ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

By Nagaraja

ವಿಶ್ವದ ಪ್ರತಿಯೊಂದು ರಾಷ್ಟ್ರಗಳು ತನ್ನ ಆತ್ಮ ರಕ್ಷಣೆಗಾಗಿ ಬೃಹತ್ತಾದ ವಾಯುನೆಲೆಗಳನ್ನು ಸ್ಥಾಪಿಸುತ್ತಿದೆ. ಇತಿಹಾಸದ ಪುಟ ತೆರೆದು ನೋಡಿದಾಗ ಯುರೋಪ್ ನಲ್ಲಿರುವ ಅತಿ ದೊಡ್ಡ ಭೂಗತ ವಾಯುನೆಲೆ 'ಝೆಲ್ಜಾವಾ' (Zeljava) ಅನೇಕ ಕಠೋರವಾದ ರಹಸ್ಯಗಳನ್ನು ಬಯಲುಗೊಳಿಸುತ್ತದೆ.

ಕ್ರೊವೇಷಿಯಾ ಮತ್ತು ಬೊಸ್ನಿಯಾ-ಹರ್ಜೆಗೋವಿನಾ ಗಡಿ ಪ್ರದೇಶದ ಪರ್ವತದಡಿಯಲ್ಲಿರುವ ಝೆಲ್ಜಾವಾ ಭೂಗತ ವಾಯುನೆಲೆ ಹಾಲಿ ಯುಗೊಸ್ಲಾವಿಯದ ಅತಿ ದೊಡ್ಡ ಮಿಲಿಟರಿ ವಾಯುನೆಲೆಯಾಗಿದೆ.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಬಿಹಾಕ್ ಎಂದು ಕರೆಯಲ್ಪಡುವ ಝೆಲ್ಜಾವಾ ನೆಲದಡಿಯ ವಾಯುನೆಲೆಯು 'ಓಬ್ಜೆಕಟ್ 505' ಎಂಬ ಕೋಡ್ ಹೆಸರನ್ನು ಪಡೆದಿದೆ. ಎರಡನೇ ಮಹಾಯುದ್ಧದ ಬಳಿಕ ಇದರ ನಿರ್ಮಾಣ ಕಾಮಗಾರಿಯು 1948ನೇ ಇಸವಿಯಲ್ಲಿ ಆರಂಭಗೊಂಡಿತ್ತು. ಸರಿ ಸುಮಾರು ಎರಡು ದಶಕದ ಬಳಿಕ 1968ರಲ್ಲಿ ಭೂಗತ ವಾಯುನೆಲೆಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿತ್ತು.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಅಂದಿನ ಕಾಲದಲ್ಲೇ ಸೋಷಿಯಲಿಸ್ಟ್ ಸಂಯುಕ್ತ ಗಣರಾಜ್ಯ ಯುಗೊಸ್ಲಾವಿಯ ಇದಕ್ಕಾಗಿ ಆರು ಬಿಲಿಯನ್ ಅಮೆರಿಕನ್ ಡಾಲರ್ ವ್ಯಯ ಮಾಡಿರುವುದು ಗಮನಾರ್ಹ. ಇದು ಈಗಿನ ಸೆರ್ಬಿಯಾ ಮತ್ತು ಕ್ರೋವೇಷಿಯಾ ವಾರ್ಷಿಕ ಮಿಲಿಟರಿ ಬಜೆಟ್ ಗಿಂತಲೂ ಮೂರು ಪಟ್ಟು ಹೆಚ್ಚಾಗಿದೆ.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಇದೇ ಕಾರಣಕ್ಕಾಗಿ ಯುರೋಪ್ ನ ಅತಿ ದೊಡ್ಡ ಮತ್ತು ದುಂದು ವೆಚ್ಚದ ವಾಯು ನೆಲೆಯಾಗಿ ಝೆಲ್ಜಾವಾ ವಾಯುನೆಲೆಯನ್ನು ಪರಿಗಣಿಸಲಾಗಿದೆ.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಉತ್ತರ ಅಮೆರಿಕ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಗೆ ಸದೃಶ್ಯವಾಗಿ ರಾಷ್ಟ್ರವ್ಯಾಪಿ ಮುನ್ನೆಚ್ಚರಿಕಾ ರಾಡಾರ್ ಜಾಲ ನಿರ್ಮಿಸುವುದು ಸೋಷಿಯಲಿಸ್ಟ್ ಸಂಯುಕ್ತ ಗಣರಾಜ್ಯ ಯುಗೊಸ್ಲಾವಿಯ ಮುಖ್ಯ ಉದ್ದೇಶವಾಗಿತ್ತು.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಎರಡನೇ ಮಹಾಯುದ್ಧ ಅಂತ್ಯದಲ್ಲಿ ಜಪಾನ್ ನ ನಾಗಸಾಕಿ ನಗರಕ್ಕೆ ಅಮೆರಿಕ ಪ್ರಯೋಗಿಸಿದ ಅಣು ಬಾಂಬ್ ನಂತಹ ಅತ್ಯಂತ ಭೀಕರ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ವಾಯುನೆಲೆ ಸ್ಥಾಪಿಸುವುದು ಯುಗೊಸ್ಲಾವಿಯಾದ ಉದ್ದೇಶವಾಗಿತ್ತು. ಇಲ್ಲಿನ ವಾಯುನೆಲೆ 20 ಕಿಲೊಟನ್ ನ್ಯೂಕ್ಲಿಯರ್ ಬಾಂಬ್ ತಡೆಯುವ ಸಾಮರ್ಥ್ಯ ಹೊಂದಿದೆ.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಯುಗೊಸ್ಲಾವಿಯಾದ ಮಿಲಿಟರಿ ತಂತ್ರಗಾರಿಕೆಯ ಭಾಗವಾಗಿ ಭೂಗತ ವಾಯುನೆಲೆಗಾಗಿ ಝೆಲ್ಜಾವಾ ಪ್ರದೇಶವನ್ನು ಆಯ್ಕೆ ಮಾಡಲಾಗಿತ್ತು. ಈ ಮೂಲಕ ಅತ್ಯಾಧುನಿಕ ಸಂಯೋಜಿತ ವಾಯು ರಕ್ಷಣಾ ಜಾಲ ರೂಪಿಸಲಾಗಿತ್ತು.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಸಂಪೂರ್ಣವಾಗಿ ರಕ್ಷಣೆ ಮಾಡಿದ ಕಣ್ಗಾವಲು ರಾಡಾರ್ ಹೊರತಾಗಿ, ನಿಯಂತ್ರಣ ಕೇಂದ್ರ, ಸುರಕ್ಷಿತ ಸಂವಹನ ಸೌಲಭ್ಯ ಮತ್ತು ಇಲ್ಲಿನ ಸುರಂಗಗಳಲ್ಲಿ ಸರ್ವಸಜ್ಜಿತ ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿದೆ.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಇಲ್ಲಿನ ಭೂಗತ ವಾಯುನೆಲೆಯಲ್ಲಿ ಮಿಗ್-21ಬಿಐಎಸ್, 124.ಎಲ್‌ಎಇ, 352.ಐಎಇ ಬೇಹುಗಾರಿಕಾ ಯುದ್ಧ ವಿಮಾನಗಳನ್ನು ಸುಸುಜ್ಜಿತವಾಗಿ ನಿಲುಗಡೆಗೊಳಿಸಲಾಗಿತ್ತು. ಇವೆಲ್ಲದರ ನಿರ್ವಹಣೆಯನ್ನು ನೋಡಿಕೊಳ್ಳಲಾಗುತ್ತಿತ್ತು.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಝೆಲ್ಜಾವಾ ನೆಲದಡಿಯ ವಾಯುನೆಲೆಯು ಒಟ್ಟು 3.5 ಕೀ.ಮೀ. ಉದ್ದದ ಸುರಂಗದಲ್ಲಿ ಹರಡಿದೆ. ಅಲ್ಲದೆ ಎಲ್ಲ ನಾಲ್ಕು ಡೋರ್ ಗಳು 100 ಟನ್ ಭಾರದ ಬಾಗಿಲುಗಳಿಂದ ರಕ್ಷಿಸಲಾಗಿತ್ತು.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಭೂಗತ ವಾಯುನೆಲೆಯೊಳಗಡೆ ಅರ್ಧವೃತ್ತಾಕಾರದ ಕಾಂಕ್ರೀಟ್ ಶೀಲ್ಡ್ ಗಳನ್ನು ರಚಿಸಲಾಗಿದೆ. ಅಲ್ಲದೆ ನೀರಿನ ವ್ಯವಸ್ಥೆ, ಪವರ್ ಜನರೇಟರ್, ಸಿಬ್ಬಂದಿ ಕೊಠಡಿ ಮತ್ತು ಇನ್ನಿತರ ಯುದ್ಧತಂತ್ರದ ಮಿಲಿಟಲಿ ಸೌಲಭ್ಯಗಳನ್ನು ಒದಗಿಸಲಾಗಿತ್ತು.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

1,000ದಷ್ಟು ಸೈನಿಕರಿಗೆ ಏಕಕಾಲದಲ್ಲಿ ಭೋಜನ ವ್ಯವಸ್ಥೆ ಒದಗಿಸುವ ಭೋಜನಾಲಯವು ಇದರ ಮಗದೊಂದು ಆಕರ್ಷಣೆಯಾಗಿದೆ.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಮರು ಪೂರೈಕೆ ಇಲ್ಲದೆ 30 ದಿನಗಳಷ್ಟು ಕಾಲ ಬದುಕಲು ಬೇಕಾದಷ್ಟು ಆಹಾರ ಮತ್ತಿತ್ತರ ವಸ್ತುಗಳನ್ನು ಕೂಡಿಡಲಾಗಿತ್ತು. ಅಲ್ಲದೆ 20 ಕೀಲೋಮೀಟರ್ ಭೂಗತ ಪೈಪ್ ಜಾಲದ ಮೂಖಾಂತರ ಇಂಧನವನ್ನು ಪೂರೈಸಲಾಗುತ್ತಿತ್ತು.

 ಮೇಲ್ಮೈ

ಮೇಲ್ಮೈ

ಭೂಗತ ವಾಯುನೆಲೆಯ ಮೇಲ್ಮೈಯಲ್ಲಿ ಐದು ರನ್ವೆಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಹಲವಾರು ಸಣ್ಣ ವ್ಯಾಪ್ತಿಯ ಮೊಬೈಲ್ ಟ್ರ್ಯಾಂಕಿಂಗ್ ಮತ್ತು ಟಾರ್ಗೆಟ್ ರಾಡಾರ್ ಗಳಿದ್ದವು.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಇನ್ನುಳಿದಂತೆ ಕ್ಷಿಪಣಿ ಆಳವಡಿಸಲಾಗುವ ನೆಲೆ, ನೆಲದಿಂದ ಆಕಾಶಕ್ಕೆ ದಾಳಿಯಿಡುವ 2ಕೆ12 ಕಬ್ ಮೊಬೈಲ್ ಮಿಸೈಲ್, ಮಿಲಿಟರಿ ಪೊಲೀಸ್ ಸ್ಟೇಷನ್, ಬೇಟೆಯಾಡುವ ಲಾಡ್ಜ್ ಮತ್ತು ಯಾವುದೇ ಕ್ಷಣ ಬೇಕಾದರೂ ಟೇಕ್ ಆಫ್ ಮಾಡುವಂತಹ ಇಬ್ಬರು ಗಾರ್ಡ್ ಗಳನ್ನು ಒಳಗೊಂಡು ಜೆಟ್ ಸಜ್ಜಾಗಿ ನಿಂತಿದ್ದವು.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

ಗಾರ್ಡ್‌ನ ಅನುಮತಿಯಿಲ್ಲದೆ ಯಾರೂ ಒಳಪ್ರವೇಶಿಸುವಂತಿಲ್ಲ. ಇಲ್ಲಿನ ವಾಯುನೆಲೆಗೆ ಯಾರಾದರೂ ಭೇಟಿ ಕೊಡುತ್ತಿದ್ದಲ್ಲಿ ವಿಶೇಷ ಅನುಮತಿಯ ಅಗತ್ಯವಿತ್ತು.

ಭೂಗತ ವಾಯುನೆಲೆ; ಬೆಚ್ಚಿ ಬೀಳಿಸುವ ಸತ್ಯಗಳು ಬಯಲು

1991 ಯುಗೊಸ್ಲಾವ್ ಯುದ್ಧದಲ್ಲಿ ತೀವ್ರವಾಗಿ ಬಳಕೆ ಮಾಡಲಾದ ಇಲ್ಲಿನ ವಾಯುನೆಲೆಯನ್ನು 1992ರ ಸೆರ್ಬೊ-ಕ್ರೋವೇಶಿಯಾ ಯುದ್ಧದ ಬಾಂಬ್ ದಾಳಿಯಲ್ಲಿ ಸಂಪೂರ್ಣವಾಗಿ ನಿರ್ನಾಮ ಮಾಡಲಾಗಿತ್ತು. ಇಲ್ಲಿನ ಸ್ಥಳೀಯ ನಿವಾಸಿಗಳ ಪ್ರಕಾರ ಆರು ತಿಂಗಳ ಬಳಿಕವೂ ನೆಲದಡಿಯಿಂದ ಹೊಗೆ ಮೇಲಕ್ಕೆ ಹಬ್ಬುತ್ತಿದ್ದವು.

ಈಗಿನ ಪರಿಸ್ಥಿತಿ

ಈಗಿನ ಪರಿಸ್ಥಿತಿ

ಝೆಲ್ಜಾವಾ ವಾಯುನೆಲೆಯ ಅವಶೇಷಗಳು ಈಗಲೂ ಇಲ್ಲಿ ಪತ್ತೆಯಾಗುತ್ತಿದೆ. ತುಕ್ಕು ಹಿಡಿದಿರುವ ಯುದ್ಧ ವಿಮಾನಗಳು ಇಲ್ಲಿನ ಭೀಕರ ದರ್ಶನವನ್ನು ನೀಡುತ್ತಿದೆ. ಆದರೆ ಆರ್ಥಿಕ ನೆರವಿನ ಕೊರತೆಯಿಂದಾಗಿ ಇದರ ಪುನರ್ ನಿರ್ಮಾಣ ಕಾಮಗಾರಿ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದೆ.

More from DriveSpark

Article Published On: Wednesday, April 27, 2016, 10:43 [IST]
English summary
Europe's largest military airbase Zeljava
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+