ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಕರೋನಾ ವೈರಸ್ ಜನರ ಜೀವನವನ್ನು ತಲೆಕೆಳಗು ಮಾಡಿದೆ. ಶ್ರೀಮಂತರು ಪರಿಸ್ಥಿತಿಯನ್ನು ಹೇಗೋ ನಿಭಾಯಿಸಿದರೆ, ತಮ್ಮ ಜೀವನೋಪಾಯಕ್ಕಾಗಿ ದೈನಂದಿನ ಆದಾಯವನ್ನು ಅವಲಂಬಿಸಿರುವವರ ಪರಿಸ್ಥಿತಿ ಶೋಚನೀಯವಾಗಿದೆ.

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಅದರಲ್ಲೂ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಪರದಾಡುವಂತಾಗಿದೆ. ಭಾರತದಲ್ಲಿ ಮಾರ್ಚ್ 24ರಿಂದ ಲಾಕ್ ಡೌನ್ ಜಾರಿಗೊಳಿಸಲಾಯಿತು. ಲಾಕ್ ಡೌನ್ ಜಾರಿಯಾದಾಗಿನಿಂದ ಆಟೋ , ಟ್ಯಾಕ್ಸಿ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಆದಾಯವನ್ನು ಕಳೆದುಕೊಂಡರು.

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಮೇ ತಿಂಗಳ ಮೊದಲ ವಾರದ ನಂತರ ಕೆಲವು ಷರತ್ತುಗಳೊಂದಿಗೆ ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಯಿತು. ಆದರೆ ಅದರ ನಂತರವೂ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಈ ಹಿಂದಿನಂತೆ ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಕರೋನಾ ವೈರಸ್ ಹರಡಬಹುದೆಂಬ ಕಾರಣಕ್ಕೆ ಜನರು ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿರುವುದು ಇದಕ್ಕೆ ಪ್ರಮುಖ ಕಾರಣ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಜನರು ಆಟೋ, ಟ್ಯಾಕ್ಸಿ ಹಾಗೂ ಬಸ್ ಗಳಲ್ಲಿ ಸಂಚರಿಸುವುದರ ಬದಲು ಬೈಕ್, ಕಾರು ಸೇರಿದಂತೆ ತಮ್ಮ ಸ್ವಂತ ವಾಹನಗಳಲ್ಲಿ ಸಂಚರಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣಕ್ಕೆ ಮುಂಬರುವ ದಿನಗಳಲ್ಲಿ ಕಾರು ಹಾಗೂ ಬೈಕುಗಳ ಮಾರಾಟ ಪ್ರಮಾಣವು ಹೆಚ್ಚಾಗುವ ನಿರೀಕ್ಷೆಗಳಿವೆ.

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಈ ಸುದ್ದಿಯು ವಾಹನ ತಯಾರಕ ಕಂಪನಿಗಳಿಗೆ ಸಂತಸವನ್ನುಂಟು ಮಾಡಿದ್ದರೆ, ಆಟೋ ಹಾಗೂ ಟ್ಯಾಕ್ಸಿ ಚಾಲಕರ ಆರ್ಥಿಕ ಪರಿಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈಗಾಗಲೇ ಹಲವು ಚಾಲಕರು ಆಟೋ ಹಾಗೂ ಟ್ಯಾಕ್ಸಿಗಳನ್ನು ಚಾಲನೆ ಮಾಡುವುದನ್ನು ನಿಲ್ಲಿಸಿ, ಬೇರೆ ವೃತ್ತಿಗಳತ್ತ ಮುಖ ಮಾಡಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಹೀಗೆ ಬೇರೆ ವೃತ್ತಿಗಳತ್ತ ಮುಖ ಮಾಡಿರುವವರಲ್ಲಿ ನಾಗೈ ಬಳಿಯ ನಾಗೋರ್ ನ್ಯೂ ಸ್ಟ್ರೀಟ್ ಪ್ರದೇಶಕ್ಕೆ ಸೇರಿದ ಮೊಹಮ್ಮದ್ ಮೈದೀನ್ ಕೂಡ ಒಬ್ಬರು. ಹೆಂಡತಿ ಹಾಗೂ ಇಬ್ಬರು ಮಕ್ಕಳಿರುವ ಮೊಹಮ್ಮದ್ ಮೈದೀನ್ ವೃತ್ತಿಯಲ್ಲಿ ಕಾರು ಚಾಲಕರಾಗಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಕಳೆದ 20 ವರ್ಷಗಳಿಂದ ಅವರು ಬೇರೊಬ್ಬರ ಕಾರನ್ನು ಬಾಡಿಗೆಗೆ ಪಡೆದು ಚಾಲನೆ ಮಾಡುತ್ತಿದ್ದರು. ತಮ್ಮ ಸಂಪಾದನೆಯಲ್ಲಿ ಉಳಿಸಿದ ಹಣ ಹಾಗೂ ಬ್ಯಾಂಕ್ ಸಾಲವನ್ನು ಪಡೆದು ಅವರು ಎರಡು ವರ್ಷಗಳ ಹಿಂದೆ ಕಾರೊಂದನ್ನು ಖರೀದಿಸಿದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಮೊಹಮ್ಮದ್ ಮೈದೀನ್ ಬ್ಯಾಂಕ್ ಸಾಲದ ಮಾಸಿಕ ಕಂತುಗಳನ್ನು ಸಹ ಪಾವತಿಸುತ್ತಿದ್ದರು. ಟ್ಯಾಕ್ಸಿ ಚಾಲನೆಯಿಂದ ಸುಖವಾಗಿಯೇ ಸಾಗುತ್ತಿದ್ದ ಮೊಹಮ್ಮದ್ ಮೈದೀನ್ ರವರ ಜೀವನವು ಕರೋನಾ ವೈರಸ್ ಆರ್ಭಟದ ಕಾರಣಕ್ಕೆ ತಲೆಕೆಳಗಾಯಿತು.

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಮೊಹಮ್ಮದ್ ಮೈದೀನ್ ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಲಾಕ್ ಡೌನ್ ಕಾರಣದಿಂದಾಗಿ ಕಳೆದ ಮೂರು ತಿಂಗಳಿನಿಂದ ಬಾಡಿಗೆ ಪಾವತಿಸಿಲ್ಲ ಎಂದು ವರದಿಯಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಇದರ ಜೊತೆಗೆ ಬ್ಯಾಂಕ್ ಸಾಲದ ಮಾಸಿಕ ಕಂತುಗಳನ್ನು ಸಹ ಪಾವತಿಸಿಲ್ಲ. ಇದು ಮೊಹಮ್ಮದ್ ಮೈದೀನ್ ರವರ ಮೇಲೆ ಒತ್ತಡವನ್ನುಂಟು ಮಾಡಿದೆ. ಬೇರೆ ದಾರಿ ಕಾಣದೇ ಮೊಹಮ್ಮದ್ ಮೈದೀನ್ ಸೈಕಲ್ ಮೂಲಕ ಚಹಾ ಮಾರಾಟ ಮಾಡುವ ವ್ಯವಹಾರವನ್ನು ಆರಂಭಿಸಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ಮೊಹಮ್ಮದ್ ಮೈದೀನ್ ಪ್ರತಿದಿನ ರಸ್ತೆಗಿಳಿದು ಚಹಾ ಮಾರಾಟ ಮಾಡುತ್ತಾರೆ. ಸ್ವಂತ ಕಾರನ್ನು ಹೊಂದಿದ್ದ ವ್ಯಕ್ತಿಯನ್ನು ಕರೋನಾ ವೈರಸ್ ಈ ಪರಿಸ್ಥಿತಿಗೆ ತಳ್ಳಿರುವುದು ನಿಜಕ್ಕೂ ದುರದೃಷ್ಟಕರ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕರೋನಾ ವೈರಸ್ ಎಫೆಕ್ಟ್: ಟೀ ಮಾರಾಟಕ್ಕಿಳಿದ ಟ್ಯಾಕ್ಸಿ ಮಾಲೀಕ

ತಮ್ಮದಲ್ಲದ ವೃತ್ತಿಗೆ ಅನಿವಾರ್ಯವಾಗಿ ಇಳಿದಿರುವ ಮೊಹಮ್ಮದ್ ಮೈದೀನ್ ರವರ ಸಾಹಸವನ್ನು ಮೆಚ್ಚಲೇ ಬೇಕು. ಆದರೆ ಉದ್ಯಮದಲ್ಲಿ ಆದಾಯದ ಕೊರತೆಯಿಂದಾಗಿ ತಮ್ಮ ಕುಟುಂಬವನ್ನು ಪೋಷಿಸುವುದಕ್ಕೆ ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೂಲ: ನ್ಯೂಸ್ 18 ತಮಿಳು

Most Read Articles

Kannada
English summary
Covid 19 lockdown forces taxi owner to sell tea in Tamil nadu. Read in Kannada.
Story first published: Tuesday, August 18, 2020, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X