ಆಷ್ಟ್ರೇಲಿಯಾ ವಿರುದ್ಧ ಅಬ್ಬರಿಸಿದ ಕನ್ನಡಿಗ ಕೆ.ಎಲ್ ರಾಹುಲ್ ಸೆಂಚುರಿಗೂ ಸೈ ದುಬಾರಿ ಕಾರುಗಳಿಗೂ ಸೈ

ಭಾರತೀಯ ಕ್ರಿಕೆಟ್ ತಂಡದ ಜನಪ್ರಿಯ ಕ್ರಿಕೆರಟಿಗರಲ್ಲಿ ಕೆಎಲ್ ರಾಹುಲ್ ಒಬ್ಬರು. ಈಗ ನಡೆಯುತ್ತಿರುವ ವಿಶ್ವಕಪ್‌ ಪಂದ್ಯಗಳಿಗೆ ನಿರ್ಣಾಯಕ ಆಟಗಾರ ಎಂದರು ತಪ್ಪಾಗುವುದಿಲ್ಲ. ಅವರು ವಿಕೆಟ್ ಕೀಪಿಂಗ್ ಮತ್ತು ಬ್ಯಾಟ್ಸ್‌ಮನ್‌ಗೆ ಹೆಸರುವಾಸಿಯಾಗಿದ್ದಾರೆ. ಕಳೆದ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಅಜೇಯ 97 ರನ್‌ಗಳನ್ನು ಕಲೆ ಹಾಕುವ ಮೂಲಕ ಪಂದ್ಯದ ಗೆಲುವಿಗೆ ಕಾರಣವಾದರು. ಸದ್ಯ ಉತ್ತಮ ಫಾರ್ಮ್‌ನಲ್ಲಿರುವ ಅವರು ಮುಂದಿನ ಪಂದ್ಯಗಳಲ್ಲೂ ಅದ್ದೂರಿ ಪ್ರದರ್ಶನ ನೀಡುವ ಭರವಸೆಯಿದೆ. ಈ ಪ್ರತಿಭಾನ್ವಿತ ಆಟಗಾರನಿಗೆ ಕಾರುಗಳೆಂದ್ರೆ ಸಖತ್ ಕ್ರೇಜ್ ಇದೆ. KL ರಾಹುಲ್ ಒಡೆತನದ ಕೆಲವು ದುಬಾರಿ ಕಾರುಗಳನ್ನು ಇಲ್ಲಿ ನೋಡೋಣ.

cricketer-kl-rahul-car-collection-rang-rover-bmw-benz

ಆಸ್ಟನ್ ಮಾರ್ಟಿನ್ DB11: ಪೋರ್ಷೆ ಮತ್ತು ಫೆರಾರಿಗಳಿಗೆ ಹೋಲಿಸಿದರೆ ಆಸ್ಟನ್ ಮಾರ್ಟಿನ್ಸ್ ಭಾರತದಲ್ಲಿ ಅಪರೂಪ. KL ರಾಹುಲ್ ಆಸ್ಟನ್ ಮಾರ್ಟಿನ್ DB11 ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಇದು ಭಾರತದಲ್ಲಿ ಕೆಲವರು ಮಾತ್ರ ಹೊಂದಿರುವ ಮಾದರಿಯಾಗಿದೆ. ಆಸ್ಟನ್ ಮಾರ್ಟಿನ್ DB11, 5.2-ಲೀಟರ್ V12 ಎಂಜಿನ್‌ನಿಂದ ಚಾಲಿತವಾಗಿದ್ದು 8-ಸ್ಪೀಡ್ DCT ಗೇರ್‌ಬಾಕ್ಸ್ ಮೂಲಕ 503bhp ಪವರ್ ಮತ್ತು 675Nm ಟಾರ್ಕ್ ಉತ್ಪಾದಿಸಬಲ್ಲದು.

ರೇಂಜ್ ರೋವರ್ ವೆಲಾರ್: ರೇಂಜ್ ರೋವರ್ ವೆಲಾರ್ ಜಾಗತಿಕವಾಗಿ ಜನಪ್ರಿಯ SUV. ಕೆ.ಎಲ್ ರಾಹುಲ್ ಹೊಂದಿರುವ ನಿರ್ದಿಷ್ಟ ಎಸ್‌ಯುವಿಯು 5.0-ಲೀಟರ್ ಸೂಪರ್ಚಾರ್ಜ್ಡ್ V8 ಆವೃತ್ತಿಯಾಗಿದೆ ಎಂದು ತಿಳಿದುಬಂದಿದೆ. ಇದು 8-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, 543bhp ಪವರ್ ಮತ್ತು 680Nm ಟಾರ್ಕ್ ಅನ್ನು ಹೊರಹಾಕುತ್ತದೆ.

cricketer-kl-rahul-car-collection-rang-rover-bmw-benz

ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್: ಲ್ಯಾಂಬೊರ್ಗಿನಿ ಎಂದರೆ ಸಾಕು ಈ ಕಾರುಗಳನ್ನು ಹೊಂದಿರುವವರಿಗೆ ಎಷ್ಟು ಕಾರ್ ಕ್ರೇಜ್ ಇದೆ ಎಂಬುದು ತಿಳಿದುಬಿಡುತ್ತದೆ. KL ರಾಹುಲ್ ಒಡೆತನದ ಅನೇಕ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್ ಕೂಡ ಒಂದು. ಇದು 5.2-ಲೀಟರ್ V10 ಎಂಜಿನ್ ನಿಂದ ಚಾಲಿತವಾಗಿದ್ದು, 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್ ಸಹಾಯದಿಂದ 602bhp ಪವರ್ ಮತ್ತು 560Nm ಟಾರ್ಕ್ ಅನ್ನು ಹೊರಹಾಕುತ್ತದೆ.

Mercedes-Benz C43 AMG: KL ರಾಹುಲ್ ಅವರ ಕಾರು ಸಂಗ್ರಹಣೆಯಲ್ಲಿ ಮುಂದಿನದು ಪ್ರಸಿದ್ಧ Mercedes-Benz C43 AMG, ಇದು ಅವರ ಮೊದಲ ಕಾರು ಎಂದು ಸಹ ಹೇಳಲಾಗುತ್ತದೆ. ಜರ್ಮನ್ ಕಾರ್ಯಕ್ಷಮತೆಯ ಸೆಡಾನ್ ಟ್ವಿನ್-ಟರ್ಬೋಚಾರ್ಜ್ಡ್ 3.0-ಲೀಟರ್ V6 ಎಂಜಿನ್‌ನೊಂದಿಗೆ ಬರುತ್ತದೆ. ಇದು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. 385bhp ಪವರ್ ಮತ್ತು 520Nm ಟಾರ್ಕ್ ಹೊರಹಾಕುತ್ತದೆ.

cricketer-kl-rahul-car-collection-rang-rover-bmw-benz

BMW X5: ಕೆ.ಎಲ್ ರಾಹುಲ್‌ನ ಪಟ್ಟಿಯಲ್ಲಿರುವ ಅಂತಿಮ ಕಾರು BMW X5, ಇದು ಕೂಡ ಜಾಗತಿಕವಾಗಿ ಜನಪ್ರಿಯ SUV ಆಗಿದೆ. ಅಲ್ಲದೇ ಸಿನಿಮಾ ರಂಗದಲ್ಲಿ ಹಲವರು ಈ ಎಸ್‌ಯುವಿಯನ್ನು ಬಳಸುತ್ತಿದ್ದಾರೆ. KL ರಾಹುಲ್ ಒಡೆತನದ BMW X5 4.4-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್‌ನಿಂದ ಚಾಲಿತವಾಗಿದೆ, ಇದರ 8-ಸ್ಪೀಡ್ ಗೇರ್‌ಬಾಕ್ಸ್‌ 300bhp ಪವರ್ ಹೊರಹಾಕುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, October 10, 2023, 16:44 [IST]
English summary
Cricketer kl rahul car collection rang rover bmw benz
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+