700 ಎಸ್‍ಯುವಿಗೆ ಸಾರ್ವಜನಿಕ ಬಸ್ ಡಿಕ್ಕಿ ಹೊಡೆದಿದೆ.

ಮಹೀಂದ್ರಾ XUV700ಗೆ ಡಿಕ್ಕಿ ಹೊಡೆದ ಬಸ್ ಪರಿಸ್ಥಿತಿ ನೋಡಿ

ಪ್ರತೀಕ್ ಸಿಂಗ್ ಅವರ ಯೂಟ್ಯೂಬ್ ವೀಡಿಯೊದಲ್ಲಿ, ಮಹೀಂದ್ರಾ XUV700 ಎಸ್‍ಯುವಿಗೆ ದೆಹಲಿ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (DTC) ಬ್ಸ್ ಡಿಕ್ಕಿ ಹೊಡೆದಿದೆ. ಈ ಸಂಪೂರ್ಣ ಅಪಘಾತ ಘಟನೆಯನ್ನು ಅದರ ಹಿಂದಿನ ಕ್ಯಾಮೆರಾದಲ್ಲಿ ಲೈವ್ ಆಗಿ ಸೆರೆಹಿಡಿಯಲಾಗಿದೆ. ರಸ್ತೆಯ ಮಧ್ಯದಲ್ಲಿ ಬಸ್‌ನ ಮುಂದೆ ಚಲಿಸುವಾಗ ಎಕ್ಸ್‌ಯುವಿ 700 ಬ್ರೇಕ್ ಹಾಕಿದಾಗ ಬಸ್ ಹೋಗಿ ಡಿಕ್ಕಿ ಹೊಡೆದಿದಿದೆ. ವೀಡಿಯೊದಲ್ಲಿ ಮಹೀಂದ್ರಾ XUV700 ಚಾಲಕ ತರಾತುರಿಯಲ್ಲಿ ಬ್ರೇಕ್ ಹಾಕಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಬಸ್ ತುಂಬಾ ವೇಗವಾಗಿ ಚಲಿಸುತ್ತಿತ್ತು. ಅದರಿಂದ ನಿಯಂತ್ರಣ ತಪ್ಪಿ XUV700 ಎಸ್‍ಯುವಿಗೆ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ XUV700 ಎಸ್‍ಯುವಿಯ ಎಡಭಾಗದ ಟೈಲ್ ಲ್ಯಾಂಪ್ ಮುರಿದು ರಸ್ತೆಯ ಮೇಲೆ ಬಿದ್ದಿರುವುದನ್ನು ನಾವು ವೀಡಿಯೊದಲ್ಲಿ ನೋಡಬಹುದು. ಇದಕ್ಕಿಂತ ಹೆಚ್ಚಾಗಿ, ಟೈಲ್‌ಗೇಟ್ ಮತ್ತು ಹಿಂಭಾಗದ ಬಂಪರ್‌ನಲ್ಲಿ ಕೆಲವು ಲೈನ್ ಗಳನ್ನು ಹೊರತುಪಡಿಸಿ, ಈ ಮಹೀಂದ್ರಾ XUV700 ಎಸ್‍ಯುವಿಯ ಹಿಂಭಾಗದಲ್ಲಿ ಯಾವುದೇ ಹೆಚ್ಚಿನ ಹಾನಿ ಕಂಡುಬರದಿರುವುದು ಆಶ್ಚರ್ಯಕರವಾಗಿದೆ.

XUV700 ಅದರ ಹಿಂದಿನ ಪ್ರೊಫೈಲ್‌ಗೆ ಯಾವುದೇ ದೊಡ್ಡ ಹಾನಿಯನ್ನು ಹೊಂದಿಲ್ಲ. ಈ ಮಹೀಂದ್ರಾ XUV700 ಎಸ್‍ಯುವಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಸುರಕ್ಷಿತ ಒಂದಾಗಿದೆ. ಈ XUV700 ಎಸ್‍ಯುವಿ ಈಗಾಗಲೇ ಜಾಗತಿಕ NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ರೂಪಾಂತರಗಳಿಗೆ ಸಂಬಂಧಿಸಿದಂತೆ, XUV700 AX5, AX7 ಮತ್ತು AX7L ರೂಪಾಂತರಗಳಲ್ಲಿ ಲಭ್ಯವಿದೆ. ಈ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ ಗಳನ್ನು ಹೊಂದಿದೆ.

ಇದರೊಂದಿಗೆ ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್ ಮತ್ತು 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಹೊಂದಿದೆ. ಭಾರತಕ್ಕಿಂತ ಭಿನ್ನವಾಗಿ, ನೇಪಾಳದಲ್ಲಿ ಕೇವಲ ಪೆಟ್ರೋಲ್ ಎಂಜಿನ್ ಮಾತ್ರ ಲಭ್ಯವಿದೆ. ಇದರಲ್ಲಿ 2.0-ಲೀಟರ್ ಎಂಸ್ಟಾಲಿಯನ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 197 ಬಿಹೆಚ್‍ಪಿ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸ್ಪೀಡ್ MT ಮತ್ತು AT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಈ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಹೊಂದಿದೆ. ಈ XUV700 ಎಸ್‍ಯುವಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್ ಅನ್ನು ಹೊಂದಿದೆ.

ಈ ಮಹೀಂದ್ರಾ XUV700 ಎಸ್‍ಯುವಿಯಲ್ಲಿ ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಅನ್ನು ಹೊಂದಿದೆ. ಇದರೊಂದಿಗೆ ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂನಂತಹ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ.

Article Published On: Monday, February 6, 2023, 17:10 [IST]
English summary
Bus hits mahindra xuv700 suv here is result find here all details in kannad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+