ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ಆದರೆ ಭಾರತೀಯ ಕ್ರಿಕೆಟಿಗ, ಸೂರ್ಯಕುಮಾರ್ ಯಾದವ್, ಅವರು ಕಸ್ಟಮೈಸ್ ಮಾಡಿದ ಆಫ್-ರೋಡ್ ವಾಹನವನ್ನು ಖರೀದಿಸಿದ್ದಾರೆ. ಸೂರ್ಯಕುಮಾರ್ ಯಾದವ್, ಇತ್ತೀಚೆಗೆ ನಿಸ್ಸಾನ್ ಜೊಂಗಾ ಎಂದು ಜನಪ್ರಿಯವಾಗಿರುವ ಐಕಾನಿಕ್ ನಿಸ್ಸಾನ್ 1 ಟನ್ ಅನ್ನು ಖರೀದಿಸಿದ್ದಾರೆ. ಈ ಮೂಲಕ ಸೂರ್ಯಕುಮಾರ್ ಅವರು ಐಕಾನಿಕ್ ನಿಸ್ಸಾನ್ ಜೊಂಗಾ ಹೊಂದಿರುವ ಆಯ್ದ ಕೆಲವರಲ್ಲಿ ಒಬ್ಬರಾಗಿದ್ದಾರೆ. ಈ ಹೆವಿ-ಡ್ಯೂಟಿ ಆಫ್-ರೋಡ್ ವಾಹನವನ್ನು ಹಿಂದೆ ಭಾರತೀಯ ಸೇನೆಯು ಬಳಸುತ್ತಿತ್ತು.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ಜೊಂಗಾ ಎಂಬುದು ಅದರ ಅಧಿಕೃತ ಹೆಸರಲ್ಲ ಆದರೆ ಜಬಲ್‌ಪುರ್ ಆರ್ಡಿನೆನ್ಸ್ ಮತ್ತು ಗನ್‌ಕ್ಯಾರೇಜ್ ಅಸೆಂಬ್ಲಿಯ ಸಂಕ್ಷಿಪ್ತ ರೂಪವಾಗಿದೆ ಮತ್ತು ಇದನ್ನು ವೆಹಿಕಲ್ ಫ್ಯಾಕ್ಟರಿ ಜಬಲ್‌ಪುರ (ವಿಎಫ್‌ಜೆ) ನಲ್ಲಿ ತಯಾರಿಸಲಾಗಿದೆ,

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ಕ್ರಿಕೆಟಿಗ ಸೂರ್ಯಕುಮಾರ್ ಇತ್ತೀಚೆಗೆ ತಮ್ಮ ಅತೀವವಾಗಿ ಕಸ್ಟಮೈಸ್ ಮಾಡಿದ ಫ್ಲೋರೊಸೆಂಟ್ ಹಸಿರು ನಿಸ್ಸಾನ್ ಜೊಂಗಾದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಹೊಸ 'HULK' ಗೆ ಹಲೋ ಹೇಳಿ ಎಂದು ಫೋಟೋಗಳ ಜೊತೆ ಬರೆದುಕೊಂಡಿದ್ದಾರೆ.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ಟೀಮ್ ಇಂಡಿಯಾದ ಆಟಗಾರ ಮತ್ತು ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌, ತಾವು ಕೇವಲ ಬಿರುಸಿನ ಬ್ಯಾಟಿಂಗ್‌ ಹೆಚ್ಚು ಜನಪ್ರಿಯರಾಗಿದ್ದಾರೆ, ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ತಮ್ಮ 360 ಬ್ಯಾಟಿಂಗ್‌ ಮೂಲಕ ಬಲಗೈ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಹೆಚ್ಚು ಗಮನಸೆಳೆದಿದ್ದಾರೆ.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ನೆಟ್ಸ್‌ನಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಬೌಲಿಂಗ್‌ ಮಾಡುತ್ತಾ ಅಭ್ಯಾಸ ಮಾಡುವುದಾಗಿ ಕಳೆದ ವರ್ಷ ಸಂದರ್ಶನವೊಂದರಲ್ಲಿ ಹೇಳಿದ್ದರು. ಸೂರ್ಯಕುಮಾರ್ತಮ್ಮ ಬೌಲಿಂಗ್‌ ಕಡೆಗೆ ಮತ್ತಷ್ಟು ಗಮನ ನೀಡಿ ಶೈಲಿಯಲ್ಲಿ ಸುಧಾರಣೆ ಮಾಡುತ್ತಿದ್ದಾರೆ. ಸೂರ್ಯಕುಮಾರ್ ಅವರು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ ಆಡಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ್ದರು.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಮಹೇಂದ್ರ ಸಿಂಗ್ ಧೋನಿ ಕೂಡ ನಿಸ್ಸಾನ್ ಜೊಂಗಾದ ಮಾಲೀಕರಾಗಿದ್ದಾರೆ. ಈ ವಾಹನದ ವಿಶೇಷತೆ ಏನೆಂದರೆ, ಆರಂಭದಲ್ಲಿ ಜೊಂಗಾವನ್ನು ಭಾರತೀಯ ಸೇನೆಗಾಗಿ 1965 ರಲ್ಲಿ ನಿಸ್ಸಾನ್ ನೀಡಿದ ವಿಶೇಷ ಪರವಾನಗಿ ಅಡಿಯಲ್ಲಿ ಉತ್ಪಾದಿಸಲಾಯಿತು.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ಈ ವಾಹನವು 1969 ರಿಂದ 1999 ರವರೆಗೆ ಸೇವೆಯಲ್ಲಿತ್ತು ಮತ್ತು ನಂತರ ಅದನ್ನು ಹೆಚ್ಚಾಗಿ ಮಹೀಂದ್ರಾ MM540 ನಿಂದ ಬದಲಾಯಿಸಲಾಯಿತು. VFJ 1996 ರಲ್ಲಿ ಪರಿಚಯಿಸಲಾದ ಜೊಂಗಾದ ನಾಗರಿಕ ರೂಪಾಂತರವನ್ನು ಸಹ ಮಾಡಿತು. 1999 ರಲ್ಲಿ ವಾಹನವು ಹಂತಹಂತವಾಗಿ ಸ್ಥಗಿತಗೊಳ್ಳುವವರೆಗೆ ಕೇವಲ 100 ಯುನಿಟ್ ಗಳನ್ನು ನಾಗರಿಕರಿಗೆ ಮಾರಾಟ ಮಾಡಲಾಯಿತು.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ಜೊಂಗಾ ವಾಹನದಲ್ಲಿ ಲೀಟರ್ ಆರು-ಸಿಲಿಂಡರ್ ಡೀಸೆಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 264 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 3-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು ಸ್ಟ್ಯಾಂಡರ್ಡ್ ಆಗಿ ಫ್ಹೋರ್ ವ್ಹೀಲ್ ಡ್ರೈವ್‌ನೊಂದಿಗೆ ಬಂದಿದೆ.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ಯಾದವ್ ಅವರ ಜೊಂಗಾವನ್ನು ಪರಿಪೂರ್ಣ ಸ್ಥಿತಿಗೆ ರಿಸ್ಟೋರ್ ಮಾದಲಾಗಿದೆ, ಈ ವಾಹನದಲ್ಲಿ ಹೆವಿ ಡ್ಯೂಟಿ ಬಂಪರ್, ಪವರ್ ಫುಲ್ ವಿಂಚ್, ಎಲ್ಇಡಿ ಲ್ಯಾಂಪ್‌ಗಳು ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕ್ರಿಕೆಟಿಗ, ಸೂರ್ಯಕುಮಾರ್ ಯಾದವ್ ಅವರ ಬಳಿ ರೇಂಜ್ ರೋವರ್ ವೆಲಾರ್, ಮಿನಿ ಕೂಪರ್ ಎಸ್ ಮತ್ತು ಆಡಿ RS5 ನಂತಹ ಐಷಾರಾಮಿ ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಇದರೊಂದಿಗೆ ಅವರು ಸ್ಕೋಡಾ ಸೂಪರ್ಬ್ ಸೆಡಾನ್ ಅನ್ನು ಸಹ ಹೊಂದಿದ್ದಾರೆ. ದುಬಾರಿ ಬೆಲೆಯ ನಿಸ್ಸಾನ್ ಜೊಂಗಾ ವಾಹನ ಇದೀಗ ಸೂರ್ಯಕುಮಾರ್ ಕಾರು ಸಂಗ್ರಹಾಲಯ ಸೇರಿದೆ.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್ ಅವರ ಜೊಂಗ್‌ನಂತೆ, ಧೋನಿಯ ಆವೃತ್ತಿಯ ವಾಹನವನ್ನು ಒಳಗೆ ಮತ್ತು ಹೊರಗೆ ಹೆಚ್ಚು ಕಸ್ಟಮೈಸ್ ಮಾಡಲಾಗಿದೆ. ಭಾರತದ ಮಾಜಿ ಕ್ರಿಕೆಟ್ ನಾಯಕ ಕೂಡ ಕಡು ಹಸಿರು ಬಣ್ಣದ ವಾಹನವನ್ನು ಹೊಂದಿದ್ದಾರೆ. ಜೊಂಗಾವನ್ನು ಪ್ರಯಾಣಕ್ಕೆ, ಆಂಬ್ಯುಲೆನ್ಸ್, ಗನ್ ಕ್ಯಾರಿಯರ್ ಆಗಿ ರಿಕೊಯಿಲ್‌ಲೆಸ್ ರೈಫಲ್‌ಗಳು ಮತ್ತು ಗಸ್ತು ವಾಹನಗಳಿಗೆ ಬಳಸಲಾಗುತ್ತಿತ್ತು.

ಎಂಎಸ್ ಧೋನಿ ಬಳಿಕ ಪವರ್‌ಫುಲ್ ನಿಸ್ಸಾನ್ ಜೊಂಗಾ ವಾಹನ ಖರೀದಿಸಿದ ಮತ್ತೊಬ್ಬ ಕ್ರಿಕೆಟಿಗ

ನಿಸ್ಸಾನ್ ಜೊಂಗಾ ಪ್ರಬಲ ಆಫ್-ರೋಡ್ ವಾಹನವಾಗಿದೆ. ಕಠಿಣವಾದ ಭೂಪ್ರದ್ರೇಶಗಳಲ್ಲಿಯು ಸುಲಭವಾಗಿ ಸಾಗುವಂತಹ ಪ್ರಬಲ ಆಫ್-ರೋಡ್ ಮಾದರಿಯಾಗಿದೆ. ಇದರಿಂದಾಗಿ ಈ ವಾಹನವನ್ನು ಭಾರತೀಯ ಸೇನೆ ಬಳಸುತ್ತಿತ್ತು. ಇನ್ನು ಈ ನಿಸ್ಸಾನ್ ಜೊಂಗಾ ರಗಡ್ ಮತ್ತು ಅಗ್ರೇಸಿವ್ ಲುಕ್ ಅನ್ನು ಹೊಂದಿರುವ ವಾಹನ ಇದಾಗಿದೆ.

Article Published On: Tuesday, February 1, 2022, 15:18 [IST]
English summary
Cricketer suryakumar yadav buys heavily customized iconic nissan jonga details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+