Just In
Don't Miss!
- News
ಆಹಾರ ಸುರಕ್ಷಾ ಶೃಂಗ ಪ್ರಶಸ್ತಿ-2019: 2 ಪ್ರಶಸ್ತಿ ಗೆದ್ದ ಹೆರಿಟೇಜ್ ಫುಡ್ಸ್
- Sports
ಆಟದ ಮಧ್ಯೆ ಮಗುವಿಗೆ ಹಾಲುಣಿಸಿದ ಆಟಗಾರ್ತಿ; ಹೃದಯಗೆದ್ದ ಫೋಟೋ ವೈರಲ್
- Movies
ಡಿಸೆಂಬರ್ 18ಕ್ಕೆ ದುನಿಯಾ ವಿಜಯ್ ತಂಡದಿಂದ ಸರ್ಪ್ರೈಸ್
- Finance
ಶೈಕ್ಷಣಿಕ ಸಾಲ ಮನ್ನಾ ಆಗುತ್ತಾ? ಏನಂತಾರೆ FM ನಿರ್ಮಲಾ ಸೀತಾರಾಮನ್
- Technology
ಗೂಗಲ್ ಮ್ಯಾಪ್ ನಲ್ಲಿ ಪಾದಾಚಾರಿಗಳಿಗೆ ಅನುಕೂಲವಾಗುವ ಮತ್ತೊಂದು ಫೀಚರ್
- Lifestyle
ಕಬ್ಬಿಣಾಂಶದ ಕೊರತೆಯೇ? ಈ ಆಹಾರಗಳನ್ನು ಸೇವಿಸಿ
- Education
ಎಸ್ಎಸ್ಎಲ್ಸಿ ಪಾಸ್...ಚಾಲಕ ವೃತ್ತಿ ಅಂದ್ರೆ ನಂಗಿಷ್ಟ… ಹಾಗಿದ್ರೆ ಈ ಸಾರಿಗೆ ಸಂಸ್ಥೆ ನೇಮಕಾತಿಗೆ ಅರ್ಜಿ ಹಾಕ
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
ಪುಲ್ ಟೈಟ್ ಆಗಿ ಜೆಸಿಬಿಯಿಂದ ಪೊಲೀಸ್ ಜೀಪ್ ಅನ್ನು ಮಕಾಡೆ ಮಲಗಿಸಿದ ಭೂಪ..!
ಭಾರತದ ರಸ್ತೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಭಾರೀ ಗಾತ್ರದ ವಾಹನಗಳಲ್ಲಿ ಜೆಸಿಬಿಯು ಒಂದಾಗಿದೆ. ಈ ಹಿಂದೆ, ಜೆಸಿಬಿಯ ಹಲವಾರು ವೀಡಿಯೊಗಳು ವೈರಲ್ ಆಗಿದ್ದವು. ಆದರೆ ಈ ಬಾರಿ ನಡೆದಿರುವ ಘಟನೆಯಲ್ಲಿ ಜೆಸಿಬಿ ಚಾಲಕನೊಬ್ಬ ಕುಡಿದು ಜೆಸಿಬಿ ಚಲಾಯಿಸಿ, ಅಧಿಕೃತ ಪೊಲೀಸ್ ಜೀಪ್ ಅನ್ನು ತಳ್ಳಿದ್ದಾನೆ.

ವರದಿಗಳ ಪ್ರಕಾರ, ಜೆಸಿಬಿ ಚಾಲಕನು ಮದ್ಯಪಾನ ಮಾಡಿ, ತಡರಾತ್ರಿ ಪೆಟ್ರೋಲ್ ಬಂಕ್‍ವೊಂದನ್ನು ಉರುಳಿಸಲು ಹೊರಟಿದ್ದನು. ಯಾವ ಕಾರಣಕ್ಕೆ ಪೆಟ್ರೋಲ್ ಬಂಕ್ ಅನ್ನು ಉರುಳಿಸಲು ಹೊರಟಿದ್ದ ಎಂಬುದು ಸ್ಪಷ್ಟವಾಗಿಲ್ಲ.

ಆದರೆ ಪೆಟ್ರೋಲ್ ಬಂಕ್ ಸೇವೆಯ ಬಗ್ಗೆ ಅತೃಪ್ತನಾಗಿದ್ದ ಕಾರಣಕ್ಕೆ ಜೆಸಿಬಿ ಚಾಲಕನು ಈ ಪೆಟ್ರೋಲ್ ಬಂಕ್ ಅನ್ನು ಉರುಳಿಸಲು ಹೊರಟಿದ್ದ ಎಂದು ಹೇಳಲಾಗಿದೆ. ಎಚ್ಚೆತ್ತ ಪೆಟ್ರೋಲ್ ಬಂಕ್‍ನವರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರನ್ನು ಕರೆಸಿದ್ದಾರೆ.

ಪೊಲೀಸರು ಸ್ಥಳದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ, ಇದರಿಂದ ರೊಚ್ಚಿಗೆದ್ದ ಜೆಸಿಬಿ ಚಾಲಕನು ಪೊಲೀಸರ ವಿರುದ್ಧವೇ ತನ್ನ ಪೌರುಷ ತೋರಿಸಿದ್ದಾನೆ. ಅಂದ ಹಾಗೆ ಈ ಘಟನೆ ನಡೆದಿರುವುದು ರಾಜಸ್ಥಾನದ ಜೋಧಪುರದಲ್ಲಿ.

ಜೆಸಿಬಿ ಚಾಲಕನು ಪೊಲೀಸ್ ಜೀಪ್ ಅನ್ನು ತಳ್ಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಪೊಲೀಸ್ ಜೀಪ್ ಮಹೀಂದ್ರಾ ಥಾರ್‌ನಂತೆ ಕಾಣುತ್ತದೆ. ಈ ವಾಹನವು ಸಾಕಷ್ಟು ತೂಕವನ್ನು ಹೊಂದಿರುತ್ತದೆ.

ಕೋಪಗೊಂಡಿರುವ ಹಾಗೂ ಕುಡಿದ ಮತ್ತಿನಲ್ಲಿರುವ ಜೆಸಿಬಿ ಚಾಲಕನು ವೀಡಿಯೊದಲ್ಲಿ ಪೊಲೀಸ್ ಜೀಪಿನ ಹತ್ತಿರ ಬರುತ್ತಿರುವುದನ್ನು ಕಾಣಬಹುದು. ನೋಡುತ್ತಿದ್ದಂತೆ ಆ ಜೀಪ್ ಅನ್ನು ತಳ್ಳಿ ಪಲ್ಟಿ ಹೊಡಿಸಿದ್ದಾನೆ.

ನಂತರ ಜೆಸಿಬಿಯಿಂದ ಜೀಪ್ ಅನ್ನು ಸಂಪೂರ್ಣವಾಗಿ ಉರುಳಿಸಿದ್ದಾನೆ. ಜೆಸಿಬಿ ಚಾಲಕನು ಪ್ರಜ್ಞೆಯಲ್ಲಿಲ್ಲದ ಕಾರಣಕ್ಕೆ ಹಾಗೂ ತಮಗೆ ಹಾನಿಯಾಗಬಹುದೆಂಬ ಕಾರಣಕ್ಕೆ ಪೊಲೀಸರು ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ಪೊಲೀಸರು ವಾಹನವನ್ನು ಹಿಮ್ಮೆಟ್ಟಿಸಲು ಹಾಗೂ ದೂರ ಹೋಗಲು ಪ್ರಯತ್ನಿಸುತ್ತಿದ್ದಂತೆ, ಜೆಸಿಬಿ ಚಾಲಕನು ಪೊಲೀಸ್ ಜೀಪ್ ಅನ್ನು ಆಟದ ಸಾಮಾನಿನಂತೆ ತಳ್ಳುತ್ತಾನೆ. ವರದಿಗಳ ಪ್ರಕಾರ, ಮಹೀಂದ್ರಾ ಥಾರ್ ಒಳಗೆ ಕುಳಿತಿದ್ದ ಪೊಲೀಸರಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಪುಂಡಾಟಿಕೆ ಮೆರೆದ ಜೆಸಿಬಿಯ ಚಾಲಕನನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ. ಘಟನೆಯ ನಂತರ, ಓಡಿಹೋಗಲು ಯತ್ನಿಸಿದ ಜೆಸಿಬಿ ಚಾಲಕನನ್ನು ಪೊಲೀಸರು ಸುತ್ತುವರೆದು ಬಂಧಿಸಿದ್ದಾರೆ. ಸದ್ಯಕ್ಕೆ ಜೆಸಿಬಿ ಚಾಲಕನ ವಿರುದ್ಧ ಯಾವ ಪ್ರಕರಣಗಳನ್ನು ದಾಖಲಿಸಲಾಗುವುದು ಎಂಬುದು ತಿಳಿದು ಬಂದಿಲ್ಲ.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಜೈಲಿಗೆ ಅಟ್ಟಲಾಗುವುದು. ಈ ತಪ್ಪಿಗಾಗಿ ಹಲವಾರು ವರ್ಷಗಳ ಕಾಲ ಜೈಲಿನಲ್ಲಿರಬೇಕಾಗುತ್ತದೆ. ಈ ಪೂರ್ತಿ ಘಟನೆಯು ಪೆಟ್ರೋಲ್ ಬಂಕ್‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜೆಸಿಬಿ ಚಾಲಕನು ಪೊಲೀಸ್ ಜೀಪಿನ ಮೇಲೆ ತನ್ನ ಪೂರ್ಣ ಬಲವನ್ನು ಬಳಸುತ್ತಿರುವುದನ್ನು ಕಾಣಬಹುದು. ಜೆಸಿಬಿ ಚಾಲಕನು ಪೊಲೀಸ್ ಜೀಪ್ ಅನ್ನು ಉರುಳಿಸಿದ ನಂತರ, ಅದರಲ್ಲಿದ್ದ ಪೊಲೀಸ್ ವಾಹನದಿಂದ ಹೊರಬಂದು ನಂತರ ಅದರಿಂದ ಓಡಿಹೋಗುವುದನ್ನು ಕಾಣಬಹುದು.

ಮಹೀಂದ್ರಾ ಥಾರ್‌ನಲ್ಲಿ ಮೂವರು ಪೊಲೀಸರು ಇದ್ದರು. ಆದರೆ ಒಬ್ಬರು ಮಾತ್ರ ಅದರಿಂದ ಹೊರಬರುವುದನ್ನು ಕಾಣಬಹುದು. ಉಳಿದ ಇಬ್ಬರು ಸುರಕ್ಷಿತವಾಗಿದ್ದು, ನಂತರ ಹೊರ ಬಂದಿದ್ದಾರೆ. ಜೆಸಿಬಿ ಅತ್ಯಂತ ಶಕ್ತಿಶಾಲಿಯಾದ ಅಗೆಯುವ ಸಾಧನವಾಗಿದೆ.

ಇದನ್ನು ನಿರ್ಮಾಣ ಸ್ಥಳಗಳಲ್ಲಿ ರಂಧ್ರಗಳನ್ನು ಅಗೆಯಲು ಹಾಗೂ ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಹಲವಾರು ಕಾರ್ಯಗಳಿಗಾಗಿ ಬಳಸಲಾಗುತ್ತದೆ. ಇದು ಭಾರೀ ಗಾತ್ರದ ವಾಹನಗಳಲ್ಲಿ ಒಂದಾಗಿದ್ದು, ಜನರ ಕೆಲಸವನ್ನು ಸುಲಭವಾಗಿಸುತ್ತದೆ.