ಏಂಜೆಲ್ ಒನ್ ಸಿಇಒ ದುಬಾರಿ ಕಾರು ಖರೀದಿ: ಇದರ ಬೆಲೆಗೆ 25 ಇನ್ನೋವಾ ಕ್ರಿಸ್ಟಾಗಳು ಬರುತ್ತವೆ!

ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ 'ದಿನೇಶ್ ಠಕ್ಕರ್', ಈ ಹಿಂದೆ ಏಂಜೆಲ್ ಬ್ರೋಕಿಂಗ್ ಲಿಮಿಟೆಡ್ ಎಂದು ಕರೆಯಲ್ಪಡುತ್ತಿದ್ದ ಭಾರತೀಯ ಸ್ಟಾಕ್ ಬ್ರೋಕರ್ ಸಂಸ್ಥೆ ಏಂಜೆಲ್ ಒನ್‌ನ ಸಿಇಒ ಆಗಿದ್ದಾರೆ. ಇವರು ಇತ್ತೀಚೆಗೆ ದುಬಾರಿ ಲ್ಯಾಂಬೊರ್ಘಿನಿ ಸ್ಟೆರಾಟೊ ಕಾರನ್ನು ಖರೀದಿಸಿದ್ದು, ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.61 ಕೋಟಿಗಳಾಗಿದೆ.

ಈ ಸೂಪರ್ ಕಾರನ್ನು 2022 ರಲ್ಲಿ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಸ್ಟೆರಾಟೊ ವಿಶೇಷ ಕಾರಾಗಿದ್ದು, ಸಾಮಾನ್ಯ ಲ್ಯಾಂಬೊರ್ಘಿನಿ ಹುರಾಕನ್‌ಗೆ ಹೋಲಿಸಿದರೆ, ಸ್ಟೆರಾಟೊ ಹಲವಾರು ನವೀಕರಣಗಳನ್ನು ಹೊಂದಿದೆ. ಜೊತೆಗೆ ಲ್ಯಾಂಬೊರ್ಘಿನಿ ಕಂಪನಿಯು ಈ ಸ್ಟೆರಾಟೊ ಮಾದರಿಯನ್ನು ಜಾಗತಿಕವಾಗಿ ಸೀಮಿತ ಸಂಖ್ಯೆಯ (1499) ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ.

bussinessman-dinesh-thakkar-buys-lamborghini-huracan-sterrato

ಫೋಟೋಗಳನ್ನು ಹಂಚಿಕೊಂಡ ಉದ್ಯಮಿ: ದಿನೇಶ್ ಠಕ್ಕರ್ ಅವರು ತಮ್ಮ ಹೊಚ್ಚ ಹೊಸ ಸೂಪರ್ ಕಾರ್ ಡೆಲಿವರಿ ಪಡೆದ ಫೋಟೋ ಹಾಗೂ ವೀಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕುಟುಂಬದೊಂದಿಗೆ ಕಾರನ್ನು ಸ್ವೀಕರಿಸುವುದನ್ನು ಕಾಣಬಹುದು. ಆಲಿವ್ ಗ್ರೀನ್ ಬಣ್ಣದ ಕಾರನ್ನು ಖರೀದಿಸಿದ್ದು, ಕಾರಿನ ಒರಟಾದ ಲುಕ್ ಎಂಥವರನ್ನು ಆಕರ್ಷಿಸುತ್ತದೆ.

ದಿನೇಶ್ ಠಕ್ಕರ್ ಕಾರು ಉತ್ಸಾಹಿಯಾಗಿದ್ದು, ಅವರ ಗ್ಯಾರೇಜ್‌ನಲ್ಲಿ ಹಲವಾರು ದುಬಾರಿ ಕಾರುಗಳಿವೆ. ಈ ವರ್ಷದ ಆರಂಭದಲ್ಲಿ ದಿನೇಶ್ 2 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು ಐ7 ಐಷಾರಾಮಿ ಸೆಡಾನ್ ಅನ್ನು ಖರೀದಿಸಿದ್ದರು. ಇದಲ್ಲದೆ, ಅವರು ಪೋರ್ಷೆ ಟೇಕಾನ್ ಟರ್ಬೊ ಎಸ್ ಅನ್ನು ಸಹ ಹೊಂದಿದ್ದಾರೆ. ಈ ಕಾರು 761 ಬಿಹೆಚ್‌ಪಿ ಪವರ್ ಮತ್ತು 1050 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

bussinessman-dinesh-thakkar-buys-lamborghini-huracan-sterrato

ಇವಿಷ್ಟೇ ಅಲ್ಲದೇ ಮರ್ಸಿಡಿಸ್ ಬೆಂಝ್ ಇಕ್ಯೂಇ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿ, ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಆರ್ ಬ್ಲ್ಯಾಕ್ ಸೀರಿಸ್, ಫೆರಾರಿ 488 ಪಿಸ್ಟಾ ಕಾರುಗಳನ್ನು ಹೊಂದಿದ್ದಾರೆ. ಹಾಗೆಯೇ ಲ್ಯಾಂಬೊರ್ಘಿನಿ ಹುರಾಕನ್, ಪೋರ್ಷೆ 992, 911 ಜಿಟಿ 3 ಟೂರಿಂಗ್, ಲ್ಯಾಂಬೊರ್ಘಿನಿ ಉರುಸ್, ಪೋರ್ಷೆ 911 ಜಿಟಿ 3 ಆರ್ಎಸ್ ಮತ್ತು ಹಿಂದಿನ ತಲೆಮಾರಿನ ಮರ್ಸಿಡಿಸ್ ಜಿ 63 ಎಎಂಜಿಯನ್ನು ಹೊಂದಿದ್ದಾರೆ.

ಹೊಸ ಸ್ಟೆರಾಟೊ ಕಾರಿನ ವಿಶೇಷತೆಗಳು: ಈ ಸೂಪರ್ ಕಾರ್ ಅನ್ನು ಆಫ್-ರೋಡಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿರುವುದರಿಂದ, ಇದು ಹಿಂಭಾಗದ ಯಾಂತ್ರಿಕ ಸೆಲ್ಫ್-ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಹೊಂದಿದೆ. ಸ್ಟೆರಾಟೊ ಕೇವಲ 3.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸಬಲ್ಲದು. ಗಂಟೆಗೆ 260 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಇದರ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್ ಮಿಷನ್ ಎಲ್ಲಾ ನಾಲ್ಕು ವೀಲ್‌ಗಳಿಗೆ ಪವರ್ ಕಳುಹಿಸುತ್ತದೆ.

bussinessman-dinesh-thakkar-buys-lamborghini-huracan-sterrato

ಸ್ಟೆರಾಟೊ ಕಾರಿನಲ್ಲಿ 5.2 ಲೀಟರ್‌ನ ನ್ಯಾಚುರಲಿ ಆಸ್ಪಿರೇಟೆಡ್ ವಿ10 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 610 ಬಿಹೆಚ್‌ಪಿ ಪವರ್ ಹಾಗೂ 560 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಅನ್ನು ಸ್ವಲ್ಪ ಮರುಹೊಂದಿಸಲಾಗಿದ್ದು, ಸಾಮಾನ್ಯ ಹುರಾಕನ್‌ಗೆ ಹೋಲಿಸಿದರೆ ಕಡಿಮೆ ಪವರ್ ಮತ್ತು ಟಾರ್ಕ್ ಉತ್ಪಾದಿಸುತ್ತದೆ.

ಡಿಸೈನ್: ಹೊಸ ಲ್ಯಾಂಬೊರ್ಘಿನಿ ಸ್ಟೆರಾಟೊ ಮುಂಭಾಗ ಮತ್ತು ಹಿಂಭಾಗದ ಟ್ರ್ಯಾಕ್ ಅನ್ನು ಕ್ರಮವಾಗಿ 30 ಎಂಎಂ ಮತ್ತು 34 ಎಂಎಂಗೆ ಹೆಚ್ಚಿಸಲಾಗಿದೆ. ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು 44 ಎಂಎಂ ಹೆಚ್ಚಿಸಲಾಗಿದ್ದು, ಹೆಚ್ಚಿನ ಸಸ್ಪೆಂಷನ್ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ. ಕಾರಿನ ಮುಂಭಾಗದಲ್ಲಿ ಎರಡು ಎಲ್ಇಡಿ ಆಕ್ಸಿಲರಿ ಲೈಟ್‌ಗಳು, ಫೆಂಡರ್ ಫ್ಲೇರ್‌ಗಳು, ಪರಿಷ್ಕೃತ ಡಿಫ್ಯೂಸರ್ ಸೇರಿದಂತೆ ಹೆಚ್ಚಿನವುಗಳನ್ನು ಹೊಂದಿದೆ.

ಲ್ಯಾಂಬೊರ್ಘಿನಿ ನವೀಕರಿಸಿದ ವಾಹನ ಡೈನಾಮಿಕ್ ಪ್ಯಾಕ್ ಅಥವಾ ಎಲ್‌ಡಿವಿಐ (ಲ್ಯಾಂಬೊರ್ಗಿನಿ ಇಂಟಿಗ್ರೇಟೆಡ್ ವೆಹಿಕಲ್ ಡೈನಾಮಿಕ್ಸ್) ಅನ್ನು ಸಹ ನೀಡುತ್ತಿದೆ. ಇದು ಹೊಸ ರ್ಯಲಿ ಮೋಡ್ ಅನ್ನು ಸೂಪರ್ ಕಾರ್‌ಗೆ ತರುತ್ತದೆ. ಸ್ಟ್ರಾಡಾ ಮತ್ತು ಸ್ಪೋರ್ಟ್ ಮೋಡ್‌ಗಳನ್ನು ಸಹ ಮರುಪರಿಶೀಲಿಸಲಾಗಿದೆ. ಸ್ಟೆರಾಟೊ 19-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಡ್ಯುಯಲ್ ಪರ್ಪಸ್ ಟೈರ್ ಗಳೊಂದಿಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 1, 2024, 13:29 [IST]
English summary
Bussinessman dinesh thakkar buys lamborghini huracan sterrato
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+