ಅವನು ಯಾವ ಧೋನಿ, ಕೊಹ್ಲಿಯೂ ಅಲ್ಲ; ಆದರೂ ದೌಡಾಯಿಸಿತು ಅಭಿಮಾನಿಗಳ ದಂಡು!

By Nagaraja

ಅವನು ಯಾವ ಧೋನಿ, ಕೊಹ್ಲಿಯೂ ಅಲ್ಲ. ದೇಶದ ಹೆಸರಾಂತ ಅಥವಾ ಜನಪ್ರಿಯ ಕ್ರಿಕೆಟಿಗ ಕೂಡಾ ಅಲ್ಲ. ಅಷ್ಟೇ ಯಾಕೆ ಅವನ ಹೆಸರಲ್ಲಿ ಅಂತಹ ದೊಡ್ಡ ಹೇಳುವಂತಹ ದಾಖಲೆಗಳೇನು ಇಲ್ಲ. ಆದರೂ ಕ್ರಿಕೆಟ್ ಪ್ರಿಯ ದೇಶದಲ್ಲಿ ಅವನ ಹಿಂದೆ ದೌಡಾಯಿಸಿತು ನೂರಾರು ಅಭಿಮಾನಿಗಳ ದಂಡು!

ಇವನ್ನೂ ಓದಿ: ಡಕಾರ್ ರಾಲಿಯಲ್ಲಿ ಇತಿಹಾಸ ಬರೆದ ಸಂತೋಷ್

ಇದು ಇಂದು ಮುಂಜಾನೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬಂದಿರುವ ನೇರ ದೃಶ್ಯಾವಳಿಗಳು. ಒಬ್ಬ ಮೋಟಾರುಸ್ಪೋರ್ಟ್ಸ್ ಕ್ರೀಡಾಳುವೊಬ್ಬನಿಗೆ ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಅಭಿಮಾನಿಗಳ ಬೆಂಬಲ ದೊರಕಿರುವುದು ಬಹುಶ: ಇದೇ ಮೊದಲಾಗಿರಬಹುದು.

ಇವನ್ನೂ ಓದಿ: ಸಿಎಸ್ ಸಂತೋಷ್ ಬಗ್ಗೆ ಒಂದಿಷ್ಟು

ಹೌದು, ಇದು ವಿಶ್ವದ ಅತ್ಯಂತ ಅಪಾಯಕಾರಿ 2015 ಡಕಾರ್ ರಾಲಿಯಲ್ಲಿ ಭಾಗವಹಿಸಿದಷ್ಟೇ ಅಲ್ಲದೆ ಯಶಸ್ವಿಯಾಗಿ ಫಿನಿಶಿಂಗ್ ಗೆರೆ ದಾಟಿರುವ ಚೊಚ್ಚಲ ಭಾರತೀಯ ರೇಸರ್ ಎಂಬ ಹಗ್ಗಳಿಕೆಗೆ ಪಾತ್ರವಾಗಿರುವ ಸಿಎಸ್ ಸಂತೋಷ್‌ಗೆ ಹುಟ್ಟೂರಾದ ಬೆಂಗಳೂರಿನಲ್ಲಿ ದೊರಕಿರುವ ಅಭೂತಪೂರ್ವ ಸ್ವಾಗತ!

ಡಕಾರ್ ಸ್ಟಾರ್ ಸಿಎಸ್ ಸಂತೋಷ್‌ಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ

ವಿಮಾನದಿಂದ ಇಳಿದು ಫ್ಲ್ಯಾಟ್‌ಫಾರ್ಮ್‌ನತ್ತ ಆಗಮಿಸಿದ ಸಂತೋಷ್ ಸುತ್ತುವರಿದ ಅಭಿಮಾನಿ ಹಾಗೂ ಆಪ್ತ ವರ್ಗದವರು ಸಂತೋಷ್ ಸಾಧನೆಗೆ ಜೈಕಾರ ಕೂಗಿದರು. ಈ ಸಂದರ್ಭದಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಈ ಬೆಂಗ್ಳೂರ್ ಬೈಕರ್ ಮರೆಯಲಿಲ್ಲ.

ಡಕಾರ್ ಸ್ಟಾರ್ ಸಿಎಸ್ ಸಂತೋಷ್‌ಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ

ದಕ್ಷಿಣ ಅಮೆರಿಕ ರಾಷ್ಟ್ರಗಳಾದ ಅರ್ಜೇಂಟೀನಾ, ಚಿಲಿ ಹಾಗೂ ಬೊಲಿವಿಯಾದಲ್ಲಿ ಜನವರಿ 05ರಿಂದ 17ರ ವರೆಗೆ ಆಯೋಜನೆಯಾಗಿದ್ದ ಅತ್ಯಂತ ಕಠಿಣ 2015 ಡಕಾರ್ ರಾಲಿಯಲ್ಲಿ ಕೆಟಿಎಂ 450 ರಾಲಿ ಬೈಕ್‌ನಲ್ಲಿ ಭಾಗವಹಿಸಿದ್ದ ಸಂತೋಷ್, 13 ಹಂತಗಳ ವರೆಗೆ ಮುಂದುವರಿದ ಈ ಅಪಾಯಕಾರಿ ರೇಸ್‌ನಲ್ಲಿ 36ನೇಯವರಾಗಿ ಗುರಿ ಮುಟ್ಟಿದ್ದರಲ್ಲದೆ 9,295 ಕೀ.ಮೀ. ದೂರವನ್ನು ಯಶಸ್ವಿಯಾಗಿ ಕ್ರಮಿಸಿದ್ದರು.

ಡಕಾರ್ ಸ್ಟಾರ್ ಸಿಎಸ್ ಸಂತೋಷ್‌ಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ

ಈಗಾಗಲೇ ದೇಶ ಹಾಗೂ ವಿದೇಶಗಳಲ್ಲಿ ಹಲವಾರು ಕ್ರಾಸ್ ಕಂಟ್ರಿ ಹಾಗೂ ಸೂಪರ್ ಕ್ರಾಸ್ ರಾಲಿಯಲ್ಲಿ ವಿಜೇತ ಪತಾಕೆ ಹಾರಿಸಿರುವ ಸಂತೋಷ್ ಅವರ ಪಾಲಿಗೆ ಡಕಾರ್ ರಾಲಿ ಅವಿಸ್ಮರಣೀಯ ಅನುಭವವಾಗಿತ್ತು. ಈ ಮೂಲಕ ಭಾರತವೆಂದರೆ ಕ್ರಿಕೆಟ್ ಮಾತ್ರ ಎಲ್ಲವೂ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದರು.

ಡಕಾರ್ ಸ್ಟಾರ್ ಸಿಎಸ್ ಸಂತೋಷ್‌ಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ದೇಶದ ರೇಸರ್‌ಗಳು ಡಕಾರ್ ರಾಲಿಯಲ್ಲಿ ಭಾಗವಹಿಸುವಂತಾಗಲಿ ಎಂಬುದೇ ಸಂತೋಷ್ ಕಡೆಯ ಬಯಕೆಯಾಗಿದೆ. ಅಲ್ಲದೆ ಮುಂದಿನ ವರ್ಷದಲ್ಲೂ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿದ್ದಾರೆ.

ಚಿತ್ರದಲ್ಲಿ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎಸ್ ಸಂತೋಷ್ ಬರಮಾಡಿಕೊಳ್ಳುತ್ತಿರುವ ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕ ಜೊಬೊ ಕುರುವಿಲಾ (ಬಲ ಬದಿಯಲ್ಲಿ) ಹಾಗೂ ಉಪ ಸಂಪಾದಕ ರಾಜ್ ಕಮಲ್ (ಎಡಬದಿಯಲ್ಲಿ).

ಡಕಾರ್ ಸ್ಟಾರ್ ಸಿಎಸ್ ಸಂತೋಷ್‌ಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ

ಈಗ ಬೆಂಗಳೂರಿಗರೂ ಆಗಿರುವ ಕನ್ನಡಿಗ ಸಂತೋಷ್ ಮಾಡಿರುವ ಸಾಧನೆಗೆ ನೀವು ನಿಮ್ಮ ಅಮೂಲ್ಯ ಕಾಮೆಂಟ್ಸ್ ಮೂಲಕ ಶುಭ ಹಾರೈಸಲು ಮರೆಯದಿರಿ!


More from DriveSpark

Article Published On: Wednesday, January 21, 2015, 12:00 [IST]
English summary
CS Santosh Arrives To India After The Historical Ride In 2015 Dakar Rally.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+