ಅಪಘಾತದ ಬಳಿಕ ಎಚ್ಚೆತ್ತ ರಿಷಭ್ ಪಂತ್: ಕಲ್ಲಿನಂತೆ ಗಟ್ಟಿಮುಟ್ಟಾದ ಟಾಟಾ ಮಾಲೀಕತ್ವದ ಹೊಸ ಕಾರು ಖರೀದಿ
2022ರ ಡಿಸೆಂಬರ್ ತಿಂಗಳ ಕೊನೆಯಲ್ಲಿ ಬೀಕರ ರಸ್ತೆ ಅಪಘಾತದ ಅಪಘಾತಕ್ಕೊಳಗಾದ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಗುಣಮುಖರಾಗಿ ಕ್ರಿಕೆಟ್‌ಗೆ ಮತ್ತೆ ಐಪಿಎಲ್ ಮೂಲಕ ಲಗ್ಗೆಯಿಟ್ಟು ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್ ತಂಡಕ್ಕೂ ಸೆಲೆಕ್ಟ್ ಆಗಿದ್ದಾರೆ.
ಐಪಿಎಲ್‌ನಲ್ಲಿನ ರಿಷಭ್ ಪಂತ್ ಅವರ ಅದ್ಭುತ ಪ್ರದರ್ಶನವು ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಅವರಿಗೆ ಸ್ಥಾನ ತಂದುಕೊಟ್ಟಿದೆ. ಸಂಜು ಸ್ಯಾಮ್ಸನ್ ಎರಡನೇ ವಿಕೆಟ್ ಕೀಪರ್ ಆಗುತ್ತಾರಾ ಅಥವಾ ಪಂತ್ ಮೊದಲ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಾರಾ ಎಂದು ಅಭಿಮಾನಿಗಳು ಈಗ ನೋಡುತ್ತಿದ್ದಾರೆ. ಅಪಘಾತದಿಂದಾಗಿ ದೀರ್ಘ ಕಾಲದಿಂದ ಹೊರಗುಳಿಯಬೇಕಾಗಿ ಬಂದರೂ ಬಿಸಿಸಿಐನ ಮುಖ್ಯ ಗುತ್ತಿಗೆಯಲ್ಲಿ ಸೇರ್ಪಡೆಗೊಂಡ ಆಟಗಾರರಲ್ಲಿ ರಿಷಬ್ ಕೂಡ ಒಬ್ಬರು.

ಎ ಗ್ರೇಡ್ ಆಟಗಾರರ ವಾರ್ಷಿಕ ವೇತನ ತಲಾ 5 ಕೋಟಿ ರೂಪಾಯಿ. ಇದಲ್ಲದೇ ಐಪಿಎಲ್‌ನ ಅತ್ಯಮೂಲ್ಯ ಆಟಗಾರರಲ್ಲಿ ಕೂಡ ಒಬ್ಬರು. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಐಪಿಎಲ್ ಸಂಭವಾನೆ 16 ಕೋಟಿ ರೂ. ಆಗಿದೆ. ಹೀಗಾಗಿ ರಿಷಭ್ ಪಂತ್ ಈಗ ಸುಟ್ಟು ಕರಕಲಾದ ಮರ್ಸಿಡಿ ಬೆಂಝ್ ಕಾರನ್ನು ಬದಲಿಸಲು ತನ್ನ ಪ್ರಯಾಣಕ್ಕಾಗಿ ಹೊಸ ಕಾರನ್ನು ಖರೀದಿಸಿದ್ದಾರೆ. ಇದು ಲ್ಯಾಂಡ್ ರೋವರ್‌ನ ಅತ್ಯಂತ ಬೇಡಿಕೆಯಲ್ಲಿರುವ ಡಿಫೆಂಡರ್ 110 ಎಸ್‌ಯುವಿಯಾಗಿದೆ.
ಟಿ20 ವಿಶ್ವಕಪ್ ತಂಡವನ್ನು ಸೇರಲು ಪಂತ್ ಮುಂಬೈ ವಿಮಾನ ನಿಲ್ದಾಣದಲ್ಲಿ ಹೊಚ್ಚಹೊಸ ವಾಹನದಲ್ಲಿ ಬಂದಿಳಿದಾಗ ಗ್ಯಾರೇಜ್‌ನಲ್ಲಿದ್ದ ಹೊಸ ಅತಿಥಿಯ ಬಗ್ಗೆ ಹೊರಜಗತ್ತಿಗೆ ತಿಳಿದದೆ. ರಿಷಬ್ ಪಂತ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಡಿಯೋವನ್ನು ಕಾರ್ಸ್ ಫಾರ್ ಯೂ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿದೆ. ಸಾಕಷ್ಟು ಇತಿಹಾಸವನ್ನು ಹೊಂದಿರುವ ಒರಟಾದ ಎಸ್‍ಯುವಿಯಾದ ಡಿಫೆಂಡರ್ ನಿಜವಾಗಿಯೂ ಸೆಲೆಬ್ರಿಟಿಗಳಲ್ಲಿ ಹೆಚ್ಚು ಬೇಡಿಕೆಯ ಮಾದರಿಯಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯು 90, 110 ಮತ್ತು 130 ನಂತಹ ವಿಭಿನ್ನ ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. 3-ಡೋರಿನ ಆವೃತ್ತಿಯನ್ನು ಡಿಫೆಂಡರ್ 90 ಎಂದು ಕರೆಯಲಾಗುತ್ತದೆ. ಡಿಫೆಂಡರ್ 110 ಮಾದರಿಯು 5-ಡೋರಿನ ಆವೃತ್ತಿಯಾಗಿದೆ. ಡಿಫೆಂಡರ್ 130 ಎಂದು ಕರೆಯಲ್ಪಡುವ 5-ಬಾಗಿಲಿನ ರೂಪಾಂತರಕ್ಕಿಂತ ಸ್ವಲ್ಪ ಉದ್ದವಾದ ಎಸ್‍ಯುವಿಯ ಮೂರು-ಸಾಲು ಆವೃತ್ತಿಯೂ ಭಾರತದಲ್ಲಿ ಲಭ್ಯವಿದೆ.
ರಿಷಭ್ ಅವರ ಲ್ಯಾಂಡ್ ರೋವರ್ ಡಿಫೆಂಡರ್ 110 ಮಾದರಿಯ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.97 ಲಕ್ಷದಿಂದ 2.35 ಕೋಟಿ ರೂ. ಆಗಿದೆ. ಈ ಬೆಲೆಯು ಮಾದರಿಯ ರೂಪಾಂತರವನ್ನು ಅವಲಂಬಿಸಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯು ಕಂಪನಿಯ ಇತ್ತೀಚಿನ ಟೆರೈನ್ ರೆಸ್ಪಾನ್ಸ್ 2 ಫೀಚರ್ ಹೊಂದಿದೆ.
ಈ ಫೀಚರ್ ಗ್ರಾಹಕರಿಗೆ ಜನರಲ್ ಡ್ರೈವಿಂಗ್, ಗ್ರಾಸ್, ಗ್ರಾವೆಲ್, ಗ್ರಾಸ್, ಸ್ನೋ, ಮಡ್ ಅಂಡ್ ರಟ್ಸ್, ಸ್ಯಾಂಡ್, ರಾಕ್ ಕ್ರಾಲ್ ಹಾಗೂ ವೇಡ್ ಎಂಬ ವಿವಿಧ ಡ್ರೈವಿಂಗ್ ಮೋಡ್'ಗಳನ್ನು ನೀಡುತ್ತದೆ. ಡಿಫೆಂಡರ್ ಎಸ್‌ಯುವಿಯು 900 ಎಂಎಂವರೆಗಿನ ನೀರಿನಲ್ಲಿ ಸಾಗುತ್ತದೆ. ಆಫ್-ರೋಡ್ ಮೋಡ್‌ನಲ್ಲಿ ಚಾಲನೆ ಮಾಡುವಾಗ ಏರ್ ಸಸ್ಪೆಂಷನ್'ನಿಂದಾಗಿ ಎಸ್‌ಯುವಿ ಎತ್ತರದಲ್ಲಿರುವ ಕಾರಣಕ್ಕೆ ಸ್ವಲ್ಪ ಪ್ರಮಾಣದ ಬಾಡಿ ರೋಲ್ ಇರುತ್ತದೆ.
ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸುಮಾರು 300 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ.
ಇನ್ನು 3.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 4000 ಆರ್‌ಪಿಎಂನಲ್ಲಿ 298 ಬಿಹೆಚ್‌ಪಿ ಪವರ್ ಹಾಗೂ 1500 - 2500 ಆರ್‌ಪಿಎಂ ನಡುವೆ 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್'ಮಿಷನ್ ಯುನಿಟ್ ಜೋಡಿಸಲಾಗಿದೆ.
ಮೊದಲ ನೋಟದಲ್ಲಿಯೇ ಡಿಫೆಂಡರ್ 110 ಎಸ್‌ಯುವಿಯು ತನ್ನ ಗಾತ್ರದಿಂದ ಗಮನ ಸೆಳೆಯುತ್ತದೆ. ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್ ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅಳವಡಿಸಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಯುನಿಟ್ ನೀಡಲಾಗುತ್ತದೆ. ಬಂಪರ್ ಕೆಳಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲ್ಯಾಂಪ್'ಗಳನ್ನು ನೀಡಲಾಗಿದೆ. ಡಿಫೆಂಡರ್ ಎಸ್‌ಯುವಿಯಲ್ಲಿ ದೊಡ್ಡ ಬಂಪರ್ ನೀಡಲಾಗಿದೆ.ಬಾನೆಟ್‌ನಲ್ಲಿರುವ ರೇಖೆಗಳು ಹಾಗೂ ಕ್ರೀಸ್‌ಗಳು ಈ ಎಸ್‌ಯುವಿಗೆ ಹೆಚ್ಚು ಸ್ಟಾನ್ಸ್ ನೀಡುತ್ತವೆ.


Click it and Unblock the Notifications








