ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‌ಟಿ‍ಒ ಇನ್ಸ್‌ಪೆಕ್ಟರ್

ಹೊಸ ಮೋಟಾರ್ ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸುವವರಿಗೆ, ದೇಶಾದ್ಯಂತ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗಿದೆ. ಹೊಸ ನಿಯಮದನ್ವಯ ಕುಡಿದು ವಾಹನ ಚಲಾಯಿಸಿದರೆ ರೂ.10,000 ದಂಡ ವಿಧಿಸಲಾಗುವುದು.

ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‍‍ಟಿ‍ಒ ಇನ್ಸ್ ಪೆಕ್ಟರ್

ಕಳೆದ ವಾರ ಕುಡಿದು ಬೈಕ್ ಚಾಲನೆ ಮಾಡಿದ ಯುವಕನಿಗೆ ಕುಮಾರಸ್ವಾಮಿ ಲೇ‍ಔ‍‍ಟ್ ಪೊಲೀಸರು ರೂ.17,000 ದಂಡ ವಿಧಿಸಿದ್ದರು. ಕುಡಿದು ಟ್ರಕ್ ಚಾಲನೆ ಮಾಡುತ್ತಿದ್ದ ಹರಿಯಾಣ ಮೂಲದ 45 ವರ್ಷದ ವ್ಯಕ್ತಿಯೊಬ್ಬನಿಗೆ ಬೆಂಗಳೂರು ಪೊಲೀಸರು ದಂಡ ವಿಧಿಸಿದ್ದಾರೆ. ಭರೂ ಲಾಲ್ ಎಂಬ ಟ್ರಕ್ ಚಾಲಕನನ್ನು ಹೆಬ್ಬಾಳ ಪೊಲೀಸರು ದಂಡ ವಿಧಿಸಿದ್ದರು. ಆತನನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಟ್ರಾಫಿಕ್ ಮುಂದೆ ಹಾಜರುಪಡಿಸಿದಾಗ, ಆತನಿಗೆ ರೂ.10,000 ದಂಡ ವಿಧಿಸಲಾಗಿತ್ತು.

ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‍‍ಟಿ‍ಒ ಇನ್ಸ್ ಪೆಕ್ಟರ್

ಹೊಸ ನಿಯಮದನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ದುಪ್ಪಟ್ಟು ದಂಡ ವಿಧಿಸಲಾಗುವುದು. ಉತ್ತರ ಪ್ರದೇಶದ ಚಾಕಿಯಾದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಡಿಎಸ್‍‍ಪಿ ಹಾಗೂ ಅವರ ಕಾರು ಚಾಲಕನಿಗೆ ದಂಡ ವಿಧಿಸಲಾಗಿತ್ತು.

ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‍‍ಟಿ‍ಒ ಇನ್ಸ್ ಪೆಕ್ಟರ್

ಈ ಪ್ರಕರಣದಲ್ಲಿ ಡಿ‍ಎಸ್‍‍ಪಿಯವರ ಕಾರು ಚಾಲಕ ಸೀಟ್ ಬೆಲ್ಟ್ ಧರಿಸಿರಲಿಲ್ಲ ಹಾಗೂ ಸಿಗ್ನಲ್ ಜಂಪ್ ಮಾಡಿದ್ದ. ಜನ ಸಾಮಾನ್ಯರಿಗೆ ಸೀಟ್ ಬೆಲ್ಟ್ ಧರಿಸದೇ ಇದ್ದರೆ, ರೂ.1,000 ಹಾಗೂ ಸಿಗ್ನಲ್ ಜಂಪ್ ಮಾಡಿದರೆ ರೂ.500 ದಂಡ ವಿಧಿಸಲಾಗುತ್ತದೆ.

ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‍‍ಟಿ‍ಒ ಇನ್ಸ್ ಪೆಕ್ಟರ್

ಡಿ‍ಎಸ್‍‍ಪಿಯವರ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯಾದ ಕಾರಣ ದುಪ್ಪಟ್ಟು ಅಂದರೆ ರೂ.3,000 ದಂಡ ವಿಧಿಸಲಾಗಿತ್ತು. ಚಂಡೀಗಢದಲ್ಲಿ ನಡೆದಿದ್ದ ಇನ್ನೊಂದು ಪ್ರಕರಣದಲ್ಲಿ ಮೊಬೈಲ್‍‍ನಲ್ಲಿ ಮಾತನಾಡಿಕೊಂಡು ಹೋಂಡಾ ಆಕ್ಟಿವಾ ಗಾಡಿ ಚಲಾಯಿಸುತ್ತಿದ್ದ ಪೊಲೀಸ್ ಅಧಿಕಾರಿಗೆ ರೂ.10,000 ದಂಡ ವಿಧಿಸಲಾಗಿತ್ತು.

ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‍‍ಟಿ‍ಒ ಇನ್ಸ್ ಪೆಕ್ಟರ್

ಆದರೆ ಬೆಂಗಳೂರಿನಲ್ಲಿ ಈ ಎಲ್ಲಾ ಘಟನೆಗಳನ್ನು ಮೀರಿಸುವ ಘಟನೆಯೊಂದು ನಡೆದಿದೆ. ಸಾಮಾನ್ಯ ಜನರು ಸಣ್ಣಪುಟ್ಟ ತಪ್ಪು ಮಾಡಿದರೂ ಆರ್‍‍ಟಿ‍ಒ ಅಧಿಕಾರಿಗಳು ಮುಲಾಜಿಲ್ಲದೇ ಭಾರೀ ಪ್ರಮಾಣದ ದಂಡ ವಿಧಿಸುತ್ತಾರೆ. ಕೆಲವೊಮ್ಮೆ ವಾಹನಗಳನ್ನೇ ವಶಕ್ಕೆ ಪಡೆಯುತ್ತಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ಕಾನೂನು ಪಾಲಿಸಬೇಕಾದ ಆರ್‍‍ಟಿ‍ಒ ಅಧಿಕಾರಿಯೇ ಕುಡಿದು ವಾಹನ ಚಲಾಯಿಸಿದ್ದಾರೆ. ಹಗಲು ವೇಳೆಯಲ್ಲಿ ಅದರಲ್ಲೂ ಬೆಳ್ಳಂಬೆಳ್ಳಗೆಯೇ ಕುಡಿದು ವಾಹನ ಚಲಾಯಿಸಿರುವ ಆರ್‍‍ಟಿ‍ಒ ಅಧಿಕಾರಿ ಎದುರಿನಲ್ಲಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾರೆ.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‍‍ಟಿ‍ಒ ಇನ್ಸ್ ಪೆಕ್ಟರ್

ಈ ಘಟನೆಯನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್‍‍ನಲ್ಲಿ ಸೆರೆಹಿಡಿದಿದ್ದಾರೆ. ನಿಲ್ಲಲು ಶಕ್ತಿಯೂ ಇಲ್ಲದಷ್ಟು ಟೈಟ್ ಆಗಿರುವ ಇನ್ಸ್ ಪೆಕ್ಟರ್ ದರ್ಜೆಯ ಈ ಆರ್‍‍ಟಿ‍ಒ ಅಧಿಕಾರಿ ತಮ್ಮ ಇಟಿಯೋಸ್ ಕಾರ್ ಅನ್ನು ಚಲಾಯಿಸಿಕೊಂಡು ಹೋಗಿ ಎದುರಿನಲ್ಲಿದ್ದ ಆಟೋಗೆ ಗುದ್ದಿದ್ದಾರೆ.

MOST READ: ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‍‍ಟಿ‍ಒ ಇನ್ಸ್ ಪೆಕ್ಟರ್

ಅಪಘಾತದ ನಂತರ ಸ್ಥಳಿಯರು ರಕ್ಷಣೆಗೆ ಧಾವಿಸಿದ್ದಾರೆ. ಬಹುಶಃ ಈ ಅಧಿಕಾರಿ ಕುಡಿದು ಕಚೇರಿಗೆ ಹೋಗುತ್ತಿರುವ ಸಾಧ್ಯತೆಗಳಿವೆ. ಹಾಗಾಗಿ ಈ ಅಧಿಕಾರಿ ಯೂನಿಫಾರಂನಲ್ಲಿರುವುದನ್ನು ಕಾಣಬಹುದು. ಅಂದ ಹಾಗೇ ಕುಡಿದು ಕಾರ್ ಚಲಾಯಿಸಿದ ಈ ಅಧಿಕಾರಿಯ ಹೆಸರು ಮಂಜುನಾಥ್.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‍‍ಟಿ‍ಒ ಇನ್ಸ್ ಪೆಕ್ಟರ್

ಹೊಸ ನಿಯಮಗಳ ಅನ್ವಯ ಕುಡಿದು ವಾಹನ ಚಲಾಯಿಸುತ್ತಿರುವ ಈ ಅಧಿಕಾರಿಗೆ ದುಪ್ಪಟ್ಟು ದಂಡ ವಿಧಿಸಬೇಕಾಗುತ್ತದೆ. ಈ ಘಟನೆಯನ್ನು ವೀಡಿಯೊ ಮಾಡುತ್ತಿರುವ ಸಾರ್ವಜನಿಕರು ಈ ಅಧಿಕಾರಿ ಮಾಡಿರುವ ತಪ್ಪಿಗೆ ಎಷ್ಟು ದಂಡ ಬೀಳುತ್ತದೆ ಎಂದು ಪ್ರಶ್ನಿಸುತ್ತಿರುವುದನ್ನು ಕಾಣಬಹುದು.

ಬೆಳ್ಳಂಬೆಳ್ಳಗೆ ಕುಡಿದು ಆಟೋಗೆ ಗುದ್ದಿದ ಬೆಂಗಳೂರಿನ ಆರ್‍‍ಟಿ‍ಒ ಇನ್ಸ್ ಪೆಕ್ಟರ್

ಹಗಲು ವೇಳೆಯಲ್ಲೇ ಕುಡಿದು ವಾಹನ ಚಲಾಯಿಸಿರುವ ಈ ಆರ್‍‍‍ಟಿ‍ಒ ಇನ್ಸ್ ಪೆಕ್ಟರ್‍‍ರವರಿಗೆ ಎಷ್ಟು ಪ್ರಮಾಣದ ದಂಡವನ್ನು ವಿಧಿಸಲಾಗುವುದು ಹಾಗೂ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ.

More from DriveSpark

Article Published On: Friday, September 13, 2019, 13:07 [IST]
English summary
Drunk rto officer bangalore crashes into auto rickshaw video details - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+