ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಹರಿಯಾಣದ ಗುರುಗ್ರಾಮದಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳ ಸಂಖ್ಯೆ 2019ಕ್ಕೆ ಹೋಲಿಸಿದರೆ ಈ ವರ್ಷ 55%ನಷ್ಟು ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಕರೋನಾ ವೈರಸ್ ಹಾವಳಿ.

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಈ ವರ್ಷದ ಡಿಸೆಂಬರ್ 14ರ ವೇಳೆಗೆ ಗುರುಗ್ರಾಮ ಸಂಚಾರ ಪೊಲೀಸರು 2,16,199 ಚಲನ್‌ಗಳನ್ನು ನೀಡಿದ್ದಾರೆ. ಇವುಗಳಲ್ಲಿ ಕುಡಿದು ವಾಹನ ಚಾಲನೆ ಮಾಡುವುದು, ಸಿಗ್ನಲ್‌ ಜಂಪ್, ರಾಂಗ್ ಸೈಡ್'ನಲ್ಲಿ ವಾಹನ ಚಾಲನೆ ಮಾಡುವುದು, ನೋ ಪಾರ್ಕಿಂಗ್ ಜಾಗಗಳಲ್ಲಿ ವಾಹನ ನಿಲ್ಲಿಸುವ ಪ್ರಕರಣಗಳು ಸೇರಿವೆ.

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಇದರ ಜೊತೆಗೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡಿರುವುದು, ನೋ ಎಂಟ್ರಿ ಸ್ಥಳಗಳಲ್ಲಿ ವಾಹನ ಚಾಲನೆ ಮಾಡಿರುವುದು ಸಹ ಸೇರಿವೆ. 2019ರಲ್ಲಿ ಗುರುಗ್ರಾಮ ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದ್ದ 4,067 ವಾಹನ ಸವಾರರಿಗೆ ದಂಡ ವಿಧಿಸಿದ್ದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಆದರೆ ಈ ವರ್ಷ ಈ ಪ್ರಮಾಣ ಕೇವಲ 447 ಆಗಿದೆ. ಕರೋನಾ ವೈರಸ್ ಹರಡಬಹುದು ಎಂಬ ಭೀತಿಯಿಂದಾಗಿ ಕುಡಿದು ವಾಹನ ಚಾಲನೆ ಮಾಡುವವರನ್ನು ತಡೆದು ಪರೀಕ್ಷಿಸುತ್ತಿಲ್ಲ ಎಂಬುದೇ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಕಾರಣ.

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಕರೋನಾ ವೈರಸ್ ಸೋಂಕು ಹಾಗೂ ಲಾಕ್'ಡೌನ್ ಕಾರಣದಿಂದಾಗಿ ಸಂಚಾರ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದು ಗುರುಗ್ರಾಮ ಪೊಲೀಸರ ಅಭಿಪ್ರಾಯ. ಕರೋನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ದೇಶಾದ್ಯಂತ ಲಾಕ್'ಡೌನ್ ಜಾರಿಗೊಳಿಸಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಇದರಿಂದಾಗಿ ವಾಹನಗಳ ಸಂಚಾರವು ಸಂಪೂರ್ಣವಾಗಿ ಕಡಿಮೆಯಾಗಿತ್ತು. ಗುರುಗ್ರಾಮದಲ್ಲಿ ಕರೋನಾ ವೈರಸ್‌ಗೆ ತುತ್ತಾದವರ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಕುಡಿದು ವಾಹನ ಚಾಲನೆ ಮಾಡುವವರನ್ನು ಪರೀಕ್ಷಿಸುವ ಕೆಲಸವನ್ನು ನಿಲ್ಲಿಸಿದ್ದೇವೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಕರೋನಾ ವೈರಸ್ ಸೋಂಕಿನ ಹರಡುವಿಕೆಗೆ ಕಾರಣವಾಗುವುದರಿಂದ ಟ್ರಾಫಿಕ್ ಪೊಲೀಸರು ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಯಂತ್ರಗಳ ಬಳಕೆಯನ್ನು ನಿಲ್ಲಿಸಿದ್ದಾರೆ. ಈಗ ಹೊಸ ವರ್ಷವು ಬರುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಸಾಮಾನ್ಯವಾಗಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಬಹುತೇಕ ಜನರು ಕುಡಿದು ವಾಹನ ಚಾಲನೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದಾಗಿ ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತವೆ.

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಕರೋನಾ ವೈರಸ್ ಮಹಾಮಾರಿಯ ಅಟ್ಟಹಾಸದ ನಡುವೆಯೂ ಹೊಸ ವರ್ಷದ ಸಂದರ್ಭದಲ್ಲಿ ಕುಡಿದು ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆಯನ್ನು ನಡೆಸುತ್ತಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಆದರೆ ತಪಾಸಣೆ ವೇಳೆಯಲ್ಲಿ ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಯಂತ್ರಗಳನ್ನು ಬಳಸುವ ಸಾಧ್ಯತೆಗಳಿಲ್ಲ. ಈ ಬಗ್ಗೆ ಗುರುಗ್ರಾಮ ಪೊಲೀಸರು ಸ್ಪಷ್ಟನೆ ನೀಡಿದ್ದು, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ತಪಾಸಣೆಗೆ ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಯಂತ್ರಗಳನ್ನು ಬಳಸುವುದಿಲ್ಲವೆಂದು ಹೇಳಿದ್ದಾರೆ.

ಆಲ್ಕೋಹಾಲ್ ಬ್ರೀತ್ ಅನಾಲೈಜರ್ ಬಳಕೆಗೆ ಬ್ರೇಕ್ ಹಾಕಿದ ಕರೋನಾ ವೈರಸ್

ಈ ಯಂತ್ರಗಳ ಬಳಕೆಯ ಭಾರತದ ಉಳಿದ ಭಾಗಗಳ ಪೊಲೀಸರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Decline in Gurugram traffic fines, know the reasons. Read in Kannada.
Story first published: Friday, December 18, 2020, 11:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X