ಆರ್‌ಸಿಬಿ ಆರ್ಭಟ: ಪೆರ್ರಿ ಭರ್ಜರಿ ಸಿಕ್ಸರ್‌ಗೆ ಟಾಟಾ ಕಾರಿನ ಗ್ಲಾಸ್ ಪುಡಿಪುಡಿ!

ಮಹಿಳೆಯರ ಪ್ರೀಮಿಯರ್ ಲೀಗ್‌ (Women's Premier League) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಸತತವಾಗಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ನಿನ್ನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿಯು 23 ರನ್ ಗಳ ಗೆಲುವು ಸಾಧಿಸಿದೆ.

ತವರಿನ ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಟಾಸ್ ಗೆದ್ದ ಯುಪಿ ವಾರಿಯರ್ಸ್​ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಕಡೆಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಮತ್ತೆ ಗೆಲುವಿನ ಹಾದಿ ತುಳಿದಿದೆ. ಆರ್​ಸಿಬಿಯು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

Ellyse Perry s six Shatters Car Window

ಪಂದ್ಯದಲ್ಲಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ (Smriti Mandhana) 80 ರನ್ ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ನಾಯಕಿಗೆ ಉತ್ತಮ ಸಾಥ್ ನೀಡಿದ ಎಲ್ಲಿಸ್ ಪೆರ್ರಿ (Ellyse Perry) 37 ಎಸೆತಗಳಲ್ಲಿ 58 ರನ್​ಗಳ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಇದೇ ವೇಳೆ ಎಲ್ಲಿಸ್ ಪೆರ್ರಿ ಬಾರಿಸಿದ ಪವರ್​ಫುಲ್ ಸಿಕ್ಸರ್ ಬೌಂಡರಿ ಮೂಲಕ ಟಾಟಾ ಪಂಚ್​ ಕಾರಿನ ಗ್ಲಾಸನ್ನು ಪುಡಿ ಮಾಡಿದರು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಿನ್ನೆ ಪಂದ್ಯದಲ್ಲಿ ದೀಪ್ತಿ ಶರ್ಮಾ ಓವರ್​ನ ಐದನೇ ಎಸೆತವನ್ನು ಭರ್ಜರಿ ಸಿಕ್ಸರ್ ಹೊಡೆದು ಬೌಂಡರಿ ಲೈನ್ ನಲ್ಲಿ ನಿಲ್ಲಿಸಿದ್ದ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಗ್ಲಾಸನ್ನು ಪುಡಿ ಪುಡಿ ಮಾಡಿತು. ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ ಎದುರು ಮಾರ್ಚ್ 6ರಂದು ಪೈಪೋಟಿ ನಡೆಸಲಿದೆ.

Ellyse Perry s six Shatters Car Window

ಈ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ. ಎಲೆಕ್ಟ್ರಿಕ್ ಕಾರು acti.ev ಪ್ಯೂರ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಆಗಿದೆ. ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಮುಂಭಾಗದಲ್ಲಿರುವ ಟಾಟಾ ಲೋಗೋದ ಕೆಳಗೆ ಮಧ್ಯದಲ್ಲಿ ಇರಿಸಲಾದ ಚಾರ್ಜಿಂಗ್ ಫ್ಲಾಪ್ ಮತ್ತು ಮುಂಭಾಗದ ಬಂಪರ್‌ನಲ್ಲಿ ಇರಿಸಲಾಗಿರುವ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ. ಟಾಟಾ ಪಂಚ್ ಇವಿಯಲ್ಲಿ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಇನ್ನು ಇದರಲ್ಲಿ ನಾಲ್ಕು ಡಿಸ್ಕ್ ಬ್ರೇಕ್‌ಗಳನ್ನು ಪಡೆಯುತ್ತದೆ. ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಈ ಯುನಿಟ್ Apple CarPlay ಮತ್ತು Android Auto ಎರಡಕ್ಕೂ ಕನೆಕ್ಟ್ ಆಗಿರುತ್ತದೆ. ನವೀಕರಿಸಿದ ಸೆಂಟರ್ ಕನ್ಸೋಲ್ ಈಗ ಟಚ್-ಸೆನ್ಸಿಟಿವ್ ಎಸಿ ಕಂಟ್ರೋಲ್ ಪ್ಯಾನೆಲ್ ಅನ್ನು ಸಂಯೋಜಿಸಿದೆ.

ಹೆಚ್ಚುವರಿಯಾಗಿ ಪಂಚ್ ಇವಿ ಹೊಸ ಟು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪ್ರಕಾಶಿತ ಟಾಟಾ ಲೋಗೋದೊಂದಿಗೆ ಅಳವಡಿಸಿಕೊಂಡಿದೆ. ಈ ಕಾರಿನ ಒಳಭಾಗದಲ್ಲಿ ತಾಜಾ ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿ, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು AQI ಡಿಸ್ಪ್ಲೇಯೊಂದಿಗೆ ಏರ್ ಪ್ಯೂರಿಫೈಯರ್, ಆಟೋ ಫೋಲ್ಡ್ ORVM ಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಲೆಥೆರೆಟ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ಸನ್‌ರೂಫ್ ಅನ್ನು ಹೊಂದಿದೆ.

ಈ ಕಾರಿನಲ್ಲಿ ಸುರಕ್ಷತೆಗಾಗಿ, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು 6 ಏರ್‌ಬ್ಯಾಗ್‌ಗಳನ್ನು ಹೊಂದಿರುತ್ತದೆ. ಈ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 25 kWh ಮತ್ತು 35 kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಇದರಲ್ಲಿ 25 kWh ಬ್ಯಾಟರಿ ಪ್ಯಾಕ್ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 315 ಕಿ.ಮೀ ರೇಂಜ್ ಅನ್ನು ನೀಡಿದೆ.

ಈ 35 kWh ಬ್ಯಾಟರಿ ಪ್ಯಾಕ್‌ 421 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಮಿಡ್ ರೇಂಜ್ ಮಾದರಿಯು 80bhp ಮತ್ತು 114Nm ಟಾರ್ಕ್ ಅನ್ನು ಉತ್ಪಾದಿಸಿದರೆ, ಲಾಂಗ್ ರೇಂಜ್ ಮಾದರಿಯು 120bhp ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಬ್ರ್ಯಾಂಡ್ ಎರಡು ಚಾರ್ಜರ್ ಆಯ್ಕೆಗಳನ್ನು ನೀಡುತ್ತದೆ. ಇದು 7.2 kW ಫಾಸ್ಟ್ಚಾರ್ಜರ್ ಮತ್ತು 3.3 kW ವಾಲ್‌ಬಾಕ್ಸ್ ಚಾರ್ಜರ್ ಹೊಂದಿದೆ.

Article Published On: Tuesday, March 5, 2024, 12:16 [IST]
English summary
Ellyse perrys six breaks car window at wpl 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+