ಡ್ರೈವ್ ಸ್ಪಾರ್ಕ್ ಛಾಯಾಗ್ರಹಣ ಸ್ಪರ್ಧೆ; ಫೋಟೋ ಹಂಚಿ ಬಹುಮಾನ ಗೆಲ್ಲಿರಿ!

Written By:

ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಸಮಗ್ರ ವಾಹನ ಸುದ್ದಿಗಳನ್ನು ಬಿತ್ತರಿಸುವ ದೇಶದ ಏಕ ಮಾತ್ರ ಜಾಲತಾಣವಾಗಿರುವ ಡ್ರೈವ್ ಸ್ಪಾರ್ಕ್, ವಿಶ್ವ ಛಾಯಾಗ್ರಹಣ ದಿನದಂಗವಾಗಿ ತಮ್ಮ ಪ್ರಿಯ ಓದುಗರಿಗೆ 'ಛಾಯಾಗ್ರಹಣ' ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಎಲ್ಲ ಡ್ರೈವ್ ಸ್ಪಾರ್ಕ್ ಓದುಗರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಸುವರ್ಣವಕಾಶವೊದಗಿ ಬಂದಿದೆ.

To Follow DriveSpark On Facebook, Click The Like Button
ಛಾಯಾಗ್ರಹಣ ಸ್ಪರ್ಧೆ

ನೀವೇನು ಮಾಡಬೇಕು ?

1. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ವ್ಯಕ್ತಿಗಳು ನಮ್ಮ ಫೇಸ್ ಬುಕ್ ಪುಟ ಕ್ಕೊಂದು ಲೈಟ್ ಬಟನ್ ಒತ್ತಿರಿ. ಹಾಗೆಯೇ ಮುಂದಕ್ಕೆ ತೆರಳಿ ನಮ್ಮ ಟ್ವಿಟರ್ ಪೇಜ್ ಅನುಯಾಗಿರಿ.

2. ಕಾರು ಅಥವಾ ಬೈಕ್ ಫೋಟೊವನ್ನು ಕ್ಲಿಕ್ಕಿಸಿ ಫೇಸ್ ಬುಕ್ ಅಥವಾ ಟ್ವಿಟರ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿ. ಯಾವುದೇ ಕಾರಣಕ್ಕೂ ಡ್ರೈವ್ ಸ್ಪಾರ್ಕ್ ಟ್ಯಾಗ್ ಮಾಡಲು ಮರೆಯದಿರಿ.

3. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಖಂಡಿತವಾಗಿಯೂ #DSPhotoContest ಎಂಬ ಹ್ಯಾಶ್ ಟ್ಯಾಗ್ ಬಳಕೆ ಮಾಡಲೇಬೇಕು.

4. ಫೋಟೋಗಳು ನೈಜವಾಗಿರತಕ್ಕದ್ದು. ಯಾವುದೇ ಕಾರಣಕ್ಕೂ ವೆಬ್ ತಾಣಗಳಿಂದ ತೆಗೆದ ಚಿತ್ರಗಳನ್ನು ಅನುವು ಮಾಡಿಕೊಡಲಾಗುವುದಿಲ್ಲ.

5. ವಾಹನ ಪ್ರೇಮಿಗಳ ನೆಚ್ಚಿನ ಕಾರು ಅಥವಾ ಬೈಕ್ ಗಳ ಚಿತ್ರವನ್ನು ಮಾತ್ರ ಕಳುಹಿಸಿಕೊಡತಕ್ಕುದ್ದು.

6. ನಿಮ್ಮ ಸ್ನೇಹಿತರಿಗೂ ಟ್ಯಾಗ್ ಮಾಡಲು ಮರೆಯದಿರಿ ಅಂತೆಯೇ ನಮ್ಮ ಸಾಮಾಜಿಕ ಪುಟಗಳ ಅನುಯಾಯಿಯಾಗಲು ಹುರಿದುಂಬಿಸಿ. (ನೆನಪಿಡಿ ಅತಿ ಹೆಚ್ಚು ಲೈಕ್, ಹಂಚಿಕೆ ಗಿಟ್ಟಿಸಿಕೊಳ್ಳುವ ವ್ಯಕ್ತಿಗೆ ಗೆಲ್ಲುವ ಅವಕಾಶ ಜಾಸ್ತಿಯಾಗಿರುತ್ತದೆ.).

ಛಾಯಾಗ್ರಹಣ ಸ್ಪರ್ಧೆ

ವೃತಿಪರ ಛಾಯಾಗ್ರಹಕರನ್ನು ಒಳಗೊಂಡಿರುವ ನಮ್ಮ ತಂಡದ ಸದಸ್ಯರು ವಿಜೇತರನ್ನು ಘೋಷಿಸಲಿದೆ. ಸ್ಪರ್ಧೆಯು ಇಂದಿನಿಂದಲೇ ಆರಂಭಗೊಂಡಿದ್ದು (2016, ಆಗಸ್ಟ್ 19) ಸ್ಪರ್ಧೆಯಲ್ಲಿ ಭಾಗವಹಿಸುವ ಕೊನೆಯ ದಿನಾಂಕ ಆಗಸ್ಟ್ 21 ಭಾನುವಾರವಾಗಿದೆ. ಅಂದಿನ ದಿನವೇ ಮೂವರು ಅದೃಷ್ಟಶಾಲಿ ವಿಜೇತರನ್ನು ಪ್ರಕಟಿಸಲಾಗುವುದು. ಬಳಿಕ ವಿಜೇತರನ್ನು ಸಂಪರ್ಕಿಸಲಿರುವ ಡ್ರೈವ್ ಸ್ಪಾರ್ಕ್ ಆಕರ್ಷಕ ಉಡುಗೊರೆಗಳನ್ನು 10 ದಿನದೊಳಗೆ ಹಸ್ತಾಂತರಿಸಲಿದೆ. ಸ್ಪರ್ಧಾಳುಗಳು ಕಳುಹಿಸಿ ಕೊಟ್ಟಿರುವ ಚಿತ್ರಗಳನ್ನು ಛಾಯಾಗ್ರಾಹಕರ ಕೃಪೆ ಸಹಿತ ಡ್ರೈವ್ ಸ್ಪಾರ್ಕ್ ವೆಬ್ ಸೈಟ್ ನಲ್ಲಿ ಬಳಕೆ ಮಾಡಲಾಗುವುದು.

ಇನ್ಯಾಕೆ ತಡ ಈ ಕೂಡಲೇ ಸ್ಪರ್ಧೆಯಲ್ಲಿ ಭಾಗವಹಿಸಿ, ಗುಡ್ ಲಕ್!

Read more on ಕಾರು drivespark
English summary
DriveSpark Photography Contest Is Here And You Can Be A Winner!
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark