ಒಂದಲ್ಲ, ಎರಡಲ್ಲ, ಸತತ 55 ಗ್ರೀನ್ ಸಿಗ್ನಲ್ ಪಡೆದ ಅದೃಷ್ಟವಂತ!
ಇಂದಿನ ಬಿಡುವಿಲ್ಲದ ಜೀವನದಲ್ಲಿ ಒಂದೇ ಒಂದು ಸಿಗ್ನಲ್ ದಾಟುವುದು ಸಹ ಅಯ್ಯೋ ಪಾಪ ಅನ್ನಿಸುತ್ತದೆ. ಅದರಲ್ಲೂ ಬೆಂಗಳೂರು ನಗರದ ಟ್ರಾಫಿಕ್ ಕಥೆಯನ್ನಂತೂ ಹೇಳೋದೇ ಬೇಡ ಬಡಿ. ಎಲ್ಲಿ ನೋಡಿದರೂ ಪ್ರಯಾಣಿಕರಿಗೆ ಸಿಗ್ನಲ್ ಕಾಟ ಕಟ್ಟಿಟ್ಟ ಬುತ್ತಿಯಂತೆ!. ರಸ್ತೆಯಲ್ಲೆಲ್ಲ ಜೆಣು ನೋಣಗಳಂತೆ ಓಡಾಡುತ್ತಿರುವ ವಾಹನಗಳು. ಈ ನಡುವೆ ಹಸಿರು ನಿಶಾನೆ ಹುಡುಕುವುದೇ ಕಷ್ಟಕರವೆನಿಸುತ್ತದೆ.
ಆದರೆ ನಾವಿಂದು ಪರಿಚಯಿಸುವ ಅದೃಷ್ಟ ಚಾಲಕರೊಬ್ಬರು, ಒಂದಲ್ಲ, ಎರಡಲ್ಲ ಸತತವಾಗಿ 55 ಗ್ರೀಲ್ ಸಿಗ್ನಲ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮ್ಯಾನ್‌ಹ್ಯಾಟನ್ ಎಂಬ ಪ್ರದೇಶದಲ್ಲಿ ಬೆಳಗ್ಗಿನ ಜಾವ ಮೂರು ಗಂಟೆಗೆ ಆರಂಭಿಸಿದ ಈತನ ಪಯಣವು 55 ಟ್ರಾಫಿಕ್ ಸಿಗ್ನಲ್‌ಗಳನ್ನು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದ ಹಾಗೆ ಇಂದೊಂದು ಪೂರ್ವ ಯೋಜಿತ ಯೋಜನೆಯಾಗಿತ್ತು. ಇದಕ್ಕಾಗಿ ಪೂರ್ವಭ್ಯಾಸ ಸಹ ಮಾಡಲಾಗಿತ್ತು. ಈ ಎಲ್ಲದರ ಮೂಲಕ ಸಿಗ್ನಲ್‌ಗಳನ್ನು ಯಶಸ್ವಿಯಾಗಿ ಬೇಧಿಸಿದ್ದಾರೆ. ಇದೀಗ ಈ ಆಕರ್ಷಕ ವೀಡಿಯೋ ನೋಡಿ ನಿಮ್ಮ ದಿನದಿತ್ಯ ಜೀವನದಲ್ಲಿ ಎದುರಾಗುವ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಉಲ್ಲೇಖಿಸಿರಿ...
<center><iframe width="100%" height="450" src="//www.youtube.com/embed/KLo3fJSqotw" frameborder="0" allowfullscreen></iframe>)</center>


Click it and Unblock the Notifications








