ಟ್ರೆಂಡ್ ಫಾಲೋ ಆಗ್ತಿದ್ದಾರೆ ಪೊಲೀಸರು! ಜಾಗೃತಿ ಮೂಡಿಸಲು ರೀಲ್ಸ್ ಮಾಡ್ತಿದ್ದಾರೆ!
ಇತ್ತೀಚಿನ ದಿನಗಳಲ್ಲಿ ಯಾವುದೇ ಒಂದು ಘಟನೆ ನಡೆದರೆ ಮೀಡಿಯಾಗಳಿಗಿಂತ ಮುಂಚಿತವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗಿರುತ್ತದೆ. ಮೆಮೆಗಳು, ರೀಲ್ಸ್, ಸೋಷಿಯಲ್ ಪೋಸ್ಟ್ ಮುಖಾಂತರ ಸಾರ್ವಜನಿಕರ ಮೊಬೈಲ್‌ಗಳನ್ನು ತಲುಪುತ್ತಿವೆ. ಈ ಮೂಲಕ ಸೋಷಿಯಲ್ ಮೀಡಿಯಾ ಸಾರ್ವಜನಿಕರ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಯಬಹುದು.
ಇದನ್ನು ಅರಿತಿರುವ ಪೊಲೀಸರು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗುವ ಕಂಟೆಂಟ್ ಅನ್ನು ಬಳಸಿಕೊಂಡೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹೇಳಬೇಕಾಗಿರುವುದು ದೆಹಲಿ ಪೊಲೀಸರ ಕುರಿತು, ಏಕೆಂದರೆ ಉತ್ತರ ಭಾರತದಲ್ಲಿ ಅದರಲ್ಲೂ ದೆಹಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದರಲ್ಲಿ ಮುಂದಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಹಾಗಾಗಿಯೇ ದೆಹಲಿ ಪೊಲೀಸರ ಸಾಮಾಜಿಕ ಮಾಧ್ಯಮ ಪುಟಗಳು ಜನರಿಗೆ ಅರಿವು ಮೂಡಿಸುವುದು, ಜಾಗೃತಿ ನೀಡುವುದು ಮಾತ್ರವಲ್ಲದೆ ಆಗಾಗ್ಗೆ ನಮ್ಮನ್ನು ರಂಜಿಸುತ್ತದೆ. ಗಂಭೀರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಅವರು ಕೈಗುಳ್ಳುವ ಕ್ರಮಗಳು ಆಸಕ್ತಕರವಾಗಿರುತ್ತವೆ. ಮೇಮ್‌ಗಳು ಮತ್ತು ಟ್ರೆಂಡಿಂಗ್ ರೀಲ್‌ಗಳೊಂದಿಗೆ, ದೆಹಲಿ ಪೊಲೀಸರು ತಮ್ಮ ಕೆಲಸವನ್ನು ಸಾಧ್ಯವಾದಷ್ಟು ವಿಭಿನ್ನವಾಗಿ ಮಾಡುತ್ತಾರೆ.
ಇದು ಸಿನಿಮಾ ಅಲ್ಲ ನಿಜ ಜೀವನ: ರೀಲ್ ಒಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ದೆಹಲಿ ಪೊಲೀಸರು, ಹಿಂದಿಯಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಿದ್ದ ಸಿನಿಮಾವೊಂದರ ಸಣ್ಣ ಸ್ಕೂಪ್ ಅನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತುರ್ತು ಚಿಕಿತ್ಸೆಗಾಗಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ತ್ರಿಬಲ್ ರೈಡ್ ಹೋಗುತ್ತಿರುವುದನ್ನು ನೋಡಬಹುದಾಗಿದೆ.

ಈ ದೃಶ್ಯವು ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ 3 ಈಡಿಯಟ್ಸ್‌ನ ಐಕಾನಿಕ್ ಸ್ಕೂಟರ್ ಸೀಕ್ವೆನ್ಸ್ ಆಗಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ಸವಾರಿ ಮಾಡುತ್ತಾ, ಚಿತ್ರದ ಹಾಡು ಜಾನೇ ನಹೀ ದೇಂಗೆ ತುಜೆ ಹಿನ್ನಲೆಯಲ್ಲಿ ಕೇಳಿಸುತ್ತದೆ. ಈ ವಿಡಿಯೋಗೆ ಆಲ್ ಇಸ್ ನಾಟ್ ವೆಲ್ ಎಂದು ಮೇಲೆ ಶೀರ್ಷಿಕೆ ಕೂಡ ನೀಡಿದ್ದಾರೆ.
ಅಂದರೆ ಹೀಗೆ ಸಿನಿಮಾದಿಂದ ಸ್ಪೂರ್ತಿಗೊಂಡು ವಾಹನ ಚಲಾಯಿಸಿದರೆ ನಿಜ ಜೀವನದಲ್ಲಿ ದಂಡ ವಿಧಿಸಲಾಗುತ್ತದೆ ಎಂಬುದು ಈ ವಿಡಿಯೋನ ಮುಖ್ಯ ಉದ್ದೇವಾಗಿದೆ. ಹಾಗೆಯೇ ವೀಡಿಯೊ ಕೊನೆಯಲ್ಲಿ ಕೆಲ ಸಾಲುಗಳನ್ನು ಬರೆದಿದ್ದು "ಬಿನಾ ಚಲನ್ ಕೆ ಜಾನೆ ನಹೀ ದೇಂಗೆ ತುಜೆ (ಚಲನ್ ಇಲ್ಲದೆ ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ)." "ರಸ್ತೆಗಳಲ್ಲಿ ಈಡಿಯಟ್ ಆಗಿರಬೇಡ" ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

ಜವಾಬ್ದಾರಿಯುತವಾಗಿ ಚಾಲನೆ ಮಾಡಿ. " ಈ ದೃಶ್ಯವು 3 ಈಡಿಯಟ್ಸ್‌ನ ಮನರಂಜನೆಯಾಗಿದ್ದು, ತುರ್ತು ಸಂದರ್ಭದಲ್ಲಿ ಇದನ್ನು ಬೆಂಬಲಿಸಬಹುದಾದರೂ ಅದನ್ನು ದುರ್ಬಳಕೆ ಮಾಡಬೇಡಿ. ಶುಭಾಷಯಗಳು." ಎಂದು ಟ್ವಿಟರ್‌ನಲ್ಲಿ ಜಾಗೃತಿ ಮೂಡಿಸಿದ್ದಾರೆ. ಕೆಲ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸೆರ್‌ಗಳು ಇಂತಹ ಹಲವು ರೀಲ್‌ಗಳನ್ನು ಮಾಡಿದ್ದಾರೆ. ಅವರನ್ನು ಗುರುತಿಸಿ ದಂಡ ಕೂಡ ವಿಧಿಸಲಾಗಿದೆ ಎಂದು ಈ ಹಿಂದೆ ದೆಹಲಿ ಪೊಲೀಸರು ತಿಳಿಸಿದ್ದರು.
ಇಂತಹ ಜಾಗೃತಿಯನ್ನು ರೀಲ್‌ಗಳ ಮೂಲಕವೇ ಏಕೆ ತಿಳಿಯುತ್ತೀರಿ? ರೀಲ್‌ಗಳಿಗಾಗಿ ನಿಯಮಗಳನ್ನು ಉಲ್ಲಂಘಿಸಿದರೆ ಅನೇಕ ಪ್ರಕರಣಗಳಿಗೆ ಸಾಕ್ಷಿಯಾಗಬಹುದು. ಏನೇ ಹೇಳಿ ದೆಹಲಿ ಪೊಲೀಸರು ವಿಭಿನ್ನ ರೀತಿಯಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿರುವುದು ಕೆಲವಡೆ ಪ್ರಶಂಸೆಯನ್ನು ಗಳಿಸಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications