ಡ್ರೋನ್ ಪ್ರತಾಪ್ ದಾನವಾಗಿ ನೀಡಿದ ಸ್ಕೂಟರ್ ವಿಶೇಷತೆಗಳೇನು ಗೊತ್ತಾ?: ಇದನ್ನು ನೀವು ತಿಳಿದಿರಲೇಬೇಕು
ಸದ್ಯಕ್ಕೆ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಸದ್ದು ಮಾಡುತ್ತಿರುವ ಸ್ಕೂಟರ್ ಎಂದರೆ ಅದು ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್. ಆಗೊಮ್ಮೆ ಈಗೊಮ್ಮೆ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದ ಈ ಸ್ಕೂಟರ್ ಇತ್ತೀಚೆಗೆ ಸದ್ದು ಮಾಡಿದ್ದು ಕನ್ನಡ ಬಿಗ್‌ಬಾಸ್ ಸ್ಪರ್ಧಿಯಾಗಿ ಸದ್ದು ಮಾಡಿದ ಡ್ರೋನ್ ಪ್ರತಾಪ್‌ನಿಂದಾಗಿ (Drone Prathap).
ಬೌನ್ಸ್ ಮೂಲತಃ ಬೆಂಗಳೂರು ಮೂಲದ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಕಂಪನಿ. ಇತ್ತೀಚೆಗಷ್ಟೇ ಇದು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭಾರೀ ಡಿಸ್ಕೌಂಟ್ ಅನ್ನು ಘೋಷಣೆ ಮಾಡಿತ್ತು. ಇ1 ಪ್ಲಸ್ (E1+) ಎಲೆಕ್ಟ್ರಿಕ್ ಸ್ಕೂಟರ್ ದರವನ್ನು ರೂ.24,000 ಇಳಿಕೆ ಮಾಡಲಾಗಿದೆ ಎಂದು ಘೋಷಿಸಿದೆ. ಇಂದಿನ ಈ ಲೇಖನದಲ್ಲಿ ಡ್ರೋನ್ ಪ್ರತಾಪ್ ಉಡುಗೊರೆಯಾಗಿ ನೀಡಿದ ಬೌನ್ಸ್ ಇನ್ಫಿನಿಟಿ ಸ್ಕೂಟರ್ ಕುರಿತಾಗಿನ ವಿಶೇಷತೆಗಳನ್ನು ನೋಡೋಣ.

1. ಬೌನ್ಸ್ ಇನ್ಫಿನಿಟಿ ಇ1 ಪ್ಲಸ್ ಇ-ಸ್ಕೂಟರ್‌ನಲ್ಲಿ 2 ಕೆಡಬ್ಲ್ಯೂಹೆಚ್ (kWh) ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಮತ್ತು 2.2 ಕೆಡಬ್ಲ್ಯೂ (kW) ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದೆ. ಪೂರ್ತಿ ಚಾರ್ಜ್ ನಲ್ಲಿ 85 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಗಂಟೆಗೆ 65 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದೆ.
2. ಹೊಸ ಬೌನ್ಸ್ ಇನ್ಫಿನಿಟಿ (Bounce Infinity) ಇ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳಲೇಬೆಕು. ಇ ಸ್ಕೂಟರ್‌ನ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ (ರೇರ್) ಟ್ವಿನ್ ಸ್ಪ್ರಿಂಗ್ ಶಾರ್ಕ್ಸ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ಈ ಸ್ಕೂಟರ್ ಮುಂಭಾಗ ಮತ್ತು ಹಿಂಭಾಗ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.
3. ಹೊಸ ಬೌನ್ಸ್ ಇನ್ಫಿನಿಟಿ ಇ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಯುವಕರನ್ನು ತನ್ನತ್ತ ಸೆಳೆಯುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್ಇಡಿ ಲೈಟಿಂಗ್ ಸಿಸ್ಟಮ್, ಸ್ಮಾರ್ಟ್‌ಫೋನ್ ಕನೆಕ್ಟ್ ಮಾಡಲು ಸಾಧ್ಯವಾಗುವಂತಹ ಫುಲ್ ಲೋಡೆಡ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ಜೊತೆಗೆ ಗ್ರೇ, ಬ್ಲೂ, ಗ್ರೀನ್, ಡಾರ್ಕ್ ಗ್ರೇ, ಯೆಲ್ಲೋ ಸೇರಿದಂತೆ ಆಕರ್ಷಕ ಬಣ್ಣಗಳೊಂದಿಗೆ ಬೌನ್ಸ್ ಇನ್ಫಿನಿಟಿ ಇ1 ಪ್ಲಸ್ ಇ-ಸ್ಕೂಟರ್ ಖರೀದಿಗೆ ಲಭ್ಯವಿದೆ.
4. ಈ ಬೈಕ್‌ನ ಬ್ರೇಕಿಂಗ್ ವಿಚಾರಕ್ಕೆ ಬರುವುದಾದರೆ, ಮುಂಭಾಗ ಮತ್ತು ಹಿಂಭಾಗದ ಚಕ್ರಕ್ಕೆ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಸ್ಕೂಟರ್ ಓಡಿಸುವಾಗ ಚಾಲಕನ ಆತ್ಮವಿಶ್ವಾಸ ವರ್ಧನೆಯಾಗಿ, ಆತಂಕ ರಹಿತ ಚಲಾವಣೆ ಮಾಡಬಹುದಾಗಿದೆ. ಯಾಕೆಂದರೆ, ರಸ್ತೆಯಲ್ಲಿ ಏನಾದರೂ ಅಡಚಣೆಗಳು ಉಂಟಾದರೆ, ವಾಹನವ್ನು ನಿಲ್ಲಿಸಲು ಈ ಸ್ಕೂಟರ್‌ನ ಎರಡು ಡಿಸ್ಕ್ ಬ್ರೇಕ್‌ಗಳು ಸಹಾಯ ಮಾಡುತ್ತವೆ.
ಬಿಗ್‌ಬಾಸ್ ರನ್ನರ್ ಅಪ್ ಆಗಿದ್ದ ಪ್ರತಾಪ್ಗೆ 10 ಲಕ್ಷ ಬಹುಮಾನದ ಮೊತ್ತ ಹಾಗೂ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರತಾಪ್ ಅಗತ್ಯವಿರುವ ಬಡ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಈ ಮಾಹಿತಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆ ವರೆಗೂ ಹೋಟಲ್ ನಲ್ಲಿ ಕೆಲಸ ಮಾಡಿ ಹಾಗೂ ಸಂಜೆಯ ಮೇಲೆ ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು.
ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕನ್ನು ಬ್ಯಾಂಕ್ ನವರು ಸೀಜ್ ಮಾಡಿದರು ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ಈ ಹುಡುಗನಿಗೆ ನೀಡಿದು ನನಗೆ ತುಂಬಾ ಖುಷಿ ತಂದಿದೆ' ಎಂದು ಬರೆದುಕೊಂಡಿದ್ದಾರೆ. ಡ್ರೋನ್ ಪ್ರತಾಪ್ರ ಈ ಕಾರ್ಯಕ್ಕೆ ಮೆಚ್ಚಿ ಹಲವರು ಆವರನ್ನು ಅಭಿನಂದಿಸಿ ಕಾಮೆಂಟ್ ಮಾಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications