ಭಾರತದಲ್ಲಿ ಮೊದಲ ಏರ್‌ಬಸ್ ಐಷಾರಾಮಿ ಹೆಲಿಕಾಪ್ಟರ್ ಖರೀದಿಸಿದ ಉದ್ಯಮಿ ಬಿ.ರವಿ ಪಿಳ್ಳೈ
ಭಾರತದ ಉದ್ಯಮಿ ಹಾಗೂ ಆರ್‌ಪಿ ಗ್ರೂಪ್ ಆಫ್ ಕಂಪನೀಸ್‌ನ ಅಧ್ಯಕ್ಷ ಬಿ.ರವಿ ಪಿಳ್ಳೈ ಅವರು ಏರ್‌ಬಸ್ ಎಚ್ 145 ಹೆಲಿಕಾಪ್ಟರ್ ಅನ್ನು ಖರೀದಿಸಿದ ದೇಶದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಈ ಹೆಲಿಕಾಪ್ಟರ್ ಅನ್ನು ಚೆನ್ನೈನ ಕೋವಲಂನಲ್ಲಿರುವ ತಮ್ಮ ನಿವಾಸದಲ್ಲಿ ಡೆಲಿವರಿ ಪಡೆದಿದ್ದಾರೆ.

ಆರ್‌ಪಿ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಬಿ.ರವಿ ಪಿಳ್ಳೈ ಅವರು ಬರೋಬ್ಬರಿ 100 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಈ ಮೂಲಕ ಏರ್‌ಬಸ್ H145 ಹೆಲಿಕಾಪ್ಟರ್ ಹೊಂದಿರುವ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ನೂರು ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್‍ನ ಹೆಮ್ಮೆಯ ಮಾಲೀಕರಾಗಿರುವ 68 ವರ್ಷದ ಈ ಬಿಲಿಯನೇರ್ ಪ್ರಸ್ತುತ 2.5 ಶತಕೋಟಿ ರೂ. ಮೌಲ್ಯವನ್ನು ಹೊಂದಿದ್ದಾರೆ. ಇವರ ಒಡೆತನದಲ್ಲಿರುವ ವಿವಿಧ ಕಂಪನಿಯಲ್ಲಿ ಸುಮಾರು 70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಯುಎಇ ಮತ್ತು ಎಲ್ಲಾ ಮಧ್ಯಪ್ರಾಚ್ಯ ದೇಶಗಳಲ್ಲಿ ರವಿ ಪಿಳ್ಳೈ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ.

ಈ ಹೆಲಿಕಾಪ್ಟರ್ ಪಿಳ್ಳೈ ಅವರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಏಕೆಂದರೆ ಸಾವಿರಾರು ಕೋಟಿ ರೂ. ಆಸ್ತಿ ಒಡೆಯನಾಗಿರುವ ಇವರು ರಾಜ್ಯದಾದ್ಯಂತ ಹಲವಾರು ಐಷಾರಾಮಿ ಹೋಟೆಲ್ ಗಳನ್ನು ಹೊಂದಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಾದ್ಯಂತ ತಮ್ಮ ಅತಿಥಿಗಳನ್ನು ಸಾಗಿಸಲು ಈ ಹೆಲಿಕಾಪ್ಟರ್ ಬಳಕೆಯಾಗುತ್ತದೆ ಎಂದು ಆರ್‌ಪಿ ಗ್ರೂಪ್‌ನ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆರ್‌ಪಿ ಗ್ರೂಪ್ ಕೋಯಿಕ್ಕೋಡ್‌ನ 'ದಿ ರವಿಜ್ ಕಡವು', ಕೊಲ್ಲಂನ 'ದಿ ರವಿಜ್ ಅಷ್ಟಮುಡಿ' ಮತ್ತು ತಿರುವನಂತಪುರಂನ 'ದಿ ರವಿಜ್ ಕೋವಲಂ'ನಲ್ಲಿ ಹೆಲಿಪ್ಯಾಡ್‌ಗಳನ್ನು ಹೊಂದಿದೆ. ಕಡಿಮೆ ಪ್ರೊಫೈಲ್ ಅನ್ನು ನಿರ್ವಹಿಸುವ ಪಿಳ್ಳೈ ತಮ್ಮ ಚಾರಿಟಿ ಚಟುವಟಿಕೆಗಳಿಗೆ ಮತ್ತು ರಾಜಕೀಯ ಪಕ್ಷಗಳಾದ್ಯಂತ ಉನ್ನತ ರಾಜಕೀಯ ನಾಯಕರೊಂದಿಗಿನ ನಿಕಟ ಸ್ನೇಹ ಹೊಂದಿದ್ದಾರೆ.

ಐಷಾರಾಮಿ ಹೆಲಿಕಾಪ್ಟರ್
100 ಕೋಟಿ ರೂ. ಅಂದಮೇಲೆ ಈ ಐಷಾರಾಮಿ ಹೆಲಿಕಾಪ್ಟರ್‍ನ(Airbus H 145 Helicopter)ಲ್ಲಿ ಹಲವಾರು ವಿಶೇಷತೆಗಳಿರಲೇಬೇಕಲ್ಲವೇ? ಹೌದು, ಈ ಏರ್‌ಬಸ್ H145 ಹೆಲಿಕಾಪ್ಟರ್ ನಲ್ಲಿ ಅನೇಕ ಸೌಲಭ್ಯಗಳು ಲಭ್ಯವಿವೆ. ಇದು ಇತ್ತೀಚಿನ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಾಧುನಿಕ ಹೆಲಿಕಾಪ್ಟರ್ ಆಗಿದ್ದು, ಪೈಲಟ್ ಸೇರಿ ಒಟ್ಟು 8 ಜನರು ಇದರಲ್ಲಿ ಪ್ರಯಾಣಿಸಬಹುದು.

ಈ ಹೆಲಿಕಾಪ್ಟರ್ ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಿಂದಲೂ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಅಪಘಾತದ ತುರ್ತು ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗೆ ವಿಶೇಷ ತಂತ್ರಜ್ಞಾನವನ್ನು ಈ ಹೆಲಿಕಾಪ್ಟರ್ ಹೊಂದಿದೆಯಂತೆ. ಇದಲ್ಲದೆ H145 ಸುಧಾರಿತ ವೈರ್‌ಲೆಸ್ ಸಂವಹನ ವ್ಯವಸ್ಥೆ ಸಹ ಹೊಂದಿದೆ.

ಈ ಹೆಲಿಕಾಪ್ಟರ್ ಒಟ್ಟು 7 ಜನರ ಆಸನ ಸಾಮರ್ಥ್ಯವನ್ನು ಹೊಂದಿದ್ದು, ಇಬ್ಬರು ಪೈಲಟ್‌ಗಳನ್ನು ಹೊಂದಿದೆ. ಈ ಹೆಲಿಕಾಪ್ಟರ್ ಕಾಂಪ್ಯಾಕ್ಟ್ ಆಗಿರುವುದರಿಂದ ಇದು ಕಡಿಮೆ ಎತ್ತರದಲ್ಲಿಯೂ ಹಾರಲು ಸಾಧ್ಯವಾಗುತ್ತದೆ. ಏರ್‌ಬಸ್ ಎಚ್ 145 ಹೆಲಿಕಾಪ್ಟರ್ ಇತ್ತೀಚಿನ ಅಧುನಾತನ ಭದ್ರತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಕಂಪನಿಯ ಪ್ರಕಾರ ಎಚ್ -145 ಸಣ್ಣ ಗಾತ್ರದ ಹೆಲಿಕಾಪ್ಟರ್ ಆಗಿದ್ದು, ಇದರ ಕ್ಯಾಬಿನ್ ಅನ್ನು ವಿವಿಧ ಅಗತ್ಯಗಳಿಗೆ ಬಳಸಬಹುದು. ಈ ಹೆಲಿಕಾಪ್ಟರ್ ಏರ್‌ಬಸ್ 4 ಟನ್ ತೂಕದ ಹೊಸ ಅವಳಿ ಎಂಜಿನ್ ರೋಟರ್ ಹೆಲಿಕಾಪ್ಟರ್ ಆಗಿದೆ.

ಎಚ್ 145 ಹೆಲಿಕಾಪ್ಟರ್ ಬಿಕೆ 117, ಇಸಿ 145 ಮತ್ತು ಎಚ್ 145 ನಂತಹ ಹೆಲಿಕಾಪ್ಟರ್ ಮಾದರಿಗಳನ್ನು ಒಳಗೊಂಡಿದೆ. ವಿಶ್ವದಾದ್ಯಂತ ಇಂತಹ 1,500 ಹೆಲಿಕಾಪ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದು ಈಗಾಗಲೇ ಆರು ಮಿಲಿಯನ್ ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದೆ.

ಎಚ್ 145 ಹೆಲಿಕಾಪ್ಟರ್ ತನ್ನ ಭದ್ರತಾ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಅಪಘಾತದ ಸಮಯದಲ್ಲಿ ತನ್ನ ಪ್ರಯಾಣಿಕರ ಸುರಕ್ಷತೆಗಾಗಿ ಹೆಲಿಕಾಪ್ಟರ್ ಇಂಧನ ಹೀರಿಕೊಳ್ಳುವ ಆಸನಗಳನ್ನು ಹೊಂದಿದ್ದು, ಇಂಧನ ಸೋರಿಕೆಯ ಸಂಭವನೀಯತೆಯೂ ಕಡಿಮೆ. ಎಚ್ 145 ಸುಧಾರಿತ ನಿಸ್ತಂತು ಸಂವಹನ ವ್ಯವಸ್ಥೆಯನ್ನು ಹೊಂದಿದೆ.


Click it and Unblock the Notifications








