ಕೆಟಿಎಂ ಬೈಕ್ ಓಡಿಸಿದ ಎಂಬ ಕಾರಣ ನೀಡಿ ಇಂಧನದ ಟ್ಯಾಂಕಿಗೆ ಉಪ್ಪು ಸುರಿದ ಪೊಲೀಸ್ !!

Written By:

ರಸ್ತೆ ನಿಯಮಗಳನ್ನು ಪಾಲನೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದರೆ, ರಸ್ತೆ ನಿಯಮ ಪಾಲನೆ ಮಾಡದೆ ಬಹಳಷ್ಟು ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡ ನಿದರ್ಶನಗಳನ್ನು ನಾವು ಕಾಣಬಹುದಾಗಿದೆ.

To Follow DriveSpark On Facebook, Click The Like Button
ಕೆಟಿಎಂ ಬೈಕ್ ಓಡಿಸಿದ ಎಂಬ ಕಾರಣ ನೀಡಿ ಇಂಧನದ ಟ್ಯಾಂಕಿಗೆ ಉಪ್ಪು ಸುರಿದ ಪೊಲೀಸ್ !!

ನಮಗೆಲ್ಲರಿಗೂ ತಿಳಿದಿರುವಂತೆ, ವಾಹನ ಚಾಲಕರು ರಸ್ತೆ ನಿಯಮ ಪಾಲನೆ ಮಾಡುತ್ತಿದ್ದಾರೆಯೇ ? ಇಲ್ಲವೇ ? ಎನ್ನುವುದನ್ನು ಪರೀಕ್ಷಿಸಲು ಟ್ರಾಫಿಕ್ ಪೊಲೀಸರನ್ನು ನೇಮಿಸಿ ಪರೀಕ್ಷೆ ನೆಡೆಸಲಾಗುತ್ತದೆ. ಚಾಲಕ ತಪ್ಪು ಮಾಡಿದ್ದಲ್ಲಿ ಆತನಿಗೆ ದಂಡ ವಿಧಿಸುವುದು ಸಾಮಾನ್ಯ ಸಂಗತಿಯಾಗಿದೆ.

ಕೆಟಿಎಂ ಬೈಕ್ ಓಡಿಸಿದ ಎಂಬ ಕಾರಣ ನೀಡಿ ಇಂಧನದ ಟ್ಯಾಂಕಿಗೆ ಉಪ್ಪು ಸುರಿದ ಪೊಲೀಸ್ !!

ಆದ್ರೆ, ಬೈಕ್ ಚಾಲಕನೊಬ್ಬ ರಸ್ತೆ ನಿಯಮಗಳನ್ನು ಪಾಲನೆ ಮಾಡಲಿಲ್ಲ ಎಂಬ ಕಾರಣ ನೀಡಿ ಪೊಲೀಸರೊಬ್ಬರು ಪೆಟ್ರೋಲ್ ಟ್ಯಾಂಕಿಗೆ ಉಪ್ಪು ಸುರಿದ ಘಟನೆಯೊಂದು ಕೇರಳದ ತಿರುವನಂತಪುರಂನಲ್ಲಿ ನೆಡೆದಿದೆ.

ಕೆಟಿಎಂ ಬೈಕ್ ಓಡಿಸಿದ ಎಂಬ ಕಾರಣ ನೀಡಿ ಇಂಧನದ ಟ್ಯಾಂಕಿಗೆ ಉಪ್ಪು ಸುರಿದ ಪೊಲೀಸ್ !!

ಹೌದು, ಕೆಟಿಎಂ ಬೈಕಿನ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿದ ಎಂಬ ಕಾರಣ ನೀಡಿ ತಿರುವನಂತಪುರಂ ನಗರದ ಎಎಸ್‌ಐ ಸುರೇಶ್ ಎಂಬುವವರು ಬೈಕಿನ ಇಂಧನದ ಟ್ಯಾಂಕ್ ತೆರೆದು, ಅದರೊಳಗೆ ಉಪ್ಪು ಸುರಿದಿರುವ ಘಟನೆ ವರದಿಯಾಗಿದೆ.

ತಿರುವನಂತಪುರಂನಲ್ಲಿನ ಮ್ಯೂಸಿಯಂ ಪೊಲೀಸ್ ಸ್ಟೇಷನ್ ಪೊಲೀಸರು ಈ ಕೃತ್ಯ ಎಸಗಿದ್ದ, ಪೋಲೀಸರ ಈ ಗೂಂಡಾ ರೀತಿಯ ವರ್ತನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮಟ್ಟದ ಪ್ರತಿಭಟನೆ ವ್ಯಕ್ತವಾಗಿದೆ.

ಕೆಟಿಎಂ ಬೈಕ್ ಓಡಿಸಿದ ಎಂಬ ಕಾರಣ ನೀಡಿ ಇಂಧನದ ಟ್ಯಾಂಕಿಗೆ ಉಪ್ಪು ಸುರಿದ ಪೊಲೀಸ್ !!

ಏಕೆ ಬೈಕ್ ನಿಲ್ಲಿಸಿದಿರಿ ? ಎಂದು ಸವಾರ ಕೇಳಿದಾಗ, ವೇಗದ ಚಾಲನೆ ಮಾಡುತ್ತಿರುವ ಕಾರಣ ನಿಲ್ಲಿಸಿದ್ದೇವೆ ಎಂಬ ಉತ್ತರ ಪೊಲೀಸರು ನೀಡಿದರು ಎಂದು ಬೈಕ್ ಚಾಲಕ ಆರೋಪಿಸಿದ್ದಾರೆ. ಚಾಲಕ ವೇಗದ ಚಾಲನೆಗೆ ಪುರಾವೆ ಕೇಳಿದಾಗ, ಕೆಟಿಎಂ ಬೈಕ್ ಕಡೆ ಬೆರಳು ತೋರಿಸಿ, ಈ ಬೈಕ್ ಚಾಲನೆ ಮಾಡುವುದಕ್ಕಿಂತ ದೊಡ್ಡ ಪುರಾವೆ ನಿನಗೆ ಬೇಕೇ ? ಎಂಬ ಉಡಾಫೆ ಉತ್ತರ ನೀಡಿದ್ದಾರೆ.

Recommended Video
TVS Jupiter Classic Launched In India | In Kannada - DriveSpark ಕನ್ನಡ
ಕೆಟಿಎಂ ಬೈಕ್ ಓಡಿಸಿದ ಎಂಬ ಕಾರಣ ನೀಡಿ ಇಂಧನದ ಟ್ಯಾಂಕಿಗೆ ಉಪ್ಪು ಸುರಿದ ಪೊಲೀಸ್ !!

ಮಾತಿಗೆ ಮಾತು ಬೆಳೆದಿದ್ದು, ಹೆಚ್ಚು ವಾದ ವಿವಾದದ ನಂತರ ಬೈಕ್ ಚಾಲಕನಿಗೆ ಬುದ್ದಿ ಕಲಿಸುವ ಸಲುವಾಗಿ ಪೊಲೀಸರು ಉಪ್ಪಿನ ಪ್ಯಾಕೆಟ್ ತರಿಸಿ, ಕೆಟಿಎಂ ಆರ್‌ಸಿ 200 ಬೈಕಿನ ಇಂಧನದ ಟ್ಯಾಂಕ್ ಒಳಗೆ ಸುರಿದಿದ್ದಾರೆ.

ಕೆಟಿಎಂ ಬೈಕ್ ಓಡಿಸಿದ ಎಂಬ ಕಾರಣ ನೀಡಿ ಇಂಧನದ ಟ್ಯಾಂಕಿಗೆ ಉಪ್ಪು ಸುರಿದ ಪೊಲೀಸ್ !!

ಎಲ್ಲಾ ರೀತಿಯ ದಾಖಲಾತಿಗಳನ್ನು ಹೊಂದಿದ್ದು, ಹೆಲ್ಮೆಟ್ ಸಹ ಧರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯು ದೊಡ್ಡ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದು, ಈ ರೀತಿಯ ದುಷ್ಕೃತ್ಯ ಎಸಗಿದ ಎಎಸ್‌ಐ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಕೆಟಿಎಂ ಬೈಕ್ ಓಡಿಸಿದ ಎಂಬ ಕಾರಣ ನೀಡಿ ಇಂಧನದ ಟ್ಯಾಂಕಿಗೆ ಉಪ್ಪು ಸುರಿದ ಪೊಲೀಸ್ !!

ಇತ್ತೀಚಿಗೆ, ಕೆಟಿಎಂ ಬೈಕಿನ ಮೇಲೆ ಪೋಲೀಸರ ಕಣ್ಣು ಬಿದ್ದಿರುವುದಕ್ಕೆ ಪುಷ್ಟಿ ನೀಡುವಂತಹ ಘಟನೆ ಇದಾಗಿದ್ದು, ಈ ಬೈಕಿನ ಶಬ್ದ ಮತ್ತು ಆಕಾರ ಇಷ್ಟೆಲ್ಲ ಅವಾಂತರಕ್ಕೆ ಮುಖ್ಯ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

Read more on ಕೆಟಿಎಂ ktm
English summary
traffic cop from the Museum Police Station in Thiruvananthapuram, Kerala stopped a KTM RC 200 rider and the cop then opened the fuel tank lid of the KTM RC 200 and emptied it inside the fuel tank.
Story first published: Monday, August 14, 2017, 12:09 [IST]
Please Wait while comments are loading...

Latest Photos