Threads ಆ್ಯಪ್‌ನಲ್ಲಿ ಡ್ರೈವ್‌ಸ್ಪಾರ್ಕ್ ಕನ್ನಡ: ಒಂದೇ ಕ್ಲಿಕ್‌ನಲ್ಲಿ ಆಟೋಮೊಬೈಲ್ ಸುದ್ದಿ ಪಡೆಯಿರಿ
ಸ್ಮಾರ್ಟ್ಫೋನ್ಗಳು ಜನರ ಜೀವನದ ಅಗತ್ಯ ಸಾಧನವಾಗಿದ್ದು, ಸೋಷಿಯಲ್ ಮೀಡಿಯಾಗಳು ಜನರ ಜೀವನದ ಒಂದು ಭಾಗವಾಗಿದೆ. ಸ್ಮಾರ್ಟ್ಫೋನ್ಗಳ ಬಳಕೆದಾರರ ಹೆಚ್ಚಾಗುತ್ತಿದಂತೆ ಸೋಶಿಯಲ್ ಮೀಡಿಯಾಗಳ ಬಳಕೆದಾರರು ಸಂಖ್ಖೆಯು ಹೆಚ್ಚಾಗುತ್ತಿದೆ. ಅಲ್ಲದೇ ಸೋಶಿಯಲ್ ಮೀಡಿಯಾ ಇಂದು ತುಂಬ ಪ್ರಭಾವಿ ಮಾಧ್ಯಮ. ಇದರಿಂದ ಪ್ರಮುಖ ಸೋಶಿಯಲ್ ಮೀಡಿಯಾ ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ.
ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ (Meta) ಟ್ವಿಟ್ಟರ್‌ಗೆ (Twitter) ಪೈಪೋಟಿ ನೀಡಲು ತನ್ನದೇ ಆದ ಹೊಸ ಅಪ್ಲಿಕೇಶನ್ ಥ್ರೆಡ್ಸ್ (Threads) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿ ಭಾರೀ ಸದ್ದು ಮಾಡಿದೆ. ಇದೀಗ ಬಳಕೆದಾರರು ಈ ಹೊಸ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಪರಿಚಯಿಸಿದ ಈ ಹೊಸ ಥ್ರೆಡ್ಸ್ ಅಪ್ಲಿಕೇಶನ್ ಜನಪ್ರಿಯ ಟ್ವಿಟರ್ಗೆ ಸರಿಸಮಾನವಾಗಿ ಇರಲಿದೆ ಎಂದು ಹೇಳಲಾಗಿದೆ. ಇದರಿಂದ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮನದಲ್ಲೂ ಸ್ವಲ್ಪ ಆತಂಕ ಹುಟ್ಟಿಸಿದೆ. ಥ್ರೆಡ್ಸ್ ಅಪ್ಲಿಕೇಶನ್ ಕೂಡ ಟ್ವಿಟರ್ನಂತೆಯೇ ಕೆಲಸ ಮಾಡುವ ಅಪ್ಲಿಕೇಶನ್ ಆಗಿದೆ.
ಈ ಹೊಸ ಥ್ರೆಡ್ಸ್ ಅಪ್ಲಿಕೇಶನ್ ವಿಶೇಷತೆ ಇನ್ಸ್ಟಾಗ್ರಾಮ್ನಲ್ಲೇ ಬಳಕೆದಾರರು ಡೈರೆಕ್ಟ್ ಆಗಿ ಓಪನ್ ಮಾಡಬಹುದು. ಥ್ರೆಡ್ಸ್ ಅಪ್ಲಿಕೇಶನ್ ಅನ್ನು ಜಾಗತಿಕವಾಗಿ ಅಧಿಕೃತವಾಗಿ ಪರಿಚಯಿಸಲಾಗಿದೆ. ಇದನ್ನು ಬಿಡುಗಡೆ ಮಾಡಿದ ಕೇವಲ 2 ಗಂಟೆಗಳಲ್ಲಿ 20 ಲಕ್ಷ ಜನರು ಸೈನ್ ಅಪ್ ಆಗಿದೆ. ಇನ್ನು 4 ಗಂಟೆಗಳಲ್ಲಿ 50 ಲಕ್ಷ ಬಳಕೆದಾರರು ಸೈನ್ ಅಪ್ ಮಾಡಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ.

ಈ ನಡುವೆ ಥ್ರೆಡ್ಸ್ ಟ್ವಿಟ್ಟರ್ ಅನ್ನು ಹಿಂದಿಕ್ಕಬಹುದು ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಇಲ್ಲಿಯವರೆಗೂ ಟ್ವಿಟರ್ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಯಾವುದೇ ಅಪ್ಲಿಕೇಶನ್ಗಳು ಬಂದಿರಲಿಲ್ಲ. ಟ್ವಿಟರ್ಗೆ ಪ್ರಬಲ ಪ್ರತಿಸ್ಪರ್ಧೆಯನ್ನು ನೀಡುವ ಜನಪ್ರಿಯ ಸೋಶಿಯಲ್ ಮೀಡಿಯಾ ಸಂಸ್ಥೆ ಎಂದರೆ ಅದು ಮೆಟಾ ಆಗಿದೆ. ಇದೀಗ ಮೆಟಾ ಕಂಪನಿಗೆ ಟ್ವಿಟರ್ಗೆ ನೇರವಾಗಿ ಟಕ್ಕರ್ ನೀಡಲು ಥ್ರೆಡ್ಸ್ ಎಂಬ ದೊಡ್ಡ ಅಸ್ತ್ರ ಪ್ರಯೋಗಿಸಿದ್ದಾರೆ.
ಥ್ರೆಡ್ಸ್ ಅಪ್ಲಿಕೇಶನ್ ನಲ್ಲಿ ಹಲವಾರು ಫೀಚರ್ಸ್ ಗಳನ್ನು ನೀಡಿದ್ದಾರೆ. ಈ ಥ್ರೆಡ್ಸ್ ಅಪ್ಲಿಕೇಶನ್ ನಲ್ಲಿ ಬಳಕೆದಾರರು 500 ಅಕ್ಷರಗಳು, ವೀಡಿಯೊಗಳು (ಗರಿಷ್ಠ 5 ನಿಮಿಷಗಳು) ಮತ್ತು ವೆಬ್‌ಸೈಟ್ ಲಿಂಕ್‌ಗಳನ್ನು ಪೋಸ್ಟ್ ಮಾಡಬಹುದು. ಇಂತಹ ಅಧ್ಭುತ ಫಿಚರ್ಸ್ ಗಳನ್ನು ಹೊಂದಿರುವುದರಿಂದ ಹೆಚ್ಚಿನ ಜನರನ್ನು ಸೆಳೆಯಬಹುದು.

ನಿಮ್ಮ ಮೆಚ್ಚಿನ ಡ್ರೈವ್‌ಸ್ಪಾರ್ಕ್ ಕನ್ನಡ @drivesparkkannada ಕೂಡ ಥ್ರೆಡ್ಸ್ ಅಪ್ಲಿಕೇಶನ್ ಪ್ರವೇಶಿಸಿದೆ. ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳ ಮತ್ತು ವಿಮರ್ಶೆಗಳು, ಫೋಟೋ ಗ್ಯಾಲರಿಗಳು, ಲಾಂಚ್‌ಗಳ ಲೈವ್ ಅಪ್‌ಡೇಟ್‌ಗಳು ಮತ್ತು ಕಿರು ವೀಡಿಯೊಗಳನ್ನು ಪೋಸ್ಟ್ ಮಾಡುತ್ತೇವೆ. ಇನ್ನು ಹೊಸ ವಾಹನಗಳ ಬಿಡುಗಡೆಗಳು, ಅನಾವರಣ ಮತ್ತು ರಿಬ್ಯೂಗಳು ಕುರಿತು ವಿಸ್ತಾರವಾದ ವರದಿಯನ್ನು ಪ್ರಕಟಿಸುತ್ತೇವೆ.
ನೀವು ಆಟೋಮೊಬೈಲ್ ಕ್ಷೇತ್ರ ಅಥವಾ ಕಾರು, ಬೈಕ್ ಪ್ರಿಯರಾದರೆ ನಮ್ಮ ಡ್ರೈವ್‌ಸ್ಪಾರ್ಕ್ ಕನ್ನಡ ತಾಣವನ್ನು ನೀವು ಥ್ರೆಡ್ಸ್ ಅಪ್ಲಿಕೇಶನ್ ಫಾಲೋ ಮಾಡಿ. ಆಟೋಮೊಬೈಲ್ ಸಂಬಂಧಿಸಿದ ಹೊಸ ಅಪ್‌ಡೇಟ್‌ಗಳನ್ನು ನಾವು ನೀಡುತ್ತೇವೆ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡಲು ಮರೆಯದಿರಿ.


Click it and Unblock the Notifications