ವಾಹನಗಳಿಗೂ ಅನ್ವಯಿಸಲಿದೆ ಸಾಮಾಜಿಕ ಅಂತರ, ಉಲ್ಲಂಘಿಸಿದರೆ ಬೀಳಲಿದೆ ದಂಡ

ಕರೋನಾ ವೈರಸ್ ಹರಡಬಾರದೆಂಬ ಕಾರಣಕ್ಕೆ ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಗಿತ್ತು.

ವಾಹನಗಳಿಗೂ ಅನ್ವಯಿಸಲಿದೆ ಸಾಮಾಜಿಕ ಅಂತರ, ಉಲ್ಲಂಘಿಸಿದರೆ ಬೀಳಲಿದೆ ದಂಡ

ಇದರ ಜೊತೆಗೆ ಕಾರು ಹಾಗೂ ಬೈಕ್ ಸೇರಿದಂತೆ ಎಲ್ಲಾ ರೀತಿಯ ಖಾಸಗಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಹಂತ ಹಂತವಾಗಿ ದೇಶದ ವಿವಿಧ ಭಾಗಗಳಲ್ಲಿ ಸಂಚಾರ ಸೇವೆಗಳನ್ನು ಆರಂಭಿಸಲಾಗಿದೆ.

ವಾಹನಗಳಿಗೂ ಅನ್ವಯಿಸಲಿದೆ ಸಾಮಾಜಿಕ ಅಂತರ, ಉಲ್ಲಂಘಿಸಿದರೆ ಬೀಳಲಿದೆ ದಂಡ

ರೈಲು ಹಾಗೂ ವಿಮಾನಗಳ ಸೇವೆಯನ್ನು ಸಹ ಪುನರಾರಂಭಿಸಲಾಗಿದೆ. ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಇದರಿಂದಾಗಿ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ವಾಹನಗಳಿಗೂ ಅನ್ವಯಿಸಲಿದೆ ಸಾಮಾಜಿಕ ಅಂತರ, ಉಲ್ಲಂಘಿಸಿದರೆ ಬೀಳಲಿದೆ ದಂಡ

ಕರೋನಾ ವೈರಸ್ ಮಹಾಮಾರಿಗೆ ಯಾವುದೇ ಲಸಿಕೆಯನ್ನು ಕಂಡುಹಿಡಿದಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ವೈರಸ್ ಹರಡದಂತೆ ತಡೆಯುವುದೇ ಇದಕ್ಕಿರುವ ಮದ್ದು. ಫೇಸ್ ಮಾಸ್ಕ್ ಧರಿಸುವುದನ್ನು, ಸಾಮಾಜಿಕ ಅಂತರ ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ವಾಹನಗಳಿಗೂ ಅನ್ವಯಿಸಲಿದೆ ಸಾಮಾಜಿಕ ಅಂತರ, ಉಲ್ಲಂಘಿಸಿದರೆ ಬೀಳಲಿದೆ ದಂಡ

ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಚಂಡೀಗಢ ಆರೋಗ್ಯ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ ಕ್ವಾರಂಟೈನ್‌ನಲ್ಲಿರುವವರು ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ರೂ.2,000 ದಂಡ ವಿಧಿಸಲಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಾಹನಗಳಿಗೂ ಅನ್ವಯಿಸಲಿದೆ ಸಾಮಾಜಿಕ ಅಂತರ, ಉಲ್ಲಂಘಿಸಿದರೆ ಬೀಳಲಿದೆ ದಂಡ

ಸಾಮಾಜಿಕ ಅಂತರವನ್ನು ಪಾಲಿಸದ ಅಂಗಡಿ ಮಾಲೀಕರಿಗೆ ರೂ.500 ದಂಡ ವಿಧಿಸಲಾಗುತ್ತದೆ. ಸಾಮಾಜಿಕ ಅಂತರದ ನಿಯಮಗಳು ವಾಹನಗಳಿಗೂ ಅನ್ವಯಿಸುತ್ತವೆ. ಸಾಮಾಜಿಕ ಅಂತರವನ್ನು ಪಾಲಿಸದ ಬಸ್‌ಗಳಿಗೆ ರೂ.3,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಕಾರುಗಳಿಗೆ ರೂ.2,000 ದಂಡ ವಿಧಿಸಲಾಗುತ್ತದೆ.

ವಾಹನಗಳಿಗೂ ಅನ್ವಯಿಸಲಿದೆ ಸಾಮಾಜಿಕ ಅಂತರ, ಉಲ್ಲಂಘಿಸಿದರೆ ಬೀಳಲಿದೆ ದಂಡ

ಆಟೋ / ದ್ವಿಚಕ್ರ ವಾಹನಗಳಿಗೆ ರೂ.500 ದಂಡ ವಿಧಿಸಲಾಗುತ್ತದೆ. ಇದರಿಂದ ವಾಹನ ಚಾಲಕರು ಸಾಮಾಜಿಕ ಅಂತರವನ್ನು ಪಾಲಿಸಲು ಸಾಧ್ಯವಾಗಲಿದೆ ಎಂದು ಚಂಡೀಗಢ ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಾಹನಗಳಿಗೂ ಅನ್ವಯಿಸಲಿದೆ ಸಾಮಾಜಿಕ ಅಂತರ, ಉಲ್ಲಂಘಿಸಿದರೆ ಬೀಳಲಿದೆ ದಂಡ

ಕರೋನಾ ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಮುಂಬೈ, ಚೆನ್ನೈ ಹಾಗೂ ದೆಹಲಿಯಂತಹ ಮಹಾನಗರಗಳು ಕರೋನಾ ವೈರಸ್‌ನಿಂದ ಹೆಚ್ಚು ತತ್ತರಿಸಿವೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
Chandigarh police fine motorists for violating social distancing norms. Read in Kannada.
Story first published: Monday, June 8, 2020, 13:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X