ಕಾರು ಕಂಪನಿಯ ಸಿಇಒರನ್ನು ಗೊಂದಲಕ್ಕೀಡು ಮಾಡಿದ ಕೋವಿಡ್ 19 ಟೆಸ್ಟ್'ಗಳು

ಜನಜೀವನವು ಸಹಜ ಸ್ಥಿತಿಗೆ ಮರಳುತ್ತಿದ್ದರೂ ಜನರಲ್ಲಿ ಇನ್ನೂ ಕರೋನಾ ವೈರಸ್ ಭಯ ಕಾಡುತ್ತಿದೆ. ಈ ಮಹಾಮಾರಿ ವೈರಸ್ ಗೆ ಇನ್ನೂ ಲಸಿಕೆ ಲಭ್ಯವಾಗದ ಕಾರಣ ಸರ್ಕಾರಗಳು ಜನರಿಗೆ ಸುರಕ್ಷಿತವಾಗಿರಲು ಸೂಚಿಸುತ್ತಿವೆ.

ಕಾರು ಕಂಪನಿಯ ಸಿಇಒರನ್ನು ಗೊಂದಲಕ್ಕೀಡು ಮಾಡಿದ ಕೋವಿಡ್ 19 ಟೆಸ್ಟ್'ಗಳು

ಖ್ಯಾತ ಕಾರು ಕಂಪನಿಯ ಸಿಇಒರವರನ್ನು ಒಂದೇ ದಿನದಲ್ಲಿ ನಾಲ್ಕು ಬಾರಿ ಕೋವಿಡ್ -19 ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಹೀಗೆ ಒಂದೇ ದಿನದಲ್ಲಿ ನಾಲ್ಕು ಬಾರಿ ಕೋವಿಡ್ 19 ಪರೀಕ್ಷೆಗೆ ಒಳಗಾದವರು ಟೆಸ್ಲಾ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ ಎಲಾನ್ ಮಾಸ್ಕ್.

ಕಾರು ಕಂಪನಿಯ ಸಿಇಒರನ್ನು ಗೊಂದಲಕ್ಕೀಡು ಮಾಡಿದ ಕೋವಿಡ್ 19 ಟೆಸ್ಟ್'ಗಳು

ಟೆಸ್ಲಾ ಅಮೆರಿಕಾದಲ್ಲಿರುವ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದು. ಈ ಕಂಪನಿಯು ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಉತ್ಪಾದಿಸುತ್ತದೆ. ಈ ಕಂಪನಿಯ ಕಾರುಗಳು ಅಮೆರಿಕಾದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಜನಪ್ರಿಯವಾಗಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರು ಕಂಪನಿಯ ಸಿಇಒರನ್ನು ಗೊಂದಲಕ್ಕೀಡು ಮಾಡಿದ ಕೋವಿಡ್ 19 ಟೆಸ್ಟ್'ಗಳು

ಟೆಸ್ಲಾ ಕಂಪನಿಯ ಕಾರುಗಳು ಬಿಎಂಡಬ್ಲ್ಯು ಕಂಪನಿಯ ಕಾರುಗಳಿಗೆ ಪೈಪೋಟಿ ನೀಡುತ್ತವೆ. ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ವಿಶ್ವದೆಲ್ಲೆಡೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ಕಾರು ಕಂಪನಿಯ ಸಿಇಒರನ್ನು ಗೊಂದಲಕ್ಕೀಡು ಮಾಡಿದ ಕೋವಿಡ್ 19 ಟೆಸ್ಟ್'ಗಳು

ಇಂತಹ ಪ್ರತಿಷ್ಠಿತ ಕಂಪನಿಯ ಮುಖ್ಯಸ್ಥರಾಗಿರುವ ಎಲಾನ್ ಮಾಸ್ಕ್ ತಮ್ಮನ್ನು ತಾವು ನಾಲ್ಕು ಬಾರಿ ಪರೀಕ್ಷಿಸಿಕೊಂಡಿದ್ದಾರೆ. ಈ ಪರೀಕ್ಷೆಗಳಲ್ಲಿ ಎರಡು ಬಾರಿ ವೈರಸ್ ಸೋಂಕು ಇದೆ ಎಂದು ತೋರಿಸಿದರೆ, ಎರಡು ಬಾರಿ ಯಾವುದೇ ಸೋಂಕು ಇಲ್ಲ ಎಂದು ತೋರಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರು ಕಂಪನಿಯ ಸಿಇಒರನ್ನು ಗೊಂದಲಕ್ಕೀಡು ಮಾಡಿದ ಕೋವಿಡ್ 19 ಟೆಸ್ಟ್'ಗಳು

ಈ ಪರೀಕ್ಷೆಗಳಿಂದ ಗೊಂದಲಕ್ಕೊಳಗಾದ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ಪರೀಕ್ಷೆಗಳು ನಕಲಿ ಎಂದು ಹೇಳಿದ್ದಾರೆ. ಅವರು ಬೇರೆ ಬೇರೆ ಲ್ಯಾಬ್ ಗಳಲ್ಲಿ ಪರೀಕ್ಷೆಗೊಳಗಾಗಿದ್ದರು ಎಂಬುದು ಗಮನಾರ್ಹ.

ಕಾರು ಕಂಪನಿಯ ಸಿಇಒರನ್ನು ಗೊಂದಲಕ್ಕೀಡು ಮಾಡಿದ ಕೋವಿಡ್ 19 ಟೆಸ್ಟ್'ಗಳು

ಕಳೆದ ಕೆಲವು ದಿನಗಳ ಹಿಂದೆ ಶೀತದಿಂದ ಬಳಲುತ್ತಿದ್ದ ಅವರು ಕರೋನಾ ಪರೀಕ್ಷೆಗೆ ಒಳಗಾಗಿದ್ದರು ಎನ್ನಲಾಗಿದೆ. ಅದರ ಫಲಿತಾಂಶಗಳು ತಮ್ಮನ್ನು ಗೊಂದಲಕ್ಕೀಡು ಮಾಡಿವೆ ಎಂದು ಅವರು ವಿಷಾದಿಸಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರು ಕಂಪನಿಯ ಸಿಇಒರನ್ನು ಗೊಂದಲಕ್ಕೀಡು ಮಾಡಿದ ಕೋವಿಡ್ 19 ಟೆಸ್ಟ್'ಗಳು

ತಮಗೆ ಶೀತ ಮಾತ್ರ ಉಂಟಾಗಿತ್ತು. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಅವರು ಹೇಳಿದ್ದಾರೆ. ಕರೋನಾ ವೈರಸ್ ವಿಶ್ವದ ಅನೇಕ ಭಾಗಗಳಲ್ಲಿ ವೇಗವಾಗಿ ಹರಡುತ್ತಿದೆ.

ಕಾರು ಕಂಪನಿಯ ಸಿಇಒರನ್ನು ಗೊಂದಲಕ್ಕೀಡು ಮಾಡಿದ ಕೋವಿಡ್ 19 ಟೆಸ್ಟ್'ಗಳು

ಆದರೆ ಭಾರತದಲ್ಲಿ ವೈರಸ್ ಹರಡುವಿಕೆ ಪ್ರಮಾಣವು ಮೊದಲಿಗಿಂತ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂಬುದು ಗಮನಾರ್ಹ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Covid 19 Test Creates Confusion For Car Company CEO. Read in Kannada.
Story first published: Saturday, November 14, 2020, 11:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X