ಲಾಕ್‌ಡೌನ್ ನಂತರದ ಸೇವೆಗೆ ಸಿದ್ದರಾಗುತ್ತಿರುವ ಮೆಟ್ರೋ ಸಿಬ್ಬಂದಿ
ದೇಶದಲ್ಲಿ ಲಾಕ್‌ಡೌನ್ ಕಾರಣಕ್ಕೆ ರೈಲು, ಮೆಟ್ರೋ ರೈಲು, ಬಸ್ಸುಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಹಲವೆಡೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ದೆಹಲಿ ಮೆಟ್ರೋವನ್ನು ಕೂಡ ಶೀಘ್ರದಲ್ಲೇ ಪುನರಾರಂಭಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಈ ಕಾರಣಕ್ಕೆ ದೆಹಲಿ ಮೆಟ್ರೊ ಅಧಿಕಾರಿಗಳು ತಮ್ಮ ಹೌಸ್ ಕೀಪಿಂಗ್ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ. ಇದರಿಂದ ಮೆಟ್ರೋ ಸೇವೆಗಳು ಆರಂಭವಾದ ನಂತರ ಸುರಕ್ಷತಾ ಮಾನದಂಡಗಳನ್ನು ಅನುಸರಿಸಬಹುದು. ಲಾಕ್‌ಡೌನ್ ಕಾರಣಕ್ಕೆ ದೆಹಲಿ ಮೆಟ್ರೋವನ್ನು ಮಾರ್ಚ್ 22ರಿಂದ ಸ್ಥಗಿತಗೊಳಿಸಲಾಗಿದೆ.

ಕರೋನಾ ಬಿಕ್ಕಟ್ಟಿನಿಂದ ಮಾರ್ಚ್‌ನಲ್ಲಿಯೇ ಮೆಟ್ರೊ ಸೇವೆಯನ್ನು ನಿಲ್ಲಿಸಿರುವ ದೆಹಲಿ ಮೆಟ್ರೋ ನಿಗಮವು ಸಾಮಾನ್ಯ ಟಿಕೆಟ್‌ಗಳ ಬದಲು ಕಾಂಟ್ಯಾಕ್ಟ್‌ಲೆಸ್ ಕಾರ್ಡ್‌ಗಳನ್ನು ನೀಡಲಿದೆ. ಇದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ದೆಹಲಿ ಮೆಟ್ರೋ ರೈಲು ನಿಗಮವು ಈ ಬಗ್ಗೆ ಟ್ವೀಟ್ ಮಾಡಿದ್ದು, ವಿಶೇಷವಾಗಿ ತರಬೇತಿ ಪಡೆದ ಸಿಬ್ಬಂದಿಗಳು ಮೆಟ್ರೋ ನಿಲ್ದಾಣದಲ್ಲಿರುವ ಎಎಫ್‌ಸಿ ಗೇಟ್, ಲಿಫ್ಟ್ ಹಾಗೂ ಎಸ್ಕಲೇಟರ್ ಸೇರಿದಂತೆ ಹಲವು ಎಕ್ವಿಪ್‌ಮೆಂಟ್‌ಗಳನ್ನು ಸ್ವಚ್ವಗೊಳಿಸಿದ್ದಾರೆ ಎಂದು ಹೇಳಿದೆ.

ಮೆಟ್ರೋ ಸೇವೆಯನ್ನು ಪುನರಾರಂಭಿಸುವ ಬಗ್ಗೆ ಇನ್ನೂ ಆದೇಶ ಹೊರಬಿದ್ದಿಲ್ಲ. ಆದರೆ ಪುನರಾರಂಭವಾದ ನಂತರ ಸೇವೆಗಳು ಸರಾಗವಾಗಿ ಸಾಗಲಿ ಎಂಬ ಕಾರಣಕ್ಕೆ ಮೊದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೆಟ್ರೋ ರೈಲು ಸೇವೆಯನ್ನು ಪುನರಾರಂಭಿಸುವ ಆದೇಶ ಶೀಘ್ರದಲ್ಲೇ ಬರಬರುವ ನಿರೀಕ್ಷೆಗಳಿವೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮೂರನೇ ಹಂತದ ಲಾಕ್‌ಡೌನ್ ಮೇ 17ರವರೆಗೆ ಜಾರಿಯಲ್ಲಿರಲಿದೆ. ನಾಲ್ಕನೇ ಹಂತದ ಲಾಕ್‌ಡೌನ್ ಶೀಘ್ರದಲ್ಲೇ ಬರಲಿದ್ದು, ಅದನ್ನು ರಾಜ್ಯ ಸರ್ಕಾರಗಳು ತೀರ್ಮಾನಿಸಲಿವೆ ಎಂದು ಪ್ರಧಾನಿ ಮೋದಿರವರು ಹೇಳಿದ್ದಾರೆ. ದೆಹಲಿಯಲ್ಲಿ ಲಾಕ್‌ಡೌನ್ ಅನ್ನು ವಿಸ್ತರಿಸಿಲ್ಲ. ಈ ಹಿನ್ನೆಲೆಯಲ್ಲಿ ಮೆಟ್ರೋ ಸೇವೆಯನ್ನು ಆರಂಭಿಸಬಹುದು ಎಂದು ಹೇಳಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರವರು ಇತ್ತೀಚಿಗೆ ಲಾಕ್‌ಡೌನ್‌ನಿಂದ ಯಾವ ವಲಯಗಳಿಗೆ ವಿನಾಯಿತಿ ನೀಡಬಹುದು ಎಂಬುದರ ಬಗ್ಗೆ ಜನರಿಂದ ಸಲಹೆಗಳನ್ನು ಕೋರಿದ್ದರು. ಸದ್ಯಕ್ಕೆ ನವದೆಹಲಿಯಿಂದ ದೇಶದ ವಿವಿಧ ಭಾಗಗಳಿಗೆ 15 ವಿಶೇಷ ರೈಲುಗಳ ಸೇವೆಯನ್ನು ಆರಂಭಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇವುಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜುಗಳನ್ನು ಸೋಂಕುರಹಿತಗೊಳಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಲ್ಟ್ರಾ ವಯೋಲೆಟ್ ಸಾಧನಗಳನ್ನು ಬಳಸಲಾಗುತ್ತದೆ. ದೆಹಲಿಯಲ್ಲಿ ಕರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.


Click it and Unblock the Notifications