ಕ್ರೇನ್ ಬಿದ್ದು ಆಡಿ ಕಾರು ಅಪ್ಪಚ್ಚಿ- ಇನ್ನು ಕಾರು ಚಾಲಕನ ಸ್ಥಿತಿ..?
ಕ್ರೇನ್ ನಿಯಂತ್ರಣ ತಪ್ಪಿದ ಪರಿಣಾಮ ಆಡಿ ಕಾರಿನ ಮೇಲೆ ಅಪ್ಪಳಿಸಿದ್ದು, ಘಟನೆಯಲ್ಲಿ ಕಾರು ಅಪ್ಪಚ್ಚಿಯಾಗಿರುವ ಘಟನೆ ನಡೆದಿದೆ. ಆದ್ರೆ ಅದೃಷ್ಟವಶಾತ್ ಕಾರಿನ ಚಾಲಕನ ಪ್ರಾಣಪಾಯ ಪಾರಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಬೃಹತ್ ಕಟ್ಟಡ ಒಂದರ ನಿರ್ಮಾಣ ಕಾರ್ಯದಲ್ಲಿ ಬಳಕೆ ಮಾಡಲಾಗುತ್ತಿದ್ದ ಕ್ರೇನ್ ನಿಯಂತ್ರಣ ತಪ್ಪಿದ ಪರಿಣಾಮ ಆಡಿ ಕಾರಿನ ಮೇಲೆ ಅಪ್ಪಳಿಸಿದ್ದು, ಘಟನೆಯಲ್ಲಿ ಕಾರು ಅಪ್ಪಚ್ಚಿಯಾಗಿರುವ ಘಟನೆ ನಡೆದಿದೆ. ಆದ್ರೆ ಅದೃಷ್ಟವಶಾತ್ ಕಾರಿನ ಚಾಲಕನ ಪ್ರಾಣಪಾಯ ಪಾರಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ನಮ್ಮಲ್ಲಿ ಒಂದು ಗಾದೆ ಮಾತಿದೆ. ಸಾವಿನ ಕದ ತಟ್ಟಿ ವಾಪಸ್ ಬಂದ ಅನ್ನೋದಕ್ಕೆ ಈ ಘಟನೆ ಸೂಕ್ತ ಉದಾಹರಣೆ ಎನ್ನಬಹುದು. ಯಾಕೆಂದ್ರೆ ಚೀನಾದಲ್ಲಿ ನಡೆದ ಈ ಘಟನೆ ಎಂತವರನ್ನು ಬೆಚ್ಚಿಬಿಳಿಸದೇ ಇರಲಾರದು.

ನಿಯಂತ್ರಣ ತಪ್ಪಿದ ಬೃಹತ್ ಕ್ರೇನ್ ಒಂದು ಐಷಾರಾಮಿ ಆಡಿ ಕಾರಿನ ಮೇಲೆ ಅಪ್ಪಳಿಸಿದ್ದು, ಕಾರು ಚಾಲಕನು ಪವಾಡ ಸದೃಶ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Recommended Video


ಅಂದಹಾಗೆ ಇದು ಚೀನಾದ ಝೂಝೈ ಪ್ರಾಂತ್ಯದಲ್ಲಿ 29 ವರ್ಷದ ವ್ಯಕ್ತಿಯೊಬ್ಬರು ಆಡಿ ಕಾರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಕಟ್ಟಡ ನಿರ್ಮಾಣದ ಕ್ರೇನ್ ಕಾರಿನ ಮೇಲೆ ಬಿದ್ದು ಅಪ್ಪಚ್ಚಿಯಾಗಿದೆ.

ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಈ ಎಲ್ಲಾ ದೃಶ್ಯ ಹತ್ತಿರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯಗಳನ್ನ ನೋಡಿದ್ರೆ ಕಾರ್ ಚಾಲಕನಿಗೆ ಏನಾಗಿರಬಹುದು ಎಂದು ಊಹಿಸಿಕೊಂಡು ಎದೆ ಜಲ್ಲೆನಿಸುತ್ತದೆ.

ಆದ್ರೆ ಎಲ್ಲೇ ಇದ್ದಿದ್ದು ಟ್ವಿಸ್ಟ್. ಅಪ್ಪಚ್ಚಿಯಾಗಿದ್ದ ಕಾರಿನಿಂದ ಚಾಲಕ ಜೀವಂತವಾಗಿ ಮೇಲೆದ್ದು ಬಂದಿದ್ದಾರೆ. ಕಾರಿನ ಛಾವಣಿಯಿಂದ ಅವರು ಮೇಲೆದ್ದು ಬಂದಿದ್ದು, ಸ್ಥಳದಲ್ಲಿದ್ದವರನ್ನು ಆಶ್ಚರ್ಯಗೊಳಿಸಿದ್ದಾರೆ.

ಆದ್ರೂ ಚಾಲಕನ ಪಾದಕ್ಕೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಕ್ರೇನ್ ರಸ್ತೆ ಮೇಲೆ ಬೀಳಲು ಕಾರಣವೇನೆಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ.
ಕ್ರೇನ್ ಕುಸಿದು ಕಾರಿನ ಮೇಲೆ ಬೀಳುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿ.


Click it and Unblock the Notifications








