ವಿಶಿಷ್ಟ ಬಗೆಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು

ಕರೋನಾ ವೈರಸ್ ಹರಡದಂತೆ ತಡೆಯಲು ಭಾರತದಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜನರು ಹೊರ ಬರದಂತೆ ತಡೆಯಲು ವಿವಿಧ ರಾಜ್ಯಗಳ ಪೊಲೀಸರು ವಿವಿಧ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ತಮಿಳುನಾಡು ಪೊಲೀಸರು ಕರೋನಾ ವೈರಸ್ ರೀತಿಯ ಹೆಲ್ಮೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶಿಷ್ಟ ಬಗೆಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು

ತಮಿಳುನಾಡಿನ ಚೆನ್ನೈನಲ್ಲಿ, ಕರೋನಾ ಹೆಲ್ಮೆಟ್ ಧರಿಸಿ, ಜನರು ಮನೆಯಿಂದ ಹೊರ ಬರದಂತೆ ಪೊಲೀಸರು ತಡೆಯುತ್ತಿದ್ದಾರೆ. ವೈರಸ್ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗುತ್ತಿದೆ.

ವಿಶಿಷ್ಟ ಬಗೆಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು

ಈ ಶಿರಸ್ತ್ರಾಣವನ್ನು ವಿನ್ಯಾಸಗೊಳಿಸಿದ ರಾಜೇಶ್ ಬಾಬುರವರು ಮಾತನಾಡಿ, ನಾವು ಜನರೊಂದಿಗೆ ಮಾತನಾಡಿದಾಗ, ಅವರಲ್ಲಿ ಕರೋನಾ ವೈರಸ್ ಬಗ್ಗೆ ಜಾಗೃತಿ ಇಲ್ಲದೇ ಇರುವುದು ಕಂಡು ಬಂತು. ಈ ಕಾರಣಕ್ಕೆ ನಾವು ವಿಭಿನ್ನವಾಗಿ ಯೋಚಿಸಿ ಕರೋನಾ ವೈರಸ್ ನಂತೆ ಕಾಣುವ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಿದೆವು ಎಂದು ಹೇಳಿದರು.

ವಿಶಿಷ್ಟ ಬಗೆಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು

ಇದರಿಂದಾದರೂ ಜನರಲ್ಲಿ ಜಾಗೃತಿ ಮೂಡಿ ಮನೆಯಲ್ಲಿಯೇ ಇರುವಂತಾಗಲಿದೆ ಎಂದು ಅವರು ಹೇಳುತ್ತಾರೆ. ಈ ಹೆಲ್ಮೆಟ್ ತಯಾರಿಸಲು ಅವರು ಮುರಿದ ಹೆಲ್ಮೆಟ್ ಹಾಗೂ ಪೇಪರ್ ಅನ್ನು ಬಳಸಿದ್ದಾರೆ. ಈ ಹೆಲ್ಮೆಟ್ ಪರಿಣಾಮಕಾರಿಯಾಗಿದ್ದು, ಜನರು ಜಾಗೃತರಾಗಿದ್ದಾರೆ ಎಂದು ಅವರು ಹೇಳಿದರು.

ವಿಶಿಷ್ಟ ಬಗೆಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು

ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ನಂತರ, ಈ ರೀತಿಯ ಅನೇಕ ವೀಡಿಯೊಗಳು ಹೊರಬಂದಿದ್ದು, ಆ ವೀಡಿಯೊಗಳಲ್ಲಿ ಪೊಲೀಸರು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಅನಗತ್ಯವಾಗಿ ಹೊರಹೋಗುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಈ ರೀತಿಯ ವಿಶಿಷ್ಟ ಜಾಗೃತಿಗಳು ಬಹಳ ಪರಿಣಾಮಕಾರಿಯಾಗಬಲ್ಲವು.

ವಿಶಿಷ್ಟ ಬಗೆಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು

ಇತ್ತೀಚೆಗಷ್ಟೇ ಲಾಕ್‌ಡೌನ್‌ ಸಮಯದಲ್ಲಿ ಹೊರಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದ ಪೊಲೀಸರು, ಅದರ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಾದ ನಂತರ ಆ ವ್ಯಕ್ತಿ ಪೊಲೀಸರ ಬಳಿ ಕ್ಷಮೆಯಾಚಿಸಿದ್ದ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ವಿಶಿಷ್ಟ ಬಗೆಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು

ಕರೋನಾ ಹಾವಳಿಯಿಂದಾಗಿ, ಅನೇಕ ವಾಹನ ತಯಾರಕ ಕಂಪನಿಗಳು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಮಾರುತಿ ಸುಜುಕಿ ಕಂಪನಿಯು ವೆಂಟಿಲೇಟರ್‌ಗಳನ್ನು ತಯಾರಿಸುವುದಾಗಿ ಘೋಷಿಸಿದೆ.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ವಿಶಿಷ್ಟ ಬಗೆಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಕೂಡ ವೆಂಟಿಲೇಟರ್ ತಯಾರಿಕೆಯಲ್ಲಿ ತೊಡಗಿದ್ದು, ಇತ್ತೀಚೆಗೆ ಮೊದಲ ಮೂಲಮಾದರಿ ಸಿದ್ಧ ಪಡಿಸಿದೆ. ಕಂಪನಿಯು ಇದರ ಉತ್ಪಾದನೆಯನ್ನು ಶೀಘ್ರದಲ್ಲೇ ಆರಂಭಿಸಲಿದೆ.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ವಿಶಿಷ್ಟ ಬಗೆಯ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಪೊಲೀಸರು

ಭಾರತದ ಬಹುತೇಕ ಎಲ್ಲಾ ರಾಜ್ಯಗಳ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಕರೋನಾ ಹೆಲ್ಮೆಟ್ ಇದಕ್ಕೊಂದು ತಾಜಾ ಉದಾಹರಣೆಯಾಗಿದೆ.

ಚಿತ್ರಕೃಪೆ: ಎಎನ್‌ಐ

Article Published On: Sunday, March 29, 2020, 10:30 [IST]
English summary
Chennai traffic police spread Covid 19 awareness with virus like helmet. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+