ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಭಾರತದ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ದೊಡ್ಡ ದೊಡ್ಡ ಹೆದ್ದಾರಿಗಳು ಎಕ್ಸ್ ಪ್ರೆಸ್‍‍ವೇಗಳಿದ್ದರೂ ರಸ್ತೆಯಲ್ಲಿ ಹೇಗೆ ವಾಹನಗಳನ್ನು ಚಲಾಯಿಸಬೇಕು ಹಾಗೂ ರಸ್ತೆ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಸಾಮಾನ್ಯ ಜ್ಞಾನ ಜನರಲ್ಲಿ ಇಲ್ಲದಿರುವುದು ವಿಪರ್ಯಾಸವೇ ಸರಿ.

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಗುಜರಾತ್‍‍ನಲ್ಲಿ ನಡೆದಿರುವ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಲ್ಲಿ ನಮ್ಮದಲ್ಲದ ತಪ್ಪಿಗೆ ಹೇಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಕಾಣಬಹುದು. ಈ ಘಟನೆಯು ಗುಜರಾತ್‍‍ನಲ್ಲಿರುವ ಸೂರತ್‍‍ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಹಸುವೊಂದು ಸರಣಿ ಅಪಘಾತಕ್ಕೆ ಕಾರಣವಾಗಿದೆ.

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಈ ವೀಡಿಯೊದಲ್ಲಿ ಹಸುವೊಂದು ವಾಹನದಟ್ಟಣೆ ಇರುವ ರಸ್ತೆಯನ್ನು ದಾಟಲು ಯತ್ನಿಸುತ್ತಿದೆ. ಮುಂದೆ ಹೋಗುವ ದೊಡ್ಡ ಟ್ರಕ್ ವಾಹನವು ಹಲವು ವಾಹನಗಳು ಹಾದು ಹೋಗುವ ನೋಟವನ್ನು ಮರೆ ಮಾಡುತ್ತದೆ. ಮುಂದಿರುವ ಕಾರಿನ ಚಾಲಕನು ಹಸುವನ್ನು ಕಂಡಾಗ, ಹಸುವಿಗೆ ಗುದಿಯುವುದನ್ನು ತಪ್ಪಿಸಲು ಬ್ರೇಕ್ ಹಾಕುತ್ತಾನೆ.

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಇದರ ಹಿಂದಿದ್ದ ಮಹೀಂದ್ರಾ ಮರಾಜೊ ಎಂಪಿವಿಯನ್ನು ಸಹ ಬ್ರೇಕ್‌ ಹಾಕಿ ನಿಲ್ಲಿಸಲಾಗುತ್ತದೆ. ಮುಂದಿದ್ದ ವಾಹನಕ್ಕೆ ಗುದಿಯುವುದನ್ನು ತಪ್ಪಿಸುತ್ತದೆ. ಆದರೆ, ಈ ಎರಡೂ ಕಾರುಗಳ ಹಿಂದೆ ಇದ್ದ ಬಸ್ಸಿಗೆ ತಕ್ಷಣಕ್ಕೆ ಬ್ರೇಕ್ ಹಾಕಿ ನಿಲ್ಲಿಸಲು ಸಾಧ್ಯವಾಗಿಲ್ಲ. ಆದ ಕಾರಣ ಬಸ್ ಹಿಂಭಾಗದಿಂದ ಮರಾಜೊ ಕಾರಿಗೆ ಗುದ್ದಿದೆ.

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ನಂತರ ಮರಾಜೋ ಎಂಪಿವಿ ಹಿಂಭಾಗದಿಂದ ಸೆಡಾನ್‌ಗೆ ಬಡಿದು, ಈ ಮೂರು ವಾಹನಗಳ ಅಪಘಾತಕ್ಕೆ ಕಾರಣವಾಗಿದೆ. ಸೆಡಾನ್ ಕಾರಿನ ಸವಾರನು ಮುಂದಿದ್ದ ವಾಹನಗಳನ್ನು ಎಡಗಡೆಯಿಂದ ಒವರ್‍‍ಟೇಕ್ ಮಾಡಲು ಯತ್ನಿಸಿದ್ದಾನೆ. ಈ ರೀತಿ ಮಾಡುವುದು ತಪ್ಪು. ಎಡಗಡೆಯಿಂದ ಒವರ್‍‍ಟೇಕ್ ಮಾಡಿದರೆ, ರಸ್ತೆಯ ಮುಂಭಾಗದಲ್ಲಿರುವ ದೃಶ್ಯಗಳು ಕಾಣಿಸುವುದಿಲ್ಲ.

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಭಾರತದಲ್ಲಿ ಯಾರೊಬ್ಬರೂ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಹೈವೇಗಳಲ್ಲಿಯಂತೂ ಕೇಳುವುದೇ ಬೇಡ. ಬಹುತೇಕ ಸಂದರ್ಭಗಳಲ್ಲಿ, ಟ್ರಕ್‍‍ಗಳೂ ಸೇರಿದಂತೆ ನಿಧಾನಗತಿಯಲ್ಲಿರುವ ವಾಹನಗಳು ಒವರ್‍‍ಟೇಕ್ ಮಾಡಿ ವೇಗಕ್ಕೆ ಮೀಸಲಿರುವ ಪಥದಲ್ಲಿ ಚಲಿಸುತ್ತವೆ. ಈ ಕಾರಣಕ್ಕಾಗಿ ವಾಹನ ಸವಾರರು ಎಡಗಡೆಯಿಂದ ಒವರ್‍‍ಟೇಕ್ ಮಾಡುತ್ತಾರೆ.

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಭಾರತದಲ್ಲಿ ಭಾರವಾದ ವಾಹನಗಳು ಲಘು ಮೋಟಾರು ವಾಹನಗಳಿಗಿಂತ ಕಡಿಮೆ ವೇಗದ ಮಿತಿಯನ್ನು ಹೊಂದಿವೆ. ಏಕೆಂದರೆ ಈ ವಾಹನಗಳನ್ನು ನಿಲ್ಲಬೇಕಾದರೆ ಸಾಕಷ್ಟು ದೂರ ಚಲಿಸುತ್ತವೆ. ಭಾರವಾದ ವಾಹನಗಳು ಸಾಕಷ್ಟು ಮೂಮೆಂಟಂ ಹೊಂದಿರುವುದರಿಂದ, ಅವು ಸ್ವಲ್ಪ ದೂರದಲ್ಲಿ ನಿಲ್ಲಲು ಸಾಧ್ಯವಿಲ್ಲ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಈ ಕಾರಣಕ್ಕಾಗಿಯೇ ಎರಡು ವಾಹನಗಳ ನಡುವೆ ಸುರಕ್ಷಿತ ಅಂತರದಲ್ಲಿ ಚಲಿಸುವಂತೆ ವಾಹನ ಚಾಲಕರಿಗೆ ಸೂಚಿಸಲಾಗುತ್ತದೆ. ಆದರೂ, ಭಾರತದಲ್ಲಿರುವ ವಾಹನ ಚಾಲಕರು ಈ ನಿಯಮಗಳನ್ನು ಪಾಲಿಸುವುದೇ ಇಲ್ಲ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಭಯದಿಂದ ದಾರಿಯುದ್ದಕ್ಕೂ ಓಡಿದ ಹಸು ಇಲ್ಲಿ ಅಪರಾಧಿ. ದಾರಿತಪ್ಪಿ ಬರುವ ದನಗಳನ್ನು ಗುದ್ದಿಕೊಂಡು ಹೋಗುವುದರಿಂದ ಮುಂದಿರುವ ಸೆಡಾನ್ ಗೆ ದೊಡ್ಡ ಹಾನಿ ಉಂಟಾಗಬಹುದು ಎಂಬುದನ್ನು ಗಮನಿಸಬೇಕು. ದಾರಿತಪ್ಪಿ ಬರುವ ಪ್ರಾಣಿಗಳು ರಸ್ತೆಗಳಲ್ಲಿ ಅನಿರೀಕ್ಷಿತವಾಗಿ ಎದುರಾಗುತ್ತವೆ. ಇವುಗಳು ಯಾವ ದಿಕ್ಕಿನಲ್ಲಿ ಹೋಗುತ್ತವೆ ಎಂಬುದು ತಿಳಿಯುವುದೇ ಇಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ದಾರಿ ತಪ್ಪುವ ದನಗಳು ಭಾರತದಲ್ಲಿರುವ ಹೈವೇಗಳಲ್ಲಿ ಹೆಚ್ಚು ಸಮಸ್ಯೆಯನ್ನು ತರುತ್ತವೆ. ಈ ದನಗಳು ಹೆದ್ದಾರಿಗಳಿಗೆ ನುಗ್ಗಿಬರುವುದನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮೊದಲು ಉತ್ತರ ಪ್ರದೇಶದ ಅಧಿಕಾರಿಗಳು ದನಗಳ ಕೊಂಬುಗಳಿಗೆ ಹೈ ರಿಫ್ಲೆಕ್ಟಿವ್ ಟೇಪುಗಳನ್ನು ಸುತ್ತುತ್ತಿದ್ದರು.

ಇದರಿಂದಾಗಿ ರಾತ್ರಿ ವೇಳೆಯಲ್ಲಿ ಅವುಗಳು ವಾಹನ ಸವಾರರ ಕಣ್ಣಿಗೆ ಬೀಳುತ್ತಿದ್ದವು. ಆದರೆ ಈಗ ಇವುಗಳನ್ನು ರಸ್ತೆಗಳಿಂದ ತೆರವುಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ವರದಿಗಳ ಪ್ರಕಾರ, ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ.

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ, ಆದಷ್ಟು ಮುನ್ನೆಚ್ಚರಿಕೆಯನ್ನು ವಹಿಸಬೇಕು. ಅದರ ಜೊತೆಗೆ ಒವರ್‍‍‍ಟೇಕ್ ಮಾಡುವ ಮುನ್ನ ರಸ್ತೆ ಖಾಲಿ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಮುಂದುವರೆಯಬೇಕು.

ಹಸು ಉಳಿಸಲು ಹೋಗಿ ಸರಣಿ ಅಪಘಾತ..!

ಈ ಹಿಂದೆ ಒವರ್‍‍ಟೇಕ್ ಮಾಡುವ ಸಂದರ್ಭದಲ್ಲಿಯೇ ಹಲವಾರು ಅಪಘಾತಗಳು ಸಂಭವಿಸಿವೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಭಾರತದ ರಸ್ತೆಗಳಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು.

Source: TV9 Gujarati/YouTube

Article Published On: Friday, November 15, 2019, 18:23 [IST]
English summary
Car crashes into truck to save cow no casualties reported video details - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+