ದುಬೈ ಪೊಲೀಸ್ ತೆಕ್ಕೆಗೆ ಸೂಪರ್ ಬೈಕ್ - ಕ್ಯಾನ್ ಆಮ್ ಸ್ಪೈಡರ್
ಇದುವರೆಗೆ ಸೂಪರ್ ಕಾರುಗಳನ್ನು ಒಂದೊಂದಾಗಿ ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಿದ್ದ ಜಗತ್ತಿನ ಅತ್ಯಂತ ಶ್ರೀಮಂತ ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ದುಬೈ ಪೊಲೀಸ್, ಇದೀಗ ಸೂಪರ್ ಬೈಕ್‌ಗಳ ಮೇಲೆಯು ಕಣ್ಣು ನೆಟ್ಟಿದೆ.
ವರದಿಗಳ ಪ್ರಕಾರ, ಕ್ಯಾನ್ ಆಮ್ ಸ್ಪೈಡರ್ (Can Am Spyder) ಸೂಪರ್ ಬೈಕನ್ನು ದುಬೈ ಪೊಲೀಸ್ ತನ್ನ ಸೆಕ್ಕೆಗೆ ಸೇರಿಕೊಂಡಿದೆ. ಈ ಮೂಲಕ ಇಡೀ ಜಗತ್ತಿನಲ್ಲೇ ಅತ್ಯಂತ ದುಬಾರಿ ವಾಹನಗಳನ್ನು ಹೊಂದಿರುವ ಭದ್ರತಾ ಪಡೆ ಎಂಬ ಗೌರವಕ್ಕೆ ಪಾತ್ರವಾಗಿದೆ.

ಗಸ್ತು ಕಾವಲು ಪಡೆಯಲ್ಲಿ ಸುಧಾರಣೆ ಹಾಗೂ ಇನ್ನಷ್ಟು ನಿಖರ ಕಾರ್ಯಾಚರಣೆ ತರುವ ನಿಟ್ಟಿನಲ್ಲಿ ಸೂಪರ್ ಬೈಕ್ ಖರೀದಿಸಿದ್ದೇವೆ ಎಂದು ದುಬೈ ಪೊಲೀಸ್ ಮುಖ್ಯಸ್ಥರಾಗಿರುವ ಮೇಜರ್ ಜನರಲ್ ಖಮೀಸ್ ಅಲ್ ಮಜೈನಾ ತಿಳಿಸಿದ್ದಾರೆ.

ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಕೋನದಲ್ಲಿ ಅಂತರಾಷ್ಟ್ರೀಯ ದರ್ಜೆಯನ್ನು ಕಾಯ್ದುಕೊಳ್ಳುವದರಲ್ಲಿ ಸಂಸ್ಥೆಯು ಬದ್ಧವಾಗಿದೆ. ಅಲ್ಲದೆ ಕಿರಿದಾದ ರಸ್ತೆಗಳಲ್ಲಿ ಇದನ್ನು ಕಾರ್ಯಾಚರಣೆಗಾಗಿ ಬಳಕೆ ಮಾಡಬಹುದಾಗಿದೆ.

ಮೂರು ಚಕ್ರಗಳ ಕ್ಯಾನ್ ಆಮ್ ಸ್ಪೈಡರ್ ವಾಹನವನ್ನು ಕೆನಾಡದ ಬಾಂಬರ್ಡಿಯರ್ ರಿಕ್ರಿಯೇಷನಲ್ ಪ್ರೊಡಕ್ಟ್ ಸಂಸ್ಥೆಯು ನಿರ್ಮಿಸಿದೆ.

ಇನ್ನು ದುಬೈ ಪೊಲೀಸ್‌ನ ಸಂಪ್ರಾದಾಯಿಕ ಬಳಿ ಹಾಗೂ ಹಸಿರು ಬಣ್ಣವನ್ನು ಇದಕ್ಕೆ ಬಳಿಯಲಾಗಿದೆ.

ಇದರೊಂದಿಗೆ ಲಂಬೋರ್ಗಿನಿ, ಬುಗಾಟಿ ವೆರೋನ್, ಫೆರಾರಿ, ಮೆಕ್‌ಲ್ಯಾರೆನ್ ಎಂಪಿ4-12ಸಿ ಹಾಗೂ ಆಸ್ಟನ್ ಮಾರ್ಟಿನ್‌ಗಳಂತಹ ಸೂಪರ್ ಕಾರುಗಳ ಜೊತೆಗೆ ಸೂಪರ್ ಬೈಕ್ ಸೇರ್ಪಡೆಗೊಂಡಿದೆ.

ದುಬೈ ಪೊಲೀಸ್ ಶಕ್ತಿ ಪ್ರದರ್ಶನಕ್ಕಾಗಿ ಮುಂದಿನ ಪುಟಗಳತ್ತ ಸಾಗಿರಿ

ಮರ್ಸಿಡಿಸ್ ಬೆಂಝ್ ಜಿ ಕ್ಲಾಸ್ ಬ್ರಾಬಸ್

ಲಂಬೋರ್ಗಿನಿ ಸೂಪರ್ ಕಾರ್

ಬಿಎಂಡಬ್ಲ್ಯು 5 ಸಿರೀಸ್

ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಷೆವರ್ಲೆ ಕ್ಯಾಮರೊ

ಟೊಯೊಟಾ ಪ್ರಾಡೊ

ಟೊಯೊಟಾ ಫಾರ್ಚ್ಯುನರ್

ಹಮ್ಮರ್ ಎಚ್1

ಫೆರಾರಿ ಎಫ್‌ಎಫ್

ಬುಗಾಟಿ ವೆರೋನ್

ಆಸ್ಟನ್ ಮಾರ್ಟಿನ್


Click it and Unblock the Notifications








