ಎರಡು ಕಾರುಗಳು ಒಂದಾದರೆ ಏನಾಗಬಹುದು? ತಪ್ಪದೇ ನೋಡಿ

By Nagaraja

ವೆಬ್ ಲೋಕದಲ್ಲಿ ಸಂಮಿಶ್ರಣಗಳು (Mashup) ಅತಿ ಸಾಮಾನ್ಯ. ಇವುಗಳಲ್ಲಿ ಸಂಗೀತ ಸಂಮಿಶ್ರಣ ಅಥವಾ ಚಿತ್ರ ಸಮ್ಮಿಶ್ರಣಗಳು ಅತಿ ಹೆಚ್ಚು ಕಾಣಸಿಗುತ್ತದೆ. ಇನ್ನು ಪ್ರಾಣಿಗಳ ಹಾಗೂ ಸೆಲೆಬ್ರೆಟಿಗಳ ಸಂಮಿಶ್ರಣಗಳಂತೂ ತುಂಬಾನೇ ಜನಪ್ರಿಯವೆನಿಸಿದೆ. ಇದು ಚಿತ್ರ-ವಿಚಿತ್ರ ರೂಪಗಳಿಗೆ ಸೃಷ್ಟಿ ನೀಡುತ್ತದೆ.

10 ಜನಪ್ರಿಯ ಕಾರು ಹುಡ್ ಓರ್ನಮೆಂಟ್

ಆದರೆ ಇಂತಹದೊಂದು ಪ್ರಕ್ರಿಯೆ ವಾಹನ ಜಗತ್ತಿನಲ್ಲೂ ಬಳಕೆಯಲ್ಲಿದೆ ಅಂದರೆ ನಂಬಬಹುದೇ? ಎರಡು ಪ್ರಖ್ಯಾತ ವಾಹನ ತಯಾರಕ ಸಂಸ್ಥೆಗಳ ಐಕಾನಿಕ್ ಕಾರುಗಳನ್ನು ಒಂದುಗೂಡಿಸಿದರೆ ಹೇಗಿರಬಹುದು? ಹೌದು, ನೀವು ಅಂದುಕೊಂಡಂತೆ ಈ ಲೇಖನ ಸಂಪೂರ್ಣವಾಗಿಯೂ ವಾಹನ ಪ್ರೇಮಿಗಳಿಗೆ ಮೀಸಲು. ಬ್ರಿಟನ್ ಮೂಲದ ಕಾರ್ ವಾವ್ (Carwow)
ತಂಡ ಫೋಟೋಶಾಪ್ ತಂತ್ರಜ್ಞಾನ ಬಳಸಿಕೊಂಡು ವಿಶಿಷ್ಟಗಾಗಿ ಗೋಚರಿಸುತ್ತಿರುವ ಆರು ನೂತನ ಕಾರು ಸಂಯೋಜನೆಗಳಿಗೆ ಸೃಷ್ಟಿ ಕಲ್ಪಿಸಿದೆ. ತಪ್ಪದೇ ನೋಡಿ...

ಎರಡು ಕಾರುಗಳು ಒಂದಾದರೆ ಏನಾಗಬಹುದು?

ಚಿತ್ರ, ಸಂಗೀತವನ್ನು ಸಮ್ಮಿಶ್ರಣ ಮಾಡಿದಷ್ಟು ಸರಳವಾಗಿ ಕಾರುಗಳ ಸಂಯೋಗ ಅಷ್ಟು ಸುಲಭವಲ್ಲ. ಹಾಗಿದ್ದರೂ ಇಂತಹದೊಂದು ವಿನೂತನ ಕಲ್ಪನೆಗೆ ಕಾರ್ ವಾವ್ ಪ್ರಯತ್ನ ಪಟ್ಟಿರುವುದು ಶ್ಲಾಘನೀಯ.

ಲಂಬೋಮ್ಯಾಟಿಕ್

ಲಂಬೋಮ್ಯಾಟಿಕ್

ನಿಮಗೆಲ್ಲರಿಗೂ ಐಕಾನಿಕ್ ಲಂಬೋರ್ಗಿನಿ ಮಿಯುರಾ ಕಾರಿನ ಬಗ್ಗೆ ಗೊತ್ತಿದೆ. ಆದರೆ ಇದನ್ನು ಏರಿಯಲ್ ಆಟೋಮ್ ವಿನ್ಯಾಸಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಸಂಮಿಶ್ರಣ ಮಾಡಿರುವುದು ನಿಜಕ್ಕೂ ಅದ್ಭುತವೆನಿಸುತ್ತಿದೆ.

ಏನಿದು ಏರಿಯಲ್ ಆಟೋಮ್? ಏರಿ ಮೋಟಾರು ಸಂಸ್ಥೆಯಿಂದ ನಿರ್ಮಿತವಾಗಿರುವ, ರಸ್ತೆ ಮಾನ್ಯತೆ ಪಡೆದ ಗರಿಷ್ಠ ನಿರ್ವಹಣೆಯ ಸ್ಪೋರ್ಟ್ಸ್ ಕಾರು ಇದಾಗಿದೆ. ಅಲ್ಲದೆ ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಂಡಿದೆ.

ಪೋರ್ಶಿಯಾಕ್ ಡಬ್ಲ್ಯು ಆರ್‌ಎಸ್

ಪೋರ್ಶಿಯಾಕ್ ಡಬ್ಲ್ಯು ಆರ್‌ಎಸ್

ಎರಡು ದಿಗ್ಗಜ ಕಾರುಗಳ ಮಿಲನ ಇಲ್ಲಿ ಸಂಭವಿಸಿದೆ. ಇಲ್ಲಿ ಜಗತ್ತಿನ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಪೋರ್ಷೆ ಜಿಟಿ3 ಆರ್‌ಎಸ್ ಹಾಗೂ ಮಿಡ್ ಸೈಜ್ ಕ್ರಾಸೋವರ್ ಪೋಂಟಿಯಾಕ್ ಅಜ್ಟೆಕ್ ಸಂಯೋಗ ನಿಜಕ್ಕೂ ವಿಚಿತ್ರ ಭಾವ ಮೂಡಿಸುತ್ತದೆ.

ಹ್ಯುಮಿ

ಹ್ಯುಮಿ

ಅತ್ಯಂತ ಶಕ್ತಿಶಾಲಿ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುವ ಹಮ್ಮರ್ ಹಾಗೂ ಮಿನಿ ಒಂದಾದರೆ ಹೇಗಾಗಬಹುದು? ಇದಕ್ಕುತ್ತರ ಇಲ್ಲಿ ಕೊಟ್ಟಿರುವ ಚಿತ್ರದಲ್ಲಿದೆ. ನಿಜಕ್ಕೂ ಹಮ್ಮರ್ ಎಚ್1 ಹಾಗೂ ಮಿನಿ ಸಂಯೋಗವು ಹೆಚ್ಚು ಕ್ರಿಯೇಟಿವ್ ಎನಿಸಿದೆ.

ಆಸ್ಟನ್ ಸ್ಮಾರ್ಟಿನ್

ಆಸ್ಟನ್ ಸ್ಮಾರ್ಟಿನ್

ಹೆಸರು ಓದಿದಾಗಲೇ ನಿಮಗೆ ಇದರಲ್ಲಿ ಯಾವೆಲ್ಲ ಕಾರು ಸಂಯೋಜನೆ ಒಳಗೊಂಡಿದೆ ಎಂಬುದು ತಿಳಿದುಕೊಳ್ಳಬುಹುದು. ಹೌದು, ನಿಮ್ಮ ಊಹೆ ಸರಿಯಾಗಿದ್ದು, ಪ್ರಖ್ಯಾತ ಆಸ್ಟನ್ ಮಾರ್ಟಿನ್ ರಾಪಿಡ್ ಹಾಗೂ ಸ್ಮಾರ್ಟ್ ಫಾರ್ ಟು ಕ್ರಾಸ್ ಸಮ್ಮಿಶ್ರಣವು ಹೆಚ್ಚು ಆಕರ್ಷಕವಾಗಿದೆ.

ಮಾಜ್ದಾಫೆಂಡಾ

ಮಾಜ್ದಾಫೆಂಡಾ

ಲ್ಯಾಂಡ್ ರೋವರ್ ಡಿಫೆಂಡರ್ ಹಾಗೂ ಮಾಜ್ದಾ ಎಕ್ಸ್‌ಎಕ್ಸ್-5 ಮಿಯಟಾ ತನ್ನ ತನ್ನ ಕಾಲದಲ್ಲಿ ಅತಿ ಹೆಚ್ಚಿನ ಪ್ರಖ್ಯಾತಿಗೆ ಒಳಗಾಗಿತ್ತು. ಆದರೆ ಇದರ ಸಂಯೋಜನೆ ನೈಜ ಕಾರಿಗಿಂತಲೂ ಎಷ್ಟು ಭಿನ್ನವಾಗಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.

ರೇಂಜ್‌ರಿನಿ

ರೇಂಜ್‌ರಿನಿ

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಜಗತ್ತಿನ ಎರಡು ಐಕಾನಿಕ್ ವಾಹನ ತಯಾರಕ ಸಂಸ್ಥೆಗಳಾದ ರೇಂಜ್ ರೋವರ್ ಹಾಗೂ ಲಂಬೋರ್ಗಿನಿ ಸಂಮಿಶ್ರಣ ನಿಜಕ್ಕೂ ಮನಸೆಳೆಯುವಂತಿದೆ. ಅಂದ ಹಾಗೆ ಈ ಐಷಾರಾಮಿ ರೇಂಜ್ ರೋವರ್ ಎಸ್‌ಯುವಿ ಹಾಗೂ ಲಂಬೋರ್ಗಿನಿ ಅವೆಂಟಡೊರ್ ಸೂಪರ್ ಕಾರಿನ ಸಮ್ಮಿಶ್ರಣ ನಿಮಗೆ ಇಷ್ಟವಾಯಿತೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

ಫೋಟೊ ಕೃಪೆ: ಕಾರ್ ವಾವ್

More from DriveSpark

Article Published On: Monday, May 19, 2014, 10:53 [IST]
English summary
The internet is filled with mash-ups. Animal mash-ups and celebrity mash-ups being the most popular. While a good way to pass time when you have plenty of it in hand, an automotive mash-up would be more appropriate for car enthusiasts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+