ದಾದಾ ಮನೆಗೆ ಎಂಟ್ರಿ ಕೊಟ್ಟ ಹೊಚ್ಚಹೊಸ Mercedes-Benz GLS ಐಷಾರಾಮಿ SUV
ಭಾರತದ ಕ್ರಿಕೆಟ್ ಇತಿಹಾಸಲ್ಲಿ ಒಂದಷ್ಟು ಆಟಗಾರರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಆಟಗಾರರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು, ಅಭಿಮಾನಿಗಳಿಂದ ದಾದಾ ಎಂದು ಕರೆಸಿಕೊಳ್ಳುವ ನೆಚ್ಚಿನ ಮಾಜಿ ಕ್ರಿಕೆಟ್ ಆಟಗಾರ. ಇದೀಗ ಗಂಗೂಲಿ ತಮ್ಮ ಗ್ಯಾರೇಜ್‌ಗೆ ಹೊಸ ಹೊಚ್ಚಹೊಸ Mercedes-Benz GLS SUV ಅನ್ನು ಇಳಿಸಿದ್ದಾರೆ.
ನಿವೃತ್ತಿಯಾದ ಹಲವು ವರ್ಷಗಳ ನಂತರ, ಅವರು ಹೊಚ್ಚಹೊಸ Mercedes-Benz GLS ಐಷಾರಾಮಿ SUV ಅನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಅವರು ಖರೀದಿಸಿದ Mercedes-Benz ಡೀಲರ್‌ಶಿಪ್ ಕಡೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಾರಿನೊಂದಿಗಿನ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳಲ್ಲಿ ಹೊಸ ಕಾರಿನ ವಿತರಣೆ ಪಡೆಯುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಳ್ಳಲಾಗಿದೆ.
ನಿಜಕ್ಕೆ ಕಾರನ್ನು ಡೆಲಿವರಿ ಪಡೆದಿರುವುದು ಗಂಗೂಲಿಯವರ ಪತ್ನಿ ಡೋನಾ ಗಂಗೂಲಿ, ಕಾರಿನ ಕೀಯನ್ನು ಮಾತ್ರ ಕ್ರಿಕೆಟರ್ ಗಂಗೂಲಿಯವರಿಗೆ ನೀಡಲಾಗಿದ್ದು, ಈ ಫೋಟೋಗಳು ಸದ್ಯ ವೈರಲ್ ಆಗಿವೆ. ಕಾರನ್ನು ಕೋಲ್ಕತ್ತಾದಲ್ಲಿರುವ ಅವರ ಮನೆಗೆ ತಲುಪಿಸಲಾಗಿದೆ. ಈ ಕಾರು ಅತ್ಯಂತ ದುಬಾರಿ ಹಾಗೂ ಹಲವು ವಿಶೆಷತೆಗಳನ್ನು ಒಳಗೊಂಡಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಈ Mercedes-Benz GLS 400d ಭಾರತೀಯ ಮಾರುಕಟ್ಟೆಯಲ್ಲಿ ನೀಡಲಾಗುವ ಏಕೈಕ ರೂಪಾಂತರವಾಗಿದೆ. ಏಳು ಆಸನಗಳೊಂದಿಗೆ ಬರುವ ಈ ದೈತ್ಯ ವಾಹನದ ಬೆಲೆ ಬರೋಬ್ಬರಿ 1.29 ಕೋಟಿ ರೂ. (ಎಕ್ಸ್ ಶೋ ರೂಂ) ಆಗಿದೆ. GLS 400d 48V ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದಿಂದ ಪೂರಕವಾದ SUV ಶ್ರೇಣಿಯೊಳಗೆ ಉನ್ನತ-ಶ್ರೇಣಿಯ ಡೀಸೆಲ್ ರೂಪಾಂತರವಾಗಿದೆ.
ಇದು 3.0 ಲೀಟರ್ ಇನ್‌ಲೈನ್ ಸಿಕ್ಸ್ ಡೀಸೆಲ್ ಎಂಜಿನ್ 9 ಸ್ಪೀಡ್ 9G ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿತವಾಗಿದ್ದು, 330 bhp ಪವರ್ ಹಾಗೂ 700 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚುವರಿಯಾಗಿ, Mercedes-Benz GLS ಅನ್ನು ಐಷಾರಾಮಿ ಮೇಬ್ಯಾಕ್ GLS 600 ಆವೃತ್ತಿಯಲ್ಲಿ ಸಹ ನೀಡಲಾಗುತ್ತದೆ.
ಈ ಐಷಾರಾಮಿ ಮೇಬ್ಯಾಕ್ GLS 600 ರೂಪಾಂತರವು 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್ ಹೊಂದಿದ್ದು, 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬರುತ್ತದೆ. 9-ಸ್ಪೀಡ್ 9G-ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದ್ದು, ಈ ಎಂಜಿನ್ ಅಸಾಧಾರಣವಾದ 550 bhp ಗರಿಷ್ಠ ಪವರ್ ಮತ್ತು 730 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸದ್ಯ ಸೌರವ್ ಗಂಗೂಲಿಯವರ ಹೊಸ ಕಾರು ಮಾರುಕಟ್ಟೆಯಲ್ಲಿ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಏಕೆಂದರೆ ಈ Mercedes Benz GLS 400d ಎಸ್‌ಯುವಿ ಭಾರತೀಯ ಮಾರುಕಟ್ಟೆಯಲ್ಲಿ ನೀಡಲಾಗುವ ಏಕೈಕ ರೂಪಾಂತರವಾಗಿದೆ. ಬೆಲೆ ಕೂಡ ಕೋಟಿ ರೂ. ದಾಟುವುದರಿಂದ ಕೆಲವರೇ ಹೆಸರಾಂತ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಈ ದೈತ್ಯ ಎಸ್‌ಯುವಿಯನ್ನು ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








