ಗಸ್ತು ನಿರ್ವಹಣೆಗೆ ಚೆನ್ನೈ ಪೊಲೀಸ್ ಪಡೆ ಸೇರಿದ ಇ-ಸ್ಕೂಟರ್
ಪ್ರತಿದಿನ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚಿಗೆ ಈ ಪ್ರಮಾಣವು ವಿಪರೀತವಾಗಿ ಏರಿಕೆಯಾಗಿದೆ. ಈ ಮೊದಲು ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಪ್ರಕರಣಗಳು ಈಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿವೆ.

ಕೆಲ ದಿನಗಳ ಹಿಂದಷ್ಟೇ ತೆಲಂಗಾಣದಲ್ಲಿ ನಡೆದ ದಿಶಾ ಪ್ರಕರಣವು ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಈ ಕಾರಣಕ್ಕಾಗಿ ಆಂಧ್ರ ಪ್ರದೇಶ ಸರ್ಕಾರವು ದಿಶಾ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯನ್ವಯ ಅತ್ಯಾಚಾರವೆಸಗುವವರಿಗೆ 21 ದಿನಗಳಲ್ಲಿ ಮರಣದಂಡನೆಯನ್ನು ವಿಧಿಸಲಾಗುವುದು.

ಈ ಹಿನ್ನೆಲೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ತಮಿಳುನಾಡು ಸರ್ಕಾರವೂ ಸಹ ಮಹಿಳೆಯರ ರಕ್ಷಣೆಗಾಗಿ ಕ್ರಮ ಕೈಗೊಳ್ಳುತ್ತಿರುವುದರಲ್ಲಿ ಹಿಂದೆ ಬಿದ್ದಿಲ್ಲ.

ಮಹಿಳೆಯರ ರಕ್ಷಣೆಗಾಗಿ ಮಹಿಳಾ ಪೊಲೀಸರನ್ನು ನೇಮಿಸಲಾಗಿದೆ. ಗಸ್ತು ತಿರುಗುವ ಮಹಿಳಾ ಪೊಲೀಸರಿಗಾಗಿ ಸೆಗ್‍ವೇ ಹೋವರ್ ಬೋರ್ಡ್ ಇ-ಸ್ಕೂಟರ್‍ಗಳನ್ನು ನೀಡಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಹೋವರ್ ಬೋರ್ಡ್ ರೀತಿಯ ಇ-ಸ್ಕೂಟರ್ ಅನ್ನು ಗಸ್ತು ತಿರುಗಲು ಬಳಸಲಾಗುತ್ತಿದೆ.

ಈ ಹೋವರ್‍ಬೋರ್ಡ್ ಇ-ಸ್ಕೂಟರ್‍ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 20 ಕಿ.ಮೀಗಳಾಗಿದೆ. ಪೊಲೀಸರು ಇದರ ಮೇಲೆ ಹತ್ತಬಹುದು. 8 ಅಡಿ ಎತ್ತರದಿಂದ ಸುತ್ತಮುತ್ತಲಿನ ಸಂಗತಿಗಳನ್ನು ಗಮನಿಸಬಹುದು. 500 ಮೀಟರ್ ದೂರದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಗಮನಿಸಬಹುದು.

ಹೋವರ್‍ಬೋರ್ಡ್‍ನಲ್ಲಿ ನಿಂತಿರುವ ಜಾಗದಲ್ಲಿಯೇ 360 ಡಿಗ್ರಿ ತಿರುಗಬಹುದು. ಇದರಲ್ಲಿ ಪೊಲೀಸ್ ಸ್ಪೀಕರ್, ವಾಕಿ ಟಾಕಿ ಹಾಗೂ ಫಸ್ಟ್ ಏಡ್ ಬಾಕ್ಸ್ ಗಳಿರಲಿವೆ. ಈ ಸ್ಕೂಟರ್ ಅನ್ನು ಜನ ದಟ್ಟಣೆಯಿರುವ ಜಾಗಗಳಲ್ಲಿಯೂ ಬಳಸಬಹುದು.

ಹಬ್ಬ, ಉತ್ಸವದ ಸಂದರ್ಭಗಳಲ್ಲಿ ಈ ಸ್ಕೂಟರ್ ಅನ್ನು ಸುಲಭವಾಗಿ ಬಳಸಬಹುದೆಂಬುದು ಪೊಲೀಸರ ಅಭಿಪ್ರಾಯವಾಗಿದೆ. ಈ ಮೊದಲು ಮುಂಬೈ ಪೊಲೀಸರು ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಬಳಸುತ್ತಿದ್ದರು. ಆದರೆ ಟೆಕ್ನಾಲಜಿಯಲ್ಲಿ ಹಿಂದಿದ್ದ ಕಾರಣಕ್ಕೆ ಸ್ಥಗಿತಗೊಳಿಸಲಾಯಿತು.
MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಸದ್ಯಕ್ಕೆ ಚೆನ್ನೈ ಪೊಲೀಸರು 10 ಇ-ಸ್ಕೂಟರ್‍ಗಳನ್ನು ಖರೀದಿಸಿದ್ದಾರೆ. ಇವುಗಳು ಯಶಸ್ವಿಯಾದ ನಂತರ ಮತ್ತಷ್ಟು ಸ್ಕೂಟರ್‍ಗಳನ್ನು ಖರೀದಿಸಲಿದ್ದಾರೆ. ಈ ಸ್ಕೂಟರ್‍ಗಳನ್ನು ಮಹಿಳೆಯರ ರಕ್ಷಣೆಗೆ ಮಾತ್ರವಲ್ಲದೇ ಅಪರಾಧ ಕೃತ್ಯಗಳಲ್ಲಿ ತೊಡಗುವ ಮಹಿಳೆಯರ ವಿರುದ್ದವೂ ಬಳಸಲಾಗುವುದು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇತ್ತೀಚಿನ ದಿನಗಳಲ್ಲಿ ಚೆನ್ನೈ ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮದ್ಯಪಾನ ಮಾಡಿ ತಮ್ಮ ದುಬಾರಿ ಕಾರುಗಳಲ್ಲಿ ಚಲಿಸುವ ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದ ನಡೆಸುವುದು ಮಾತ್ರವಲ್ಲದೇ ಪೊಲೀಸರ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ಈ ರೀತಿ ವರ್ತಿಸುವ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಲು ರಾತ್ರಿ ಪಾಳಿಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗುವುದೆಂದು ಚೆನ್ನೈ ಪೊಲೀಸ್ ಕಮೀಷನರ್‍ರವರು ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಚೆನ್ನೈನಲ್ಲಿ ನಾಲ್ಕು ಮಹಿಳಾ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುವುದೆಂದು ಅವರು ತಿಳಿಸಿದರು.

ಈ ಪೊಲೀಸ್ ಪಡೆಯಲ್ಲಿ ಒಬ್ಬರು ಸಹಾಯಕ ಮಹಿಳಾ ಸಬ್‍ಇನ್ಸ್ ಪೆಕ್ಟರ್, ಒಬ್ಬರು ಮಹಿಳಾ ಅಕೌಂಟೆಂಟ್ ಹಾಗೂ ಇಬ್ಬರು ಮಹಿಳಾ ಕಾನ್ಸ್ ಟೇಬಲ್‍ಗಳಿರಲಿದ್ದಾರೆ. ರಾತ್ರಿ ಪಾಳಿಯನ್ನು ಮುಗಿಸಿದ ನಂತರ ಅವಶ್ಯಕತೆಯಿರುವ ಕಡೆ ಕರ್ತವ್ಯಕ್ಕೆ ತೆರಳಲಿದ್ದಾರೆ.


Click it and Unblock the Notifications