ಕೂಲಾಗಿ ಸಂಚರಿಸಲು ಡ್ರೋನ್ ವಿಮಾನ

By Nagaraja

ಕನ್ಸೂಮರ್ ಎಲೆಕ್ಟ್ರಾನಿಕ್ ಶೋ (ಸಿಇಎಸ್) ಅಮೆರಿಕದ ಲಾಸ್ ವೇಗಾಸ್ ನಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ವ್ಯಾಪಾರ ಪ್ರದರ್ಶನ ಮೇಳವಾಗಿದ್ದು, ವಿಶ್ವದ್ಯಾಂತದ ಹೆಚ್ಚಿನ ಸಂಸ್ಥೆ ಹಾಗೂ ಕೈಗೋರಿದ್ಯಮಿಗಳನ್ನು ತನ್ನತ್ತ ಸೆಳೆಯುತ್ತಿದೆ.

ಈ ಬಾರಿಯ ಸಿಇಎಸ್ ಮೇಳ ಹಲವಾರು ಕಾರಣಗಳಿಂದಾಗಿ ಹೆಚ್ಚು ಗಮನವನ್ನು ಸೆಳೆದಿತ್ತು. ಈ ಸಂದರ್ಭದಲ್ಲಿ ಅತಿ ನೂತನ ಡ್ರೋನ್ ವಿಮಾನವೊಂದನ್ನು ಪ್ರದರ್ಶಿಸಲಾಗಿತ್ತು.

ಕೂಲಾಗಿ ಸಂಚರಿಸಲು ಡ್ರೋನ್ ವಿಮಾನ

ಎಹ್ಯಾಂಗ್ 184 (Ehang) ಆಟೋನೋಮಸ್ ಏರಿಯಲ್ ವೆಹಿಕಲ್ (ಎಎವಿ) ಸ್ವಯಂಚಾಲಿತವಾಗಿ ಚಲಿಸುವ ಡ್ರೋನ್ ವಿಮಾನವಾಗಿದೆ. ಇದರಲ್ಲಿ ಓರ್ವ ಪ್ರಯಾಣಿಕನಿಗೆ ಮಾತ್ರ ಸಂಚರಿಸಲು ಸಾಧ್ಯ.

ಕೂಲಾಗಿ ಸಂಚರಿಸಲು ಡ್ರೋನ್ ವಿಮಾನ

ಇದರ ಹಿಂದೆ ಆಸಕ್ತಿದಾಯಕ ಕಥೆಯೊಂದಿದೆ. ಎರಡು ವರ್ಷಗಳ ಹಿಂದೆಯಷ್ಟೇ ವಿದ್ಯುತ್ ಚಾಲಿತ ಎಹ್ಯಾಂಗ್ ಡ್ರೋನ್ ವಿಮಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಸಂಭವಿಸಿದ ಅವಘಡದಲ್ಲಿ ಎಹ್ಯಾಂಗ್ ಸಂಸ್ಥೆಯ ಸಿಇಒ ಹುವಾಝಿ ಅವರ ಇಬ್ಬರು ಪೈಲಟ್ ಸ್ನೇಹಿತರು ಮೃತಪಟ್ಟಿದ್ದರು.

ಕೂಲಾಗಿ ಸಂಚರಿಸಲು ಡ್ರೋನ್ ವಿಮಾನ

ಕಡಿಮೆ ದೂರದ ಪ್ರದೇಶಗಳಿಗೆ ಸಂಚರಿಸಲು ಇಂತಹದೊಂದು ವೈಯಕ್ತಿಕ ಸಂಚಾರ ವಾಹಕದ ಅಗತ್ಯವಿದೆ. ಇದಕ್ಕೆ ಪೈಲಟ್ ಪರವಾನಗಿಯ ಅಗತ್ಯವಿರುವುದಿಲ್ಲ. ಅಲ್ಲದೆ ಕಡಿಮೆ ಎತ್ತರದ ಪ್ರದೇಶದಲ್ಲಿ ನಿಶ್ಚಿಂತತೆಯಿಂದ ಸಾಗಬಹುದಾಗಿದೆ.

ಕೂಲಾಗಿ ಸಂಚರಿಸಲು ಡ್ರೋನ್ ವಿಮಾನ

ಚೀನಾ ನಿರ್ಮಿತ ಈ ಡ್ರೋನ್ ವಿಮಾನದಲ್ಲಿ 12 ಇಂಚುಗಳ ಟಚ್ ಸ್ಕ್ರೀನ್ ಟ್ಯಾಬ್ಲೆಟ್ ಪರದೆ ಆಳವಡಿಸಲಾಗಿದೆ. ಈ ಮೂಲಕ ಟೇಕ್ ಆಫ್ ನಿಂದ ಹಿಡಿದು ಎಲ್ಲವನ್ನು ಯಾಂತ್ರಿಕವಾಗಿ ನಿಯಂತ್ರಿಸಬಹುದಾಗಿದೆ.

ಕೂಲಾಗಿ ಸಂಚರಿಸಲು ಡ್ರೋನ್ ವಿಮಾನ

ಬಹಳ ಚುರುಕುತನದಿಂದ ಈ ಆಟೋಮ್ಯಾಟಿಕ್ ಡ್ರೋನ್ ವಿಮಾನ ಏರ್ ಟ್ರಾಫಿಕ್ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಲ್ಲದೆ ಹೆಚ್ಚು ವೇಗದಲ್ಲಿ ಸುರಕ್ಷಿತವಾಗಿ ಗುರಿ ಮುಟ್ಟಬಹುದಾಗಿದೆ.

ಕೂಲಾಗಿ ಸಂಚರಿಸಲು ಡ್ರೋನ್ ವಿಮಾನ

ಒಟ್ಟಾರೆ 200 ಕೆ.ಜಿ ಭಾರದ ಈ ಡ್ರೋನ್ ವಿಮಾನದಲ್ಲಿ 14.4 ಕೆಡಬ್ಲ್ಯುಎಚ್ ಬ್ಯಾಟರಿ ಆಳವಡಿಸಲಾಗಿದ್ದು, ನಾಲ್ಕು ತಾಸುಗಳಲ್ಲಿ ಸಂಪೂರ್ಣವಾಗಿ ಚಾರ್ಜಿಂಗ್ ಮಾಡಬಹುದಾಗಿದೆ.

ಕೂಲಾಗಿ ಸಂಚರಿಸಲು ಡ್ರೋನ್ ವಿಮಾನ

ಅಂತೆಯೇ 120 ಕೆ.ಜಿ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿರಲಿದ್ದು, ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಕೂಲಾಗಿ ಸಂಚರಿಸಲು ಡ್ರೋನ್ ವಿಮಾನ

11,480 ಅಡಿ ಎತ್ತರದಲ್ಲೂ ಹಾರಾಟ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ. ಇನ್ನುಳಿದಂತೆ ಎಸಿ ಜೊತೆಗೆ ಸಂಪೂರ್ಣ 4 ಸೇವೆಯೂ ಲಭ್ಯವಿರುತ್ತದೆ.

More from DriveSpark

Article Published On: Friday, January 8, 2016, 14:56 [IST]
English summary
Ehang's 184 AAV showcased at CES 2016
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+