IPL 2023: ರುತುರಾಜ್ ಗಾಯಕ್‌ವಾಡ್ ಬಾರಿಸಿದ ಸಿಕ್ಸ್​ಗೆ ಟಾಟಾ ಟಿಯಾಗೊ ಇವಿ ಡ್ಯಾಮೇಜ್.. ಫುಲ್ ವೈರಲ್

ಐಪಿಎಲ್ ಹಂಗಾಮ ಶುರುವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಫುಲ್ ಜೋಶ್‌ನಲ್ಲಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಡೆದ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪಂದ್ಯಕ್ಕಿಂತ ಹೆಚ್ಚಾಗಿ ಟಾಟಾದ ಬಹುನೀರಿಕ್ಷಿತ ಟಿಯಾಗೊ ಇವಿಯೇ ಸುದ್ದಿಯಾಗಿದೆ. ಇದೀಗ, ಆ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಅಷ್ಟಕ್ಕೂ ಮ್ಯಾಚ್‌ನಲ್ಲಿ ನಡೆದಿದ್ದು, ಏನು ಅಂದುಕೊಂಡರೆ, ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ರುತುರಾಜ್ ಗಾಯಕ್‌ವಾಡ್, ಲಕ್ನೋ ಸೂಪರ್ ಜೈಂಟ್ಸ್ ನ ಕೆ.ಗೌತಮ್ ಓವರ್ ನಲ್ಲಿ ಸಿಕ್ಸ್ ಬಾರಿಸುತ್ತಾರೆ. ಆ ಬಾಲ್ ಸ್ಟೇಡಿಯಂನಲ್ಲಿ ನಿಲ್ಲಿಸಿದ್ದ ಟಾಟಾ ಟಿಯಾಗೊ ಇವಿಗೆ ತಗುಲಿ, ಅದು ಕೊಂಚ ಡ್ಯಾಮೇಜ್ ಆಗುತ್ತದೆ. ಸದ್ಯ, ಅದರ ಚಿತ್ರವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಕೆಲವರೂ ಅದರಲ್ಲೇನಿದೆ ವಿಶೇಷತೆ ಅಂದುಕೊಳ್ಳಬಹುದು. ಆ ಬಗ್ಗೆ ಇಲ್ಲಿ ತಿಳಿಸುತ್ತೇವೆ.

IPL 2023: ರುತುರಾಜ್ ಗಾಯಕ್‌ವಾಡ್ ಬಾರಿಸಿದ ಸಿಕ್ಸ್​ಗೆ ಟಾಟಾ ಟಿಯಾಗೊ ಇವಿ ಡ್ಯಾಮೇಜ್.. ಫುಲ್ ವೈರಲ್

ಐಪಿಎಲ್ ಲೀಗ್ ಪಂದ್ಯಗಳಿಗೆ ಟಾಟಾದ 'ಟಿಯಾಗೊ ಇವಿ' ಅಧಿಕೃತ ಪಾಲುದಾರವಾಗಿದ್ದು, ದೇಶಾದ್ಯಂತ ಮ್ಯಾಚ್‌ ನಡೆಯುವ ಎಲ್ಲ 12 ಕ್ರೀಡಾಂಗಣಗಳಲ್ಲಿಯು ಈ ಕಾರನ್ನು ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಪಂದ್ಯದಲ್ಲಿ ಟಿಯಾಗೊ ಇವಿಗೆ ಬಾಲ್ ಬಂದು ಬಡಿದರೆ, ಟಾಟಾ ಮೋಟಾರ್ಸ್, ಜೀವ ವೈವಿಧ್ಯಮಯತೆ ಹೆಚ್ಚಿಸಲು ಕರ್ನಾಟಕದ ಕಾಫಿ ತೋಟಗಳಲ್ಲಿ ಗಿಡಗಳನ್ನು ನೆಡಲು ರೂ.5,00,000 ನೆರವನ್ನು ನೀಡಲಾಗುತ್ತದೆ ಎಂದು ಘೋಷಿಸಿತ್ತು.

ಅಂತೋ ಇಂತೋ ಮೊದಲ ಬಾರಿಗೆ ಚೆನ್ನೈ ಆಟಗಾರ ರುತುರಾಜ್ ಗಾಯಕ್‌ವಾಡ್ ಬಾರಿಸಿದ ಸಿಕ್ಸ್, ಟಿಯಾಗೊ ಇವಿಗೆ ತಗುಲಿದೆ. ಜೊತೆಗೆ ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯವು ದೊಡ್ಡ ವಿಶೇಷತೆ ಸಾಕ್ಷಿಯಾಗಿತ್ತು. ಅದೇನೆಂದರೆ ಟ್ರೋಫಿಯನ್ನು ತಂದದ್ದು ಇದೇ ಹೊಚ್ಚ ಹೊಸ ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನಲ್ಲಿ. ಇದಿಷ್ಟೇ ಅಲ್ಲದೆ, ಸ್ಟೇಡಿಯಂಗೆ ಬರುವ ಪ್ರತಿಯೊಬ್ಬ ಕ್ರೀಡಾ ಪ್ರೇಮಿಗಳಿಗೂ ಎಲೆಕ್ಟ್ರಿಕ್ ವಾಹನಗಳ ಜಾಗೃತಿ ಮೂಡಿಸಲು ಟಾಟಾ ಅಭಿಯಾನವನ್ನು ನಡೆಸುತ್ತಿದೆ.

IPL 2023: ರುತುರಾಜ್ ಗಾಯಕ್‌ವಾಡ್ ಬಾರಿಸಿದ ಸಿಕ್ಸ್​ಗೆ ಟಾಟಾ ಟಿಯಾಗೊ ಇವಿ ಡ್ಯಾಮೇಜ್.. ಫುಲ್ ವೈರಲ್

ಪ್ರತಿ ಪಂದ್ಯದಲ್ಲೂ ಆಟಗಾರರನ್ನು ಉತ್ತೇಜಲು 'ಟಿಯಾಗೊ ಇವಿ ಎಲೆಕ್ಟ್ರಿಕ್ ಸ್ಟ್ರೈಕರ್ ಅವಾರ್ಡ್'ನ್ನು ಟಾಟಾ ಕೊಡುತ್ತಿದೆ. ಅತಿಹೆಚ್ಚು ಸ್ಟ್ರೈಕ್ ಹೊಂದಿದ ಆಟಗಾರನಿಗೆ ಟ್ರೋಫಿ ಜೊತೆಗೆ ರೂ.1,00,000 ನಗದು ಬಹುಮಾನ ಸಿಗುತ್ತಿದೆ. ಲೀಗ್ ನಲ್ಲಿ ಗರಿಷ್ಠ ಸ್ಟ್ರೈಕ್ ರೇಟ್ ಹೊಂದಿದ ಆಟಗಾರನಿಗೆ 'ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ ' ಪ್ರಶಸ್ತಿಯೊಂದಿಗೆ ನೂತನ ಟಿಯಾಗೊ ಇವಿ ದೊರೆಯುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಟಿಯಾಗೊ ಇವಿ ರೂ.ರೂ.8.69 ಲಕ್ಷದಿಂದ ರೂ.11.99 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ. ಬೆಲೆಗೆ ತಕ್ಕಂತೆ ಅತ್ಯುತ್ತಮ ರೇಂಜ್ ನೀಡಲಿದೆ. ದೊಡ್ಡದಾದ 24kWh ಬ್ಯಾಟರಿ ಪ್ಯಾಕ್ ಪಡೆದಿರುವ ಟಿಯಾಗೊ ಇವಿ ಸಂಪೂರ್ಣ ಚಾರ್ಜಿನಲ್ಲಿ 315 km ರೇಂಜ್ ನೀಡಿದರೆ, ಚಿಕ್ಕದಾದ 19.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 250 km ರೇಂಜ್ ಕೊಡಲಿದೆ.

ಟಾಟಾ ಟಿಯಾಗೊ ಇವಿ ಕಾರ್ಯಕ್ಷಮತೆ ಬಗ್ಗೆ ಹೇಳಿವುದಾದರೆ, ಇದರ 19.2kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 61 PS ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 24kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 75 PS ಗರಿಷ್ಠ ಪವರ್ ಮತ್ತು 114 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ವಿವಿಧ ಚಾರ್ಜಿಂಗ್ ಆಯ್ಕೆಯನ್ನು ಪಡೆದಿದೆ.

ಪ್ರಸ್ತುತ, ಟಾಟಾ ಟಿಯಾಗೊ ಇವಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಮೂಲಕ ಬಾರಿ ಜನಪ್ರಿಯಗಳಿಸಿದೆ. ಅದು ಎಷ್ಟರ ಮಟ್ಟಿಗಿದೆ ಅಂದರೆ, ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ 20,000ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿತ್ತು. ಈಗಾಗಲೂ ಹೆಚ್ಚಿನ ಮಂದಿ ಆಸಕ್ತಿ ತೋರಿಸುತ್ತಿದ್ದಾರೆ. ಜೊತೆಗೆ ಐಪಿಎಲ್ ಪಂದ್ಯದಲ್ಲೂ ಈ ಕಾರನ್ನು ಪ್ರದರ್ಶಿಸುತ್ತಿರವುದರಿಂದ ಇದರ ಬೇಡಿಕೆ ಮತ್ತಷ್ಟು ಅಧಿಕಗೊಳ್ಳಬಹುದು.

Article Published On: Saturday, April 8, 2023, 10:31 [IST]
English summary
Csk ruturaj gaikwad hits six tata tiago ev ipl details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+