ಒಂದೇ ವಾಕ್ಯದಲ್ಲಿ ಉತ್ತರಿಸಿ - ನಿಮ್ಮ ಕಾರಿನ ವಿಶಿಷ್ಟತೆ ಏನು?

By Nagaraja

ಪ್ರತಿಯೊಂದು ಕಾರುಗಳು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಇದೇ ಕಾರಣಕ್ಕಾಗಿ ಗ್ರಾಹಕರ ಅಚ್ಚುಮೆಚ್ಚಿನ ಕಾರೆನಿಸಿಕೊಳ್ಳುತ್ತದೆ. ಹಾಗೆ ನೋಡಿದಾಗ ಭಾರತದಲ್ಲಿ ವಿವಿಧ ವಿಭಾಗಗಳಲ್ಲಾಗಿ ಅನೇಕ ಬಗೆಯ ಮಾದರಿಗಳು ಮಾರಾಟದಲ್ಲಿದೆ.

ಹಾಗೆ ಮೊದಲ ನೋಟದಲ್ಲೇ ನಿಮಗೆ ಇಷ್ಟವಾಗುವ ವೈಶಿಷ್ಟ್ಯ ಯಾವುದು? ಇದನ್ನು ಉತ್ತರಿಸುವುದು ಸುಲಭ ಅಲ್ಲವೇ? ಹಾಗಿದ್ದರೆ ದೇಶದ ಕೆಲವು ಜನಪ್ರಿಯ ಮಾದರಿಗಳ ಮನಸೊರೆಗೊಳ್ಳುವ ವೈಶಿಷ್ಟ್ಯಗಳಿಗಾಗಿ ಮುಂದುವರಿಯಿರಿ...

01. ಟಾಟಾ ಜೆಸ್ಟ್ - ಡೇ ಟೈಮ್ ರನ್ನಿಂಗ್ ಲೈಟ್ಸ್

01. ಟಾಟಾ ಜೆಸ್ಟ್ - ಡೇ ಟೈಮ್ ರನ್ನಿಂಗ್ ಲೈಟ್ಸ್

ವಾಹನ ಜಗತ್ತಿನ ಟಾಟಾದ ಕ್ರಾಂತಿಕಾರಿ ಬದಲಾವಣೆಯ ಸಿದ್ಧಾಂತದ ಭಾಗವಾಗಿ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು ಪ್ರವೇಶವಾಗಿತ್ತು. ಇದರಲ್ಲಿರುವ ಡೇ ಟೈಮ್ ರನ್ನಿಂಗ್ ಲೈಟ್ಸ್ ಮೊದಲ ನೋಟದಲ್ಲೇ ವಾಹನ ಪ್ರೇಮಿಗಳ ಗಮನ ಸೆಳೆಯುತ್ತಿದೆ.

02. ಮಹೀಂದ್ರ ಸ್ಕಾರ್ಪಿಯೊ - ಬೊನೆಟ್ ಸ್ಕೂಪ್

02. ಮಹೀಂದ್ರ ಸ್ಕಾರ್ಪಿಯೊ - ಬೊನೆಟ್ ಸ್ಕೂಪ್

ಮಹೀಂದ್ರದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನದ ಮುಂಭಾಗದಲ್ಲಿರುವ ಬೊನೆಟ್ ಸ್ಕೂಪ್ ಕಾರಿಗೆ ಗಂಭೀರವಾದ ನೋಟ ನೀಡುತ್ತದೆ.

03. ಹ್ಯುಂಡೈ ಎಲೈಟ್ ಐ20- ಟೈಲ್ ಲೈಟ್

03. ಹ್ಯುಂಡೈ ಎಲೈಟ್ ಐ20- ಟೈಲ್ ಲೈಟ್

ಹ್ಯುಂಡೈ ಎಲೈಟ್ ಐ20 ಟೈಲ್ ಲೈಟ್ ಹೇಳಲೇಬೇಕಾಗುತ್ತದೆ. ಐಷಾರಾಮಿ ಕಾರುಗಳಲ್ಲಿರುವುದಕ್ಕೆ ಸಮಾನವಾದ ಟೈಲ್ ಲೈಟ್ ಸೊಗಸನ್ನು ಹೊಂದಿರುವ ಹ್ಯುಂಡೈ ಎಲೈಟ್ ಐ20 ಅತ್ಯುತ್ತಮ ವಿನ್ಯಾಸದಿಂದಾಗಿಯೇ ಅತಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

04. ಟಾಟಾ ಬೋಲ್ಟ್ - ಪ್ರೊಜೆಕ್ಟರ್ ಹೆಡ್ ಲೈಟ್

04. ಟಾಟಾ ಬೋಲ್ಟ್ - ಪ್ರೊಜೆಕ್ಟರ್ ಹೆಡ್ ಲೈಟ್

ಇತ್ತೀಚೆಗಷ್ಟೇ ಬಿಡುಗಡೆಯಾದ ಟಾಟಾ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲಿರುವ ಸರಳ ನಾಜೂಕಾದ ಪ್ರೊಜೆಕ್ಟರ್ ಹೆಡ್ ಲೈಟ್ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.

05. ಫೋಕ್ಸ್ ವ್ಯಾಗನ್ ಪೊಲೊ- ರಿಯರ್ ವ್ಯೂ ಮಿರರ್

05. ಫೋಕ್ಸ್ ವ್ಯಾಗನ್ ಪೊಲೊ- ರಿಯರ್ ವ್ಯೂ ಮಿರರ್

ಫೋಕ್ಸ್ ವ್ಯಾಗನ್ ಪೊಲೊ ರಿಯರ್ ವ್ಯೂ ಮಿರರ್ ವಿನ್ಯಾಸದ ವಿಚಾರದಲ್ಲೂ ಮಾತ್ರವಲ್ಲದೆ ಚಾಲಕರಿಗೆ ಸುರಕ್ಷಿತ ಚಾಲನೆಯನ್ನು ಖಾತ್ರಿಪಡಿಸುತ್ತದೆ.

06. ರೆನೊ ಡಸ್ಟರ್ - ವೀಲ್ ಆರ್ಚ್

06. ರೆನೊ ಡಸ್ಟರ್ - ವೀಲ್ ಆರ್ಚ್

ಟೊಯೊಟಾ ಎಟಿಯೋಸ್ ಲಿವಾ ಆರ್ ಡಿ ಸ್ಪೋರ್ಟಿವೊದಲ್ಲಿರುವ 15 ಇಂಚುಗಳ ಆರು ಸ್ಪೋಕ್ ಅಲಾಯ್ ವೀಲ್ಸ್ ಚಕ್ರದ ಉರುಳಿಕೆಯ ವೇಳೆ ಹೆಚ್ಚಿನ ಆಕರ್ಷತೆಯನ್ನು ನೀಡುತ್ತದೆ.

07. ಟೊಯೊಟಾ ಲಿವಾ ಟಿಆರ್ ಡಿ ಸ್ಪೋರ್ಟಿವೊ - ಅಲಾಯ್ ವೀಲ್ಸ್

07. ಟೊಯೊಟಾ ಲಿವಾ ಟಿಆರ್ ಡಿ ಸ್ಪೋರ್ಟಿವೊ - ಅಲಾಯ್ ವೀಲ್ಸ್

ಟೊಯೊಟಾ ಎಟಿಯೋಸ್ ಲಿವಾ ಆರ್ ಡಿ ಸ್ಪೋರ್ಟಿವೊದಲ್ಲಿರುವ 15 ಇಂಚುಗಳ ಆರು ಸ್ಪೋಕ್ ಅಲಾಯ್ ವೀಲ್ಸ್ ಚಕ್ರದ ಉರುಳಿಕೆಯ ವೇಳೆ ಹೆಚ್ಚಿನ ಆಕರ್ಷತೆಯನ್ನು ನೀಡುತ್ತದೆ.

08. ಫೋರ್ಡ್ ಇಕೊಸ್ಪೋರ್ಟ್ - ಡೋರ್ ಹ್ಯಾಂಡಲ್

08. ಫೋರ್ಡ್ ಇಕೊಸ್ಪೋರ್ಟ್ - ಡೋರ್ ಹ್ಯಾಂಡಲ್

ಇಲ್ಲಿ ಫೋರ್ಡ್ ಇಕೊಸ್ಪೋರ್ಟ್ ವಿಭಜಿತ ಟೈಲ್ ಲ್ಯಾಂಪ್ ನಲ್ಲಿ ಲಗತ್ತಿಸಲಾಗಿರುವ ಡೋರ್ ಹ್ಯಾಂಡಲ್ ನ್ನು ನಾವು ವಿಶೇಷವಾಗಿ ಗುರುತಿಸಲೇ ಬೇಕಾಗುತ್ತದೆ. ಇದನ್ನು ಬಲಬದಿಯ ವಿಭಜಿತ ಟೈಲ್ ಲ್ಯಾಂಪ್ ಗೆ ಹೊಂದಿಕೊಂಡು ರಚಿಸಲಾಗಿದೆ.

09. ಫಿಯೆಟ್ ಅವೆಂಚ್ಯುರಾ - ಬಾಡಿ ಕ್ಲಾಡಿಂಗ್

09. ಫಿಯೆಟ್ ಅವೆಂಚ್ಯುರಾ - ಬಾಡಿ ಕ್ಲಾಡಿಂಗ್

ಕ್ರಾಸೋವರ್ ಎಂಬ ನೂತನ ವಿಭಾಗಕ್ಕೆ ಲಗ್ಗೆ ಕೊಟ್ಟಿರುವ ಫಿಯೆಟ್ ಅವೆಂಚ್ಯುರಾ ಕಾರಿನಲ್ಲಿ ಆಫ್ ರೋಡ್ ಚಾಲನೆಗೆ ತಕ್ಕ ರೀತಿಯಲ್ಲಿ ಆಕರ್ಷಕ ಬಾಡಿ ಕ್ಲಾಡಿಂಗ್ ಅನ್ನು ಬಳಿಯಲಾಗಿದೆ.

10. ಸ್ಕೋಡಾ ರಾಪಿಡ್ - ಗ್ರಿಲ್

10. ಸ್ಕೋಡಾ ರಾಪಿಡ್ - ಗ್ರಿಲ್

ಸ್ಕೋಡಾ ಫ್ರಂಟ್ ಗ್ರಿಲ್ ವಿಶಿಷ್ಟತೆಗೆ ಕಾರಣವಾಗಿರುವುದು ಅಷ್ಟೇ ನಿಜ. ಇದರಲ್ಲಿರುವ ಲಂಬ ರೇಖೆಗಳು ಹೆಚ್ಚಿನ ಆಕರ್ಷಣೆ ಪ್ರದಾನ ಮಾಡುತ್ತದೆ.

 11. ಹ್ಯುಂಡೈ ವೆರ್ನಾ - ಫಾಗ್ ಲ್ಯಾಂಪ್

11. ಹ್ಯುಂಡೈ ವೆರ್ನಾ - ಫಾಗ್ ಲ್ಯಾಂಪ್

ಹ್ಯುಂಡೈ ವೆರ್ನಾ ಹೊಸ ಫೇಸ್ ಲಿಫ್ಟ್ ಮಾದರಿಯಲ್ಲಿರುವ ಫಾಗ್ ಲ್ಯಾಂಪ್ ಈ ಸೆಡಾನ್ ಕಾರಿನ ಮೈಬಣ್ಣವನ್ನೇ ಬದಲಾಯಿಸಿದೆ.

ನಿಮ್ಮ ಆಯ್ಕೆ

ನಿಮ್ಮ ಆಯ್ಕೆ

ಈ ಪಟ್ಟಿಯಲ್ಲಿ ಯಾವುದಾದರೂ ಮಾದರಿಯನ್ನು ಉಲ್ಲೇಖಿಸಲು ಬಿಟ್ಟು ಹೋಗಿದೆಯೇ? ಹಾಗಿದ್ದರೆ ನಿಮ್ಮ ಪ್ರಕಾರ ನಿಮ್ಮ ನೆಚ್ಚಿನ ಮಾದರಿಯಲ್ಲಿ ಕಂಡುಬಂದಿರುವ ವಿಶಿಷ್ಟತೆಯನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

More from DriveSpark

Article Published On: Friday, April 3, 2015, 16:39 [IST]
English summary
Our picks of eleven outstanding design details of affordable Indian cars. Have a look.
Read more on cars ಕಾರು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+