YouTube

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಚೀನಾ ಹೊಸ ಹೈಸ್ಪೀಡ್ ಮ್ಯಾಗ್ಲೆವ್ ರೈಲಿನ ಮಾದರಿಯನ್ನು ಅನಾವರಣಗೊಳಿಸಿದೆ. ಈ ರೈಲು ಪ್ರತಿ ಗಂಟೆಗೆ 620 ಕಿ.ಮೀ ಅಂದರೆ 385 ಮೈಲುಗಳ ವೇಗದಲ್ಲಿ ಸಾಗಲಿದೆ. 21 ಮೀಟರ್ (69 ಅಡಿ) ಉದ್ದವಿರುವ ಈ ಮಾದರಿ ರೈಲ್ ಅನ್ನು ಜನವರಿ 13ರಂದು ಸಿಚುವಾನ್ ಪ್ರಾಂತ್ಯದ ಚೆಂಗ್ಡುನಲ್ಲಿ ಅನಾವರಣಗೊಳಿಸಲಾಯಿತು.

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಈ ರೈಲು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪ್ರದರ್ಶಿಸಲು ವಿಶ್ವವಿದ್ಯಾಲಯದ ಸಂಶೋಧಕರು 165 ಮೀಟರ್ (541 ಅಡಿ) ಟ್ರ್ಯಾಕ್ ಅನ್ನು ನಿರ್ಮಿಸಿದ್ದರು. ಮುಂದಿನ 3-10 ವರ್ಷಗಳಲ್ಲಿ ಈ ರೈಲು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಪ್ರೊಫೆಸರ್ ಹೂ ಕ್ಸುವಾನ್ ಸುದ್ದಿಗಾರರಿಗೆ ತಿಳಿಸಿದರು.

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಹೂ ಕ್ಸುವಾನ್ ನೈಋತ್ಯ ಜಿಯೋಡಾಂಗ್ ವಿಶ್ವವಿದ್ಯಾಲಯದ ಉಪಾಧ್ಯಕ್ಷರಾಗಿದ್ದಾರೆ. ಹೊಸ ಹೈಸ್ಪೀಡ್ ಮೆಕ್ಲೀನ್ ರೈಲಿನ ಮಾದರಿಯನ್ನು ಅಭಿವೃದ್ಧಿಪಡಿಸುವಲ್ಲಿ ವಿಶ್ವವಿದ್ಯಾಲಯವು ನಿರತವಾಗಿದೆ. ಈ ಬಗ್ಗೆ ಚೀನಾದ ಕ್ಸಿನ್ಹುವಾನೆಟ್ ಪತ್ರಿಕೆ ವರದಿ ಮಾಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಚೀನಾ ದೇಶವು ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲು ಜಾಲವನ್ನು ಹೊಂದಿದೆ. ಇದರಲ್ಲಿ 37,000 ಕಿ.ಮೀ ದೂರದ ಹೈಸ್ಪೀಡ್ ರೈಲು ಮಾರ್ಗವಿದೆ. ಇದರಲ್ಲಿ ವಿಶ್ವದ ಅತಿ ವೇಗದ ವಾಣಿಜ್ಯ ರೈಲು ಎಂದು ಜನಪ್ರಿಯವಾಗಿರುವ ಶಾಂಘೈ ಮ್ಯಾಗ್ಲೆವ್ ರೈಲು ಸಹ ಸೇರಿದೆ.

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಚೀನಾದ ಮೊದಲ ಹೈಸ್ಪೀಡ್ ರೈಲು ಸೇವೆಯನ್ನು 2003ರಲ್ಲಿ ಆರಂಭಿಸಲಾಯಿತು. ಈ ರೈಲು 431 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ರೈಲು ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಿಂದ ಶಾಂಘೈನ ಪೂರ್ವದಲ್ಲಿರುವ ಲಾಂಗ್ಯಾಂಗ್ ವರೆಗೆ ಚಲಿಸುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಈಗ ಅನಾವರಣಗೊಂಡ ಮ್ಯಾಗ್ಲೆವ್ ಮಾದರಿಯು ಗಂಟೆಗೆ 620 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಈ ರೈಲು ವಿಶ್ವದ ಅತಿ ವೇಗದ ರೈಲು ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ.

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಶಾಂಘೈ ಮ್ಯಾಗ್ಲೆವ್ ರೈಲು ಕೇವಲ 4 ನಿಮಿಷಗಳಲ್ಲಿ ಗರಿಷ್ಠ ವೇಗವನ್ನು ತಲುಪುತ್ತದೆ. ಅಂದರೆ ಶಾಂಘೈ ಮ್ಯಾಗ್ಲೆವ್ ರೈಲು 0 - 431 ಕಿ.ಮೀ ವೇಗವನ್ನು ತಲುಪಲು ಕೇವಲ 4 ನಿಮಿಷ ತೆಗೆದುಕೊಳ್ಳುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಚೀನಾ ದೇಶವು ಈ ರೀತಿಯ ಹಲವಾರು ಹೈಸ್ಪೀಡ್ ರೈಲುಗಳನ್ನು ಪರಿಚಯಿಸುವಲ್ಲಿ ನಿರತವಾಗಿದೆ. 2022ರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ಗೆ ಮುನ್ನ ಮೂಲಸೌಕರ್ಯಗಳನ್ನು ಒದಗಿಸಲು ಚೀನಾ ದೇಶವು ಉತ್ಸುಕವಾಗಿದೆ.

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಚಳಿಗಾಲದ ಒಲಿಂಪಿಕ್ಸ್ ಆರಂಭವಾಗಲು ಇನ್ನೂ ಒಂದೂವರೆ ವರ್ಷ ಬಾಕಿ ಇದ್ದರೂ ಚೀನಾ ದೇಶವು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಚೀನಾ ದೇಶವು 2022ರ ಚಳಿಗಾಲದ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಜಾಂಗ್‌ಜಿಯಾಗೊಯ್‌ನಿಂದ ಬೀಜಿಂಗ್‌ಗೆ ಕಳೆದ ವರ್ಷ ಹೊಸ 174 ಕಿ.ಮೀ ವೇಗದ ಹೈಸ್ಪೀಡ್ ರೈಲು ಮಾರ್ಗವನ್ನು ಪರಿಚಯಿಸಿತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಗಂಟೆಗೆ 620 ಕಿ.ಮೀ ವೇಗದಲ್ಲಿ ಸಾಗುವ ರೈಲಿನ ಮಾದರಿಯನ್ನು ಅನಾವರಣಗೊಳಿಸಿದ ಚೀನಾ

ಈ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಮೂರು ಗಂಟೆಗಳಿಂದ ಕೇವಲ 47 ನಿಮಿಷಗಳಿಗೆ ಇಳಿಸುತ್ತದೆ. ಹೈ ಸ್ಪೀಡ್ ರೈಲುಗಳು ಜನರ ಪ್ರಯಾಣದ ಅವಧಿಯನ್ನು ಉಳಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

Most Read Articles

Kannada
English summary
China unveils prototype of Maglev train which travels at the speed of 620 kmph. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X