700 ಕಿ.ಮೀ ಮೈಲೇಜ್ ನೀಡುವ ಇವಿ ಕಾರಿನಲ್ಲಿ ಕಾಣಿಸಿಕೊಂಡ ಮಾಜಿ ಕ್ರಿಕೆಟ್ ಆಟಗಾರ
ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ರಾಂಚಿಯಲ್ಲಿನ ತಮ್ಮ ನಿವಾಸಕ್ಕೆ ತೆರಳುವ ವೇಳೆ ಹೊಚ್ಚಹೊಸ Kia EV6 ಎಲೆಕ್ಟ್ರಿಕ್ ಕ್ರಾಸ್‌ಓವರ್ SUV ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಧೋನಿ ರುತುರಾಜ್ ಗಾಯಕ್ವಾಡ್ ಮತ್ತು ಕೇದಾರ್ ಜಾಧವ್ ಅವರೊಂದಿಗೆ EV6 ಓಡಿಸುತ್ತಾ ಕಾಣಿಸಿಕೊಂಡಿದ್ದರು.
ಮಹೇಂದ್ರಾ ಸಿಂಗ್ ಧೋನಿ ಅವರು ಪ್ರಸ್ತುತ ವಾಸಿಸುತ್ತಿರುವ ರಾಂಚಿಯಲ್ಲಿರುವ ಅವರ ಮನೆಯ ಮುಖ್ಯ ಗೇಟ್‌ಗೆ ಆಗಮಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ತಮ್ಮ Kia EV6 ಎಲೆಕ್ಟ್ರಿಕ್ ಕ್ರಾಸ್‌ಓವರ್ ಪ್ರಭಾವಶಾಲಿ ಕಾರು ಸಂಗ್ರಹದ ಅನೇಕ ಅಮೂಲ್ಯ ಆಸ್ತಿಗಳಲ್ಲಿ ಒಂದಾಗಿದೆ. ಈ ಬೂದು-ಬಣ್ಣದ EV6, ಫ್ಯೂಚರಿಸ್ಟಿಕ್ ವಿನ್ಯಾಸದೊಂದಿಗೆ ಧೋನಿ ಓಡಿಸುತ್ತಿದ್ದರೇ ಆಕರ್ಷಕವಾಗಿ ಕಂಡಿದೆ.

Kia EV6 ಭಾರತದ ಮಾರುಕಟ್ಟೆಯಲ್ಲಿ ಪ್ರಖ್ಯಾತ ದಕ್ಷಿಣ ಕೊರಿಯಾ ವಾಹನ ತಯಾರಕ ಕಂಪನಿ ಕಿಯಾ ನೀಡುವ ಪ್ರಮುಖ ಎಲೆಕ್ಟ್ರಿಕ್ ಕ್ರಾಸ್‌ಒವರ್ ಆಗಿದೆ. 2022 ರಲ್ಲಿ ಇದನ್ನು ಪರಿಚಯಿಸಲಾಯಿತು, EV6 ಒಂದೇ 77.4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ARAI ಸೈಕಲ್‌ನಲ್ಲಿ 708 ಕಿ.ಮೀ ಡ್ರೈವಿಂಗ್ ರೇಂಜ್ ಹಿದಿರುಗಿಸುತ್ತದೆ.
ಬ್ಯಾಟರಿ ಪ್ಯಾಕ್ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, 350 kW DC ಫಾಸ್ಟ್ ಚಾರ್ಜರ್ ಅನ್ನು ಬಳಸುವಾಗ ಕೇವಲ 4.5 ನಿಮಿಷಗಳಲ್ಲಿ 100 ಕಿ.ಮೀ ಪ್ರಯಾಣಿಸಬಹುದಾದಷ್ಟು ರೇಂಜ್ ನೀಡುತ್ತದೆ. ಕಿಯಾ EV6 ಅನ್ನು ಎರಡು ವಿಭಿನ್ನ ರೂಪಾಂತರಗಳಲ್ಲಿ ನೀಡಲಾಗುತ್ತಿದ್ದು, ಬೆಲೆಗಳು 59.95 ಲಕ್ಷ ರೂ. (ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗುತ್ತವೆ.

ಬೇಸ್ ರೂಪಾಂತರವು ಮುಂಭಾಗದ-ಮೌಂಟೆಡ್ ಸಿಂಗಲ್ ಮೋಟರ್ನೊಂದಿಗೆ ದ್ವಿಚಕ್ರ-ಡ್ರೈವ್ ಸಂರಚನೆಯನ್ನು ಹೊಂದಿದೆ. 229 bhp ಗರಿಷ್ಠ ಪವರ್ ಮತ್ತು 350 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚಿನ ಕಾರ್ಯಕ್ಷಮತೆಯನ್ನು ಬಯಸುವವರಿಗೆ, ಪ್ರೀಮಿಯಂ ಆಲ್-ವೀಲ್-ಡ್ರೈವ್ ಆವೃತ್ತಿಯು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಬರುತ್ತದೆ.
ಪ್ರತಿ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ನಲ್ಲಿ ಒಂದು, ಕ್ರಮವಾಗಿ 325 bhp ಮತ್ತು 605 Nm ನ ಸಂಯೋಜಿತ ಪವರ್ ಮತ್ತು ಟಾರ್ಕ್ ಉತ್ಪಾದನೆಯನ್ನು ಒದಗಿಸುತ್ತದೆ. ಈ ಪವರ್‌ನಿಂದಾಗಿ EV6 ಅನ್ನು ಕೇವಲ 3.5 ಸೆಕೆಂಡ್‌ಗಳಲ್ಲಿ 100 kmph ವೇಗವನ್ನು ತಲುಪುವಂತೆ ಮಾಡುತ್ತದೆ.

MS ಧೋನಿ ಬಳಿಯಿದೆ ಅಧ್ಬುತ ಕಲೆಕ್ಷನ್: ಇವರ ಗ್ಯಾರೇಜ್ ವಿಂಟೇಜ್ ಕ್ಲಾಸಿಕ್ ಮತ್ತು ಆಧುನಿಕ ಕಾರುಗಳನ್ನು ಒಳಗೊಂಡಂತೆ ಪ್ರಭಾವಶಾಲಿ ವಾಹನಗಳನ್ನು ಹೊಂದಿದೆ. 1969 ಫೋರ್ಡ್ ಮಸ್ಟಾಂಗ್, ಮಸಲ್ ಕಾರ್, ಪಾಂಟಿಯಾಕ್ ಟ್ರಾನ್ಸ್-ಆಮ್, ಮತ್ತೊಂದು ಕ್ಲಾಸಿಕ್ ಮಸಲ್ ಕಾರ್ ಮತ್ತು ಪಾಂಟಿಯಾಕ್ ಫೈರ್‌ಬರ್ಡ್ ಟ್ರಾನ್ಸ್‌ಆಮ್ ಕೂಡ ಇದೆ.
ಬೈಕ್‌ಗಳ ವಿಷಯಕ್ಕೆ ಬಂದರೆ, ಸಂಪೂರ್ಣ-ಫೇರ್ಡ್ ಯಮಹಾ ಸ್ಪೋರ್ಟ್ಸ್ ಬೈಕು ಸೇರಿದಂತೆ ವೈವಿಧ್ಯಮಯ ದ್ವಿಚಕ್ರ ವಾಹನಗಳೊಂದಿಗೆ, ಹಳೆಯ ಪೀಳಿಗೆಯ ಯಮಹಾ YZF-R6, ಯಮಹಾ, ಯೆಜ್ಡಿ, ಜಾವಾ, ಬಿಎಸ್‌ಎ ಮತ್ತು ನಾರ್ಟನ್‌ನಂತಹ ಹೆಸರಾಂತ ಬ್ರಾಂಡ್‌ಗಳಿಂದ ಲಿಮಿಟೆಡ್ ಎಡಿಷನ್ 2- ಸ್ಟ್ರೋಕ್ ಮೋಟಾರ್ ಸೈಕಲ್‌ಗಳನ್ನು ಹೊಂದಿದ್ದಾರೆ.
ಯಮಹಾ ಆರ್‌ಡಿ350 ಮತ್ತು ರಾಯಲ್ ಎನ್‌ಫೀಲ್ಡ್ ಬುಲೆಟ್‌ನಂತಹ ವಿಂಟೇಜ್ ಬೈಕ್‌ಗಳು ಸಹ ಅವರ ಸಂಗ್ರಹಣೆಯಲ್ಲಿ ಅಚ್ಚುಮೆಚ್ಚಿನ ಬೈಕ್‌ಗಳಾಗಿವೆ. ಹೆಚ್ಚುವರಿಯಾಗಿ, ಅವರು ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್, ಡುಕಾಟಿ 1098, ಮತ್ತು ಅಲ್ಟ್ರಾ-ಎಕ್ಸ್‌ಕ್ಲೂಸಿವ್ ಕಾನ್ಫೆಡರೇಟ್ X132 ಹೆಲ್‌ಕ್ಯಾಟ್ ಜೊತೆಗೆ ಕವಾಸಕಿ ನಿಂಜಾ ZX-14R ಮತ್ತು ಕವಾಸಕಿ ನಿಂಜಾ H2 ನಂತಹ ಆಧುನಿಕ ಸ್ಪೋರ್ಟ್ ಬೈಕ್‌ಗಳನ್ನು ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








