ಕಾರುಗಳ ಅಂದತೆಯ ಪ್ರತೀಕವಾದ 10 ಜನಪ್ರಿಯ 'ಹುಡ್ ಓರ್ನಮೆಂಟ್'

By Nagaraja

ಬಹುಶ: 'ಹುಡ್ ಓರ್ನಮೆಂಟ್' ಎಂಬ ಪದವನ್ನು ನೀವು ಮೊದಲ ಬಾರಿ ಕೇಳುತ್ತಿರಬಹುದು. ಹಾಗಾಗಿ ಇದು ನಿಮ್ಮಲ್ಲಿ ವಿಚಿತ್ರತೆ ಮೂಡಿಸಬಹುದು. ಹಾಗಾಗಿ ಹುಡ್ ಓರ್ನಮೆಂಟ್ ಎಂದರೇನು? ಎಂಬುದಕ್ಕೆ ಸುಲಭವಾದ ವಿವರಣೆ ನೀಡುವ ಪ್ರಯತ್ನ ಮಾಡೋಣ. 'ಓರ್ನಮೆಂಟ್' ಅಂದರೆ ಆಭರಣ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಅದೇ ರೀತಿ 'ಹುಡ್' ಎಂದರೆ ತಲೆಗವಸು. ಇದೇ ಪದವನ್ನು ಕಾರಿನ ಮೇಲಿನ ಸೂಚಕ ಲಾಂಛನದ ವರ್ಣನೆಗೂ ಬಳಸಿಕೊಳ್ಳಲಾಗಿದೆ.

ಗಣ್ಯರಿಗೆ ಶ್ರೀರಕ್ಷೆಯಾದ ಟಾಪ್ 10 ಆರ್ಮರ್ಡ್ ಕಾರ್ಸ್

ಅಂದ ಹಾಗೆ ಹುಡ್ ಓರ್ನಮೆಂಟ್ ಎಂಬ ಪದವನ್ನು ಬೊನೆಟ್ ಓರ್ನಮೆಂಟ್, ರೇಡಿಯೇಟರ್ ಕ್ಯಾಪ್, ಮೋಟಾರ್ ಮಾಸ್ಕಟ್ ಅಥವಾ ಕಾರು ಮಾಸ್ಕೂಟ್ ಎಂಬ ಪದಗಳಿಂದಲೂ ವರ್ಣಿಸಲಾಗುತ್ತದೆ. ಇದನ್ನು ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದ್ದು, ಕಾರು ತಯಾರಕ ಸಂಸ್ಥೆಯ ಲಾಂಛನದ ಇತಿಹಾಸ, ಅಂದತೆಯನ್ನು ಪ್ರತಿನಿಧಿಸುತ್ತದೆ. ಸಾಮಾನ್ಯವಾಗಿ ಇದನ್ನು ಕಾರಿನ ಬೊನೆಟ್ ಮೇಲ್ಗಡೆಯಾಗಿ ಲಗ್ಗತ್ತಿಸಲಾಗಿರುತ್ತದೆ.

ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ಉಗಮ

ಉಗಮ

ಹುಡ್ ಓರ್ನಮೆಂಟ್‌ಗಳ ಉಗಮವು ಮೊಟೊ ಮೀಟರ್‌ಗಳಿಂದ ರೂಪುಗೊಂಡಿದೆ. ಹಿಂದಿನ ಕಾಲದಲ್ಲಿ ಕಾರಿನ ಹೊರಗಡೆ ಗ್ರಿಲ್ ಮೇಲ್ಗಡೆಯಾಗಿ ರೇಡಿಯೇಟರ್ ಕ್ಯಾಪ್‌ಗಳು ಇರುತ್ತಿದ್ದವು. ಇದನ್ನು ಎಂಜಿನ್ ಕೂಲಂಟ್ ದ್ರವದ ತಾಪಮಾನ ಮಾಪನವಾಗಿಯೂ ಬಳಕೆ ಮಾಡಲಾಗುತ್ತಿತ್ತು. ಸಮಯ ಸಾಗಿದಂತೆ ವಾಹನೋದ್ಯಮದಲ್ಲಿ ನೂತನ ತಂತ್ರಜ್ಞಾನಗಳ ಆವಿಷ್ಕಾರವಾದಂತೆಯೇ ರೇಡಿಯೇಟರ್ ಕ್ಯಾಪ್ ಮಾಪನವು ಕಾರಿನೊಳಗಿನ ಡ್ಯಾಶ್‌ಬೋರ್ಡ್‌ನಲ್ಲಿ ಆಳವಡಿಸಲಾಯಿತು. ಆದರೆ ಹೊರಗಡೆಯ ರೇಡಿಯೇಟರ್ ಕ್ಯಾಪ್ ಮಾತ್ರ ಹಾಗೆಯೇ ಉಳಿದಿತ್ತು. ಬರ ಬರುತ್ತಾ 20ನೇ ಶತಮಾನದ ಆರಂಭಿಕ ಕಾಲಘಟ್ಟದಲ್ಲಿ (1920ರಲ್ಲಿ) ಈ ರೇಡಿಯೇಟರ್ ಕ್ಯಾಪ್‌ಗಳನ್ನು ರೆಕ್ಕೆ, ಪ್ರಾಣಿಗಳ ಅಥವಾ ಇತರ ಆಭರಣಗಳ ಸಂಕೇತಗಳಾಗಿ ರಚಿಸಲಾಯಿತು. ಬಳಿಕ ಇದು ಕಾರಿನ ಪ್ರತಿಷ್ಠೆಯ ಸಂಕೇತ 'ಹುಡ್ ಓರ್ನಮೆಂಟ್' ಆಗಿ ಪರಿವರ್ತನೆಯಾಯಿತು.

1. ಸ್ಪಿರಿಟ್ ಆಫ್ ಏಕಾಸ್ಟಸಿ

1. ಸ್ಪಿರಿಟ್ ಆಫ್ ಏಕಾಸ್ಟಸಿ

ಸ್ಪಿರಿಟ್ ಆಫ್ ಏಕಾಸ್ಟಸಿ (The Spirit of Ecstasy) ಎಂದರಿಯಲ್ಪಡುವ ರೋಯ್ಸ್ ರಾಯ್ಸ್ ಹುಡ್ ಓರ್ನಮೆಂಟ್‌ನಲ್ಲಿ ತನ್ನ ಕೈಗಳನ್ನು ಹಿಂದಕ್ಕೆ ಚಾಚಿಕೊಂಡು ದೇವತೆಯೊಬ್ಬಾಕೆ ಮುಂಭಾಗಕ್ಕೆ ಬಾಗಿಕೊಂಡಿರುವ ದೃಶ್ಯವನ್ನು ನೋಡಬಹುದು. ಇಲ್ಲಿ ಹಿಂದಕ್ಕೆ ತೇಲಾಡುವ ಬಟ್ಟೆಗಳು ರೆಕ್ಕೆಗಳ ಸಂಕೇತ ನೀಡುತ್ತದೆ. ಎಮಿಲಿ, ಸಿಲ್ವರ್ ಲೇಡಿ ಅಥವಾ ಫ್ಲೈಯಿಂಗ್ ಲೇಡಿ ಎಂದೂ ಸಹ ಅರಿಯಲ್ಪಡುವ ರೋಯ್ಸ್ ರಾಯ್ಸ್ ಬೊನೆಟ್ ಆರ್ನಮೆಂಟ್ ಅನ್ನು ಇಂಗ್ಲಿಷ್ ಶಿಲ್ಪಿ ಚಾರ್ಲ್ಸ್ ರಾಬಿನ್ಸನ್ ಸೈಕ್ಸ್ ಕಂಡು ಹಿಡಿದಿದ್ದಾರೆ. ಇದು ಎರಡನೇ ಬ್ಯೂಲಿಯೋ ಪ್ರಭು ( John Walter Edward Douglas-Scott-Montagu) ಮತ್ತು ಎಲೆನೊರ್ ವೆಲಸ್ಕೊ ಥ್ರೊಟನ್ (Eleanor Velasco Thornton) ಅವರ ಪ್ರೇಮದ ಸಂಕೇತವಾಗಿದೆ. ಅತಿ ಪುರಾತನ ಹುಡ್ ಓರ್ನಮೆಂಟ್‌ಗಳಲ್ಲಿ ಒಂದಾಗಿರುವ (1900ರ ದಶಕದಿಂದಲೂ) ಸ್ಪಿರಿಟ್ ಆಫ್ ಏಕಾಸ್ಟಸಿ ಈಗಲೂ ಅತ್ಯಂತ ಹೆಚ್ಚು ಗುರುತಿಸಲ್ಪಟ್ಟಿರುವ ಕಾರಿನ ಲಾಂಛನವಾಗಿ ಉಳಿದುಕೊಂಡಿದೆ.

2. ಗನ್ ಸೈಟ್

2. ಗನ್ ಸೈಟ್

ಗನ್ ಸೈಟ್ ಕಾರು ಲಾಂಛನವು ಹಳೆಯ ಲಿಂಕನ್ ಕಾರುಗಳಲ್ಲಿ ಸಾಮಾನ್ಯವಾಗಿತ್ತು. ಇದು ಪಿಸ್ತೂಲ್‌ಗಳಲ್ಲಿರುವ ಗನ್ ಸೈಟ್‌ಗಳಿಗೆ (gun sight) ಹೋಲುವ ವಿನ್ಯಾಸವನ್ನು ಹೊಂದಿದೆ. ಅಷ್ಟೇ ಅಲ್ಲದೆ ಇದು ಲಿಂಕನ್ ಕಾರುಗಳ ಅತ್ಯಂತ ವೇಗದಲ್ಲಿ ಚಲಿಸುವ ಜೊತೆಗೆ ಸೌಂದರ್ಯದ ಪ್ರತೀಕವಾಗಿದೆ.

3. ವೇಗದ ದೇವತೆ

3. ವೇಗದ ದೇವತೆ

ಅಮೆರಿಕದ ಅಂದಿನ ಐಷಾರಾಮಿ ಕಾರು ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿದ್ದ ಪ್ಯಾಕರ್ಡ್, 1899 ಹಾಗೂ 1958ರ ಅವಧಿಯ ನಡುವೆ ಕಾರುಗಳನ್ನು ನಿರ್ಮಿಸಿತ್ತು. ಇದು ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಳ್ಳಲು ಸೂಚಕ ಲಾಂಛನವನ್ನು ಬಳಸಿಕೊಂಡಿತ್ತು. ಸಂಸ್ಥೆಯು ವೇಗದ ದೇವತೆ (Goddess of Speed) ಹಾಗೂ ನೀರಹಕ್ಕಿಯ ಸಂಕೇತವಾಗಿ ಹುಡ್ ಓರ್ನಮೆಂಟ್ ಆಳವಡಿಸಿತ್ತು. ಇಲ್ಲಿ ಮುಂಭಾಗಕ್ಕೆ ಚಾಚಿದ ದೇವತೆಯ ಕೈಯಲ್ಲಿ ಚಕ್ರದ ಪ್ರತಿಬಿಂಬವನ್ನು ನೋಡಬಹುದಾಗಿದೆ.

4. ಫ್ಲೈಯಿಂಗ್ ಬಿ

4. ಫ್ಲೈಯಿಂಗ್ ಬಿ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬ್ರಿಟನ್‌ನ ಲಗ್ಷುರಿ ಸಂಸ್ಥೆಯಾಗಿರುವ ಬೆಂಟ್ಲಿ ಸಹ ಅತ್ಯಂತ ಜನಪ್ರಿಯ ಕಾರು ಸೂಚಕ ಲಾಂಛನವನ್ನು ಪಡೆದುಕೊಂಡಿದೆ. ಇದು 'ಫೈಯಿಂಗ್ ಬಿ' (Flying B) ಸಂಕೇತವನ್ನು ಪ್ರತಿಬಿಂಬಿಸುತ್ತದೆ. 1919ರಲ್ಲಿ ಬೆಂಟ್ಲಿ ಮೂರು ವರೆ ಲೀಟರ್ ಕಾರಿನಲ್ಲಿ ದೊಡ್ಡಕ್ಷರದ ಬಿ ಸಂಕೇತವು ದರ್ಶನೀಯವಾಗಿತ್ತು. ಇಲ್ಲಿದ ಬಿಗೆ ಹೊಂದಿಕೊಂಡಿರುವ ರೆಕ್ಕೆಯು ಬೆಂಟ್ಲಿ ವೇಗವನ್ನು ಸೂಚಿಸುತ್ತದೆ.

5. ಮೂರು ಬಿಂದುಗಳ ನಕ್ಷತ್ರ

5. ಮೂರು ಬಿಂದುಗಳ ನಕ್ಷತ್ರ

ರೋಲ್ಸ್ ರಾಯ್ಸ್ ಕಾರು ಲಾಂಛನದಷ್ಟೇ ಖ್ಯಾತಿ ಹಾಗೂ ಜನಪ್ರಿಯತೆಯನ್ನು ಇಂದಿಗೂ ಮೂರು ಸ್ಟಾರ್‌ಗಳ ( three-pointed star) ಮರ್ಸಿಡಿಸ್ ಬೆಂಝ್ ಹುಡ್ ಓರ್ನಮೆಂಟ್ ಉಳಿಸಿಕೊಂಡು ಬಂದಿದೆ. ಇಲ್ಲೊಂದು ಸ್ವಾರಸ್ಯಕರ ಕಥೆಯೊಂದಿದೆ. ಅಂತರ್ದಹನ ಎಂಜಿನ್ ಪ್ರವರ್ತಕಗಳ ಆದಿ ಶೋಧಕರಾಗಿರುವ ಗಾಟ್ಲೀಬ್ ಡೈಮ್ಲರ್ (Gottlieb Daimler) ತಮ್ಮ ಧರ್ಮಪತ್ನಿಗೆ ಬರೆದ ಅಂಚೆ ಪತ್ರವೊಂದರಲ್ಲಿ, ತಮ್ಮ ಮನೆಯನ್ನು ಮೂರು ಬಿಂದುಗಳ ನಕ್ಷತ್ರವಾಗಿ ಗುರುತಿಸಿದ್ದರು. ಅಲ್ಲದೆ ಮುಂದೊಂದು ದಿನ ಇದು ನಮ್ಮ ಕಾರ್ಖಾನೆಗಳಿಂತಲೂ ಮಿಗಿಲಾಗಿ ಖ್ಯಾತಿ ಪಡೆಯಲಿದೆ ಎಂದಿದ್ದರು. ಇದು ಡೈಮ್ಲರ್ ಹಾಗೂ ಆತನ ಉದ್ಯಮಿ ಜೊತೆಗಾರ ಮೈಬ್ಯಾಕ್ ಅವರಿಗೆ ನೆಲ, ಭೂಮಿ ಹಾಗೂ ಗಾಳಿಗಳಲ್ಲಿ ಚಳಿಸುವ ಎಂಜಿನ್ ನಿರ್ಮಿಸಲು ಸ್ಫೂರ್ತಿ ತುಂಬಿತ್ತು. ಬಳಿಕ ಡೈಮ್ಲರ್ ಮಕ್ಕಳಾದ ಪಾಲ್ ಹಾಗೂ ಆಡಾಲ್ಫ್ ಡೈಮ್ಲರ್, ಜರ್ಮನಿಯ ಎಂಜಿನ್ ತಯಾರಿಕ ಸಂಸ್ಥೆಯಾದ (ಬಳಿಕ ವಾಹನ ತಯಾರಕ ಸಂಸ್ಥೆಯಾಗಿ ಪರಿವರ್ತನೆ) ಡೈಮ್ಲರ್ ಮೊಟೊರೆನ್ ಗೆಸೆಲ್‌ಚಾಟ್‌ಗೆ (Daimler-Motoren-Gesellschaft) ಇದೇ ಲಾಂಛನವನ್ನು ಬಳಸಿಕೊಳ್ಳಲು ಸೂಚಿಸಿದ್ದರು. ಇದು ಮೂರು ಬಿಂದುಗಳ ನಕ್ಷತ್ರವನ್ನು 1921ರಲ್ಲಿ ಬಳಸಿಕೊಳ್ಳಲು ಪ್ರೇರಣೆಯಾಗಿತ್ತು.

6. ಫ್ಲೈಯಿಂಗ್ ಲೇಡಿ

6. ಫ್ಲೈಯಿಂಗ್ ಲೇಡಿ

ಪ್ರೀಮಿಯಂ 1940ರ ದಶಕದಲ್ಲಿ ಸೀಮಿತ ಆವೃತ್ತಿಯ ಪ್ಲೈಮೌತ್ ಕಾರುಗಳನ್ನು ದೇಶಕ್ಕೆ ಪರಿಚಿಯಿಸಿತ್ತು. ಇದು ಇನ್ನು ಆಸಕ್ತಿದಾಯಕ ರೇಡಿಯೇಟರ್ ಕ್ಯಾಪ್ ಕಥೆಯನ್ನು ಹೊಂದಿದೆ. 1920ರ ದಶಕದಲ್ಲಿ ಪಿಸಿ ಸಿರೀಸ್ ಕಾರುಗಳನ್ನು ಉತ್ಪಾದಿಸುತ್ತಿದ್ದ ಪ್ಲೈಮೌತ್, ಉದಯೋನ್ಮುಖ ಶಿಲ್ಪ ಅವರ್ಡ್ ಫೈರ್‌ಬ್ಯಾಂಕ್ಸ್ (Avard Fairbanks) ಅವರಲ್ಲಿ ಎಂಟು ಎಂಜಿನ್‌ಗಳ ನಯವಾದ ಹಾಗೂ ನಾಲ್ಕು ಎಂಜಿನ್‌ಗಳ ಇಂಧನ ಕ್ಷಮತೆ ನೀಡುವ ಜಾಹಿರಾತು ಲೊಗೊವೊಂದನ್ನು ನಿರ್ಮಿಸಲು ಆಜ್ಞೆ ಮಾಡಿದ್ದರು. ಇದರ ಫಲ ಸ್ವರೂಪಯೇ ಅವರ್ಡ್ ಅವರಿಂದ ನಿರ್ಮಾಣವಾಗಿರುವ 'ಫ್ಲೈಯಿಂಗ್ ಲೇಡಿ' ಹುಡ್ ಓರ್ನಮೆಂಟ್.

7. ದೇವತೆ

7. ದೇವತೆ

1930ರ ಆರಂಭಿಕ ಕಾಲಘಟ್ಟದಲ್ಲಿ ರಿವೇರಿಯಾ (Riviera) ಹಾಗೂ ಮಾಡೆಲ್ 40 ಮಾದರಿಗಳನ್ನು ಪರಿಚಯಿಸಿದ್ದ ಬ್ಯೂಕ್, ಅಮೆರಿಕದ ಅಂದಿನ ಮಾದಕ ನರ್ತಕಿ ಇಸಡೋರಾ ಡಂಕನ್ ರೂಪದಲ್ಲಿ ದೇವತೆ (Goddess) ಲೊಗೊವನ್ನು ಹೊಂದಿದೆ. ಇದು ಕುತ್ತಿಗೆಯ ಹಿಂದಕ್ಕೆ ತೇಲಾಡುತ್ತಿರುವ ಸ್ಕಾರ್ಫ್‌ನೊಂದಿಗೆ ಸಂಪೂರ್ಣ ಬೆತ್ತಲೆ ಸ್ವರೂಪ ಪಡೆದಿದೆ. ಹೀಗೆ ಮಾಡಲು ಕಾರಣವೊಂದಿದೆ. ಅಮೆರಿಕದ ಹೆಸರಾಂತ ನರ್ತಕಿಯಾಗಿರುವ ಇಸಡೋರಾ, 1927ನೇ ಇಸವಿಯಲ್ಲಿ ಕಾರಲ್ಲಿ ಚಲಿಸುತ್ತಿರಬೇಕಾದರೆ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ ಹಿಂಭಾಗದ ಚಕ್ರಕ್ಕೆ (rear axle) ಸಿಲುಕಿ ದಾರುಣ ಸಾವಿಗೆ ಶರಣಾಗಿದ್ದರು.

 8. ಲೀಪರ್

8. ಲೀಪರ್

ಪ್ರಸ್ತುತ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್, ಪ್ರತಿಷ್ಠಿತ ಲೀಪರ್ (leaper) ವುಡ್ ಓರ್ನಮೆಂಟ್ ಹೊಂದಿದೆ. ಇದು ಅತ್ಯಂತ ಜನಪ್ರಿಯ ರಭಸದಿಂದ ಜಿಗಿಯುವ ಜಾಗ್ವಾರ್ ಪ್ರತಿನಿಧಿಸುತ್ತದೆ.

9. ದಿ ರಾಮ್

9. ದಿ ರಾಮ್

ಡೊಡ್ಜ್‌ನ 'ರಾಮ್' (Ram) ಹುಡ್ ಓರ್ನಮೆಂಟ್ ಮಗದೊಮ್ಮೆ ಅವಾರ್ಡ್ ಫೈರ್‌ಬ್ಯಾಂಕ್ಸ್ ಅವರ ಕನಸಿನ ಕೂಸಾಗಿದೆ. ಇದು ಶಕ್ತಿ ಮತ್ತು ವಿಶ್ವಾಸಾರ್ಹತೆಯ ಒಂದು ಸುದೀರ್ಘವಾದ ಸಂಪ್ರದಾಯವನ್ನು ಸಾರುತ್ತದೆ. ಕಳೆದ ಹಲವಾರು ವರ್ಷಗಳಿಂದ ಇದು ಡೊಡ್ಜ್ ಸಂಸ್ಥೆಯ ಪ್ರಬಲ, ಖಚಿತ ಹಾಗೂ ಹೆಮ್ಮೆಯ ಸಂಕೇತವಾಗಿದೆ.

10. ಚೀಫ್ ಪೊಂಟಿಯಕ್

10. ಚೀಫ್ ಪೊಂಟಿಯಕ್

ಹುಡ್ ಓರ್ನಮೆಂಟ್‌ಗಳ ಪೈಕಿ ಅತ್ಯಂತ ಪ್ರಭಾವಶಾಲಿ ಕಾರು ಸೂಚಕ ಲಾಂಛನವನ್ನು ಪೊಂಟಿಯಕ್ ಪಡೆದುಕೊಂಡಿದೆ. ಚೀಫ್ ಪೊಂಟಿಯಕ್ (Chief Pontiac ) 1930ರ ದಶಕದ ಅಮೆರಿಕದ ಮೂಲ ನಿವಾಸಿಗಳನ್ನು ಪ್ರತಿನಿಧಿಸುತ್ತಿತ್ತು. ಬಳಿಕ 1950ರ ಕಾಲಘಟ್ಟದಲ್ಲಿ ಚೀಫ್ ಪೊಂಟಿಯಕ್ ಜೆಟ್ ಪ್ಲೇನ್‌ಗಳಲ್ಲಿ ಬಳಕೆಯಾಗಿತ್ತು. ಇದರ ರೆಕ್ಕೆಗಳು ಜೆಟ್ ಫೈಟರ್, ಬಾಂಬರ್ ವಿಮಾನ ಹಾಗೂ ಸ್ಥಳೀಯ ಅಮೆರಿಕ ನಿವಾಸಿಗಳ ಸಾಂಸ್ಕೃತಿಕ ರೂಢಿಯನ್ನು ಪ್ರತಿಬಿಂಬಿಸುತ್ತದೆ.

ಕೊನೆಯ ಮಾತು

ಕೊನೆಯ ಮಾತು

ನಿಮಗೆಲ್ಲರಿಗೂ ತಿಳಿದಿರುವಂತೆಯೇ ವಾಹನ ಜಗತ್ತಿನ ಲೋಕವು ಹಲವಾರು ವೈವಿಧ್ಯತೆಗಳಿಂದ ಕೂಡಿದೆ. ಇದಕ್ಕೆ ಹುಡ್ ಓರ್ನ‌ಮೆಂಟ್ ಇನ್ನಷ್ಟು ವಿಶಿಷ್ಟತೆ ತುಂಬುವಲ್ಲಿ ಸಹಕಾರಿಯಾಗಿದೆ. ಆಧುನಿಕ ಕಾಲದಲ್ಲಿ ಭದ್ರತೆಯ ದೃಷ್ಟಿಕೋನದಲ್ಲಿ ಹುಡ್ ಓರ್ನ‌ಮೆಂಟ್‌ಗಳು ಕೇವಲ ಸೀಮಿತ ಮಾತ್ರಕ್ಕೆ ಉತ್ಪಾದನೆಯಾಗುತ್ತಿರುವುದು ದುರದೃಷ್ಟಕರ. ಅಪಘಾತ ವೇಳೆಗಳಲ್ಲಿ ಪಾದಚಾರಿಗಳಿಗೆ ಅಪಾಯಯಾಗುವ ಹಿನ್ನಲೆಯಲ್ಲಿ ಇಂತಹ ಹುಡ್‌ ಓರ್ನಮೆಂಟ್‌ಗಳ ಬಳಕೆಗೆ ನಿರ್ಬಂಧ ಹೇರಲಾಗಿತ್ತು. ಇದರಿಂದಾಗಿ ಹುಡ್ ಓರ್ನಮೆಂಟ್ ಬಳಕೆಯ ವೇಳೆ ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ಅನುಸರಿಸುವುದು ಅತಿ ಮುಖ್ಯ. ಉದಾಹರಣೆಗೆ ಅಪಘಾತದ ವೇಳೆ ರೋಲ್ಸ್ ರಾಯ್ಸ್ ಲೊಗೊ ಮುದುಡಿಕೊಳ್ಳಲಿದೆ (ಕಾರಿನೊಳಗೆ ಸರಿದುಕೊಳ್ಳಲಿದೆ). ಒಟ್ಟಿನಲ್ಲಿ ಇಂದಿಗೂ ಇಂತಹ ಕಾರಿನ ಐತಿಹಾಸಿಕ ಇತಿಹಾಸಗಳನ್ನು ಸಾರುತ್ತಿರುವ ಹುಡ್ ಓರ್ನಮೆಂಟ್‌ಗಳು ಕಾರಿನ ಅಂದತೆಯ ಪ್ರತೀಕವಾಗಿಯೇ ಉಳಿದಿದೆ.

More from DriveSpark

Article Published On: Friday, May 16, 2014, 6:03 [IST]
English summary
Read our classic car hood ornaments & emblems story with history of famous old car mascots & hood ornaments from America, Britain & other countries
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+