ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಮಹಿಳೆಯರು ಜೀನ್ಸ್ ಧರಿಸಿದರೆ ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ಆರ್‌ಟಿಒ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸರಿಯಾದ ಬಟ್ಟೆಗಳನ್ನು ಧರಿಸಿಲ್ಲವೆಂಬ ಕಾರಣಕ್ಕಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಯರನ್ನು ವಾಪಸ್ ಕಳುಹಿಸಲಾಗಿದೆ.

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಚೆನ್ನೈನ ಕೆಕೆ ನಗರದಲ್ಲಿರುವ ಆರ್‍‍ಟಿಒ ಕಚೇರಿಯು ಜೀನ್ಸ್ ಧರಿಸಿ ಡ್ರೈವಿಂಗ್ ಟೆಸ್ಟ್ ಗೆ ಬಂದ ಮಹಿಳೆಯರನ್ನು ವಾಪಸ್ ಕಳುಹಿಸಿದೆ. ಅಧಿಕಾರಿಗಳು ಈ ರೀತಿಯ ಉಡುಪುಗಳು ಡ್ರೈವಿಂಗ್ ಟೆಸ್ಟ್ ಗಳಿಗೆ ಸೂಕ್ತವಲ್ಲವೆಂದು ಹೇಳಿದ್ದಾರೆ.

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಆದರೆ ಭಾರತದಲ್ಲಿ ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳಲು ಯಾವುದೇ ನಿರ್ದಿಷ್ಟ ಡ್ರೆಸ್ ಕೋಡ್ ಇಲ್ಲ. ಕೆ.ಕೆ.ನಗರದ ಆರ್‌ಟಿಒದಲ್ಲಿ ಇತ್ತೀಚೆಗೆ ಡ್ರೈವಿಂಗ್ ಟೆಸ್ಟ್ ಗಳಿಗೆ ಹಾಜರಾದ ಇಬ್ಬರು ಚೆನ್ನೈನ ಮಹಿಳೆಯರನ್ನು ವಾಪಸ್ ಕಳುಹಿಸಲಾಗಿದೆ. ನಂತರ ಅವರು ಸಲ್ವಾರ್ ಕಮೀಜ್ ಧರಿಸಿ ಮರಳಿದ ನಂತರ ಡ್ರೈವಿಂಗ್ ಟೆಸ್ಟ್ ನಡೆಸಲಾಯಿತು.

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಆ ಇಬ್ಬರು ಮಹಿಳೆಯರ ಪೈಕಿ ಮೊದಲ ಮಹಿಳೆ ಮಾತನಾಡಿ, ನಾನು ಜೀನ್ಸ್ ಹಾಗೂ ಸ್ಲೀವ್ ಲೆಸ್ ಟಾಪ್ ಧರಿಸಿ ಡ್ರೈವಿಂಗ್ ಟೆಸ್ಟ್ ಗೆ ಹೋಗಿದ್ದೆ. ಜೀನ್ಸ್ ಧರಿಸಿದ್ದ ಕಾರಣಕ್ಕೆ ವಾಪಸ್ ಕಳುಹಿಸಲಾಯಿತು. ಆದರೆ ನನಗೆ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿದ್ದ ಕಾರಣ, ನಾನು ಮನೆಗೆ ಹೋಗಿ ಸಲ್ವಾರ್ ಕಮೀಜ್ ಧರಿಸಿ ವಾಪಸ್ ಬಂದೆ ಎಂದು ಹೇಳಿದರು.

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಸುಮಾರು 10 ದಿನಗಳ ಹಿಂದೆ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದ ಮತ್ತೊಬ್ಬ ಮಹಿಳೆ ಮಾತನಾಡಿ, ನಾನು ಕ್ಯಾಪ್ರಿಸ್‍‍ನಲ್ಲಿ ಡ್ರೈವಿಂಗ್ ಟೆಸ್ಟ್ ಗೆ ಹೋದಾಗ ಮನೆಗೆ ಹೋಗಿ ಸರಿಯಾದ ಬಟ್ಟೆಯನ್ನು ಧರಿಸಿ ಬರುವಂತೆ ಹೇಳಿದರು.

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ನಾನು ಈ ಬಗ್ಗೆ ಪ್ರಶ್ನಿಸಿದಾಗ, ಆ ಆರ್‍‍ಟಿ‍ಒ ಇನ್ಸ್ ಪೆಕ್ಟರ್ ತನ್ನ ಸಹೋದ್ಯೋಗಿಗಳನ್ನು ಕರೆದನು. ಅವರು ಸಹ ಈ ಅಲಿಖಿತ ನಿಯಮವನ್ನು ಸಮರ್ಥಿಸಿ ಮಾತನಾಡಿದರು. ನಾನು ಪರವಾನಗಿ ಪಡೆಯಲು ನಿರ್ಧರಿಸಿದ್ದ ಕಾರಣ ಮನೆಗೆ ಹೋಗಿ ಸಲ್ವಾರ್ ಕಮೀಜ್ ಧರಿಸಿ ಮರಳಿದೆ ಎಂದು ಹೇಳಿದರು.

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಈ ಮಹಿಳೆಯರಿಗೆ ಸರಿಯಾದ ಬಟ್ಟೆಯನ್ನು ಧರಿಸುವಂತೆ ಹೇಳಿ ಅವರನ್ನು ವಾಪಸ್ ಕಳುಹಿಸಿದ ಆರ್‌ಟಿಒ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಚೆನ್ನೈ ನಗರವು ಹೆಚ್ಚು ತಾಪಮಾನವನ್ನು ಹೊಂದಿರುವ ನಗರವಾಗಿದೆ. ಕೆಲವು ರೀತಿಯ ಉಡುಪುಗಳಿಂದ ಕೆಲವರಿಗೆ ಅನಾನುಕೂಲವಾಗಬಹುದು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಜೀನ್ಸ್ ಹಾಗೂ ಕ್ಯಾಪ್ರಿಸ್‍‍ಗಳು ಪುರುಷರು ಹಾಗೂ ಮಹಿಳೆಯರಿಗೆ ಆರಾಮದಾಯಕವೂ, ಅನುಕೂಲಕರವೂ ಆಗಿವೆ. ಆರ್‌ಟಿಒ ಅಧಿಕಾರಿಗಳು ಈ ಬಟ್ಟೆಗಳನ್ನು ಸರಿಯಾದುದಲ್ಲವೆಂದು ಪರಿಗಣಿಸುತ್ತಿರುವುದು ಆಶ್ಚರ್ಯಕರವಾಗಿದೆ. ಇವುಗಳನ್ನು ಯಾವುದೇ ರೀತಿಯಲ್ಲೂ ಅಸಭ್ಯವೆಂದು ಪರಿಗಣಿಸಲಾಗುವುದಿಲ್ಲ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಜೀನ್ಸ್ / ಕ್ಯಾಪ್ರಿಸ್‌ನಲ್ಲಿ ವಾಹನ ಚಲಾಯಿಸುವುದರಿಂದ ಯಾವುದಾದರೂ ಅಪಾಯ ಸಂಭವಿಸುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಯಾವುದೇ ತೊಂದರೆಯಿದ್ದಲ್ಲಿ ಜೀನ್ಸ್ / ಕ್ಯಾಪ್ರಿಸ್‌ನಲ್ಲಿ ವಾಹನ ಚಲಾಯಿಸುವುದು ನಿಜಕ್ಕೂ ಅಪಾಯಕಾರಿ ಎಂಬ ಕಾನೂನನ್ನು ಮಾಡಬೇಕು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಇದರಿಂದ ವಾಹನ ಸವಾರರು ಜಾಗೃತರಾಗಿ, ಸರಿಯಾದ ಉಡುಪನ್ನು ಧರಿಸುತ್ತಾರೆ. ಒಂದು ವೇಳೆ ಯಾವುದೇ ಕಾನೂನು ಇರದಿದ್ದರೆ, ಯಾವುದೇ ರೀತಿಯ ಅಪಾಯವಿರದಿದ್ದರೆ, ಆರ್‍‍ಟಿ‍ಒ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಮೀರಿರುವುದು ಸ್ಪಷ್ಟವಾಗಿ ತೋರುತ್ತಿದೆ.

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಈ ಹಿಂದೆ, ಭಾರತದ ಸೂಪರ್‌ಬೈಕ್ ಕಂಪನಿಯಾದ ಟ್ರಯಂಫ್‍‍ನ ಡೀಲರ್‍ ಒಬ್ಬರು ಚಪ್ಪಲಿ ಧರಿಸಿದ್ದ ವ್ಯಕ್ತಿಗೆ ಟೆಸ್ಟ್ ರೈಡ್ ನೀಡಲು ನಿರಾಕರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸುರಕ್ಷತಾ ಕಾರಣಗಳಿಗಾಗಿ ಚಪ್ಪಲಿ ಧರಿಸಿದವರಿಗೆ ಟೆಸ್ಟ್ ರೈಡ್ ಮಾಡಲು ನಿರಾಕರಿಸುವುದು ಟ್ರಯಂಫ್‌ ಕಂಪನಿಯ ನಿಯಮವಾಗಿದೆ ಎಂದು ತಿಳಿದ ನಂತರ ವಿವಾದ ತಣ್ಣಗಾಯಿತು.

ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್ ನಿರಾಕರಿಸಿದ ಆರ್‍‍ಟಿ‍ಒ, ಕಾರಣವೇನು ಗೊತ್ತಾ?

ಈ ರೀತಿಯ ನಿಯಮಗಳು ಸುರಕ್ಷಿತ ಸವಾರಿಯನ್ನು ಪ್ರೋತ್ಸಾಹಿಸುತ್ತದೆಯಾದರೂ, ಯಾವುದೇ ನಿಯಮವಿಲ್ಲದಿದ್ದರೂ ತಾವೇ ನಿಯಮಗಳನ್ನು ಮಾಡುತ್ತಿರುವ ಆರ್‌ಟಿಒ ಅಧಿಕಾರಿಗಳ ಉದ್ದೇಶವೇನೆಂಬುದು ತಿಳಿದು ಬಂದಿಲ್ಲ.

Article Published On: Wednesday, October 23, 2019, 12:05 [IST]
English summary
No driving test for women wearing jeans and capris - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+