ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ಕರೋನಾ ವೈರಸ್‌ನಿಂದಾಗಿ ವಿಶ್ವದ ಎಲ್ಲಾ ದೇಶಗಳು ತತ್ತರಿಸಿವೆ. ಇದರಿಂದ ಭಾರತವೂ ಹೊರತಾಗಿಲ್ಲ. ಭಾರತದಲ್ಲಿ ಕರೋನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಏಪ್ರಿಲ್ 14ರವರೆಗೆ 21 ದಿನಗಳ ಲಾಕ್ ಡೌನ್ ಘೋಷಿಸಿದೆ.

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬಸ್, ರೈಲು, ಮೆಟ್ರೋ ರೈಲು ಹಾಗೂ ವಿಮಾನಗಳ ಸೇವೆಯನ್ನು ರದ್ದುಪಡಿಸಲಾಗಿದೆ. ಬಹುತೇಕ ರಾಜ್ಯಗಳು ತಮ್ಮ ಗಡಿಗಳನ್ನು ಮುಚ್ಚಿವೆ. ಜನ ಹೊರಗೆ ಬರದಂತೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಕಾರಣದಿಂದಾಗಿ, ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ಈ ಸನ್ನಿವೇಶದಲ್ಲಿ ವ್ಯಕ್ತಿಯೊಬ್ಬರು ಸುಮಾರು 2,300 ಕಿ.ಮೀ ಪ್ರಯಾಣಿಸಿದ್ದಾರೆ. ಈ ರೀತಿ ಪ್ರಯಾಣ ಬೆಳೆಸಲು ಅವರಿಗೆ ವಿಶೇಷ ಅನುಮತಿ ನೀಡಲಾಗಿದೆ. ಇದರ ಹಿಂದೆ ಬಲವಾದ ಕಾರಣವಿದೆ. ಅಂದ ಹಾಗೆ ಇಷ್ಟು ದೂರ ಪ್ರಯಾಣಿಸಿದ ವ್ಯಕ್ತಿಯ ಹೆಸರು ಅನಿಂದ್ಯಾ ರಾಯ್.

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ಇವರು ಪಶ್ಚಿಮ ಬಂಗಾಳದವರಾಗಿದ್ದು, ಮಹಾರಾಷ್ಟ್ರದ ಮುಂಬೈನಲ್ಲಿ ನೆಲೆಸಿದ್ದಾರೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಜನರು ಹೊರಗೆ ಬರದಂತೆ ಸರ್ಕಾರವು ಸಾರ್ವಜನಿಕರಿಗೆ ಮನವಿ ಮಾಡಿದೆ. ಅನಿವಾರ್ಯತೆ ಇಲ್ಲದಿದ್ದರೆ ಮನೆಯಿಂದ ಹೊರಬಾರದಂತೆ ಹೇಳಲಾಗಿದೆ. ವಿನಾ ಕಾರಣ ಅಡ್ಡಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ಬಹಳಷ್ಟು ಜನರು ಸರ್ಕಾರದ ಮನವಿಗೆ ಸ್ಪಂದಿಸಿ ಮನೆಯಲ್ಲಿಯೇ ಉಳಿದಿದ್ದಾರೆ. ಇದರಲ್ಲಿ ಅನಿಂದ್ಯಾ ರಾಯ್ ಕೂಡ ಸೇರಿದ್ದಾರೆ. ಅವರು ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದಾರೆ. ಕಳೆದ ವಾರ ಅವರಿಗೆ ಅವರ ತಂದೆ ತೀರಿಕೊಂಡಿರುವ ಸುದ್ದಿ ಬಂದಿದೆ. ಈ ವಿಷಯವನ್ನು ಅವರಿಗೆ ಅವರ ತಾಯಿ ಸೆಲ್ ಫೋನ್ ಮೂಲಕ ತಿಳಿಸಿದ್ದಾರೆ.

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ಅನಿಂದ್ಯಾ ರಾಯ್ ಅವರ ತಂದೆ ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದರು. ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಅವರು ಪಶ್ಚಿಮ ಬಂಗಾಳಕ್ಕೆ ಹೋಗಿ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಲಾಕ್ ಡೌನ್ ಕಾರಣಕ್ಕೆ ವಿಮಾನ, ಬಸ್ ಹಾಗೂ ರೈಲು ಸೇವೆಗಳನ್ನು ರದ್ದುಪಡಿಸಲಾಗಿತ್ತು.

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ತಮ್ಮ ಊರಿಗೆ ಹೋಗುವುದು ಹೇಗೆ ಎಂಬ ಗೊಂದಲಕ್ಕೊಳಗಾದ ಅವರಿಗೆ ಇಂಟರ್ ನೆಟ್ ನಲ್ಲಿ ಪರಿಹಾರ ಸಿಕ್ಕಿದೆ. ಮಹಾರಾಷ್ಟ್ರ ಸಾರಿಗೆ ಆಯುಕ್ತರು ಅನಿಂದ್ಯಾ ರಾಯ್ ರವರಿಗೆ ಪ್ರಯಾಣಿಸಲು ವಿಶೇಷ ಪಾಸ್ ನೀಡಿದ್ದಾರೆ. ತಂದೆಯ ಮರಣ ಪ್ರಮಾಣಪತ್ರ ಸೇರಿದಂತೆ ದಾಖಲೆಗಳ ಪ್ರತಿಯನ್ನು ಸಲ್ಲಿಸಿದ ನಂತರ ಅವರಿಗೆ ವಿಶೇಷ ಅನುಮತಿ ನೀಡಲಾಯಿತು.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ಸರ್ಕಾರಿ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆದ ನಂತರ ಅನಿಂದ್ಯಾ ರಾಯ್ ಹಾಗೂ ಅವರ ಸ್ನೇಹಿತ ಪ್ರಯಾಣವನ್ನು ಆರಂಭಿಸಿದ್ದಾರೆ. ಅವರಿಬ್ಬರು ಕಳೆದ ಶುಕ್ರವಾರ ಚತ್ತೀಸ್‌ಗಢ ತಲುಪಿದ್ದಾರೆ. ಅವರನ್ನು ಆ ಗಡಿಯಲ್ಲಿ ತಡೆದು ನಿಲ್ಲಿಸಲಾಯಿತು. ಆಯುಕ್ತರು ನೀಡಿದ್ದ ವಿಶೇಷ ಪಾಸ್ ತೋರಿಸುವ ಮೂಲಕ ಘಟನೆಯನ್ನು ವಿವರಿಸಿದ್ದಾರೆ.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ನಂತರ ಅಲ್ಲಿದ್ದ ಅಧಿಕಾರಿಗಳು ಅವರಿಗೆ ಹಾದುಹೋಗಲು ಅವಕಾಶ ನೀಡಿದ್ದಾರೆ. ಪ್ರವಾಸದುದ್ದಕ್ಕೂ ಅವರು ಕಾರಿನೊಳಗೆ ಮಲಗಿದ್ದರು. ಲಾಕ್ ಡೌನ್ ಇದ್ದ ಕಾರಣ, ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ಪ್ರಯಾಣವನ್ನು ಆರಂಭಿಸಿದ ನಂತರ ಅವರು ಕಾರಿನಲ್ಲಿದ್ದ ಆಹಾರ ಹಾಗೂ ನೀರನ್ನು ಮಾತ್ರ ಬಳಸಿದ್ದಾರೆ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈತ ಪ್ರಯಾಣಿಸಿದ್ದು ಎಷ್ಟು ದೂರ ಗೊತ್ತಾ?

ತಂದೆಯ ಸಾವಿನ ಸುದ್ದಿ ಕೇಳಿದ ನಂತರ ಅನಿಂದ್ಯಾರವರು ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅವರಿಗೆ ನೆರವಾಗಿದ್ದಾರೆ. ಅನಿಂದ್ಯಾರವರಿಗೆ ಹಲವಾರು ರಾಜ್ಯದ ಅಧಿಕಾರಿಗಳಿಂದ ನೆರವು ದೊರೆತಿರುವುದು ಗಮನಾರ್ಹ.

ಮೂಲ: ನ್ಯೂಸ್ 18

Article Published On: Tuesday, March 31, 2020, 14:54 [IST]
English summary
Maharashtra Government lets man drive 2300 kms to perform dads last rites. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+