KL Rahul: ಕನ್ನಡಿಗ ಕೆ.ಎಲ್ ರಾಹುಲ್‌ರಿಂದ ಐಷಾರಾಮಿ ಲ್ಯಾಂಡ್ ರೋವರ್ ಕಾರು ಖರೀದಿ.. ಬೆಲೆ ರೂ.1.5 ಕೋಟಿ!

ಕನ್ನಡಿಗ ಕ್ರಿಕೆಟಿಗ ಕೆ.ಎಲ್ ರಾಹುಲ್‌ (KL Rahul) ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರು, ರೂ.1.5 ಕೋಟಿ ಮೌಲ್ಯದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಎಸ್‌ಯುವಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿಗೆ, ಕೆ.ಎಲ್ ರಾಹುಲ್‌, ಹೊಚ್ಚ ಹೊಸ ಕಪ್ಪು ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ ಕಾಣಿಸಿಕೊಂಡಿದ್ದು, ಆ ವಿಡಿಯೋ ಆನ್‌ಲೈನ್‌ ನಲ್ಲಿ ಹರಿದಾಡುತ್ತಿದ್ದು, ಕಾರ್ಸ್ ಫಾರ್ ಯೂ ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಶೇರ್ ಮಾಡಲಾಗಿದೆ. ಸದ್ಯ, ದೇಶದ ಅನೇಕ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ನೆಚ್ಚಿನ ಕಾರಾಗಿ ಈ ಲ್ಯಾಂಡ್ ರೋವರ್ ಡಿಫೆಂಡರ್ ಹೊರಹೊಮ್ಮುತ್ತಿದೆ.

KL Rahul: ಕನ್ನಡಿಗ ಕೆ.ಎಲ್ ರಾಹುಲ್‌ರಿಂದ ಐಷಾರಾಮಿ ಲ್ಯಾಂಡ್ ರೋವರ್ ಕಾರು ಖರೀದಿ.. ಬೆಲೆ ರೂ.1.5 ಕೋಟಿ!

ದೇಶೀಯ ಮಾರುಕಟ್ಟೆಯಲ್ಲಿ ಕೆಲವರ್ಷಗಳ ಹಿಂದೆ, ಲ್ಯಾಂಡ್ ರೋವರ್ ಕಂಪನಿ ಈಗಿನ ತಲೆಮಾರಿನ 'ಡಿಫೆಂಡರ್' ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಡಿಫೆಂಡರ್ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 3-ಡೋರ್‌ನ ಶಾರ್ಟ್ ವೀಲ್ ಬೇಸ್ (ಎಸ್‌ಡಬ್ಲ್ಯೂಬಿ), 5-ಡೋರ್‌ನ ಲಾಂಗ್ ವೀಲ್ ಬೇಸ್ (ಎಲ್‌ಡಬ್ಲ್ಯೂಬಿ)ನೊಂದಿಗೆ ಲಭ್ಯವಿದೆ. ಎಸ್‌ಡಬ್ಲ್ಯೂಬಿ ಆವೃತ್ತಿಯನ್ನು ಡಿಫೆಂಡರ್ 90, ಎಲ್‌ಡಬ್ಲ್ಯೂ ಆವೃತ್ತಿಯನ್ನು ಡಿಫೆಂಡರ್ 110 ಎಂದು ಕರೆಯಲಾಗುತ್ತದೆ.

3-ರೋ ಆಸನ ಆಯ್ಕೆಯಲ್ಲಿ ದೊರೆಯುವ ಎಸ್‌ಯುವಿಗೆ ಡಿಫೆಂಡರ್ 130 ಎಂಬ ಹೆಸರನ್ನು ಹೊಂದಿದೆ. ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರು, ಲ್ಯಾಂಡ್ ರೋವರ್ ಡಿಫೆಂಡರ್ 110 (ಎಲ್‌ಡಬ್ಲ್ಯೂಬಿ) ಮಾದರಿಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಈ ಕಾರು, ಹೊರಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿರುವುದರಿಂದ ಹೆಚ್ಚು ಪ್ರೀಮಿಯಂ ಲುಕ್ ಪಡೆದಿದ್ದು, ನೋಡುಗರನ್ನು ಆಕರ್ಷಿಸುತ್ತದೆ. ಆಫ್-ರೋಡ್ ಗೂ ಹೆಚ್ಚು ಸೂಕ್ತವಾಗಿದೆ.

KL Rahul: ಕನ್ನಡಿಗ ಕೆ.ಎಲ್ ರಾಹುಲ್‌ರಿಂದ ಐಷಾರಾಮಿ ಲ್ಯಾಂಡ್ ರೋವರ್ ಕಾರು ಖರೀದಿ.. ಬೆಲೆ ರೂ.1.5 ಕೋಟಿ!

ಈ ಲ್ಯಾಂಡ್ ರೋವರ್ ಡಿಫೆಂಡರ್ ಮೂರು ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಅವುಗಳೆಂದರೆ, 2.0-ಲೀಟರ್ & 3.0-ಲೀಟರ್ ಪೆಟ್ರೋಲ್ ಎಂಜಿನ್. ಕ್ರಿಕೆಟಿಗ ಕೆ.ಎಲ್.ರಾಹುಲ್ ಕೊಂಡುಕೊಂಡಿದ್ದರೆ ಎಂದು ಹೇಳಲಾಗಿರುವ ಕಾರು, 3.0-ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 296 bhp ಗರಿಷ್ಠ ಪವರ್ ಹಾಗೂ 650 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

4×4 (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 8- ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. 10 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 12.3 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಹೆಡ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಕನೆಕ್ಟ್ದ್ ಕಾರ್ ಫೀಚರ್ಸ್, ಪ್ರೀಮಿಯಂ ಸ್ಪೀಕರ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

KL Rahul: ಕನ್ನಡಿಗ ಕೆ.ಎಲ್ ರಾಹುಲ್‌ರಿಂದ ಐಷಾರಾಮಿ ಲ್ಯಾಂಡ್ ರೋವರ್ ಕಾರು ಖರೀದಿ.. ಬೆಲೆ ರೂ.1.5 ಕೋಟಿ!

ಲ್ಯಾಂಡ್ ರೋವರ್ ಡಿಫೆಂಡರ್ ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್, ಬ್ಲೈಂಡ್ - ಸ್ಪಾಟ್ ಅಸಿಸ್ಟ್, ಫ್ರಂಟ್ & ರೇರ್ ಪಾರ್ಕಿಂಗ್ ಸೇನಾರ್ಸ್, ರಬ್ಬರ್ ಫ್ಲೋರಿಂಗ್ ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ. ಈ ಕಾರಿಗೆ ಪ್ರಬಲ ಪ್ರತಿಸ್ಪರ್ಧಿ ಎಂದರೆ, ಅದು ಜೀಪ್ ರಾಂಗ್ಲರ್ (Jeep Wrangler).

ಇನ್ನು, ಕೆ.ಎಲ್ ರಾಹುಲ್‌ ಬಿಎಂಡಬ್ಲ್ಯೂ ಎಕ್ಸ್7 (BMW X7) ಹಾಗೂ ಮೆರ್ಸಿಡಿಜ್-ಎಎಂಜಿ ಸಿ43 (Mercedes-AMG C43) ಕಾರಿನ ಮಾಲೀಕರೂ ಆಗಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಕರೀನಾ ಕಪೂರ್, ಮಲಯಾಳಂ ನಟ ಮಮ್ಮುಟ್ಟಿ, ಆಸಿಫ್ ಅಲಿ, ಫಹದ್ ಫಾಸಿಲ್, ತೆಲುಗು ನಟ ರಾಮ್ ಚರಣ್, ಸೋನಂ ಕಪೂರ್, ಸನ್ನಿ ಡಿಯೋಲ್, ಸಂಜಯ್ ದತ್, ಅರ್ಜುನ್ ಕಪೂರ್ ಕೂಡ ಈ ಲ್ಯಾಂಡ್ ರೋವರ್ ಎಸ್‌ಯುವಿಯನ್ನು ಹೊಂದಿದ್ದಾರೆ.

More from DriveSpark

Article Published On: Tuesday, December 12, 2023, 18:52 [IST]
English summary
Cricketer kl rahul buy new land rover defender suv worth rs 1 5 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+