ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಹಿಟ್ಲರ್ ಬಚ್ಚಿಟ್ಟಿದ್ದ ಕಾರುಗಳನ್ನು ಪತ್ತೆ ಹಚ್ಚಲಾಗಿದ್ದು, ಇತಿಹಾಸ ತಜ್ಞರಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ.

By Nagaraja

ಜರ್ಮನ್ ರಾಜಕಾರಣಿ ಹಾಗೂ ನಾಜಿ ಪಕ್ಷವೆಂದೇ ಖ್ಯಾತವಾದ ನ್ಯಾಷನಲ್ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯ ನೇತಾರ ಅಡಾಲ್ಫ್ ಹಿಟ್ಲರ್ ತನ್ನ ಆಡಳಿತಾವಧಿಯಲ್ಲಿ ಇಡೀ ಜಗತ್ತನ್ನೇ ನಡುಗಿಸಿರುವ ವಿಚಾರ ಇಂದಿಗೂ ಭೀತಿಯನ್ನುಂಟು ಮಾಡುತ್ತಿದೆ. ಸಂಪೂರ್ಣಾಧಿಕಾರ ಹಾಗೂ ನಿರಂಕುಶ ಪ್ರಭುತ್ವಗಳ ಬಲದಿಂದ ಏಕಪಕ್ಷೀಯ ಸರ್ವಾಧಿಕಾರವನ್ನು ಸ್ಥಾಪಿಸಿದ್ದ ಹಿಟ್ಲರ್ ಮಗದೊಂದು ಕರಾಳ ಮುಖ ಇದೀಗ ಬಯಲಾಗಿದೆ.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಎರಡನೇ ವಿಶ್ವ ಮಹಾಯುದ್ಧ ಆರಂಭದ ಕಾಲಘಟ್ಟದಲ್ಲಿ ಅತಿ ಹೆಚ್ಚು ಬಲಶಾಲಿಯಾಗಿದ್ದ ಹಿಟ್ಲರ್ ಅತ್ಯಧಿಕ ಸಂಪತ್ತನ್ನು ಸಂಪಾದಿಸಿದ್ದನು. ತನ್ನ ಚತುರ ಮಾತುಗಾರಿಕೆ ಮತ್ತು ಪ್ರಚಾರ ಕಾರ್ಯಗಳಿಂದ ಜನಬೆಂಬಲ ಗಳಿಸಿಕೊಂಡನು.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಹಿಟ್ಲರ್ ಅಕ್ರಮ ಧೋರಣೆಯಿಂದ ಗಳಿಸಿದ ಸಂಪತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ವಿಶ್ವದ ಅತಿ ವಿರಳ ಕಾರುಗಳು ಸಹ ಸೇರಿಕೊಂಡಿದ್ದವು.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಹಿಟ್ಲರ್ ಬಚ್ಚಿಟ್ಟಿದ್ದ ಇಂತಹ ಅತ್ಯಾಪೂರ್ವ ಕಾರುಗಳ ಮಹಾ ಸಂಗ್ರಹವನ್ನು ಪತ್ತೆ ಹೆಚ್ಚುವಲ್ಲಿ ವ್ಯಕ್ತಿಯೋರ್ವರು ಯಶಸ್ವಿಯಾಗಿದ್ದಾರೆ.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಬಲ್ಲ ಮೂಲಗಳ ಪ್ರಕಾರ ಭೂಗತವಾಗಿದ್ದ 70 ವರ್ಷಗಳಷ್ಟು ಹಳೆಯದಾದ ನೂರಾರು ವಾಹನಗಳನ್ನು ಪತ್ತೆ ಹಚ್ಚಲಾಗಿದೆ.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಬೆಲ್ಜಿಯಂ ದೈಹಿಕ ಶಿಕ್ಷಣ ಅಧ್ಯಾಪಕರಾಗಿರುವ ವಿನ್ಸೆಂಟ್ ಮೈಕಲ್ ಎಂಬವರೇ ವಾಹನಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಬಚ್ಚಿಡಲಾಗಿರುವ ಕಾರುಗಳೆಲ್ಲ ಸಂಪೂರ್ಣವಾಗಿ ತುಕ್ಕು ಹಿಡಿದಿದೆ.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಎರಡನೇ ಲೋಕ ಮಹಾ ಯುದ್ಧ ಆರಂಭಕ್ಕೂ ಮುನ್ನ ಹಿಟ್ಲರ್ ನಿರ್ದೇಶನದಂತೆ ಕೇಂದ್ರ ಫ್ರಾನ್ಸ್ ನಲ್ಲಿ ವಾಹನಗಳೆನ್ನೆಲ್ಲ ಬಚ್ಚಿಡಲಾಗಿತ್ತು.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಆದರೆ ಎರಡನೇ ಮಹಾಯುದ್ಧದಲ್ಲಿ ಹೀನಾಯವಾಗಿ ಸೋಲೊಪ್ಪಿಕೊಂಡ ಹಿಟ್ಲರ್ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದನು. ಇದರೊಂದಿಗೆ ಹಿಟ್ಲರ್ ಕರಾಳ ಆಡಳಿತಕ್ಕೆ ಪೂರ್ಣ ವಿರಾಮ ಬಿದ್ದಿತ್ತು.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಇನ್ನೊಂದೆಡೆ ಬಚ್ಚಿಟ್ಟಿದ್ದ ಕಾರುಗಳು ಯಾರ ಗಮನಕ್ಕೂ ಬಾರದೆ ಭೂಗತ ಪ್ರದೇಶದಲ್ಲೇ ತನ್ನ ಅಂತಿಮ ದಿನಗಳನ್ನು ಶಾಂತ ರೀತಿಯಲ್ಲಿ ಕಳೆದಿತ್ತು.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಇಲ್ಲಿ ತುಕ್ಕು ಹಿಡಿದು ಬಿದ್ದಿರುವ ಕಾರುಗಳನ್ನು 1930ರ ದಶಕದ ವಾಹನಗೆಳೆಂದು ಗುರುತಿಸಲಾಗಿದೆ. ಇವುಗಳನ್ನು ಬಹಳ ಅಚ್ಚುಕಟ್ಟಾಗಿ ನಿಲುಗಡೆಗೊಳಿಸಲಾಗಿದೆ.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

1940ರ ದಶಕದಲ್ಲಿ ಫ್ರಾನ್ಸ್ ಗೆ ದಾಳಿಯನ್ನಿಟ್ಟಿದ್ದ ಜರ್ಮನಿಯ ಸೇನೆಯು ಇಲ್ಲಿನ ಪ್ರದೇಶದೊಂದಿಗೆ ಬೆಲೆ ಬಾಳುವ ಕಾರುಗಳನ್ನು ವಶಕ್ಕೆ ತೆಗೆದುಕೊಂಡಿದ್ದವು.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಫ್ರಾನ್ಸ್ ಜೊತೆಗೆ ಬೆಲ್ಜಿಯಂ, ಲುಕ್ಸೆಮ್ ಬರ್ಗ್ ಮತ್ತು ಹಾಲೆಂಡ್ ಮೇಲೆಯೂ ಜರ್ಮನಿಯು ತನ್ನ ಅಧಿಪತ್ಯವನ್ನು ಸ್ಥಾಪಿಸಿತ್ತು.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಜರ್ಮನಿಯ ದಾಳಿಯ ಬಳಿಕ ಫ್ರಾನ್ಸ್ ವಿವಿಧ ವಲಯಗಳಲ್ಲಾಗಿ ವಿಂಗಡಿಸಲ್ಪಟ್ಟಿತ್ತು. ಇವುಗಳಲ್ಲಿ ಜರ್ಮನ್ ಸ್ವಾಧೀನದ ಉತ್ತರ ಮತ್ತು ಪಶ್ಚಿಮ ಭಾಗ ಮತ್ತು ದಕ್ಷಿಣದಲ್ಲಿ ಮುಕ್ತ ವಲಯವಾಗಿ ಇಬ್ಘಾಗಗೊಂಡಿತ್ತು.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಆದರೆ 1944ರ ವೇಳೆಯಾಗುವ ಹಿಟ್ಲರ್ ನೇತೃತ್ವದ ಜರ್ಮನಿಯ ಸೇನೆಯು ಭಾರಿ ಹಿನ್ನಡೆಯನ್ನು ಅನುಭವಿಸಿತ್ತು. ಇದರೊಂದಿಗೆ ನಾಲ್ಕು ವರ್ಷಗಳ ಜರ್ಮನ್ ಅಧಿಪತ್ಯಕ್ಕೆ ಇತಿ ಶ್ರೀ ಹಾಡುವಲ್ಲಿ ಫ್ರಾನ್ಸ್ ಯಶ ಕಂಡಿತ್ತು.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಇಲ್ಲಿ ಬಚ್ಚಿಡಲಾಗಿರುವ ಕಾರುಗಳು ಸಂಪೂರ್ಣವಾಗಿ ತುಕ್ಕು ಹಿಡಿದಿದ್ದು, ರಿಪೇರಿ ಮಾಡುವುದು ಕಷ್ಟವೆನಿಸಿದೆ. ಹಾಗಿದ್ದರೂ ಕೆಲವೊಂದು ಕಾರುಗಳ ಬಣ್ಣವೂ ಈಗಲೂ ನೈಜತೆ ಕಾಪಾಡಿಕೊಂಡಿರುವುದು ಅಚ್ಚರಿಯನ್ನುಂಟು ಮಾಡಿದೆ.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಎರಡನೇ ವಿಶ್ವ ಮಹಾಯುದ್ಧದ ಬಳಿಕ ಈ ಪೈಕಿ ಕೆಲವೊಂದು ಕಾರುಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗಿತ್ತು ಎಂಬುದು ತಿಳಿದು ಬಂದಿದೆ.

ಹಿಟ್ಲರ್ ಕರಾಳ ಮುಖ; ಬಚ್ಚಿಟ್ಟಿದ್ದ 70 ವರ್ಷಗಳ ಹಳೆಯ ಕಾರುಗಳು ಬೆಳಕಿಗೆ!

ಒಟ್ಟಿನಲ್ಲಿ ಹಿಟ್ಲರ್ ಕರಾಳ ಮುಖ ಮಗದೊಮ್ಮೆ ಬಯಲಾಗಿದ್ದು, 70 ವರ್ಷಗಳ ಬಳಿಕ ಕಾರುಗಳ ದೊಡ್ಡ ಸಂಗ್ರಹವನ್ನೇ ಪತ್ತೆ ಹಚ್ಚಿರುವುದು ಮತ್ತಷ್ಟು ಶೋಧನೆಗೆ ಪ್ರೇರಣೆಯಾಗಿದೆ.

More from DriveSpark

Article Published On: Wednesday, November 30, 2016, 10:43 [IST]
English summary
Hidden From Hitler But Ravaged By Time — Incredible Stash Of Cars Found In Quarry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+