ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಯುವ ಕ್ರಿಕೆಟಿಗ ಶುಭ್ ಮನ್ ಗಿಲ್ ಇತ್ತೀಚೆಗೆ ಥಾರ್ ಎಸ್‌ಯುವಿಯನ್ನು ಪಡೆದಿದ್ದಾರೆ. ಥಾರ್ ಎಸ್‌ಯುವಿಯ ವಿತರಣೆಯನ್ನು ಶುಭ್ ಮನ್ ಗಿಲ್ ಅವರ ಕುಟುಂಬ ಪಡೆದುಕೊಂಡಿದೆ. ಶುಭ್ ಮನ್ ಗಿಲ್ ಆಸ್ಟ್ರೇಲಿಯಾದಲ್ಲಿ ಭಾರತವು ಸರಣಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಆ ಸಂದರ್ಭದಲ್ಲಿ ಆನಂದ್ ಮಹೀಂದ್ರಾರವರು ಸರಣಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರು ಯುವ ಆಟಗಾರರಿಗೆ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಶುಭ್ ಮನ್ ಗಿಲ್, ಥಾರ್ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಆನಂದ್ ಮಹೀಂದ್ರಾರವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಭಾರತಕ್ಕಾಗಿ ಆಡುವುದು ಹೆಮ್ಮೆಯ ವಿಷಯವಾಗಿದೆ. ನಾನು ಮೈದಾನಕ್ಕೆ ಹೋದಾಗಲೆಲ್ಲಾ ನನ್ನ ಅತ್ಯುತ್ತಮ ಆಟವನ್ನು ಆಡಲು ಪ್ರಯತ್ನಿಸುತ್ತೇನೆ ಎಂದು ಶುಭ್ ಮನ್ ಗಿಲ್ ಹೇಳಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ, ನಿಮ್ಮಂತಹ ಕ್ರೀಡಾಪಟು ಫಾರ್ಮ್'ನಲ್ಲಿದ್ದಾಗ ಅತ್ಯುತ್ತಮ ಪ್ರದರ್ಶನ ಹೊರ ಬರುತ್ತದೆ. ಮಜಾ ಮಾಡಿ ಎಂದು ಹೇಳಿದ್ದಾರೆ. ಈ ಮೊದಲು ಥಾರ್ ಎಸ್‌ಯುವಿಯನ್ನು ಟಿ ನಟರಾಜನ್, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್ ಅವರಿಗೆ ವಿತರಿಸಲಾಗಿತ್ತು. ನವದೀಪ್ ಸೈನಿ ಮಾತ್ರ ಇನ್ನೂ ಥಾರ್ ಎಸ್‌ಯುವಿಯನ್ನು ಪಡೆದಿಲ್ಲ.

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಶುಭ್ ಮನ್ ಗಿಲ್ ಅವರು ಥಾರ್ ಎಸ್‌ಯುವಿಯ ಕಪ್ಪು ಬಣ್ಣದ ಎಲ್ಎಕ್ಸ್ ಹಾರ್ಡ್ ಟಾಪ್ ಆವೃತ್ತಿಯನ್ನು ಪಡೆದಿದ್ದಾರೆ. ಅವರ ಕುಟುಂಬದವರು ಈ ಎಸ್‌ಯುವಿ ವಿತರಣೆಯನ್ನು ಪಡೆಯುತ್ತಿರುವುದನ್ನು ಶುಭ್ ಮನ್ ಗಿಲ್ ರವರು ಪೋಸ್ಟ್ ಮಾಡಿರುವ ಚಿತ್ರಗಳಲ್ಲಿ ಕಾಣಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಇನ್ನು ಮಹೀಂದ್ರಾ ಥಾರ್ ಎಸ್‌ಯುವಿಯ ಬಗ್ಗೆ ಹೇಳುವುದಾದರೆ, ಈ ಎಸ್‌ಯುವಿಯು ಈಗಾಗಲೇ 50,000ಕ್ಕೂ ಹೆಚ್ಚು ಯುನಿಟ್‌ ಬುಕ್ಕಿಂಗ್'ಗಳನ್ನು ದಾಖಲಿಸಿದೆ. 2020ರ ಡಿಸೆಂಬರ್‌ ತಿಂಗಳಿನಲ್ಲಿ ಥಾರ್ ಎಸ್‌ಯುವಿಯ 6,500 ಯುನಿಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿತ್ತು.

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

2021ರ ಜನವರಿ ತಿಂಗಳಿನಲ್ಲಿ ಥಾರ್ ಎಸ್‌ಯುವಿಯ 6,000 ಯುನಿಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿತ್ತು. ಥಾರ್ ಎಸ್‌ಯುವಿಯು ಬಿಡುಗಡೆಯಾದಾಗಿನಿಂದ ಹೆಚ್ಚು ಬುಕ್ಕಿಂಗ್'ಗಳನ್ನು ಪಡೆಯುತ್ತಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಈ ಹಿನ್ನೆಲೆಯಲ್ಲಿ ಮಹೀಂದ್ರಾ ಕಂಪನಿಯು ಥಾರ್ ಎಸ್‌ಯುವಿಯ ಉತ್ಪಾದನೆಯನ್ನು ಹೆಚ್ಚಿಸಿದೆ. ಮಹೀಂದ್ರಾ ಥಾರ್ ಎಸ್‌ಯುವಿಯನ್ನು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಪೆಟ್ರೋಲ್ ಎಂಜಿನ್ 150 ಬಿಹೆಚ್‌ಪಿ ಪವರ್ ಹಾಗೂ 320 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 130 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಥಾರ್ ಎಸ್‌ಯುವಿಯು ಮಹೀಂದ್ರಾ ಕಂಪನಿಯು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಇದರಿಂದಾಗಿ ಈ ಎಸ್‌ಯುವಿಯ ವಿತರಣೆಯನ್ನು ಪಡೆಯಲು 10 ತಿಂಗಳು ಕಾಯಬೇಕಾಗುತ್ತದೆ.

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು 2020ರ ಅಕ್ಟೋಬರ್ 2ರಂದು ಬಿಡುಗಡೆಗೊಳಿಸಲಾಯಿತು. ಈ ಎಸ್‌ಯುವಿಯ ವಿತರಣೆಯನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಆರಂಭಿಸಲಾಯಿತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಥಾರ್ ಎಸ್‌ಯುವಿ ವಿತರಣೆ ಪಡೆದುಕೊಂಡ ಶುಭ್ ಮನ್ ಗಿಲ್ ಕುಟುಂಬ

ಥಾರ್‌ ಎಸ್‌ಯುವಿಯ ಕಾಯುವ ಅವಧಿಯನ್ನು ಕಡಿಮೆ ಮಾಡಲು ಕಂಪನಿಯು ಉತ್ಪಾದನೆಯನ್ನು ವೇಗಗೊಳಿಸಿದೆ. ಮಹೀಂದ್ರಾ ಥಾರ್‌ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದರೂ ಥಾರ್‌ನ ಕಾಯುವ ಅವಧಿಯನ್ನು ಕಡಿಮೆ ಮಾಡಲು ಸರಬರಾಜುದಾರರಿಗೆ ಮನವಿ ಮಾಡಿಕೊಳ್ಳಲಾಗಿದೆ.

Most Read Articles

Kannada
English summary
Cricketer Shubman Gill family takes delivery of Thar SUV. Read in Kannada.
Story first published: Thursday, April 22, 2021, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X