ಅಪಘಾತದಲ್ಲಿ ನಜ್ಜುಗುಜ್ಜಾದ ಲಂಬೋ ಕಾರು 67 ಲಕ್ಷಕ್ಕೆ ಹರಾಜು

By Nagaraja

ಸೂಪರ್ ಕಾರುಗಳು ತುಂಬಾ ದುಬಾರಿ. ಸಾಮಾನ್ಯ ಜನರಿಂದ ಖರೀದಿಸುವುದು ಅಸಾಧ್ಯದ ಮಾತು. ಐಷಾರಾಮಿ ಜೀವನ ಶೈಲಿಯ ಭಾಗವಾಗಿರುವ ಹೊಚ್ಚ ಹೊಸ ಸೂಪರ್ ಕಾರುಗಳನ್ನು ಕೋಟಿಗಟ್ಟಲೆ ಖರ್ಚು ಮಾಡಿ ಖರೀದಿಸುವುದರಲ್ಲಿ ಏನೋ ಅರ್ಥವಿದೆಯೆಂದು ಭಾವಿಸೋಣ. ಆದರೆ ಉಪಯೋಗಕ್ಕೆ ಬಾರದ ನಜ್ಜುಗುಜ್ಜಾದ ಸೂಪರ್ ಕಾರೊಂದು 67 ಲಕ್ಷಕ್ಕೆ ಮಾರಾಟವಾದ್ದಲ್ಲಿ ಹೇಗಿರಬಹುದು?

Also Read: ಆಯ ತಪ್ಪಿದರೆ ಅಪಾಯ ತಪ್ಪಿದ್ದಲ್ಲ

ನಮ್ಮ ದೇಶದಲ್ಲಿ ಜ್ಯೋತಿಷ್ಯದಲ್ಲಿ ನಂಬಿಕೆಯುಳ್ಳ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಅವಘಡಕ್ಕೀಡಾದ ಕಾರನ್ನು ಖರೀದಿಸಲು ಸಾಧ್ಯವೇ ಇಲ್ಲ. ಅಂತಿದ್ಧರಲ್ಲಿ ಅಲ್ಲಿ ಮರಳುಗಾಡು ದುಬೈನಲ್ಲಿ ಸಂಪೂರ್ಣವಾಗಿ ನಜ್ಜುಗುಜ್ಜಾದ ಲಂಬೋರ್ಗಿನಿ ಅವೆಂಟಡೊರ್ ಸೂಪರ್ ಕಾರು ಬರೋಬ್ಬರಿ 67 ಲಕ್ಷ ರು.ಗಳಿಗೆ (USD 100,000) ಹರಾಜಾಗಿದೆ.

ಅಪಘಾತದಲ್ಲಿ ನಜ್ಜುಗುಜ್ಜಾದ ಲಂಬೋ ಕಾರು 67 ಲಕ್ಷಕ್ಕೆ ಹರಾಜು

ಅಷ್ಟೇ ಯಾಕೆ ಈ ಕಾರನ್ನು ಖರೀದಿಸಿದಾತ ಲಂಬೋರ್ಗಿನಿ ಕಾರನ್ನು ರಿಪೇರಿ ಮಾಡಲು ಮುಂದಾಗಿದ್ದಾರಂತೆ! ಇನ್ನು ಇದಕ್ಕೆಷ್ಟು ಹೆಚ್ಚುವರಿ ಖರ್ಚು ತಗುಲಲಿದೆ ಎಂಬುದು ತಿಳಿದು ಬಂದಿಲ್ಲ.

ಅಪಘಾತದಲ್ಲಿ ನಜ್ಜುಗುಜ್ಜಾದ ಲಂಬೋ ಕಾರು 67 ಲಕ್ಷಕ್ಕೆ ಹರಾಜು

ದುಬೈನಲ್ಲಿ ನಡೆದ ಅಪಘಾತವೊಂದರಲ್ಲಿ ಇಟಲಿಯ ಸೂಪರ್ ಕಾರು ಸಂಪೂರ್ಣವಾಗಿ ಹಾನಿಗೀಡಾಗಿತ್ತು. ಅಪಘಾತದಲ್ಲಿ ಪಲ್ಟಿ ಹೊಡೆದಿದ್ದ ಅವೆಂಟಡೊರ್ ಹೊರಮೈ ಹಾಗೂ ಒಳಮೈ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು.

ಅಪಘಾತದಲ್ಲಿ ನಜ್ಜುಗುಜ್ಜಾದ ಲಂಬೋ ಕಾರು 67 ಲಕ್ಷಕ್ಕೆ ಹರಾಜು

ಪ್ರಸ್ತುತ ಕಾರಿನ ತಾಂತ್ರಿಕತೆ ಬಗ್ಗೆ ಮಾತನಾಡುವುದಾದ್ದಲ್ಲಿ 6.5 ಲೀಟರ್ ವಿ12 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಲಂಬೋ ಅವೆಂಟಡೊರ್ 690 ಎನ್‌ಎಂ ತಿರುಗುಬಲದಲ್ಲಿ 700 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ ಸೆವೆನ್ ಸ್ಪೀಡ್ ಗೇರ್ ಬಾಕ್ಸ್ ನಲ್ಲಿ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ರವಾನೆಯಾಗುತ್ತದೆ.

ಅಪಘಾತದಲ್ಲಿ ನಜ್ಜುಗುಜ್ಜಾದ ಲಂಬೋ ಕಾರು 67 ಲಕ್ಷಕ್ಕೆ ಹರಾಜು

ಕೇವಲ ಮೂರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಬಲ್ಲ ಈ ಕಾರಿನ ಅಪಘಾತದ ತೀವ್ರತೆಯು ಎಷ್ಟರ ಮಟ್ಟಿರಬಹುದೆಂಬುದನ್ನು ನೀವೇ ಊಹಿಸಬಹುದಾಗಿದೆ. ಅಲ್ಲದೆ ಗಂಟೆಗೆ ಗರಿಷ್ಠ 350 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಅಪಘಾತದಲ್ಲಿ ನಜ್ಜುಗುಜ್ಜಾದ ಲಂಬೋ ಕಾರು 67 ಲಕ್ಷಕ್ಕೆ ಹರಾಜು

ಇನ್ನು ಅಪಘಾತಕ್ಕೆ ಸಂಬಂಧಿಸಿದ ನಿಖರ ಮಾಹಿತಿಗಳು ಲಭ್ಯವಾಗಿಲ್ಲ. ಅಷ್ಟಕ್ಕೂ ಲಂಬೋರ್ಗಿನಿ ಅವೆಂಟಡೊರ್ ಯಾರಿಗೆ ಸೇರಿದ ಕಾರು? ಹರಾಜಿನಲ್ಲಿ ಗೆದ್ದ ವ್ಯಕ್ತಿ ಯಾರು? ಈ ಎಲ್ಲದಕ್ಕೂ ಸಂಬಂಧಿಸಿದ ಮಾಹಿತಿಗಳು ಇನ್ನೂ ಅಸ್ಪಷ್ಟ.

ಅಪಘಾತದಲ್ಲಿ ನಜ್ಜುಗುಜ್ಜಾದ ಲಂಬೋ ಕಾರು 67 ಲಕ್ಷಕ್ಕೆ ಹರಾಜು

ಒಟ್ಟಿನಲ್ಲಿ ಸಂಪೂರ್ಣ ಹಾನಿಗೀಡಾದ ಕಾರನ್ನು ಖರೀದಿಸಿಯಾದರೂ ಆತ ಮಾಡುವುದಾದರೂ ಏನು ? ಅಥವಾ ಮತ್ತಷ್ಟು ಲಕ್ಷಗಟ್ಟಲೆ ರುಪಾಯಿ ಖರ್ಚು ಮಾಡಿ ಇದನ್ನು ರಿಪೇರಿ ಮಾಡುವುದರಿಂದ ಆತನಿಂದ ಸಿಗುವ ಲಾಭವಾದರೂ ಏನು? ಎಂಬ ಪ್ರಶ್ನೆಗಳು ಸಾಮಾನ್ಯ ವಾಹನ ಪ್ರೇಮಿಯಲ್ಲಿ ಕಾಡುವುದು ಸಹಜ.

ವಿಡಿಯೋ ವೀಕ್ಷಿಸಿ

ಇವನ್ನೂ ಓದಿ

ಸಿಸಿಟಿಯಲ್ಲಿ ಸೆರೆಯಾಯ್ತು ಪೆಟ್ರೋಲ್ ಬಂಕ್ ಶೂಟೌಟ್

More from DriveSpark

Article Published On: Monday, November 30, 2015, 12:52 [IST]
English summary
Completely Wrecked Lamborghini Aventador Auctioned For USD 100K
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+