ಪುಟ್ಟ ಎಂಜಿ ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ಖ್ಯಾತ ಯುವ ನಿರ್ದೇಶಕ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ನಿಧಾನವಾಗಿ ಜನರು ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಜನರು ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿಸುತ್ತಿದ್ದಾರೆ. ಇತ್ತೀಚೆಗೆ ಮಲಯಾಳಂ ಚಿತ್ರರಂಗದ ಖ್ಯಾತ ಯುವ ನಿರ್ದೇಶಕರದ ಸಾಜಿದ್ ಯಾಹಿಯಾ ಅವರು ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.

ಮಲಯಾಳಂ ಚಿತ್ರರಂಗದ ಖ್ಯಾತ ಯುವ ನಿರ್ದೇಶಕರದ ಸಾಜಿದ್ ಯಾಹಿಯಾ ಅವರು ಖರೀದಿಸಿದ ಎಲೆಕ್ಟ್ರಿಕ್ ಕಾರು ಎಂಜಿ ಕಾಮೆಂಟ್. ಸಾಜಿದ್ ಯಾಹಿಯಾ ಅವರು ನಟ ಮತ್ತು ನಿರ್ಮಾಪಕರಾಗಿಯೂ ಹೆಸರುವಾಸಿಯಾಗಿದ್ದಾರೆ. ಅವರು ಕಲೆಕ್ಟರ್, ಬೆಂಗಳೂರು ಡೇಸ್, ಡಬಲ್ ಬ್ಯಾರೆಲ್‌ನಂತಹ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಜಯಸೂರ್ಯ ಅವರ 2016-I ಐಟಿ-ಇನ್‌ಸ್ಪೆಕ್ಟರ್ ದಾವೂದ್ ಇಬ್ರಾಹಿಂ ಚಿತ್ರದೊಂದಿಗೆ ನಿರ್ದೇಶನದ ರಂಗವನ್ನು ಪ್ರವೇಶಿಸಿದ್ದಾರೆ.

MG Comet EV

ಫ್ರೈಡೇ ಫಿಲಂಸ್ ಬ್ಯಾನರ್ ಅಡಿಯಲ್ಲಿ ಹೊಸಬರ ದಂಡೇ ನಟಿಸುತ್ತಿರುವ 'ಖಲ್ಬ್' ಚಿತ್ರವನ್ನೂ ಸಿದ್ಧಪಡಿಸುತ್ತಿದ್ದಾರೆ. ಕೇರಳವನ್ನೇ ನಡುಗಿಸಿದ ಅರಿ ಕೊಂಬನ್ ಆನೆಯ ಕಥೆಯನ್ನು ಸಾಜಿದ್ ಕೂಡ ಸಿನಿಮಾ ಮಾಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಶ್ರೀಲಂಕಾದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಹೊಸ ಎಂಜಿ ಕಾಮೆಟ ಎಲೆಕ್ಟ್ರಿಕ್ ಕಾರನ್ನು ಫ್ಯಾಮಿಲಿ ಜೊತೆ ತೆರಳಿ ಎಂಜಿ ಡೀಲರ್ ಶೀಪ್ ನಲ್ಲಿ ವಿತರಣೆ ಪಡೆದುಕೊಂಡರು.

ನಿರ್ದೇಶಕರದ ಸಾಜಿದ್ ಯಾಹಿಯಾ ಕಾರಿನ ವಿತರಣೆ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ 'ಈ ಬೇಬಿ ಕಾಮೆಟ್ ಈಗ ಕುಟುಂಬದ ಸದಸ್ಯ' ಎಂದು ಬರೆದಿದ್ದಾರೆ. ಈ ಎಂಜಿ ಕಾಮೆಟ್ (MG Comet) ಎರಡೂ ಡೋರಿನ, ನಾಲ್ಕು ಸೀಟರ್ ಮಿನಿ ಎಲೆಕ್ಟ್ರಿಕ್ ಕಾರು. ಇದು ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಆಗಿದೆ.

MG Comet EV

ಎಂಜಿ ಕಾಮೆಟ್ ಎಂಬ ಕಾರಿನ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದಿದೆ. ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಎಂಟ್ರಿ ಲೆವೆಲ್ ಪೇಸ್ ರೂಪಾಂತರದಲ್ಲಿ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಬ್ಲೂಟೂತ್ ಕನೆಕ್ಟಿವಿಟಿ ಸಿಸ್ಟಂ,ಮ್ಯಾನುಯಲ್ ಎಸಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಮತ್ತು 2 ಸ್ಪೀಕರ್‌ಗಳನ್ನು ಹೊಂದಿವೆ.

ಇದರೊಂದಿಗೆ 3 ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟ್‌ಗಳು, ಪವರ್ ಹೊಂದಾಣಿಕೆಯಂತಹ ಫೀಚರ್ಸ್ ಗಳನ್ನು ನೀಡುತ್ತದೆ. ಇದರೊಂದಿಗೆ . ORVM ಗಳು, ಬ್ಲ್ಯಾಕ್ ಆಂತರಿಕ ಥೀಮ್, ಫ್ಯಾಬ್ರಿಕ್ ಅಪ್ಹೋಲ್ಸ್ಟರಿ, ಎಲೆಕ್ಟ್ರಿಕ್ ಅಡ್ಜೆಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳು, ರಿಮೋಟ್ ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, EBD ಜೊತೆಗೆ ABS, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ರಿವರ್ಸ್ ಪಾರ್ಕಿಂಗ್ ಸೀಟ್‌ಗಳಿವೆ.

ಈ ಕಾಮೆಟ್ ರೋಟರಿ ಡ್ರೈವ್ ಸೆಲೆಕ್ಟರ್ ಅನ್ನು ಸಹ ಹೊಂದಿದೆ. ಇನ್ನು ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು ಮ್ಯಾನುಯಲ್ ಎಸಿ ಕಂಟ್ರೋಲ್ ಹೊಂದಿವೆ. ಇದರೊಂದಿಗೆ ಕೀಲೆಸ್ ಎಂಟ್ರಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಮೂರು ಯುಎಸ್‌ಬಿ ಪೋರ್ಟ್‌ಗಳು ಮತ್ತು 55 ಕ್ಕೂ ಹೆಚ್ಚು ಕನೆಕ್ಟಿವಿಟಿಗಳನ್ನು ಪಡೆಯುತ್ತದೆ. ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆ ಫೀಚರ್ಸ್ ಗಳಿಗೆ ಹೆಚ್ಚು ಪ್ರಾಮುಖ್ಯಯತೆಯನ್ನು ನೀಡಲಾಗಿದೆ.

ಈ ಹೊಸ ಎಂಜಿ ಕಾರಿನಲ್ಲಿ 3.3kW ಆನ್‌ಬೋರ್ಡ್ ಚಾರ್ಜರ್ ಅನ್ನು ಸಹ ನೀಡುತ್ತಿದೆ, ಇದು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಎಂಜಿ ಕಾಮೆಟ್ 42hp ಮತ್ತು 110Nm ಟಾರ್ಕ್ ಅನ್ನು ಉತ್ಪಾದಿಸುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಇದು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮೂಲಕ ಹಿಂದಿನ ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ.

ಈ ಪುಟ್ಟ ಕಾರಿನಲ್ಲಿ ಸುರಕ್ಷತೆಗಾಗಿ, ABS, EBD, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿವರ್ಸ್ ಕ್ಯಾಮೆರಾ ಮತ್ತು ಸೆನ್ಸರ್‌ಗಳು ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ನೀಡಲಾಗಿದೆ, ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67-ರೇಟ್ ಮಾಡಲ್ಪಟ್ಟಿದೆ ಮತ್ತು ARAI- ಪ್ರಮಾಣೀಕೃತ ರೇಂಜ್ 230 ಕಿ.ಮೀ ಆಗಿದೆ.

More from DriveSpark

Article Published On: Monday, August 7, 2023, 8:30 [IST]
English summary
Director sajid yahiya buys new mg comet ev details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+