ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್

By Nagaraja

ಪೊಲೀಸ್ ಗಸ್ತು ಪರೇಡ್‌ಗಾಗಿ ಲಂಬೋರ್ಗಿನಿ, ಫೆರಾರಿ, ಡುಗಾಟಿಗಳಂತಹ ಐಷಾರಾಮಿ ಕಾರುಗಳನ್ನು ಬಳಕೆ ಮಾಡುತ್ತಿರುವ ದುಬೈ ಈಗ ಮತ್ತೆ ಸುದ್ದಿಯಲ್ಲಿದೆ. ಮಾರ್ಟಿನ್ ವಿಮಾನಯಾನ ಸಂಸ್ಥೆಯೊಂದಿಗೆ ಮಾಡಿರುವ ತಾಜಾ ಒಪ್ಪಂದದಂತೆ ಅತಿ ದುಬಾರಿ ಜೆಟ್ ಪ್ಯಾಕ್ ವಿಮಾನಗಳು ದುಬೈ ನಾಗರಿಕ ರಕ್ಷಣಾ ವಿಭಾಗವನ್ನು ಬಂದು ಸೇರಲಿದೆ.

Also Read: ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ

ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದ ವೇಳೆ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಈ ಜೆಟ್ ಪ್ಯಾಕ್ ಗಳು ನೆರವಾಗಲಿದೆ. ಈ ನಿಟ್ಟಿನಲ್ಲಿ ದುಬೈ ರಕ್ಷಣಾ ವಿಭಾಗಕ್ಕೆ ನುರಿತ ತರಬೇತಿಯನ್ನು ನೀಡಲಾಗಿದೆ.

ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್

ಇತ್ತೀಚೆಗಷ್ಟೇ ನಡೆದ ದುಬೈ ಏರ್ ಶೋದಲ್ಲಿ ಈ ಬಗ್ಗೆ ದುಬೈ ನಾಗರಿಕ ರಕ್ಷಣಾ ವಿಭಾಗ ಹಾಗೂ ಮಾರ್ಟಿನ್ ಏರ್ ಕ್ರಾಫ್ಟ್ ಕಂಪನಿ ಲಿಮಿಟೆಡ್ ಜೊತೆ ಸಹಮತ ಮೂಡಿಬಂದಿದೆ. ಇದರಂತೆ 20ರಷ್ಟು ಜೆಟ್ ಪ್ಯಾಕ್ ಗಳನ್ನು ಹಸ್ತಾಂತರಿಸಲಾಗಿದೆ.

ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್

ಈ ಬಗ್ಗೆ ಹೇಳಿಕೆ ಕೊಟ್ಟಿರುವ ದುಬೈ ಸಿವಿಲ್ ಡಿಫೆನ್ಸ್ ಅಧಿಕಾರಿಗಳು, ಜನರ ಜೀವ ಹಾಗೂ ಬೆಳೆಬಾಳುವ ಸಂಪತ್ತು ಹಾಗೂ ಪರಿಸರ ರಕ್ಷಣೆ ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಗಗನಚುಂಬಿಗಳು ನಿರ್ಣಾಯಕವೆನಿಸಲಿದೆ ಎಂದಿದೆ.

ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್

ಜೆಟ್ ಪ್ಯಾಕ್ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರಲಿದ್ದು, ಪೈಲಟ್ ಅಥವಾ ರಿಮೋಟ್ ಕಂಟ್ರೋಲ್ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡಲಿದೆ.

ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್

ಯಾವುದೇ ಪ್ರದೇಶದಿಂದಲೂ ಸುಲಭವಾಗಿ ನಿರ್ವಹಿಸಬಹುದಾದ ಇಂತಹ ಜೆಟ್ ಪ್ಯಾಕ್ ಗಳು ಗಾತ್ರದಲ್ಲಿ ಸಣ್ಣದಾಗಿರುವುದಾಗಿರುವುದರಿಂದ ಇಕ್ಕಟ್ಟಿನ ಕಟ್ಟಡಗಳ ನಡುವೆಯೂ ನಿಭಾಯಿಸಬಹುದಾಗಿದೆ.

ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್

ಇದಲ್ಲದೆ ಕಣ್ಗಾವಲು ಸೇವೆ, ವಿಶೇಷ ತಂಡದ ಕಾರ್ಯಾಚರಣೆ ಇನ್ನಿತರ ತುರ್ತು ಸಂದರ್ಭದಲ್ಲೂ ನೆರವು ಪಡೆಯಬಹುದಾಗಿದೆ.

ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್

ಮಾರ್ಟಿನ್ ಜೆಟ್ ಪ್ಯಾಕ್ ಗಳು 3000 ಅಡಿ ಎತ್ತರಕ್ಕೂ ಹಾರುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ 26 ಮೈಲು ವೇಗದಲ್ಲಿ ಸಂಚರಿಸಲಿದೆ.

ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್

ಅಷ್ಟೇ ಯಾಕೆ 265 ಕೆ.ಜಿ ತೂಕವನ್ನು ಹೊರುವ ಸಾಮರ್ಥ್ಯವನ್ನು ಇದು ಹೊಂದಿದ್ದು, 40ರಿಂದ 50 ಕೀ.ಮೀ. ವ್ಯಾಪ್ತಿಯ ತನಕ ಹಾರಾಡಲಿದೆ.

ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್

ಅಂದ ಹಾಗೆ ನ್ಯೂಜಿಲೆಂಡ್ ಮೂಲದ ಮಾರ್ಟಿನ್ ಏರ್ ಕ್ರಾಫ್ಟ್ ಸಂಸ್ಥೆಯು ದುಬೈಗೆ ಜೆಟ್ ಪ್ಯಾಕ್ ಗಳನ್ನು ಒದಗಿಸುತ್ತಿದೆ. 1981ನೇ ಇಸವಿಯಿಂದಲೂ ನಾವೀನ್ಯ ತಂತ್ರಗಾರಿಕೆಯ ಜೆಟ್ ವಿಮಾನಗಳನ್ನು ಸಂಸ್ಥೆಯು ತಯಾರಿಸುತ್ತಿದೆ.

ಇವನ್ನೂ ಓದಿ

54 ಡ್ರೋನ್‌ ಒಟ್ಟುಗೂಡಿಸಿ ಮಿನಿ ಹೆಲಿಕಾಪ್ಟರ್ ತಯಾರಿ

More from DriveSpark

Article Published On: Monday, November 16, 2015, 10:51 [IST]
English summary
Dubai Civil Defence buys 20 jetpacks from Martin aircraft
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+