Taapsee Pannu: ಯಾವ ಹೀರೋಗಳಿಗೆ ಕಮ್ಮಿಯಿಲ್ಲ 'ಸುಂದರ ನಟಿ' ತಾಪ್ಸಿ ಪನ್ನು.. ಬಹುಕೋಟಿ ಕಾರುಗಳ ಒಡತಿ!

ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಟಿ ತಾಪ್ಸಿ ಪನ್ನು (Taapsee Pannu) ಖ್ಯಾತಿಗಳಿಸಿದ್ದಾರೆ. ಸದ್ಯ, ಶಾರುಖ್ ಖಾನ್ ಅವರೊಂದಿಗೆ ತಾಪ್ಸಿ ನಟಿಸಿರುವ ಬಹುನೀರಿಕ್ಷಿತ ಡಂಕಿ (Dunki) ಚಿತ್ರ ನಾಳೆ (ಡಿ.2) ತೆರೆಕಾಣಲಿದ್ದು, ಈ ಸಿನಿಮಾದ ಮೇಲೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿವೆ.

ನಟಿ ತಾಪ್ಸಿ ಪನ್ನು ಅವರಿಗೆ ಕಾರುಗಳ ಮೇಲೆ ವಿಶೇಷ ಪ್ರೀತಿಯಿದ್ದು, ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ, ತಾಪ್ಸಿ ಹೊಚ್ಚ ಹೊಸ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 (Mercedes-Maybach GLS 600) ಎಸ್‌ಯುವಿಯನ್ನು ಖರೀದಿಸಿದ್ದರು. ಈ ಕಾರು, ದೇಶೀಯ ಮಾರುಕಟ್ಟೆಯಲ್ಲಿ ರೂ.3.5 ಕೋಟಿ ಬೆಲೆಯನ್ನು ಹೊಂದಿದ್ದು, ನಟಿ ತಾಪ್ಸಿ 'ಪಲ್ಲಾಡಿಯಮ್ ಸಿಲ್ವರ್' ಬಣ್ಣದ ಎಸ್‌ಯುವಿಯನ್ನು ವಿತರಣೆ ಪಡೆದಿದ್ದರು.

Taapsee Pannu

ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಕಾರಿನ ಹೊರ ಹಾಗೂ ಒಳಭಾಗದ ವಿನ್ಯಾಸ ಅತ್ಯುತ್ತಮವಾಗಿದ್ದು, ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. ಲೆದರ್ ಅಪ್ಹೋಲ್ಸ್ಟರಿ, ಎಲೆಕ್ಟ್ರಾನಿಕ್ ಪನೋರಮಿಕ್ ಸ್ಲೈಡಿಂಗ್ ಸನ್‌ರೂಫ್, ವೆಂಟಿಲೇಟೆಡ್ ಮಸಾಜ್ ಸೀಟ್ಸ್ ಅನ್ನು ಪಡೆದಿದೆ. ಈ ಕಾರು, 4.0 - ಲೀಟರ್ ವಿ8 ಎಂಜಿನ್ ಹಾಗೂ 9-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ನಟಿ ತಾಪ್ಸಿ ಪನ್ನು ಮರ್ಸಿಡಿಸ್‌ ಬೆಂಜ್‌ ಜಿಎಲ್‌ಇ 350 (Mercedes Benz GLE 350) ಎಸ್‌ಯುವಿಯ ಒಡತಿಯೂ ಆಗಿದ್ದಾರೆ. ಆಕೆ, ಈ ಕಾರಿನ ಬಾನೆಟ್ ಮೇಲೆ ಮಲಗಿಕೊಂಡು ಪೋಸ್ ನೀಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ತಾಪ್ಸಿ ಅವರ ನೆಚ್ಚಿನ ಕಾರು ಇದಾಗಿದ್ದು, ಮಾರ್ಗರೇಟ್ (Margaret) ಎಂದು ಕೂಡ ನಾಮಕರಣ ಮಾಡಿದ್ದಾರೆ.

Taapsee Pannu

ಮರ್ಸಿಡಿಸ್‌ ಬೆಂಜ್‌ ಜಿಎಲ್‌ಇ 350 ಎಸ್‌ಯುವಿ, ರೂ.60 ಲಕ್ಷದಿಂದ ರೂ.80 ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಕಾರಿನಲ್ಲಿ 2.9 - ಲೀಟರ್ 6 - ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಬಳಕೆ ಮಾಡಲಾಗಿದ್ದು, 268 bhp ಗರಿಷ್ಠ ಪವರ್ ಹಾಗೂ 600 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ತಾಪ್ಸಿ ಪನ್ನು, ಬಿಎಂಡಬ್ಲ್ಯೂ ಬೇಸ್ ಮಾಡೆಲ್ ಆಗಿರುವ ಎಕ್ಸ್1 (X1) ಕಾರನ್ನು ಸಹ ಹೊಂದಿದ್ದಾರೆ. ಪ್ರಸ್ತುತ ಭಾರತದಲ್ಲಿ ಬಿಎಂಡಬ್ಲ್ಯೂ ಎಕ್ಸ್1 ರೂ.48.90 - 51.60 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಈ ಎಸ್‌ಯುವಿ, 1.5 - ಲೀಟರ್ ಪೆಟ್ರೋಲ್, 2 - ಲೀಟರ್ ಡಿಸೇಲ್ ಎಂಜಿನ್, 7 - ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

Taapsee Pannu

5 ಜನರು ಈ ಕಾರಿನಲ್ಲಿ ಆರಾಮದಾಯವಾಗಿ ಪ್ರಯಾಣಿಸಬಹುದಾಗಿದ್ದು, 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. 20.37 kmpl ವರೆಗೆ ಮೈಲೇಜ್ ನೀಡುತ್ತದೆ. 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 10.7 - ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಸನ್‌ರೂಫ್, 12 - ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ, ಏರ್ ಬ್ಯಾಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ನಟಿ ತಾಪ್ಸಿ ಪನ್ನು 2019ರ ಜೂನ್‌ನಲ್ಲಿ ಜೀಪ್ ಕಂಪಾಸ್ (jeep compass) ಎಸ್‌ಯುವಿಯನ್ನು ಕೊಂಡುಕೊಂಡಿದ್ದರು. ಸದ್ಯ ಈ ಎಸ್‌ಯುವಿ, ರೂ.20.49 ಲಕ್ಷದಿಂದ ರೂ.32.07 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಈ ಕಾರು, 2 - ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 170 PS ಪವರ್, 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 9 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಈ ಜೀಪ್ ಕಂಪಾಸ್ 5 ಆಸನ ವ್ಯವಸ್ಥೆಯಲ್ಲಿ ಸಿಗಲಿದ್ದು, 14.9 - 17.1 kmpl ಮೈಲೇಜ್ ನೀಡುತ್ತದೆ. 2WD (ಟೂ ವೀಲ್ ಡ್ರೈವ್), 4WD (ಫೋರ್ ವೀಲ್ ಡೈವ್) ತಂತ್ರಜ್ಞಾನವನ್ನು ಹೊಂದಿದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಒಳಗೊಂಡಂತೆ ವಿವಿಧ ಫೀಚರ್ಸ್ ಇವೆ.

More from DriveSpark

Article Published On: Wednesday, December 20, 2023, 15:24 [IST]
English summary
Dunki beautiful actress taapsee pannu car collection her luxury suvs do you know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+