ಎಲೆಕ್ಷನ್ ಎಕ್ಸ್‌ಪ್ರೆಸ್; ಚಲಿಸುವ ಸುದ್ದಿ ವಾಹಿನಿ
ದೇಶದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ತುಂಬಾನೇ ಜೋರಾಗಿಯೇ ನಡೆಯುತ್ತಿದೆ. ಇದರಂತೆ ರಾಷ್ಟ್ರೀಯ ಪಕ್ಷ ನಾಯಕರು ದೇಶವಿಡೀ ಸುತ್ತಾಡುವುದು ಸಾಮಾನ್ಯ ವಿಚಾರ. ಆದರೆ ಖಾಸಗಿ ಸುದ್ದಿ ವಾಹಿನಿಯೊಂದು ಇದೇ ಕೆಲಸದಲ್ಲಿ ತಮ್ಮನ್ನು ತಾವೇ ತೊಡಗಿಸಿರುವುದು ನಿಜಕ್ಕೂ ಶ್ಲಾಘನೀಯ.
ಹೌದು, ದೇಶದ ಪ್ರಮುಖ ಸುದ್ದಿ ವಾಹಿನಿಯಾಗಿರುವ ಇಂಡಿಯಾ ಟುಡೇ ಸಂಸ್ಥೆಯು 16ನೇ ಲೋಕಸಭಾ ಚುನಾವಣೆಗಾಗಿ ವಿಶೇಷ ರೀತಿಯ ಸಿದ್ಧತೆ ನಡೆಸಿದ್ದು, ಚುನಾವಣಾ ವರದಿಗಳನ್ನು ನೇರವಾಗಿ ಜನರ ಮುಂದೆ ತಲುಪಿಸುವಲ್ಲಿ ಯಶಸ್ಸನ್ನು ಕಂಡಿದೆ. ದೇಶದೆಲ್ಲೆಡೆ ಚುನಾವಣಾ ಸುದ್ದಿ ಪ್ರಸಾರ ಮಾಡುವ ನಿಟ್ಟಿನಲ್ಲಿ ಇಂಡಿಯಾ ಟುಡೇ, ವಿಶೇಷವಾದ ಬಸ್ಸೊಂದನ್ನು ಸಿದ್ಧಪಡಿಸಿದೆ. ಅದುವೇ ಎಲೆಕ್ಷನ್ ಎಕ್ಸ್‌ಪ್ರೆಸ್. ಪ್ರಸ್ತುತ ಬಸ್ಸಿಗೆ ದೇಶದ ಪ್ರಖ್ಯಾತ ಡಿಸೈನ್ ಸಂಸ್ಥೆಯಾಗಿರುವ ಡಿಸಿ ಡಿಸೈನ್ ವಿನ್ಯಾಸ ಕಲ್ಪಿಸಿರುವುದು ಇನ್ನಷ್ಟು ಮೆರಗು ತುಂಬಿದೆ.

ದೇಶದ್ಯಾಂತ ಒಟ್ಟು 8000 ಕೀ.ಮೀ. ಪರ್ಯಂತ ಈ ಎಲೆಕ್ಷನ್ ಬಸ್ ಸಂಚರಿಸಲಿದೆ. ಇದರೊಂದಿಗೆ ಇಡೀ ಮೊಬೈಲ್ ಸ್ಟುಡಿಯೋ ದೇಶದ್ಯಾಂತ ಸುತ್ತಾಡಲಿದೆ. ಒಂದು ತಿಂಗಳ ಈ ಪಯಣವು ಎಪ್ರಿಲ್ 24ರಂದು ಬೆಂಗಳೂರು ನಗರವನ್ನು ಪ್ರವೇಶಿಸಿತ್ತು.
ಫೋಟೊ ಕೃಪೆ: ಡಿಸಿ ಡಿಸೈನ್ ಫೇಸ್‌ಬುಕ್ ಪುಟ

ಸಾಮಾನ್ಯವಾಗಿ ಇಂತಹ ಬಸ್ಸುಗಳನ್ನು ಅಭಿವೃದ್ಧಿಪಡಿಸಲು ಆರು ತಿಂಗಳ ಕಾಲವಕಾಶ ಬೇಕಾಗುತ್ತದೆ. ಆದರೆ ಡಿಸಿ ಡಿಸೈನ್ ಸೂತ್ರಧಾರಿ ದಿಲೀಪ್ ಛಾಬ್ರಿಯಾ ಕೇವಲ 45 ದಿನಗಳಲ್ಲಿ ಈ ಎಲೆಕ್ಷನ್ ಗಾಡಿ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿದ್ದಾರೆ.
ಫೋಟೊ ಕೃಪೆ: ಇಂಡಿಯಾ ಟುಡೇ ಫೇಸ್‌ಬುಕ್ ಪುಟ
ಎಲೆಕ್ಷನ್ ಎಕ್ಸ್‌ಪ್ರೆಸ್ ಕೆಂಪು ಮಿಶ್ರಿತ ಬಣ್ಣವನ್ನು ಹೊಂದಿದ್ದು, ಹೊರಗಡೆ ಲಗತ್ತಿಸಿರುವ ದೊಡ್ಡ ಲೊಗೊ ಹಾಗೂ ವಿಂಡೋ ನೋಡುಗರನ್ನು ಆಕರ್ಷಿಸುವಂತಿದೆ. ಸಾಮಾನ್ಯವಾಗಿ ಒಂದು ಖಾಸಗಿ ಸುದ್ದಿ ವಾಹಿನಿಯಲ್ಲಿರುವ ಎಲ್ಲ ಸೌಲಭ್ಯಗಳು ಇದರಲ್ಲೂ ಲಭ್ಯವಿದ್ದು, ನೇತಾರರನ್ನು ಸಂದರ್ಶನ ಮಾಡುವ ವ್ಯವಸ್ಥೆಯೂ ಇದೆ.
ಫೋಟೊ ಕೃಪೆ: ಯೂಟ್ಯೂಬ್
ಅಷ್ಟೇ ಅಲ್ಲದೆ ಸ್ಟುಡಿಯೋದಲ್ಲಿ ಮಾಡುವ ತರಹನೇ ನೇರ ಪ್ರಸಾರ ಕಾರ್ಯಕ್ರಮವನ್ನು ಇದರಲ್ಲಿ ಹಮ್ಮಿಕೊಳ್ಳಬಹುದಾಗಿದೆ. ಇದರಲ್ಲಿ ವೈಫೈ, ಎಲ್‌ಸಿಡಿ ಟಿವಿ, ಫ್ರಿಡ್ಜ್, ಲೆಥರ್ ಸೀಟು, ಜನರೇಟರ್, ಎಸಿಗಳಂತಹ ಇನ್ನಿತರ ಅನೇಕ ವೈಶಿಷ್ಟ್ಯಗಳಿವೆ. ಅಂದ ಹಾಗೆ ಈ ಡಿಸಿ ಡಿಸೈನ್ ಬಸ್, 355 ಅಶ್ವಶಕ್ತಿ ಉತ್ಪಾದಿಸುವ 12 ಲೀಟರ್ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.
ಫೋಟೊ ಕೃಪೆ: ಯೂಟ್ಯೂಬ್
ಶಾರೂಕ್ ಅದ್ದೂರಿ ಬಸ್ಸಲ್ಲಿ ಅಂತದ್ದೇನಿದೆ?

ಸಿಕ್ಸ್ ಪ್ಯಾಕ್ ವೀರ ಸಲ್ಲು ಬಾಡಿಗೆ ತಕ್ಕ ಲಗ್ಷುರಿ ಬಸ್

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಜಗತ್ತಿನ ಶ್ರೀಮಂತ ವ್ಯಕ್ತಿ ಮಿತ್ತಲ್‌ರವರ ಉಕ್ಕಿನಂತಹ ಬಸ್


Click it and Unblock the Notifications








