ವಿಶ್ವದ 10 ಅತ್ಯಾದ್ಭುತ ಕಾರು ದಾಖಲೆಗಳು

By Nagaraja

ವಾಹನ ಜಗತ್ತಿನಲ್ಲಿ ದೈನಂದಿನ ಹಲವಾರು ದಾಖಲೆಗಳು ಸ್ಥಾಪನೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಗುರಿ ಮುಟ್ಟಲು ವಾಹನ ಉತ್ಸಾಹಿಗಳು ನಿರಂತರ ತರಬೇತಿ ಹಾಗೂ ಪರಿಶ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾರತದಲ್ಲಿ ವಾಹನ ಕ್ರಾಂತಿ ಸ್ವಲ್ಪ ಕಡಿಮೆಯಾದರೂ ಮುಂದುವರಿದ ವಿದೇಶ ರಾಷ್ಟ್ರಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಪ್ರಪಂಚದ್ಯಂತ ದಾಖಲಾಗಿರುವ 10 ಕಾರು ದಾಖಲೆಗಳ ಬಗ್ಗೆ ಮೆಲುಕು ಹಾಕಲಿದ್ದೇವೆ.

01. ವೇಗದ ಡ್ರಿಫ್ಟ್

01. ವೇಗದ ಡ್ರಿಫ್ಟ್

ಕಾರು ಡ್ರಿಫ್ಟ್ ಮಾಡುವುದು ಭಾರತೀಯರಿಗೆ ಹೊಸತನದ ಅನುಭವವಾಗಿರಬಹುದು. ವಿದೇಶಗಲ್ಲಿ ಇದಕ್ಕಾಗಿ ನುರಿತ ಚಾಲಕರು ಅಭ್ಯಾಸ ಪ್ರದರ್ಶನ ನಡೆಸುತ್ತಾರೆ. ಪೊಲೆಂಡ್‌ನ ಜೆಕೊಬ್ ಪ್ರಿಗಾನ್ ಸ್ಕಿ (Jakub Przygonski) ಎಂಬವರು ಶರವೇಗದಲ್ಲಿ ಕಾರು ಡ್ರಿಫ್ಟ್ ಮಾಡಿದ ದಾಖಲೆ ಹೊಂದಿರುತ್ತಾರೆ. ಬರೋಬ್ಬರಿ 1000 ಅಶ್ವಶಕ್ತಿ ಉತ್ಪಾದಿಸಬಲ್ಲ ಟೊಯೊಟಾ ಜಿಟಿ86 ಕ್ರೀಡಾ ಕಾರಿನಲ್ಲಿ ಗಂಟೆಗೆ 217.96 ಕೀ.ಮೀ. ವೇಗದಲ್ಲಿ ಕಾರು ಡ್ರಿಫ್ಟಿಂಗ್ ಮಾಡುವ ಮೂಲಕ ದಾಖಲೆ ಸ್ಥಾಪಿಸಿದ್ದರು.

02. ದೀರ್ಘಕಾಲಿಕ ಸ್ಕಿಡ್

02. ದೀರ್ಘಕಾಲಿಕ ಸ್ಕಿಡ್

ಹೌದು, ನೀವು ಓದಿರುವುದು ನಿಜ. ಬಹುಶ: ಈ ದಾಖಲೆಯನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ಪ್ರಸ್ತುತ ದಾಖಲೆಯು ಅಮೆರಿಕದ ಮಾಜಿ ವಿಶ್ವ ಲ್ಯಾಂಡ್ ಸ್ಪೀಡ್ ರೆಕಾರ್ಡ್ ಹೊಂದಿರುವ ಕ್ರೇಗ್ ಬ್ರೀಡ್ ಲವ್ ಅವರಿಗೆ ಸಲ್ಲುತ್ತದೆ. 1964ರಲ್ಲಿ ಅಮೆರಿಕದ ಜನಪ್ರಿಯ ಬೊನ್ ವಿಲ್ ಸಾಲ್ಟ್ ಫ್ಲ್ಯಾಟ್ ನಲ್ಲಿ ಅನಿರೀಕ್ಷಿತವಾಗಿ ಅವರ ಜೆಟ್ ನಿಯಂತ್ರಿತ ಕಾರು ನಿಯಂತ್ರಣ ತಪ್ಪಿ ಆರು ಮೈಲುಗಳಷ್ಟು ದೂರ ಸ್ಕಿಡ್ ಆಗಿರುವುದು ಈಗಲೂ ಅವಿಶ್ವಸನೀಯ.

03. ವಿಶ್ವದ ಅತಿ ವೇಗದ ಸ್ಟ್ರೀಟ್ ಕಾರು

03. ವಿಶ್ವದ ಅತಿ ವೇಗದ ಸ್ಟ್ರೀಟ್ ಕಾರು

ವಿಶ್ವದ ಅತಿ ವೇಗದ ಸ್ಟ್ಯಾಂಡಿಂಗ್ ಮೈಲು (Fastest Standing Mile) ಕಾರು ಅಥವಾ ಒಂದು ಮೈಲ್ ದೂರದಲ್ಲಿ ಗರಿಷ್ಠ ವೇಗವನ್ನು ತಲುಪಿದ ಸ್ಟ್ರೀಟ್ ಕಾರಿನ ದಾಖಲೆಯನ್ನು ಅಮೆರಿಕದ ಜಾನಿ ಬೊಹ್ಮೆರ್ ಹೊಂದಿರುತ್ತಾರೆ. 2012ರಲ್ಲಿ ಗಂಟೆಗೆ 456.78 ಕೀ.ಮೀ. ವೇಗದ ಗುರಿ ಮುಟ್ಟುವ ಮೂಲಕ ಈ ದಾಖಲೆ ಸ್ಥಾಪಿಸಿದ್ದರು. ಇದಕ್ಕಾಗಿ ಅವರು 1700 ಅಶ್ವಶಕ್ತಿ ಉತ್ಪಾದಿಸುವ 2006ರ ಫೋರ್ಡ್ ಜಿಟಿ ಕಾರನ್ನು ಬಳಕೆ ಮಾಡಿದ್ದರು.

04. ಬಿಗಿಯಾದ 360 ಡಿಗ್ರಿ ಸ್ಪಿನ್

04. ಬಿಗಿಯಾದ 360 ಡಿಗ್ರಿ ಸ್ಪಿನ್

ಅತಿ ಕಡಿಮೆ ಪ್ರದೇಶದಲ್ಲಿ ಕಾರನ್ನು 360 ಡಿಗ್ರಿ ಸುತ್ತಳತೆಯಲ್ಲಿ ತಿರುಗಿಸಿದ ದಾಖಲೆಯು ಬ್ರಿಟನ್ ನ ಸ್ಟಂಟ್ ಚಾಲಕ ಅಲಿಸ್ಟಾರ್ ಮೊಫಟ್ ಎಂಬವರಿಗೆ ಸಲ್ಲುತ್ತದೆ. ಅವರು ತಮ್ಮ ಸುಬರು ಬಿಆರ್‌ಝಡ್ ಕಾರಿನಲ್ಲಿ 2.25 ಮೀಟರ್ ಅಂತರದಲ್ಲಿ ಈ ಸಾಧನೆ ಮಾಡಿದ್ದರು. ಎರಡು ಬದಿಗಳಲ್ಲಿ ನಿಲುಗಡೆಗೊಳಿಸಿದ ಕಾರುಗಳ ಮಧ್ಯದಲ್ಲಿ ಈ ವಿಶಿಷ್ಟ ದಾಖಲೆ ಸ್ಥಾಪಿಸಲಾಗಿತ್ತು.

05. ಅತಿ ವೇಗದ ಕ್ವಾರ್ಟರ್ ಮೈಲು (ಎಲೆಕ್ಟ್ರಿಕ್ ಕಾರು)

05. ಅತಿ ವೇಗದ ಕ್ವಾರ್ಟರ್ ಮೈಲು (ಎಲೆಕ್ಟ್ರಿಕ್ ಕಾರು)

ಅತಿ ವೇಗದಲ್ಲಿ ಕ್ವಾರ್ಟರ್ ಮೈಲು ದೂರವನ್ನು ತಲುಪಿದ ಎಲೆಕ್ಟ್ರಿಕ್ ಕಾರಿನ ದಾಖಲೆಯನ್ನು ಬಿಎಂಡಬ್ಲ್ಯು ಎಂ3 ಹೊಂದಿದೆ. 2012ರಲ್ಲಿ ಸ್ಥಾಪನೆಯಾದ ಈ ದಾಖಲೆಯ ಕಾರಿನಲ್ಲಿ 400 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು ಬಳಕೆ ಮಾಡಲಾಗಿತ್ತು. 11.85 ಸೆಕೆಂಡುಗಳಲ್ಲಿ ಗುರಿ ಮುಟ್ಟಿರುವ ಈ ಕಾರು ಗಂಟೆಗೆ ಗರಿಷ್ಠ 0-100 ಕೀ.ಮೀ. ವೇಗವನ್ನು 3.3 ಸೆಕೆಂಡುಗಳಲ್ಲಿ ತಲುಪಿತ್ತು.

06. ವೇಗದಲ್ಲಿ ಚಕ್ರ ಬದಲಾವಣೆ

06. ವೇಗದಲ್ಲಿ ಚಕ್ರ ಬದಲಾವಣೆ

ವಾಹನದ ಚಕ್ರ ಬದಲಾಯಿಸುವುದು ಹಲವರಿಗೆ ಹೆಚ್ಚು ಸಮಯ ತಗಲುಲಿದೆ. ಆದರೆ ರೆಫೆನ್ ಉಮೆರ್ಟ್ ನ (Reifen Umert) ನಾಲ್ವರ ತಂಡವು ಕೇವಲ 58.43 ಸೆಕೆಂಡುಗಳಲ್ಲಿ ಕಾರಿನ ಚಕ್ರ ಬದಲಾಯಿಸುವ ಮೂಲಕ ದಾಖಲೆಗೆ ಅರ್ಹವಾಗಿದ್ದಾರೆ.

07. ಏಕಕಾಲಿಕ ಕಾರು ಬರ್ನೌಟ್

07. ಏಕಕಾಲಿಕ ಕಾರು ಬರ್ನೌಟ್

2015 ಹೊಸ ವರ್ಷದ ಸಂಭ್ರಮ ದಿನವಾದ ಜನವರಿ 01ರಂದು ಏಕಕಾಲದಲ್ಲಿ 103 ಕಾರುಗಳು ಕಾರು ಬರ್ನೌಟ್ ದಾಖಲೆಯಲ್ಲಿ ಭಾಗಿಯಾಗಿದ್ದವು. ಆಸ್ಟ್ರೇಲಿಯಾದ ಕ್ಯಾನಬೆರಾದಲ್ಲಿ ನಡೆದ ವಾರ್ಷಿಕ ಸ್ಟ್ರೀಟ್ ಮೆಷಿನ್ ಸಮ್ಮರ್ ನಟ್ಸ್ ನಲ್ಲಿ ಈ ದಾಖಲೆ ಸ್ಥಾಪಿತವಾಗಿತ್ತು. ಈ ಮೂಲಕ 2013ರ ತಮ್ಮದೇ ದಾಖಲೆಯನ್ನು ಅಳಿಸಿ ಹಾಕಿತ್ತು. ಅಂದು 68 ಕಾರುಗಳು ಬರ್ನೌಟ್ ದಾಖಲೆಯಲ್ಲಿ ಭಾಗಿಯಾಗಿದ್ದವು.

08. ಅತಿ ಉದ್ದವಾದ ಡ್ರಿಫ್ಟ್

08. ಅತಿ ಉದ್ದವಾದ ಡ್ರಿಫ್ಟ್

ಜರ್ಮನಿಯ ಹೆರಾಲ್ಡ್ ಮುಲ್ಲರ್ ಎಂಬವರು ಅತಿ ಉದ್ದವಾದ ಡ್ರಿಫ್ಟ್ ದಾಖಲೆಯನ್ನು ಹೊಂದಿರುತ್ತಾರೆ. ಇದಕ್ಕಾಗಿ ಅವರು ಟೊಯೊಟಾ ಜಿಟಿ86 ಕಾರನ್ನು ಬಳಕೆ ಮಾಡಿದ್ದರು. 2014ರಲ್ಲಿ ಟರ್ಕಿಯಲ್ಲಿ ವಿಶೇಷವಾಗಿ ನಿರ್ಮಿಸಿದ ಟ್ರ್ಯಾಕ್ ನಲ್ಲಿ ಸರಿ ಸುಮಾರು ಎರಡು ವರೆ ಗಂಟೆಗಳ ಕಾಲ 144.1 ಕೀ.ಮೀ. ವೇಗದಲ್ಲಿ ಕಾರು ಡ್ರಿಫ್ಟ್ ಮಾಡಿ ದಾಖಲೆ ಸ್ಥಾಪಿಸಿದ್ದರು. 235 ಉದ್ದದ ಈ ಟ್ರ್ಯಾಕ್ ನಲ್ಲಿ ಮುಲ್ಲರ್ ಇದಕ್ಕಾಗಿ 612 ಲ್ಯಾಪ್ ಸುತ್ತಿ ಬಂದಿದ್ದರು.

09. ಸತತವಾಗಿ ಕಾರು ತಿರುಗಿಸುವುದು

09. ಸತತವಾಗಿ ಕಾರು ತಿರುಗಿಸುವುದು

ಒಂದೇ ಜಾಗದಲ್ಲಿ ಚಕ್ರಗಳು ಅಚಲವಾಗಿ ಸತತವಾಗಿ ಕಾರು ತಿರುಗಿಸುವ ದಾಖಲೆನಯನ್ನು ಬ್ರಿಟನ್‌ನ ಜೆಮಿ ಮೊರೊ ಹೊಂದಿದ್ದಾರೆ. ಅವರಿದನ್ನು ವೆಸ್ಟ್ ಫೀಲ್ಡ್ ಸ್ಪೋರ್ಟ್ 1600 ಸ್ಪರ್ಧೆಯಲ್ಲಿ 280 ಬಾರಿ ಮಾಡುವ ಮೂಲಕ ದಾಖಲೆ ಬರೆದಿದ್ದರು. ಇದಕ್ಕಾಗಿ 17 ನಿಮಿಷಗಳಷ್ಟು ಸಮಯ ತೆಗೆದುಕೊಂಡಿದ್ದರು.

10. ಅತ್ಯಂತ ಕಠಿಣ ಸಮಾನಾಂತರ ಪಾರ್ಕಿಂಗ್

10. ಅತ್ಯಂತ ಕಠಿಣ ಸಮಾನಾಂತರ ಪಾರ್ಕಿಂಗ್

ಅಲಿಸ್ಟಾರ್ ಮೊಫೆಟ್ ಅತ್ಯಂತ ಕಠಿಣ ಸಮಾನಾಂತರ ಪಾರ್ಕಿಂಗ್ ದಾಖಲೆಯನ್ನು ಹೊಂದಿರುತ್ತಾರೆ. ಫಿಯೆಟ್ 500ಸಿ ಕಾರಿನಲ್ಲಿ ಕೇವಲ 7.5 ಸೆಂಟಿಮೀಟರ್ ಜಾಗದಲ್ಲಿ ಪಾರ್ಕಿಂಗ್ ಮಾಡುವ ಮೂಲಕ ದಾಖಲೆಗೆ ಪಾತ್ರವಾಗಿದ್ದರು.

More from DriveSpark

Article Published On: Friday, April 1, 2016, 11:07 [IST]
English summary
10 Amazing Car World Records From Around The Globe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+