ಬೆಂಗಳೂರಿನ ಮೊದಲ ಚಾಲಕ ರಹಿತ ಮೇಡ್ ಇನ್ ಚೀನಾ ಮೆಟ್ರೋ: ಸಂಚಾರ ಪ್ರಾರಂಭ ಯಾವಾಗ?
ಬೆಂಗಳೂರಿನಲ್ಲಿ (Bengaluru) ಚಾಲಕ ರಹಿತ ಮೆಟ್ರೋ ರೈಲು ಆರಂಭವಾಗುತ್ತಿದೆ. ನಮ್ಮ ಮೆಟ್ರೋ (Namma Metro) ಹೊಸ ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ. ಬೆಂಗಳೂರಿನ ನಮ್ಮ ಮೆಟ್ರೋಗೆ ಮೊದಲ ಚಾಲಕ ರಹಿತ ರೈಲು ಶಾಂಘೈನಿಂದ ಚೆನ್ನೈ ಬಂದರಿಗೆ ಬಂದು ತಲುಪಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ, ರೈಲನ್ನು ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತರಲಾಗುತ್ತದೆ.
ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್ ಈ ಚಾಲಕ ರಹಿತ ಮೆಟ್ರೋ ರೈಲ್ ಅನ್ನು ತಯಾರಿಸಿದೆ. ಈ ಮೆಟ್ರೋ ರೈಲು ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ಗೆ ಪ್ರಾಯೋಗಿಕ ಸಂಚಾರ ನಡೆಸುತ್ತದೆ. ಚೆನ್ನೈ ಬಂದರಿನ ಬಂದಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಜನವರಿ 24 ರಂದು ಶಾಂಘೈ ಬಂದರಿನಿಂದ ಕಳುಹಿಸಲಾದ ಸಾಗಣೆಯು ನಿನ್ನೆ ಬೆಳಗ್ಗೆ 11 ಗಂಟೆಗೆ ಜವಾಹರ್ ಡೆಕ್ -2ನ್ನು ತಲುಪಿದೆ.

ಈ ಮೆಟ್ರೋ ರೈಲು ಕೋಚ್ ಎಂವಿ ಸ್ಪ್ರಿಂಗ್ ಮೋಟಾ ಹಡಗಿನಲ್ಲಿ ಬಂದಿತು. ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವನ್ನು ಹೊಂದಿದೆ. ನೌಕೆಯು ಜನವರಿ 24 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಿ ಚೆನ್ನೈ ತಲುಪಲು ಎರಡು ವಾರಗಳನ್ನು ತೆಗೆದುಕೊಂಡಿತು ಎಂದು ವರದಿಯಾಗಿದೆ. ಇದನ್ನು ಯುನಿಟ್ರಾನ್ಸ್ ಶಿಪ್ಪಿಂಗ್ ಮತ್ತು ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ರವಾನೆ ಮಾಡಿದೆ.
ಕಸ್ಟಮ್ಸ್ ಕ್ಲಿಯರೆನ್ಸ್ ಒಂದು ದಿನ ತೆಗೆದುಕೊಳ್ಳುತ್ತದೆ. ನಾಳೆ ವೇಳೆಗೆ ಟ್ರೇಲರ್‌ಗಳ ಮೂಲಕ ಸಾಗಣೆಯು ಬೆಂಗಳೂರಿಗೆ ಹೊರಡಲಿದೆ. ಫೆಬ್ರವರಿ 20 ರೊಳಗೆ ಕೋಚ್‌ಗಳು ಬೆಂಗಳೂರಿನ ಡಿಪೋಗೆ ತಲುಪುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಆರು ಬೋಗಿಗಳ ಮೂಲ ಮಾದರಿಯ ರೈಲನ್ನು 19.15-ಕಿಮೀ ಹಳದಿ ಲೈನ್‌ನಲ್ಲಿ ಪ್ರಾಯೋಗಿಕ ಓಡಿಸಲು ಬಳಸಲಾಗುತ್ತದೆ, ಇದು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದಿಂದ ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕಿಸುತ್ತದೆ.
2019ರ ಡಿಸೆಂಬರ್ ಚೀನಾದ ಕಂಪನಿ 216 ಕೋಚ್‌ಗಳನ್ನು ಪೂರೈಸುವ ಒಪ್ಪಂದವನ್ನು ಪಡೆದುಕೊಂಡಿತು, 173 ವಾರಗಳಲ್ಲಿ ಬಿಎಂಆರ್ ಸಿಎಲ್‌ಗೆ ತಲುಪಬಹುದು ಎಂದು ಹೇಳಲಾಗುತ್ತಿದೆ. ಇವುಗಳಲ್ಲಿ 126 ಕೋಚ್‌ಗಳು (21 ಆರು ಕೋಚ್ ರೈಲುಗಳು) ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಿಗೆ, ಉಳಿದ 90 ಕೋಚ್‌ಗಳು (15 ಆರು ಬೋಗಿಗಳ ರೈಲುಗಳು) ಹಳದಿ ಮಾರ್ಗದಲ್ಲಿ ಸಂಚರಿಸಲಿವೆ.
ಈ ರೈಲು ನಗರಕ್ಕೆ ಬಂದ ನಂತರ, ರೈಲನ್ನು ಎಲೆಕ್ಟ್ರಾನಿಕ್ ಸಿಟಿ ಬಳಿಯ ಹೆಬ್ಬಗೋಡಿ ಡಿಪೋಗೆ ಕೊಂಡೊಯ್ಯಲಾಗುತ್ತದೆ, ಅಲ್ಲಿ ಚೀನಾದ ಎಂಜಿನಿಯರ್‌ಗಳ ಮೇಲ್ವಿಚಾರಣೆಯಲ್ಲಿ ಅದನ್ನು ಜೋಡಿಸಲಾಗುತ್ತದೆ. ಇದರ ನಂತರ 8-10 ಸ್ಥಿರ ಪರೀಕ್ಷೆಗಳು, ಹಲವಾರು ಡೈನಾಮಿಕ್ ಪರೀಕ್ಷೆಗಳು, 15 ಮುಖ್ಯ ಪರೀಕ್ಷೆಗಳು ಮತ್ತು 7-8 ಇಂಟರ್ಫೇಸ್ ಪರೀಕ್ಷೆಗಳು ಸೇರಿದಂತೆ 32 ವಿಭಿನ್ನ ಪರೀಕ್ಷೆಗಳು ನಡೆಯುತ್ತವೆ.
ಹಳದಿ ಮಾರ್ಗವು ಸಂಪೂರ್ಣವಾಗಿ ಸಿದ್ಧವಾಗಿದೆ. ಆದರೆ ಕಾರ್ಯಾಚರಣೆಗಳನ್ನು ಈ ನಿರ್ದಿಷ್ಟ ರೈಲುಗಳ ಅಗತ್ಯವಿದೆ. ಮಾರ್ಚ್ ಆರಂಭದಲ್ಲಿ ಪ್ರಾಯೋಗಿಕ ಓಡಾಟ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ವರದಿಗಳ ಪ್ರಕಾರ, ಹೊಸೂರು ಮತ್ತು ಬೊಮ್ಮಸಂದ್ರವನ್ನು ಸಂಪರ್ಕಿಸುವ 20 ಕಿ.ಮೀ ಉದ್ದದ ಈ ಮೆಟ್ರೋ ಮಾರ್ಗ, ತಮಿಳುನಾಡಿನಲ್ಲಿ 8 ಕಿ.ಮೀ ಹಾಗೂ ಕರ್ನಾಟಕದಲ್ಲಿ 12 ಕಿ.ಮೀ ಹಾದುಹೋಗಲಿದೆ.
ಮುಂದಿನ 30 ವರ್ಷಗಳಲ್ಲಿ ಪ್ರಯಾಣಿಕರಿಂದ ಯಾವ ರೀತಿಯಲ್ಲಿ ಬೇಡಿಕೆಯನ್ನು ಪಡೆದುಕೊಳುತ್ತದೆ. ಕಾಮಗಾರಿ ನಡೆಸಲು ಖರ್ಚಾಗಲಿರುವ ಅಂದಾಜು ವೆಚ್ಚ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಸಮೀಕ್ಷೆ ನಡೆಸಿ, ಕಾರ್ಯಸಾಧ್ಯತಾ ಅಧ್ಯಯನ ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ದೆಹಲಿ ಮೆಟ್ರೋ ರೈಲು ನಿಗಮ, ಅಂತರರಾಜ್ಯ ಮೆಟ್ರೋ ರೈಲು ಸೇವೆಯನ್ನು ನಿರ್ವಹಿಸುತ್ತದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಹರಿಯಾಣ ಹಾಗೂ ಉತ್ತರ ಪ್ರದೇಶದ ನೋಯ್ಡಾವನ್ನು ಸಂಪರ್ಕಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Deccan Herald


Click it and Unblock the Notifications