ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

By Manoj B.k

ಎಲ್ಲರಿಗೂ ಅವರದ್ದೆ ಆದ ದೊಡ್ಡ ದೊಡ್ಡ ಕನಸುಗಳಿರುತ್ತೆ. ಆದ್ರೆ ಬಹುತೇಕರ ಕನಸುಗಳು ಕನಸಾಗಿಯೇ ಉಳಿದುಬಿಡುತ್ತವೆ. ಆದ್ರೆ ಕಂಡ ಕನಸನ್ನು ನನಸು ಮಾಡಲೇಬೇಕು ಎಂದು ಪ್ರಯತ್ನಿಸಿದವರು ಮಾತ್ರವೇ ತಮ್ಮ ಗುರಿಸಾಧನೆ ಮಾಡಬಲ್ಲರು. ಹೀಗೆಯೇ ಇಲ್ಲೊಬ್ಬ ರೈತ ಕೂಡಾ ವ್ಯವಸಾಯವನ್ನು ಬಿಟ್ಟು ವಿಮಾನವೊಂದರ ನಿರ್ಮಾಣಕ್ಕೆ ಕೈ ಹಾಕಿ ಕೊನೆಗೆ ಅದು ಸಾಧ್ಯವಿಲ್ಲವೆಂದು ತಿಳಿದಾಗ ಹೊಸ ಉದ್ಯಮವೊಂದನ್ನು ತೆರೆದು ಯಶಸ್ವಿಯಾದ ಸಾಹಸಗಾಥೆಯನ್ನು ನೀವು ಒಮ್ಮೆ ಓದಲೇಬೇಕು.

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಅಂದಹಾಗೆ ಇದು ಚೀನಾದಲ್ಲಿ ನಡೆದ ಘಟನೆಯಾದರೂ ಸಹ ಕಂಡ ಕನಸನ್ನು ನನಸು ಮಾಡಲು ಪ್ರಯತ್ನಿಸಿದಾಗ ಎನಾದ್ರು ಒಂದು ಗುರಿತಲುಪಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಯಾಕೆಂದ್ರೆ ಓದು ಬರಹ ಬರದ ಈ ರೈತ ತಾನು ಕಂಡ ಕನಸನ್ನು ನನಸು ಮಾಡಲೇಬೇಕೆಂದು ಮಾಡಿದ ಪ್ರಯತ್ನವನ್ನು ನಾವು ಮೆಚ್ಚಲೇಬೇಕು.

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಈಶಾನ್ಯ ಚೀನಾದ ರೈತ ಝು ಯು ಎಂಬಾತ ಶಾಲೆಯ ಮೆಟ್ಟಿಲುಗಳನ್ನು ಕಂಡಿಲ್ಲವಾದ್ರು ಯಾವುದೇ ಎಂಜಿನಿಯರ್‌ಗೂ ಕಡಿಮೆ ಇಲ್ಲದಂತೆ ಕಟ್ಟದ ನಿರ್ಮಾಣದಲ್ಲಿ ಕ್ಷೇತ್ರ ತನ್ನದೇ ಆದ ಪ್ರಭಾವ ಹೊಂದಿದ್ದ. ಆದ್ರೆ ಅದು ಬೇಸರ ಅನ್ನಿಸಿ ಕಳೆದ ಕೆಲ ವರ್ಷಗಳಿಂದ ಪೂರ್ಣಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ.

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಈ ಮಧ್ಯೆ ತನ್ನ ಹಿಂದಿನ ಕಟ್ಟಡ ನಿರ್ಮಾಣದಲ್ಲಿನ ಕೌಶಲ್ಯದಿಂದ ಪ್ರೇರಿತನಾದ ಝು ಯು, ತನ್ನದೇ ಆದ ಪ್ರಯಾಣಿಕ ವಿಮಾನ ಮಾದರಿಯೊಂದನ್ನು ನಿರ್ಮಾಣ ಮಾಡುವ ಬಗ್ಗೆ ಕನಸು ಕಂಡಿದ್ದನಂತೆ. ಮತ್ತೆ ತಡ ಮಾಡುವುದು ಬೇಡ ಅಂದವನೇ ವಿಮಾನ ನಿರ್ಮಾಣಕ್ಕೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಿಕೊಂಡ.

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಒಂದು ವಿಮಾನ ನಿರ್ಮಾಣದ ಅಂದ್ರೆ ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಸಾವಿರಾರು ಕೋಟಿ ಬಂಡವಾಳ ಬೇಕಾಗುತ್ತೆ. ಆದ್ರೆ ರೈತ ಝು ಯು ಬಳಿ ಅಷ್ಟು ಹಣವಿಲ್ಲದ್ದಿದರೂ ಬೃಹತ್ ಯೋಜನೆಗೆ ಕೈ ಹಾಕಿದ್ದು, ಆ ಭಾಗದ ದೊಡ್ಡ ದೊಡ್ಡ ಉದ್ಯಮಿಗಳಿಗೂ ಸಹ ಅಚ್ಚರಿ ಉಂಟುಮಾಡಿತ್ತು.

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಅಸಲಿಗೆ ರೈತ ಝು ಯು ಬಳಿ ಈ ಹಿಂದೆ ಕಟ್ಟದ ನಿರ್ಮಾಣದಲ್ಲಿ ಗಳಿಕೆ ಮಾಡಿದ್ದು ಮತ್ತೆ ಕೃಷಿ ಚಟುವಟಿಕೆಯಿಂದ ಬಂದ ಎಲ್ಲಾ ಆದಾಯವು ಸೇರಿ ತುಸು ಹಣಕಾಸು ಸಿದ್ದತೆ ಮಾಡಿಕೊಂಡಿದ್ದ. ಆದರೆ ಬಹುಕೋಟಿ ಯೋಜನೆಗೆಝು ಯು ಬಳಿಯಿದ್ದ ಹಣಕಾಸು ಸೌಲಭ್ಯವು ಸಾಧ್ಯವಾಗದೆ ಹೋಗುತ್ತದೆ. ಆದರೆ ಯೋಜನೆಯಿಂದ ಹಿಂದೆ ಸರಿಯದೆ ವಿಮಾನ ನಿರ್ಮಾಣದಲ್ಲೇ ಹೊಸ ಯೋಜನೆಗೆ ಕೈಹಾಕುತ್ತಾನೆ.

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ತನ್ನ ಕನಸಿನಂತೆ ವಿಮಾನದ ಮಾದರಿಯನ್ನು ನಿರ್ಮಾಣ ಮಾಡಿದ್ದಾದರೂ ಅದಕ್ಕೆ ಬೇಕಿರುವ ಬೃಹತ್ ಬಂಡವಾಳ ಅಂತಿಮ ಹಂತದ ಕೆಲಸ ಕಾರ್ಯಗಳನ್ನು ಮಾಡುವಾಗ ಆದ ಕಷ್ಟ ಅಷ್ಟಿಲ್ಲ. ಆಗ ತಾನು ಅಂದುಕೊಂಡಂತೆ ಇದು ಸುಲಭವಲ್ಲ ಎಂದು ಕೊನೆಗೆ ಯೋಚಿಸಿದ ಝು ಯು ವಿಮಾನ ಅಭಿವೃದ್ದಿ ಯೋಜನೆಯಲ್ಲಿ ಹೊಸ ಯೋಜನೆಯೊಂದನ್ನು ಶುರು ಮಾಡುತ್ತಾನೆ.

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಬರೋಬ್ಬರಿ 80 ಟನ್ ಕಬ್ಬಿಣ ಸೇರಿದಂತೆ ವಿಮಾನದ ಒಳಾಂಗಣ ನಿರ್ಮಿಸಲು ದುಬಾರಿ ಬೆಲೆಯ ಕಟ್ಟಿಗೆ ಬಳಕೆ ಮಾಡಿದ್ದ ರೈತ ಝು ಯು ಇದಕ್ಕಾಗಿಯೇ ಸುಮಾರು 10 ಕೋಟಿಗೂ ಅಧಿಕ ಖರ್ಚು ಮಾಡಿದ್ದ. ಆದ್ರೆ ಅದು ಹಾರಲು ಸಾಧ್ಯವಿಲ್ಲ ಎಂದು ತಿಳಿದಾಗ ಅದೇ ವಿಮಾನದ ಮಾದರಿಯಲ್ಲಿ ಹೋಟೆಲ್ ಉದ್ಯಮವನ್ನು ಆರಂಭಿಸುವ ಮನಸ್ಸು ಮಾಡುತ್ತಾನೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ವಿಮಾನ ಮಾದರಿಯ ಒಳಾಂಗಣದಲ್ಲಿ 156 ಜನ ಕುಳಿತುಕೊಳ್ಳಬಹುದಾದಷ್ಟು ವಿನ್ಯಾಸ ಹೊಂದಿದ್ದು, ರೈತ ಝು ಯು ಕನಸಿನ ವಿಮಾನ ಮಾದರಿಯಾದ ಎರ್‌ಬಸ್320ಎಸ್ ಹೆಸರಿನೊಂದಿಗೆ ಈ ವಿಶೇಷ ಹೋಟೆಲ್ ಆರಂಭಗೊಂಡಿದೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಹಸಿದವರಿಗೆ ಹೊಟ್ಟೆ ತುಂಬಿಸುವ ವಿಮಾನ..!

ತನ್ನ ಕನಸಿನಂತೆ ಹೊಸ ವಿಮಾನದಲ್ಲಿ ಪ್ರಯಾಣಿಕನ್ನು ಹೊತ್ತು ಸಾಗಲು ಸಾಧ್ಯವಿಲ್ಲ ಎಂದು ತಿಳಿದ ರೈತ ಝು ಯು, ಇದರಲ್ಲಿ ಪ್ರಯಾಣಿಕರ ಸೇವೆ ಬದಲಾಗಿ ಹಸಿದು ಬಂದವರ ಹೊಟ್ಟೆ ತುಂಬಿಸಲು ಸೇವೆ ಮಾತ್ರ ನನ್ನಿಂದ ಸಾಧ್ಯ ಎಂದು ಹೇಳಿಕೊಂಡಿದ್ದಾನೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಒಟ್ಟಿನಲ್ಲಿ ವಿಮಾನದ ಮಾದರಿಯನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲದ್ದಿದ್ದರೂ ವಿಮಾನ ಮಾದರಿಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿರುವ ರೈತ ಝು ಯೂ ಇದೀಗ ಆಗ ಭಾಗದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿ ಮಾರ್ಪಟ್ಟಿದೆಯೆಂತೆ.

Most Read Articles

Kannada
English summary
Chinese Farmer Built A Plane For Fulfill His Dream.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X