ವನ್ಯ ಜೀವಿಗಳಿಂದ ಸ್ಫೂರ್ತಿ ಪಡೆದ ಕಾರುಗಳಿವು
ಕಳೆದ ದಿನವಷ್ಟೇ ಅಮೋಘ ಆಟವಾಡಿದ್ದ ಟೀಮ್ ಇಂಡಿಯಾ ನಾಯಕ ಮಹೀಂದ್ರ ಸಿಂಗ್ ಧೋನಿ, ವೆಸ್ಟ್‌ಇಂಡೀಸ್‌ನಲ್ಲಿ ಸಾಗಿದ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತಕ್ಕೆ ರೋಚಕ ಒಂದು ವಿಕೆಟ್ ಗೆಲುವು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಮೂಲಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗಿದ್ದರೂ ಸರಣಿಯುದ್ಧಕ್ಕೂ ಟೀಮ್ ಇಂಡಿಯಾ ಹುರಿದುಂಬಿಸುವಲ್ಲಿ ಧೋನಿ ಪಾತ್ರ ಪ್ರಮುಖವಾಗಿತ್ತು. ಇದೇ ರೀತಿ ಪ್ರತಿಯೊಬ್ಬರ ಜೀವನದಲ್ಲೂ ಸ್ಫೂರ್ತಿ ತುಂಬುವ ಹಲವಾರು ಘಟಕಗಳಿರುತ್ತವೆ. ಯಶಸ್ವಿ ಜೀವನ ಮುನ್ನಡೆಸುವುದರಲ್ಲಿ ಈ ಚಿಕ್ಕ ಚಿಕ್ಕ ಅಂಶಗಳು ಹೆಚ್ಚಿನ ಮಹತ್ವ ಗಿಟ್ಟಿಸಿಕೊಳ್ಳುತ್ತವೆ.
ವಾಹನ ಜಗತ್ತಿನಲ್ಲೂ ಇಂತಹ ಹಲವಾರು ಅಂಶಗಳು ಕಾರು ಸೃಷ್ಟಿಗಳಲ್ಲಿ ಮುಖ್ಯ ಪಾತ್ರ ವಹಿಸಿವೆ. ಕೆಲವೊಮ್ಮೆ ಇಂತಹ ಕಾರುಗಳು ಇವೆಯೇ ಎಂಬುದು ಆಶ್ಚರ್ಯಚಕಿತಗೊಳಿಸುತ್ತದೆ.
ಹೌದು, ಮನೋಹರ ಕಾರು ಸೃಷ್ಟಿಗಳಲ್ಲೂ ವನ್ಯಜೀವಿಗಳ ಪಾತ್ರ ಬಹಳಷ್ಟಿದೆ. ಇಂದಿನ ಈ ಲೇಖನದಲ್ಲಿ ವನ್ಯಜೀವಿಗಳಿಂದ ಸ್ಫೂರ್ತಿ ಪಡೆದು ರಚಿಸಲ್ಪಟ್ಟ ಕಾರುಗಳ ಬಗ್ಗೆ ಮಾತನಾಡಲಿದ್ದೇವೆ. ಇದು ಕೇವಲ ವನ್ಯಜೀವಿಗಳಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಹಾಗಿದ್ದರೆ ಇನ್ಯಾಕೆ ತಡ ರೋಚಕ ಸ್ಲೈಡರ್ ಪುಟ ತೆರೆದು ಆನಂದಿಸಿರಿ...

chevrolet impala coupe
ವನ್ಯಜೀವಿಗಳ ಪೈಕಿ ಅತಿ ಮುದ್ದಾದ ಪ್ರಾಣಿಯಾದ ಜಿಂಕೆ ಶರವೇಗದಲ್ಲಿ ಓಡುವುದಕ್ಕೆ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕಾಗಿ ಷೆವರ್ಲೆ ಕಾರಿಗೂ ಇಂಪಾಲಾ (ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುವ ಪ್ರಾಣಿ) ಹೆಸರಿಸಲಾಗಿದೆ.

ಜಾಗ್ವಾರ್ (Jaguar)
ನೀವು ಜಾಗ್ವಾರ್ ಹೆಸರನ್ನು ಹೆಚ್ಚು ಕೇಳಿರುತ್ತೀರಾ. ಕಾರು ಕಂಪನಿಗಳ ಪೈಕಿ ಜಾಗ್ವಾರ್ ಹೆಚ್ಚು ಜನಪ್ರಿಯವೆನಿಸಿದೆ. ಜಾಗ್ವಾರ್ ಮಧ್ಯ ಮತ್ತು ದಕ್ಷಿಣ ಅಮೆರಿಕದ ಕಾಡುಗಳಲ್ಲಿ ವಾಸಿಸುವ ಚಿರತೆ ಜಾತಿಯ ಪ್ರಾಣಿಯಾಗಿದೆ.

1967 Ford Mustang GT Coupe
ಅಮೆರಿಕದ ಪ್ರಾಖ್ಯಾತ ಕಂಪನಿಯಾದ ಫೋರ್ಡ್ ಮಸ್ತಾಂಗ್ ಕಾರು ತುಂಬಾನೇ ಜನಪ್ರಿಯವಾಗಿರುವುದು. ಮಸ್ತಾಂಗ್ ಅಮೆರಿಕ ಕಾಡುಗಳಲ್ಲಿ ವಾಸಿಸುವ ಕುದುರೆ ಜಾತಿಗೆ ಸೇರಿದ ಪ್ರಾಣಿಯಾಗಿದೆ.

1967 Sunbeam Tiger
ನೀವೆಲ್ಲರು ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಗಳ ಬಗ್ಗೆ ಹೆಚ್ಚು ಪರಿಚಿತರು. ಈ ಹಿಂದೆ 1967ರಲ್ಲಿ ಸನ್‌ಬೀಮ್ ಎಂಬ ಕಾರು ತಯಾರಕ ಕಂಪನಿಯು ತನ್ನ ಆವೃತ್ತಿಯ ಕಾರಿಗೆ ಇದೇ ಹೆಸರನ್ನಿಟ್ಟಿತ್ತು.

1967 Volkswagen Beetle Coupe
ಫೋಕ್ಸ್‌ವ್ಯಾಗನ್ ಬೀಟ್ಲ್ ಕಾರು ಇಂದಿಗೂ ಹೆಚ್ಚು ಜನಪ್ರಿಯವೆನಿಸಿದೆ. ಅಂದ ಹಾಗೆ 1967ನೇ ಇಸವಿಯಲ್ಲಿ ಕಂಪನಿಯು ಜೀರುಂಡೆ ಹೆಸರನ್ನು ಕಾರಿಗೆ ಹೆಸರಿಸಿತ್ತು.

1968 Dodge Super Bee
ಉತ್ತರ ಅಮೆರಿಕದ ಹೆಸರಾಂತ ಕಂಪನಿಯಾಗಿರುವ ಡೊಡ್ಜ್ 1968ನೇ ಇಸವಿಯಲ್ಲಿ ದುಂಬಿ ಅಥವಾ ಜೇಣುನೊಣ ಹೆಸರಲ್ಲಿ ಮಾಡೆಲ್ ಬಿಡುಗಡೆಗೊಳಿಸಿತ್ತು.

1970 Plymouth Barracuda
ಅಮೆರಿಕ ತಲಹದಿಯ ಕ್ಲೈಸ್ಲರ್ ಕಾರ್ಪೋರೇಷನ್ ಬ್ರಾಂಡ್ ಆಗಿರುವ ಪ್ಲೈಮೌತ್ ಕಾರು ಉತ್ಪಾದನೆಯು 2001ನೇ ಇಸವಿಯಲ್ಲಿ ಸ್ಥಗಿತಗೊಂಡಿತ್ತು. ಆ ಬಳಿಕ ಪ್ಲೈಮೌತ್ ಉತ್ತರಾಧಿಕಾರಿ ದೈಮ್ಲಾರ್ ಕ್ಲೈಸ್ಲರ್ ನೇತೃತ್ವ ವಹಿಸಿತ್ತು. 1970ನೇ ಇಸವಿಯಲ್ಲಿ ಬರಾಕುಡಾ (ಹೊಟ್ಟೆಬಾಕತನವುಳ್ಳ ಒಂದು ಜಾತಿಯ ಉದ್ದವಾದ ಮೀನು) ಹೆಸರಲ್ಲಿ ಪ್ಲೈಮೌತ್ ಮಾಡೆಲ್ ಬಿಡುಗಡೆಗೊಂಡಿತ್ತು.

2014 Chevrolet Corvette Stingray
ಸ್ಟಿಂಗ್ರೇ ಶಾರ್ಕ್ ಜಾತಿಗೆ ಸೇರಿದ ದೀರ್ಘ ದೇಹದ ಎದ್ದು ಕಾಣುವ ಪಕ್ಕ ಕಿವಿರುಗಳುಳ್ಳ ಕಡಲ ಮೀನಾಗಿದೆ. ಇನ್ನಷ್ಟೇ ಆಗಮನವಾಗಬೇಕಾಗಿರುವ ಷೆವರ್ಲೆ ಮಾಡೆಲ್‌ಗೆ ಇದರ ಹೆಸರಿಡಲಾಗಿದೆ.

Shelby Cobra
ವಿಶಾಲವಾಗಿ ಹರಡಿರುವ ಭಾರತ ದೇಶದಲ್ಲಿ ಹಾವುಗಳನ್ನು ಭಯ ಭಕ್ತಿಯಿಂದ ಕಾಣಲಾಗುತ್ತದೆ. ಇದೇ ಕಾರಣಕ್ಕಾಗಿ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ. ಇನ್ನು ಪ್ರಖ್ಯಾತ ಕಾರು ಕಂಪನಿಯಾದ ಶೆಲ್ಬಿ ಕಾಳಿಂಗ ಸರ್ಪ ಹೆಸರನ್ನು ತನ್ನ ಮಾಡೆಲ್‌ಗೆ ಇರಿಸಿದೆ.

Viper Dodge
ಡೊಡ್ಜ್‌ನಿಂದ ಬಿಡುಗಡೆಯಾಗಿರುವ ಇನ್ನೊಂದು ಕಾರಿಗೆ ಫೋರ ವಿಷಸರ್ಪ ಅಥವಾ ಮಂಡಲದ ಹಾವು ಹೆಸರನ್ನು ಇಡಲಾಗಿದೆ.


Click it and Unblock the Notifications








