ವಿಶಿಷ್ಟ ರೀತಿಯ ಸ್ಕೂಟರ್ ಸೈಕಲ್ ತಯಾರಿಸಿದ 8ನೇ ತರಗತಿ ವಿದ್ಯಾರ್ಥಿ

ಲಾಕ್‌ಡೌನ್ ಒಂದು ಕಡೆ ದೇಶದ ಜನರ ಜೀವನವನ್ನು ಬುಡಮೇಲು ಮಾಡಿದೆ. ಮತ್ತೊಂದು ಕಡೆ ಲಾಕ್‌ಡೌನ್ ಅವಧಿಯಲ್ಲಿ ಜನರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ. ಈ ಸಾಂಕ್ರಾಮಿಕ ರೋಗವು ಲಕ್ಷಾಂತರ ಜನರ ಉದ್ಯೋಗವನ್ನು ಕಸಿದುಕೊಂಡಿದೆ.

ವಿಶಿಷ್ಟ ರೀತಿಯ ಸ್ಕೂಟರ್ ಸೈಕಲ್ ತಯಾರಿಸಿದ 8ನೇ ತರಗತಿ ವಿದ್ಯಾರ್ಥಿ

ಜನರು ಸಹ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಲಾಕ್‌ಡೌನ್ ಅವಧಿಯಲ್ಲಿ ತನ್ನ ತಂದೆಯೊಡನೆ ಸೇರಿ ಎಲೆಕ್ಟ್ರಿಕ್ ಬೈಸಿಕಲ್ ತಯಾರಿಸಿದ ಹುಡುಗನ ಬಗ್ಗೆ ವರದಿಯಾಗಿತ್ತು. ಈಗ ಪಂಜಾಬ್‌ನ ಲುಧಿಯಾನ ನಗರದ ಎಂಟನೇ ತರಗತಿಯ ಹುಡುಗ ಸ್ಕೂಟರ್ ರೀತಿಯ ಸೈಕಲ್ ತಯಾರಿಸಿದ್ದಾನೆ.

ವಿಶಿಷ್ಟ ರೀತಿಯ ಸ್ಕೂಟರ್ ಸೈಕಲ್ ತಯಾರಿಸಿದ 8ನೇ ತರಗತಿ ವಿದ್ಯಾರ್ಥಿ

ಹರ್ಮನ್‌ಜೋಟ್ ಎಂಬಾತನೇ ಸ್ಕೂಟರ್ ರೀತಿಯ ಸೈಕಲ್ ತಯಾರಿಸಿರುವ ಬಾಲಕ. ಈ ಬಾಲಕ ಹೊಸ ಸೈಕಲ್ ಕೊಡಿಸುವಂತೆ ತನ್ನ ತಂದೆಯನ್ನು ಒತ್ತಾಯಿಸುತ್ತಿದ್ದ. ಆದರೆ ಹಣಕಾಸಿನ ತೊಂದರೆಯಿಂದಾಗಿ ಆತನ ತಂದೆ ಹೊಸ ಸೈಕಲ್ ಕೊಡಿಸಲು ನಿರಾಕರಿಸಿದರು. ಇಷ್ಟಕ್ಕೇ ಸುಮ್ಮನಾಗದ ಹರ್ಮನ್‌ಜೋತ್ ತಾನೇ ಸ್ಕೂಟರ್ ಸೈಕಲ್ ತಯಾರಿಸಲು ಮುಂದಾಗಿದ್ದಾನೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ವಿಶಿಷ್ಟ ರೀತಿಯ ಸ್ಕೂಟರ್ ಸೈಕಲ್ ತಯಾರಿಸಿದ 8ನೇ ತರಗತಿ ವಿದ್ಯಾರ್ಥಿ

ಹರ್ಮನ್‌ಜೋಟ್‌ನ ಈ ದ್ವಿಚಕ್ರ ವಾಹನವು ಮುಂಭಾಗದಿಂದ ಸ್ಕೂಟರ್‌ನಂತೆ ಕಾಣುತ್ತದೆ. ಸ್ಕೂಟರ್‌ನ ಮುಂಭಾಗದ ಭಾಗವನ್ನು ಈ ಸೈಕಲ್ ನಲ್ಲಿ ಅಳವಡಿಸಲಾಗಿದೆ. ಈ ಸೈಕಲ್ ಅನ್ನು ಪೆಡಲ್ ಮೂಲಕ ತುಳಿಯಬಹುದು. ಹರ್ಮನ್‌ಜೋಟ್‌ ಹಾಗೂ ಆತನ ತಂದೆ ಸೇರಿ ಈ ಸೈಕಲ್ ಅನ್ನು ತಯಾರಿಸಿದ್ದಾರೆ.

ವಿಶಿಷ್ಟ ರೀತಿಯ ಸ್ಕೂಟರ್ ಸೈಕಲ್ ತಯಾರಿಸಿದ 8ನೇ ತರಗತಿ ವಿದ್ಯಾರ್ಥಿ

ನನ್ನ ತಂದೆ ಹೊಸ ಸೈಕಲ್ ಕೊಡಿಸದ ಕಾರಣ ಲಾಕ್‌ಡೌನ್ ವೇಳೆಯಲ್ಲಿ ಈ ಸೈಕಲ್ ತಯಾರಿಸಲಾಗಿದೆ ಎಂದು ಹರ್ಮನ್‌ಜೋಟ್‌ ಎಎನ್‌ಐಗೆ ತಿಳಿಸಿದ್ದಾನೆ. ಈ ವಿಶಿಷ್ಟ ಸೈಕಲ್ ತಯಾರಿಸಲು ಹತ್ತು ಸಾವಿರ ರೂಪಾಯಿ ವೆಚ್ಚವಾಗಿದ್ದು, 15 ದಿನಗಳಲ್ಲಿ ಈ ಸೈಕಲ್ ತಯಾರಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಿಶಿಷ್ಟ ರೀತಿಯ ಸ್ಕೂಟರ್ ಸೈಕಲ್ ತಯಾರಿಸಿದ 8ನೇ ತರಗತಿ ವಿದ್ಯಾರ್ಥಿ

ಈ ವಿಷಯ ಹೊರಬಂದಾಗಿನಿಂದ ಜನರು ಈ ಹುಡುಗನನ್ನು ಕೊಂಡಾಡುತ್ತಿದ್ದಾರೆ. ಕೆಲವರು ಆತನನ್ನು ಆವಿಷ್ಕಾರಕ ಎಂದು ಕರೆದರೆ ಇನ್ನೂ ಕೆಲವರು ಇದನ್ನು ಭಾರತದ ಸ್ವಾವಲಂಬನೆಯತ್ತ ಒಂದು ಹೆಜ್ಜೆ ಎಂದು ಕರೆಯುತ್ತಿದ್ದಾರೆ. ಹೊಸ ಆವಿಷ್ಕಾರವು ಸಮಯದ ಬೇಡಿಕೆಯಾಗಿದೆ ಎಂದು ಅನೇಕ ಜನರು ಹೇಳಿದ್ದಾರೆ.

ವೈರಲ್ ಆಗಿರುವ ವೀಡಿಯೊದಲ್ಲಿ ಈ ಹುಡುಗ ತಾನು ತಯಾರಿಸಿರುವ ಸೈಕಲ್ ತುಳಿಯುತ್ತಿರುವುದನ್ನು ಕಾಣಬಹುದು. ಈ ಸೈಕಲ್ ಮುಂಭಾಗದಿಂದ ಸ್ಕೂಟರ್‌ನಂತೆ ಕಾಣುತ್ತದೆ. ಈ ಸ್ಕೂಟರ್ ಸೈಕಲ್ ಜನರ ಗಮನ ಸೆಳೆಯುತ್ತಿದೆ. ಸುತ್ತಮುತ್ತಲಿನ ಜನರು ಸಹ ಈ ಸ್ಕೂಟರ್ ಸೈಕಲಿನ ಬಗ್ಗೆ ವಿಚಾರಿಸುತ್ತಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಿಶಿಷ್ಟ ರೀತಿಯ ಸ್ಕೂಟರ್ ಸೈಕಲ್ ತಯಾರಿಸಿದ 8ನೇ ತರಗತಿ ವಿದ್ಯಾರ್ಥಿ

ಇಂತಹ ಬೈಕ್‌ ಹಾಗೂ ಸೈಕಲ್‌ಗಳನ್ನು ತಯಾರಿಸುವ ವಿಷಯ ಭಾರತದ ನಾನಾ ಭಾಗಗಳಿಂದ ನಿರಂತರವಾಗಿ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ವಿಶೇಷ ಚೇತನ ವ್ಯಕ್ತಿಯೊಬ್ಬರು ತಮಗಾಗಿ ವಿಶೇಷ ಸ್ಕೂಟರ್ ವೊಂದನ್ನು ತಯಾರಿಸಿಕೊಂಡಿದ್ದರು. ಈಗ ಅನೇಕ ಜನರು ತಮಗೂ ಸ್ಕೂಟರ್ ತಯಾರಿಸಿ ಕೊಡುವಂತೆ ಒತ್ತಾಯಿಸುತ್ತಿದ್ದಾರೆ.

Most Read Articles

Kannada
English summary
Class 8 student builds bicycle scooter during lockdown. Read in Kannada.
Story first published: Thursday, August 27, 2020, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X